• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astrology Tips: ಈ ರಾಶಿಯವರು ಹೀಗೆ ಮಾಡಿದ್ರೆ ಓದಿದ್ದು ಮರೆಯಲ್ಲ! ಏಕಾಗ್ರತೆ ಹೆಚ್ಚಾಗೋಕೆ ಇಲ್ಲಿದೆ ಜ್ಯೋತಿಷ್ಯ ಸಲಹೆ

Astrology Tips: ಈ ರಾಶಿಯವರು ಹೀಗೆ ಮಾಡಿದ್ರೆ ಓದಿದ್ದು ಮರೆಯಲ್ಲ! ಏಕಾಗ್ರತೆ ಹೆಚ್ಚಾಗೋಕೆ ಇಲ್ಲಿದೆ ಜ್ಯೋತಿಷ್ಯ ಸಲಹೆ

ಭವಿಷ್ಯ

ಭವಿಷ್ಯ

ಪರೀಕ್ಷಾ ಸಮಯದಲ್ಲಿ ನಿಮ್ಮ ಏಕಾಗ್ರತೆಯು ಉನ್ನತ ಮಟ್ಟದಲ್ಲಿರಬೇಕು.  ನಿಮ್ಮ ರಾಶಿಗನುಗುಣವಾಗಿ ನಿಮ್ಮ ಏಕಾಗ್ರತೆಯನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ. 

  • Share this:

    ಅಧ್ಯಯನ ಮಾಡೋದಕ್ಕೆ ಬೇಕಾಗಿರುವ ಮುಖ್ಯವಾದ ಒಂದು ಅಂಶವೆಂದರೆ ಅದು ಏಕಾಗ್ರತೆ. ಗಂಟೆಗಟ್ಟಲೆ ಪುಸ್ತಕದ ಮುಂದೆ ಕೂತು ಮನಸ್ಸು ಬೇರೆ ಕಡೆಗೆ ಸುತ್ತಾಡಲು ಹೋಗಿದ್ದರೆ, ಏನು ಪ್ರಯೋಜನ ಹೇಳಿ? ಪುಸ್ತಕವನ್ನು (Book Reading) ಕೈಯಲ್ಲಿ ಹಿಡಿದುಕೊಂಡು ಒಂದು ಕಡೆ ಕೂತು ಏಕಾಗ್ರತೆಯಿಂದ (Concentration) ಓದಿದ್ದು ತುಂಬಾ ದಿನಗಳವರೆಗೆ ನೆನಪಿನಲ್ಲಿರುತ್ತದೆ.


    ಈಗಂತೂ ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಧ್ಯಮ, ದೂರದರ್ಶನ ಮತ್ತು ಹೆಚ್ಚಿನವುಗಳಂತಹ ಅನೇಕ ಗೊಂದಲಗಳೊಂದಿಗೆ ಗಮನ ಹರಿಸುವುದು ತುಂಬಾನೇ ಕಷ್ಟವಾಗಿದೆ. ಆದರೂ ಪರೀಕ್ಷಾ ಸಮಯದಲ್ಲಿ ನಿಮ್ಮ ಏಕಾಗ್ರತೆಯು ಉನ್ನತ ಮಟ್ಟದಲ್ಲಿರಬೇಕು.  ನಿಮ್ಮ ರಾಶಿಗನುಗುಣವಾಗಿ ನಿಮ್ಮ ಏಕಾಗ್ರತೆಯನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.


    ಮೇಷ ರಾಶಿ
    ನಿಮ್ಮ ದಿನವನ್ನು ಮೊದಲೇ ಯೋಜಿಸಿಕೊಳ್ಳಿ. ಪ್ರತಿದಿನ ಬೆಳಗ್ಗೆ ದಿನದ ನಿಮ್ಮ ಗುರಿಗಳನ್ನು ನಿಗದಿಪಡಿಸಿಕೊಳ್ಳಿ. ಇದು ಕಾಲಕಾಲಕ್ಕೆ ನಿಮ್ಮನ್ನು ವಿಚಲಿತರಾಗದಂತೆ ತಡೆಯುತ್ತದೆ, ಏಕೆಂದರೆ ನೀವು ಒಂದೊಂದಾಗಿ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಹೊಂದಿರುತ್ತೀರಿ.


    ವೃಷಭ ರಾಶಿ
    ನೀವು ಓದುವಾಗ ಮನಸ್ಸಿನಲ್ಲಿ ಓದಿಕೊಳ್ಳದೆ ಸ್ವಲ್ಪ ಜೋರಾಗಿ ಓದಿಕೊಳ್ಳಿ. ಅದು ನೀವು ಓದುತ್ತಿರುವ ಪಾಠವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.


    ಮಿಥುನ ರಾಶಿ
    ಎಲ್ಲಾ ಸಮಯದಲ್ಲೂ ನಿಮಗೆ ಸಂಗೀತವೇ ನಿಮ್ಮ ಸಂಗಾತಿ ಅಂತ ಹೇಳಬಹುದು. ಕೆಲವು ವಾದ್ಯ ಗೀತೆಗಳು ಮತ್ತು ರಾಗಗಳನ್ನು ಕಡಿಮೆ ಸೌಂಡ್ ನಲ್ಲಿರಿಸಿ ಕೇಳಲು ಪ್ರಯತ್ನಿಸಿ. ಇದು ನಿಮ್ಮ ಗಮನವನ್ನು ಒಂದು ಕಡೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.


    ಕರ್ಕಾಟಕ ರಾಶಿ
    ಕಠಿಣ ವಿಷಯಗಳಿಗೆ ಮೊದಲು ಸಮಯ ತೆಗೆದುಕೊಳ್ಳಿ. ನಂತರ ಸುಲಭವಾದ ವಿಷಯಗಳನ್ನು ಓದಿ. ನೀವು ಕಠಿಣ ವಿಷಯಗಳನ್ನು ತಾಜಾ ಮನಸ್ಸಿನಿಂದ ಪ್ರಾರಂಭಿಸಿದಾಗ ನೀವು ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಹೆಚ್ಚಿನ ಅವಕಾಶವಿರುತ್ತದೆ. ಅಧ್ಯಯನ ಮಾಡುವಾಗ, ಸುಲಭವಾದ ವಿಷಯಗಳನ್ನು ನಂತರ ಓದಬಹುದು.


    ಸಿಂಹ ರಾಶಿ
    ನೀವು ಅಧ್ಯಯನ ಮಾಡುವಾಗ ಸ್ವಲ್ಪ ಸೂರ್ಯನ ಬೆಳಕಿನೊಂದಿಗೆ ಒಂದು ಕಪ್ ಕಾಫಿಯನ್ನು ಆನಂದಿಸಿ. ಸೂರ್ಯನ ಬೆಳಕಿನಲ್ಲಿ ಅಧ್ಯಯನ ಮಾಡುವುದು ನಿಮ್ಮ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.


    ಕನ್ಯಾ ರಾಶಿ
    ನಿಮ್ಮಷ್ಟಕ್ಕೆ ನೀವೇ ಅಧ್ಯಯನದ ಸಮಯ ಮಿತಿಯನ್ನು ನಿಗದಿಪಡಿಸಿಕೊಳ್ಳಿ. ನೀವು ಒಂದು ವಿಷಯದ ಮೇಲೆ ಹೆಚ್ಚು ಸಮಯ ಕಳೆಯುವಂತೆ ನೋಡಿಕೊಳ್ಳಿ. ಇದಕ್ಕೆ ನೀವು ಗಂಟೆಗೊಮ್ಮೆ ಟೈಮರ್​ಗಳನ್ನು ಹೊಂದಿಸಿಕೊಳ್ಳಿ.ಅದು ಆ ವಿಷಯವನ್ನು ಓದಿ ಮುಗಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ.


    ತುಲಾ ರಾಶಿ
    ನಿಮ್ಮ ಫೋನ್ ನಿಮ್ಮ ಪಕ್ಕದಲ್ಲಿದ್ದಾಗ ನೀವು ಸ್ವೀಕರಿಸುವ ಪ್ರತಿಯೊಂದು ಕರೆ ಅಥವಾ ಸಂದೇಶಕ್ಕೆ ಉತ್ತರಿಸಲು ನೀವು ಒಲವು ತೋರಿಸಬಹುದು. ಆದ್ದರಿಂದ ಅಧ್ಯಯನ ಮಾಡುವಾಗ ನಿಮ್ಮ ಫೋನ್ ಅನ್ನು ನಿಮ್ಮಿಂದ ದೂರವಿರಿಸಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ನೀವು ಒಂದು ಸಮಯದಲ್ಲಿ ಒಂದೇ ವಿಷಯದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬಹುದು.


    ವೃಶ್ಚಿಕ ರಾಶಿ
    ಸ್ವಲ್ಪ ಹೊರಗೆ ಹೋಗಿ ತಾಜಾ ಗಾಳಿಯಲ್ಲಿ ವಾಕ್ ಮಾಡಿ ಬನ್ನಿ. ನೀವು ವಿಶ್ರಾಂತಿ ಪಡೆಯುತ್ತಿರುವಾಗ ಓದಿನ ಬಗ್ಗೆ ಏನನ್ನೂ ಯೋಚಿಸದಿರಲು ಪ್ರಯತ್ನಿಸಿ. ನಿಮ್ಮ ಸ್ನೇಹಿತರೊಂದಿಗೆ ಸೇರಿ ಸ್ವಲ್ಪ ಆಟವಾಡಿ. ಇದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.


    ಧನು ರಾಶಿ
    ದೃಷ್ಟಿ ಫಲಕಗಳ ಬಗ್ಗೆ ಕೇಳಿದ್ದೀರಾ? ನಿಮ್ಮ ಕನಸುಗಳು ಮತ್ತು ಗುರಿಗಳನ್ನು ಬರೆದುಕೊಂಡು ಸದಾ ನಿಮಗೆ ಕಾಣುವಂತೆ ನೇತುಹಾಕಿ. ಇದು ನಿಮ್ಮ ಗುರಿಗಳ ಬಗ್ಗೆ ನಿಮ್ಮನ್ನು ಸದಾ ಕಾಲ ಜಾಗೃತರನ್ನಾಗಿಸುತ್ತದೆ.


    ಮಕರ ರಾಶಿ
    ಆಗಾಗ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಪ್ರಯತ್ನಿಸಿ. ದೀರ್ಘಕಾಲದವರೆಗೆ ಅಧ್ಯಯನ ಮಾಡುವುದರಿಂದ ಓದಿದ್ದನ್ನು ನೆನಪಿಟ್ಟುಕೊಳ್ಳುವ ನಿಮ್ಮ ಮೆದುಳಿನ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ವಿರಾಮದ ಸಮಯದಲ್ಲಿ ಸ್ವಲ್ಪ ನಿದ್ದೆ ಮಾಡಿ ಅಥವಾ ಸ್ವಲ್ಪ ಧ್ಯಾನ ಮಾಡಿ. ಇದು ನಿಮಗೆ ನಿಜವಾಗಿಯೂ ಸಹಾಯ ಮಾಡುತ್ತದೆ.


    ಇದನ್ನೂ ಓದಿ: Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?




    ಕುಂಭ ರಾಶಿ
    ನೀವು ಸುಲಭವಾಗಿ ವಿಚಲಿತರಾಗುತ್ತೀರಿ. ಹೀಗಾಗಿ, ಪ್ರತಿ ರಾತ್ರಿ ನೀವು ಮಲಗುವ ಮೊದಲು ಮರುದಿನ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮೊದಲೇ ಮಾಡಿಕೊಳ್ಳಿ. ಇದು ನಿಮ್ಮ ದಿನವನ್ನು ಟ್ರ್ಯಾಕ್ ನಲ್ಲಿಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮನಸ್ಸನ್ನು ಸುಲಭವಾಗಿ ವಿಚಲಿತಗೊಳ್ಳುವುದಕ್ಕೆ ಬಿಡುವುದಿಲ್ಲ.


    ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!


    ಮೀನ ರಾಶಿ
    ಅಧ್ಯಯನ ಮಾಡುವಾಗ ಕೆಲವು ಶಾಂತ ರಾಗಗಳನ್ನು ಕೇಳಲು ಪ್ರಯತ್ನಿಸಿ. ಕೈಯಲ್ಲಿರುವ ವಿಷಯದ ಮೇಲೆ ಕೇಂದ್ರೀಕರಿಸಲು ಅವು ನಿಮಗೆ ಸಹಾಯ ಮಾಡುತ್ತವೆ.

    Published by:ಗುರುಗಣೇಶ ಡಬ್ಗುಳಿ
    First published: