• Home
  • »
  • News
  • »
  • astrology
  • »
  • Vastu Tips: ಮನೆಯಲ್ಲಿ ಇರುವ ನೆಗೆಟಿವ್‌ ಎನರ್ಜಿ ಹೊಡೆದೋಡಿಸೋಕೆ ಇಲ್ಲಿದೆ ಸರಳ ಪರಿಹಾರ!

Vastu Tips: ಮನೆಯಲ್ಲಿ ಇರುವ ನೆಗೆಟಿವ್‌ ಎನರ್ಜಿ ಹೊಡೆದೋಡಿಸೋಕೆ ಇಲ್ಲಿದೆ ಸರಳ ಪರಿಹಾರ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಧನಾತ್ಮಕ ಶಕ್ತಿಗಳೆಂದರೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳೋದಿಲ್ಲ. ಯಾಕೆಂದರೆ ಅದರಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ. ಆದರೆ ಮನೆಗೆ ನೆಗೆಟೀವ್​ ಆಗುತ್ತೆ ಅಂದ್ರೆ ಯಾರಿಗಾದರೂ ಭಯ ಆಗೇ ಆಗುತ್ತೆ.

  • Share this:

ಜಗತ್ತಿನಲ್ಲಿ ಧನಾತ್ಮಕ (Positive)  ಹಾಗೂ ಋಣಾತ್ಮಕ (Negative) ಶಕ್ತಿಗಳೆರಡೂ ಇವೆ. ಇವೆರಡೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಇದು ಒಂದಲ್ಲ ಒಂದು ಸಂದರ್ಭದಲ್ಲಿ ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಧನಾತ್ಮಕ ಶಕ್ತಿಗಳೆಂದರೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳೋದಿಲ್ಲ. ಯಾಕೆಂದರೆ ಅದರಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ. ಆದ್ರೆ ಋಣಾತ್ಮಕ ಅಂಶಗಳು ಹಾಗಲ್ಲ. ಇದರಿಂದ ಜೀವನದಲ್ಲಿ ಎಲ್ಲವೂ ಋಣಾತ್ಮಕವೇ ಆಗುತ್ತಾ ಹೋಗುತ್ತದೆ. ಯಾರೋ ನಮ್ಮ ಮೇಲೆ ಈ ಋಣಾತ್ಮಕ ಪ್ರಭಾವವನ್ನು ಬೀರುತ್ತಾರೆ ಎಂದಲ್ಲ. ಬದಲಾಗಿ ನಾವೇ ನಕಾರಾತ್ಮಕ ಅಂಶಗಳನ್ನು ಸ್ವೀಕರಿಸುವವರಾಗಬಾರದಲ್ಲ! ಅಸೂಯೆಯ ರೂಪದಲ್ಲಿರುವ ನಕಾರಾತ್ಮಕ ಆಲೋಚನೆಗಳು, ಇತರರನ್ನು ಟೀಕಿಸುವುದು, ಜಗಳವಾಡುವುದು, ಹೊಟ್ಟೆಬಾಕತನ, ಆಲಸ್ಯ ಮುಂತಾದವುಗಳನ್ನು ತಪ್ಪಿಸಬೇಕು. ಉತ್ತಮವಾಗಿ ಬದುಕಲು ನಮ್ಮ ಸುತ್ತಲೂ ಏನಾಗುತ್ತಿದೆ ಎಂಬುದನ್ನು ನಾವು ಗಮನಿಸುತ್ತಿರಬೇಕು.


ಅಂದಹಾಗೆ ನಕಾರಾತ್ಮಕ ಶಕ್ತಿಗಳು ನಿಜವಾಗಿಯೂ ಸುತ್ತಲೂ ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಕೆಲವು ಚಿಹ್ನೆಗಳು ಇಲ್ಲಿವೆ.


1. ಕುಟುಂಬ ಸದಸ್ಯರ ದೀರ್ಘಕಾಲದ ಆರೋಗ್ಯ ಸಮಸ್ಯೆ. ಅವರು ಚಿಕಿತ್ಸೆಗೆ ಸ್ಪಂದಿಸದೇ ಇರುವುದು. ಕುಟುಂಬದ ಸದಸ್ಯರ ಕಾಯಿಲೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇರುವಂಥದ್ದು.


2. ಕೆಲಸ ಅಥವಾ ಉತ್ತಮ ಅವಕಾಶಗಳು ಫಲಪ್ರದವಾಗುವ ಅಂತಿಮ ಹಂತದಲ್ಲಿ ಪದೇ ಪದೇ ತಪ್ಪಿಹೋಗುವುದು.


3. ಯಶಸ್ಸು ದೂರದಲ್ಲಿರುವಂತೆ ತೋರುವುದು. ಬಯಸಿದ ಫಲಿತಾಂಶಗಳು ಕಾರ್ಯರೂಪಕ್ಕೆ ಬಾರದೇ ಇರುವುದು.


4. ಎಲ್ಲಾ ಸಮಯದಲ್ಲೂ ಆಲಸ್ಯವನ್ನು ಅನುಭವಿಸುವುದು. ಯಾವುದನ್ನೂ ಗಮನಿಸದೇ ಇರುವುದು. ಸಾಕಷ್ಟು ಅವಕಾಶಗಳ ಹೊರತಾಗಿಯೂ ಏನನ್ನೂ ಮಾಡಲು ಬಯಸದೇ ಇರುವುದು.


5. ಚಿಂತೆ ಮಾಡುವುದು.


6. ಉಳಿಯಲು ಅಥವಾ ಕೆಲಸ ಮಾಡಲು ಅಹಿತಕರ ಎನಿಸುವಂಥ ವಾತಾವರಣ.


7. ಪುನರಾವರ್ತಿತ ನಕಾರಾತ್ಮಕ ಆಲೋಚನೆಗಳು ಅಥವಾ ಆತ್ಮಹತ್ಯೆಯ ಆಲೋಚನೆ.


8. ಸರಳ ಅಥವಾ ನೇರ ನಡುವಳಿಕೆಗೆ ಬದಲಾಗಿ ಕುಟುಂಬದ ಸದಸ್ಯರ ಅನಿರೀಕ್ಷಿತ ನಡವಳಿಕೆ.


ಇದನ್ನೂ ಓದಿ: ಶರಣಬಸಪ್ಪ-ದೊಡ್ಡಪ್ಪ ಅಪ್ಪ ಜೋಡು ಮೂರ್ತಿಯ ಪವಿತ್ರ ದೇಗುಲ, ಅರಸಿ ಬಂದವರಿಗೆ ಆಶೀರ್ವದಿಸುವ ಕ್ಷೇತ್ರ


9. ಕೆಲಸದಲ್ಲಿ, ಕುಟುಂಬದವರ ಜೊತೆ ಪದೇ ಪದೇ ಜಗಳಗಳು.


10. ಮನೆಯಲ್ಲಿ ಮೊದಲೆಂದೂ ನಡೆಯದಿದ್ದ ಅಥವಾ ತರ್ಕಬದ್ಧವಲ್ಲದ ಘಟನೆಗಳು.


ಅಂತಹ ನಕಾರಾತ್ಮಕತೆಯು ವಾಸ್ತು ದೋಷಗಳ ಪರಿಣಾಮವಾಗಿರಬಹುದು. ನಿರ್ದಿಷ್ಟವಾಗಿ ದಕ್ಷಿಣದಿಂದ ಪಶ್ಚಿಮ ಪ್ರದೇಶದಲ್ಲಿ ತೀವ್ರವಾದ ವಾಸ್ತು ದೋಷಗಳಿಂದ ಆಗಿರಬಹುದು. ಅಥವಾ ನಿಮ್ಮ ದೇವರ ವಾಸಸ್ಥಾನ ತಪ್ಪಾದ ಸ್ಥಳವನ್ನು ಹೊಂದಿರಬಹುದು.


ಅದರ ಹೊರತಾಗಿ, ನಿಮ್ಮ ಮನೆಯನ್ನು ಅಶುದ್ಧವಾಗಿಟ್ಟುಕೊಳ್ಳುವುದು, ಅಸ್ತವ್ಯಸ್ತವಾಗಿ ಇಟ್ಟುಕೊಳ್ಳುವುದು, ಬಹಳಷ್ಟು ಬಳಕೆಯಾಗದ, ಹಾನಿಗೊಳಗಾದ, ಮುರಿದ ವಸ್ತುಗಳಿಂದ ಕೂಡಿರುವುದು ಋಣಾತ್ಮಕ ಶಕ್ತಿಗಳಿಗೆ ಆಹ್ವಾನ ನೀಡುತ್ತವೆ. ಆದರೆ ಅಂತಹ ಶಕ್ತಿಗಳ ನಿರ್ಮೂಲನೆಗೆ ನಮ್ಮದೇ ಆದ ಪ್ರಾಚೀನ ವಿಜ್ಞಾನವಾದ ವಾಸ್ತು ಶಾಸ್ತ್ರದಲ್ಲಿ ಉತ್ತರಗಳಿವೆ.


ಖ್ಯಾತ ವಾಸ್ತು ತಜ್ಞರಾದ ಡಾ. ರವಿರಾಜ್ ಅಹಿರಾರಾವ್ ಅವರು ನಮ್ಮ ಮನೆಯಿಂದ ನಕಾರಾತ್ಮಕತೆಯನ್ನು ಹೇಗೆ ಹೊರಹಾಕಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡಿದ್ದಾರೆ.


ನಿಮ್ಮ ಮನೆಯ ಪ್ರವೇಶದ್ವಾರವನ್ನು ಸ್ವಚ್ಛವಾಗಿಡಿ


1. ಮನೆಯ ಪ್ರವೇಶದ್ವಾರವನ್ನು ಸ್ವಚ್ಛವಾಗಿಡುವುದು ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಅತಿಥಿಗಳಿಗೆ ಉತ್ತಮವಾದ ಮೊದಲ ಆಕರ್ಷಣೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.


ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ನೀವು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಸಣ್ಣ ಗಿಡಗಳನ್ನು ಕೂಡ ಇಡಬಹುದು. ನಿಮ್ಮ ಮನೆಯು ಒಳಗಿನಿಂದ ಮಾತ್ರವಲ್ಲದೆ ಹೊರಗಿನಿಂದಲೂ ಸ್ವಚ್ಛವಾಗಿರುವುದು ಅತ್ಯಗತ್ಯ.


ಆದ್ದರಿಂದ ನಿಮ್ಮ ಮನೆಯ ಪ್ರವೇಶ ದ್ವಾರವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ರೂಢಿಯಲ್ಲಿಟ್ಟುಕೊಳ್ಳಿ.


2. ಬಾಗಿಲನ್ನು ಹಾಗೂ ಕಿಟಕಿಗಳನ್ನು ಒರೆಸಲು ನಿಂಬೆ ರಸ, ಉಪ್ಪು ಮತ್ತು ಬಿಳಿ ವಿನೆಗರ್ನೊಂದಿಗೆ ನೀರಿನ ಮಿಶ್ರಣವನ್ನು ಬಳಸಬೇಕು. ನಂತರ, ಎಲ್ಲಾ ಪ್ರವೇಶದ್ವಾರಗಳಲ್ಲಿ ಸಮುದ್ರದ ಉಪ್ಪನ್ನು ಸುರಿಯಿರಿ. ಋಣಾತ್ಮಕ ಶಕ್ತಿಗಳು ಆವರಣವನ್ನು ಪ್ರವೇಶಿಸದಂತೆ ತಡೆಗಟ್ಟಲು ಅದನ್ನು ಡೋರ್‌ ಮ್ಯಾಟ್‌ ನಿಂದ ಮುಚ್ಚಬಹುದು.


3. ನೆಲವನ್ನು ಒರೆಸುವಾಗ, ಒಂದು ಚಿಟಿಕೆ ಸಮುದ್ರದ ಉಪ್ಪನ್ನು ನೀರಿಗೆ ಸೇರಿಸಬೇಕು (ಗುರುವಾರ ಹೊರತುಪಡಿಸಿ). ಇದು ಮನೆ ಅಥವಾ ಕೆಲಸದ ಸ್ಥಳದ ನಕಾರಾತ್ಮಕ ಶಕ್ತಿಯನ್ನು ನಾಶಮಾಡಲು ಸಹಾಯ ಮಾಡುತ್ತದೆ.


How to remove negative energy from home, Predictions home, Astrology, Kannada news, karnataka news, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಮನೆಯಲ್ಲಿ ಇರುವ ನೆಗೆಟೀವ್​ ಶಕ್ತಿಯನ್ನು ಓಡಿಸುವುದು ಹೇಗೆ, ನಕಾರಾತ್ಮಕ ಶಕ್ತಿಯಿಂದ ಮುಕ್ತಿಯಾಗುವುದು ಹೇಗೆ
ಸಾಂಕೇತಿಕ ಚಿತ್ರ


4. ದುಷ್ಟ ಕಣ್ಣುಗಳನ್ನು ನಿವಾರಿಸಲು, ನಿಮ್ಮ ಕೈಯಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಅದನ್ನು ಮೂರು ಬಾರಿ ಬಾಧಿತ ವ್ಯಕ್ತಿಯ ತಲೆಯ ಮೇಲೆ ತೆಗೆದುಕೊಂಡು ಹೋಗಿ. ನಂತರ ಆ ಉಪ್ಪನ್ನು ಮನೆಯಿಂದ ಹೊರಗೆ ಚೆಲ್ಲಿ.


5. ಇದೇ ರೀತಿ ಉಪ್ಪನ್ನು ಬ್ಯುಸಿನೆಸ್‌ ವಿಷಯದಲ್ಲೂ ಬಳಸಬಹುದು. ಈ ಉಪ್ಪಿನ ಪರಿಹಾರವನ್ನು ಮಾರಾಟವನ್ನು ಹೆಚ್ಚಿಸಲು ಸಹ ಬಳಸಬಹುದು.


ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಹಾಕಿ ಅಂಗಡಿ ಅಥವಾ ಕಚೇರಿಯಲ್ಲಿ ನೇತುಹಾಕಿ. ಇದು ಅಂಗಡಿಗಳು ಮತ್ತು ವ್ಯವಹಾರಗಳನ್ನು ದುಷ್ಟ ಕಣ್ಣುಗಳಿಂದ ರಕ್ಷಿಸುತ್ತದೆ. ಇದು ಬಡತನವನ್ನು ಹೋಗಲಾಡಿಸಲು ಸಹಾಯ ಮಾಡುವುದಲ್ಲದೇ, ಕಚೇರಿ ಮತ್ತು ಮನೆ ಎರಡಕ್ಕೂ ಲಾಭವನ್ನು ತರುತ್ತದೆ.


6. ಸ್ನಾನಗೃಹಗಳು ಮತ್ತು ಶೌಚಾಲಯಗಳ ಋಣಾತ್ಮಕ ಶಕ್ತಿಗಳನ್ನು ಸರಳವಾದ ವಾಸ್ತು ಹಂತದಿಂದ ತೆಗೆದುಹಾಕಬಹುದು. ವಾಸ್ತುಶಾಸ್ತ್ರದ ಪ್ರಕಾರ, ಗಾಜು ಮತ್ತು ಉಪ್ಪು ಎರಡೂ ರಾಹುವಿನ ಅಂಶಗಳಾಗಿವೆ.


ಆದ್ದರಿಂದ, ಮನೆಯಲ್ಲಿನ ಶೌಚಾಲಯ ಮತ್ತು ಸ್ನಾನಗೃಹದಲ್ಲಿ ಉಪ್ಪು ತುಂಬಿದ ಗಾಜಿನ ಲೋಟವನ್ನು ಇಡಬೇಕು. ವಾಸ್ತು ದೋಷಗಳನ್ನು ಹೋಗಲಾಡಿಸಲು ಈ ಪರಿಹಾರವು ಸಹಾಯ ಮಾಡುತ್ತದೆ.


7. ಪತಿ-ಪತ್ನಿಯರ ನಡುವಿನ ಸಂಬಂಧವು ಯಾವುದಾದರೂ ವಿಷಯದ ಬಗ್ಗೆ ಅಸಮಾಧಾನಗೊಂಡಿದ್ದರೆ ಹಾಸಿಗೆಯ ಒಂದು ಮೂಲೆಯಲ್ಲಿ ಕಲ್ಲು-ಉಪ್ಪಿನ ತುಂಡು ಪರಿಹರಿಸಲು ಸಹಾಯ ಮಾಡುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.


ಧೂಪ ಅಥವಾ ಅಗರಬತ್ತಿಗಳನ್ನು ಹಚ್ಚುವುದು


1. ಅಗರಬತ್ತಿ ಮತ್ತು ಧೂಪವನ್ನು ಬೆಳಗಿಸುವುದು ಮಂಗಳಕರ ಶಕ್ತಿಯನ್ನು ವರ್ಧಿಸುತ್ತದೆ. ಅಗರಬತ್ತಿಗಳು ಮತ್ತು ಧೂಪಗಳನ್ನು ಮನೆಯ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿ ದಿನಕ್ಕೆ ಎರಡು ಬಾರಿ ತೋರಿಸಬೇಕು.


ಇದು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಮತ್ತು ಶಕ್ತಿಯುತ ಜೀವನ ನಡೆಸಲು ಸಹಾಯ ಮಾಡುತ್ತದೆ.


2. "ಸೇಜ್‌ ಅಥವಾ ಸ್ಮಡ್ಜ್ ಕಡ್ಡಿಗಳ ಹೊಗೆಯೂ ಕೂಡ ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ. ಅದರ ಹೊಗೆಯನ್ನು ಆವರಣದ ಪ್ರತಿಯೊಂದು ಮೂಲೆಯಲ್ಲಿ ಪ್ರದಕ್ಷಿಣಾಕಾರವಾಗಿ ಹರಡುವುದು ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.


ಬಣ್ಣಗಳು ಮತ್ತು ಹರಳುಗಳ ಬಳಕೆ


1. ಋಣಾತ್ಮಕ ಶಕ್ತಿಗಳನ್ನು ಹೊಡೆದೋಡಿಸಲು ಅಮೆಥಿಸ್ಟ್‌ಗಳು, ಕಪ್ಪು ಟೂರ್‌ಮ್ಯಾಲಿನ್‌ನಂತಹ ಹರಳುಗಳ ಬಳಕೆ ಮಾಡಬಹುದು.


2. ಬಣ್ಣಗಳು ಯಾವಾಗಲೂ ಮನೆಯಲ್ಲಿನ ಶಕ್ತಿಗಳ ಮೇಲೆ ಪ್ರಭಾವ ಬೀರುತ್ತವೆ. ಮನೆಯಲ್ಲಿ ಧನಾತ್ಮಕ ಶಕ್ತಿಗಳನ್ನು ಆಹ್ವಾನಿಸುವಲ್ಲಿ ಕೆಲವು ಬಣ್ಣಗಳು ಬಹಳ ಪ್ರಭಾವ ಬೀರುತ್ತವೆ ಎಂದು ವಾಸ್ತು ಶಾಸ್ತ್ರವು ಸೂಚಿಸುತ್ತದೆ.


ಆವರಣದ ಪ್ರತಿಯೊಂದು ದಿಕ್ಕು ನಿರ್ದಿಷ್ಟ ಬಣ್ಣಗಳಿಂದ ಪ್ರಭಾವಿತವಾಗಿರುತ್ತದೆ. ಆದಾಗ್ಯೂ ವಿರೋಧಿ ಬಣ್ಣವು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ.


ಉತ್ತರ, ಈಶಾನ್ಯ, ವಾಯುವ್ಯಗಳಲ್ಲಿ ನೀಲಿ. ಪೂರ್ವದಲ್ಲಿ ಹಸಿರು, ಆಗ್ನೇಯದಲ್ಲಿ ಕಿತ್ತಳೆ, ದಕ್ಷಿಣದಲ್ಲಿ ಕೆಂಪು, ನೈಋತ್ವದಲ್ಲಿ ಕೆಂಪು+ ಹಳದಿ. ಪಶ್ಚಿಮದಲ್ಲಿ ಗಾಢ ನೀಲಿ ಬಣ್ಣಗಳು ಸೂಕ್ತ ಬಣ್ಣಗಳಾಗಿವೆ.


ಧಾರ್ಮಿಕ ಚಿಹ್ನೆಗಳು, ಪ್ರಾರ್ಥನೆಗಳ ಪ್ರಯೋಜನಗಳು


1. ಮನೆಯಲ್ಲಿ ಪಿರಮಿಡ್ ಯಂತ್ರಗಳು, ವಿಗ್ರಹಗಳು ಅಥವಾ ದೇವರ ಚಿತ್ರಗಳಂತಹ ಧಾರ್ಮಿಕ ವಸ್ತುಗಳನ್ನು ಇರಿಸುವುದು ಮಂಗಳಕರ ಶಕ್ತಿಯನ್ನು ಆಹ್ವಾನಿಸುತ್ತದೆ.


2. ಪೂಜಾ ಕೊಠಡಿಯ ಸೂಕ್ತ ಸ್ಥಳವು ಈಶಾನ್ಯದಲ್ಲಿ ವಾಸ್ತು ಅನುಸರಣೆಗೆ ಅನುಗುಣವಾಗಿರಬೇಕು.


3. ಆವರಣದಲ್ಲಿ ಧನಾತ್ಮಕ ಶಕ್ತಿಗಳ ಪ್ರವೇಶವನ್ನು ಹೆಚ್ಚಿಸಲು ಆನೆಗಳಂತಹ ಧಾರ್ಮಿಕ ಮತ್ತು ಮಂಗಳಕರ ಚಿಹ್ನೆಗಳನ್ನು ಇಡಬಹುದು.


4. ಘಂಟೆ, ಶಂಖ, ತಾಳಗಳಂತಹ ಶುಭ ಶಬ್ದಗಳನ್ನು ಪ್ರೋತ್ಸಾಹಿಸಬೇಕು. ಇವುಗಳು ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡಲು ಸಹಕಾರಿ.


5. ಮಂತ್ರಗಳ ಪಠಣವು (ಅವುಗಳನ್ನು ನೀವೇ ಹೇಳಬಹುದು ಅಥವಾ ಆಡಿಯೋ ಸಿಸ್ಟಂ ಕೂಡ ಹಾಕಬಹುದು) ನಕಾರಾತ್ಮಕತೆಯನ್ನು ದೂರಗೊಳಿಸುತ್ತವೆ.


6. ಪರಿಣಿತರ ಮಾರ್ಗದರ್ಶನದಲ್ಲಿ ಯಂತ್ರವನ್ನು ಮಂತ್ರದೊಂದಿಗೆ ಅನ್ವಯಿಸುವುದು ಒಬ್ಬರ ಸುತ್ತಮುತ್ತಲಿನ ಕೆಟ್ಟ ಶಕ್ತಿಯನ್ನು ತೊಡೆದುಹಾಕಲು ಮತ್ತೊಂದು ಪ್ರಬಲ ಮಾರ್ಗವಾಗಿದೆ.


7.ಏಂಜೆಲ್ ಧ್ಯಾನ, ರೇಖಿಯಂತಹ ನವ ಆಧ್ಯಾತ್ಮಿಕ ವಿಧಾನಗಳು ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ.


ಇನ್ನು, ಕುಟುಂಬದ ಸದಸ್ಯರ ನಡುವಿನ ಪೈಪೋಟಿಯನ್ನು ಬಿಂಬಿಸುವ ಚಿತ್ರಗಳು ಅಥವಾ ಇನ್ಯಾವುದೇ ವಿಧದ ದುಃಖದ ಚಿತ್ರಗಳನ್ನು ಚಿತ್ರಿಸಿದರೆ ನರಾಕಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ. ಅವುಗಳು ನಮಗೆ ಗೊತ್ತಿಲ್ಲದೇ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.


ಹಾಗೆಯೇ ಒಡೆದ ಗ್ಲಾಸ್‌ ಗಳು, ಕನ್ನಡಿ, ಒಡೆದ ಚಿತ್ರಗಳು ಅಥವಾ ಒಡೆದ ದೇವರ ವಿಗ್ರಹಗಳು ಒಳ್ಳೆಯದಲ್ಲ. ಹೀಗೆ ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಕೆಲವೊಂದು ವಿಧಾನಗಳು ಇಲ್ಲಿವೆ.


ಆದ್ರೆ ಈ ವಿಧಾನಗಳು ಕೆಲವೊಮ್ಮೆ ವಿಫಲಗೊಳ್ಳುವ ಸಾಧ್ಯತೆಗಳೂ ಇವೆ. ಆಗ ನೀವು ಪರಿಣಿತರ ಬಳಿ ತೆರಳಿ ಪರಿಹಾರವನ್ನು ಕೇಳಬಹುದು ಅಥವಾ ಅವರನ್ನೇ ಕರೆತಂದು ಮಾರ್ಗದರ್ಶನ ಪಡೆಯಬಹುದಾಗಿದೆ. ಅಷ್ಟಕ್ಕೂ ಈ ಎಲ್ಲ ಸಂಗತಿಗಳು ಅವರವರ ನಂಬಿಕೆ ಹಾಗೂ ವಿಶ್ವಾಸಕ್ಕೆ ಸೀಮಿತವಾಗಿವೆ.

First published: