ಬಣ್ಣಗಳ ಹಬ್ಬ ಹೋಳಿಯನ್ನು (Holi) ಈ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತಿದೆ. ಅದಕ್ಕೂ ಮುನ್ನ ಅಂದರೆ ಹೋಳಿ ಹಬ್ಬದ (Festival) ಹಿಂದಿನ ದಿನ ಮಾರ್ಚ್ 7 ರಂದು ಹೋಲಿಕಾ ದಹನ್ ಆಚರಣೆಗಾಗಿ ಜನರು ದೀಪೋತ್ಸವದ ಸುತ್ತಲೂ ಸೇರುತ್ತಾರೆ. ಹೋಳಿ ಹಬ್ಬದಷ್ಟೇ ಹೋಲಿಕಾ ದಹನ್ (Holika Dahan) ಕೂಡ ಅತ್ಯಂತ ಮಹತ್ವಪೂರ್ಣ ಆಚರಣೆಗಳಲ್ಲಿ ಒಂದೆನಿಸಿದೆ.
ಹೋಲಿಕಾ ದಹನ್ ಹೆಸರು ಬರಲು ಕಾರಣ
ಹೋಲಿಕಾ ರಾಕ್ಷಸ ಗಣಕ್ಕೆ ಸೇರಿದ ರಾಕ್ಷಸಿಯಾಗಿದ್ದು, ವಿಷ್ಣು ಭಗವಾನರ ಪರಮ ಭಕ್ತ ಹಾಗೂ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದನ ಸೋದರತ್ತೆ. ಹೋಲಿಕಾ ದಹನವೆಂಬುದು ದುಷ್ಟರ ಮೇಲಿನ ವಿಜಯವನ್ನು ಸಾರುತ್ತದೆ ಮತ್ತು ಅದನ್ನು ಸಂಕೇತಿಸುತ್ತದೆ.
ಹೋಲಾಶ್ಟಕ್ ಆಚರಣೆ
ಮತ್ತೊಂದು ಸಾಂಪ್ರದಾಯಿಕ ಆಚರಣೆ ಎಂದರೆ ಹೋಲಾಶ್ಟಕ್ ಅನ್ನು ಹೋಳಿ ಹಬ್ಬಕ್ಕೆ ಎಂಟು ದಿನಗಳಿರುವಾಗ ಆಚರಿಸಲಾಗುತ್ತದೆ. ಈ ವರ್ಷ ಹೋಲಾಶ್ಟಕ್ ಫೆಬ್ರವರಿ 27 ರಿಂದ ಆರಂಭಗೊಂಡು ಮಾರ್ಚ್ 7 ಕ್ಕೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಈ ರಾಶಿಯ ಜನರು ಸೂಪರ್ ಸ್ಮಾರ್ಟ್, ಬ್ಯುಸಿನೆಸ್ನಲ್ಲಿ ಪಟ್ ಅಂತ ಸಕಸ್ಸ್ ಆಗ್ತಾರಂತೆ
ಈ ಎಂಟು ದಿನಗಳ ಕಾಲ ಯಾವುದೇ ಶುಭಕಾರ್ಯಗಳನ್ನು ನಡೆಸುವುದಿಲ್ಲ, ಅಂತೆಯೇ ಇದು ಅಶುಭ ಎಂದು ಪರಿಗಣಿಸಲಾಗುತ್ತದೆ. ವಿವಾಹ, ಮನೆ ಗೃಹಪ್ರವೇಶ, ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದು ಅಥವಾ ಪ್ರಯಾಣದಂತಹ ಯಾವುದೇ ಮಹತ್ವದ ಕಾರ್ಯಗಳನ್ನು ನಡೆಸಲು ಈ 8 ದಿನಗಳನ್ನು ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ.
ರಾಹುವಿನ ಪ್ರಭಾವ ಕೆಟ್ಟದಾಗಿರುತ್ತದೆ
ಹೋಲಿ ಕಾ ದಹನ್ ಸಮಯದಲ್ಲಿ ರಾಹುವಿನ ಋಣಾತ್ಮಕ ಅಂಶಗಳು ತುಂಬಾ ಪ್ರಭಾವಶಾಲಿಯಾಗಿರುತ್ತದೆ ಎಂದು ಶ್ರೀ ಕಲ್ಲಾಜಿ ವೈದಿಕ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥ ಡಾ.ಮೃತ್ಯುಂಜಯ್ ತಿವಾರಿ ತಿಳಿಸಿದ್ದಾರೆ. ಹಾಗಾಗಿಯೇ ಈ ದಿನಗಳಂದು ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ಒಳ್ಳೆಯದಲ್ಲವೆಂದು ಸಲಹೆ ನೀಡುತ್ತಾರೆ.
ರಾಹುವಿನ ಪ್ರಭಾವದಿಂದ ವ್ಯಕ್ತಿಯ ಮೇಲೆ ಉಂಟಾಗುವ ಪರಿಣಾಮಗಳು
ರಾಹು ಆಗಾಗ್ಗೆ ವ್ಯಕ್ತಿಯ ನಡವಳಿಕೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತಾನೆ. ಕದಿಯುವುದು, ಆಲ್ಕೊಹಾಲ್ ಸೇವನೆ, ವ್ಯಭಿಚಾರ ಮತ್ತು ಜೂಜಾಟದಂತಹ ಕೆಟ್ಟ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ಕೆಟ್ಟ ಜನರ ಸಹವಾಸಗಳಲ್ಲಿ ತೊಡಗಿಸಿಕೊಳ್ಳಲು ಕೂಡ ಇದುವೇ ರಾಹುವೇ ಕಾರಣನಾಗುತ್ತಾನೆ.
ವ್ಯಕ್ತಿಯ ಸ್ವಭಾವವನ್ನೇ ಬದಲಾಯಿಸುವ ರಾಹು
ಒಬ್ಬ ವ್ಯಕ್ತಿಯು ರಾಹು ಪ್ರಭಾವದಿಂದ ಕೆಟ್ಟವನಾಗಿ ಮಾರ್ಪಡುತ್ತಾನೆ ಹಾಗೂ ವರ್ತಿಸುತ್ತಾನೆ. ಆ ವ್ಯಕ್ತಿ ಕೆಟ್ಟ ಪದಗಳನ್ನೇ ಮಾತಾಡುತ್ತಾನೆ ಹಾಗೂ ಇದರಿಂದಾಗಿ ಕೌಟುಂಬಿಕ ಮತ್ತು ಇತರ ಸಂಬಂಧಗಳಲ್ಲಿ ವಿವಾದಗಳು ಸಮಸ್ಯೆಗಳು ಉದ್ಭವಿಸಬಹುದು.
ರಾಹುವಿನ ಪ್ರಭಾವದಿಂದ ಅನೇಕ ಚರ್ಮದ ಕಾಯಿಲೆಗಳು ಸಂಭವಿಸಬಹುದು. ರಾಹುವಿನ ಹಾನಿಕಾರಕ ಪ್ರಭಾವಕ್ಕೆ ಒಳಪಟ್ಟರೆ ಮಾನಸಿಕ ಅಸ್ವಸ್ಥತೆಯನ್ನು ಬೆಳೆಸುವ ಸಾಧ್ಯತೆಗಳು ಅಥವಾ ಖಿನ್ನತೆಗೆ ಬಲಿಯಾಗುವ ಸಾಧ್ಯತೆಗಳೂ ಹೆಚ್ಚು.
ರಾಹುವಿನ ಪ್ರಭಾವಕ್ಕೆ ಜ್ಯೋತಿಷ್ಯ ಪರಿಹಾರಗಳು
ರಾಹುವಿನ ಋಣಾತ್ಮಕ ಶಕ್ತಿಗಳಿಂದ ಪರಿಹಾರ ಪಡೆಯಲು ಇರುವ ಒಂದೇ ದಾರಿ ಎಂದರೆ ಪ್ರತಿದಿನ ಶಿವನನ್ನು ಆರಾಧಿಸುವುದಾಗಿದೆ ಹಾಗೂ ಶಿವನ ಮೂರ್ತಿ ಅಥವಾ ಪ್ರತಿಮೆಯ ಮೇಲೆ ನೀರಿನ ಅಭಿಷೇಕ ಮಾಡುವುದು ಹಾಗೂ ಹೂವು ಬಳಸಿ ಶಿವನ ವಿಗ್ರಹಕ್ಕೆ ಅರ್ಚನೆ ಮಾಡುವುದು ಶಿವನನ್ನು ಪ್ರಾರ್ಥಿಸುವುದು ಹಾಗೂ ಓಂ ನಮಃ ಶಿವಾಯ್ ಮಂತ್ರವನ್ನು ಜಪಿಸುವುದು ಮುಖ್ಯವಾಗಿದೆ.
ಪರಿಣಾಮಕಾರಿ ರಾಹುಮಂತ್ರ
ಇನ್ನೊಂದು ಪರಿಣಾಮಕಾರಿ ಮಂತ್ರವೆಂದರೆ ಅದು ರಾಹು ಮಂತ್ರವಾಗಿದೆ. "ಓಂ ಬ್ರಾಮ್ ಬ್ರೀಮ್ ಬ್ರೋಮ್ ಸ ರಾಹವೇ ನಮಃ" ಎಂಬುದು ರಾಹುವಿನ ಕುರಿತಾಗಿರುವ ಮಂತ್ರವಾಗಿದೆ. ಪ್ರತೀ ದಿನ ಐದು ಬಾರಿ ಈ ಮಂತ್ರವನ್ನು ಜಪಿಸಬೇಕು. ರಾಹುವಿನ ಕೆಟ್ಟ ಪರಿಣಾಮದಿಂದ ರಕ್ಷಣೆ ಪಡೆಯಲು ಗೋಮೇದಕದಿಂದ ತಯಾರಿಸಿದ ಆಭರವನ್ನು ಧರಿಸಬೇಕು. ರಾಹು ಹಿಡಿತದಿಂದ ಪಾರಾಗಲು, ನೀವು ಪ್ರತಿವರ್ಷ 18 ಶನಿವಾರದಂದು ಉಪವಾಸವನ್ನು ಕೈಗೊಳ್ಳುವುದು ಕೂಡ ಸೂಕ್ತ ಪರಿಹಾರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ