ಸಾಮಾನ್ಯವಾಗಿ ಎಲ್ಲರಿಗೂ ಒಂದೊಂದು ಲಕ್ಕಿ ನಂಬರ್ ಇರುತ್ತದೆ. ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕಕ್ಕೆ (Date Of birth) ಅಥವಾ ಜನ್ಮ ವರ್ಷಕ್ಕೆ ಸಂಬಂಧಿಸಿ ಹೇಳಲಾಗುವಂಥ ಲಕ್ಕಿ ನಂಬರ್‌ಅನ್ನು ಜೀವನದ ಪ್ರತಿ ಹಂತದಲ್ಲಿ ನಂಬುತ್ತಾರೆ. ಅವರ ಮೊಬೈಲ್ ಸಂಖ್ಯೆಯಾಗಲಿ, ಫ್ಲ್ಯಾಟ್ ನಂಬರ್ (Number) ಆಗಲಿ, ಕಾರ್ ನಂಬರ್ ಆಗಲಿ, ಯಾವುದಾದರೂ ಮುಖ್ಯ ಕಾರ್ಯ ಕೈಗೊಳ್ಳುವಂಥ ದಿನಾಂಕವು ಅದೇ ನಂಬರ್ ಅನ್ನು ಒಳಗೊಂಡಿರುವಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಆ ನಂಬರ್ ಅವರಿಗೆ ಅದೃಷ್ಟ (Luck) ತಂದುಕೊಡುತ್ತದೆ ಎಂದೇ ಅವರು ನಂಬುತ್ತಾರೆ.
ಹೌದು ಕೆಲವೊಬ್ಬರ ಇಮೇಲ್,ಮನೆ ವಿಳಾಸ ಅಥವಾ ಕಾರ್ ನಂಬರ್ ಪ್ಲೇಟ್‌ಗಳಲ್ಲಿ ಒಂದು ಸಂಖ್ಯೆ ಕಾಮನ್ ಆಗಿರುತ್ತದೆ. ಅದೇ ಅವರ ಲಕ್ಕಿ ಸಂಖ್ಯೆಯಾಗಿರುತ್ತದೆ. ಆ ಸಂಖ್ಯೆಯನ್ನು ಹೊಂದಿದ್ದರೆ ಅದೃಷ್ಟ ಒಲಿಯುತ್ತದೆ, ಒಳ್ಳೆಯದಾಗುತ್ತದೆ ಎಂಬುದಾಗಿ ಅವರು ನಂಬುತ್ತಾರೆ.
ಚೀನೀ ಜ್ಯೋತಿಷ್ಯದಲ್ಲಿ ಸಂಖ್ಯಾಶಾಸ್ತ್ರಕ್ಕಿದೆ ಹೆಚ್ಚಿನ ಪ್ರಾಮುಖ್ಯತೆ
ಅದರಲ್ಲೂ ಚೀನೀ ಜ್ಯೋತಿಷ್ಯವು ಸಂಖ್ಯೆಗಳು ಅಥವಾ ಸಂಖ್ಯಾಶಾಸ್ತ್ರದ ಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಹಾಗೆಯೇ ಸಂಖ್ಯಾಶಾಸ್ತ್ರದಲ್ಲಿ ಪುರಾತನ ತತ್ತ್ವಶಾಸ್ತ್ರದ ಮೂಲಕ ನಿಮ್ಮ ಅದೃಷ್ಟವನ್ನು ನಿರ್ಧರಿಸಲಾಗುತ್ತದೆ. ಇಲ್ಲಿ ನಿಮಗೆ ಚೀನಿ ಅದೃಷ್ಟ ಸಂಖ್ಯೆಯನ್ನು ಹೇಗೆ ಕಂಡುಹಿಡಿಯುವುದು ಹಾಗೂ ಚೀನೀ ಅದೃಷ್ಟ ಸಂಖ್ಯೆಗಳ ಹೇಗೆ ತಿಳಿದುಕೊಳ್ಳುವುದು ಅನ್ನೋದನ್ನು ನೋಡೋಣ.
ಇದನ್ನೂ ಓದಿ: Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ
ಚೀನೀ ಸಂಖ್ಯಾಶಾಸ್ತ್ರದ ಪ್ರಕಾರ ಕೆಲವಷ್ಟು ಸಂಖ್ಯೆಗಳು ವ್ಯಕ್ತಿಗೆ ಒಳ್ಳೆಯದನ್ನು ಮಾಡುತ್ತವೆ ಹಾಗೆಯೇ ಕೆಲವಷ್ಟು ಸಂಖ್ಯೆಗಳನ್ನು ದುರಾದೃಷ್ಟವನ್ನು ತರುತ್ತವೆ ಎಂಬುದಾಗಿ ನಂಬದಲಾಗುತ್ತದೆ. ಸಂಖ್ಯೆಗಳು ಖಂಡಿತವಾಗಿಯು ಒಳ್ಳೆಯ ಮತ್ತು ಕೆಟ್ಟ ಶಕುನಗಳು ಅವರೊಂದಿಗೆ ಸಂಬಂಧ ಹೊಂದಿವೆ ಎಂದೇ ಹೇಳಲಾಗುತ್ತದೆ. ನಿಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯಲು ಮತ್ತು ನಿಮ್ಮ ಪ್ರೀತಿ, ವೃತ್ತಿಪರ ಮತ್ತು ಕೌಟುಂಬಿಕ ಜೀವನದ ಮೇಲೆ ಅದು ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಮಾಹಿತಿಗಳನ್ನು ನೀಡಲಾಗಿದೆ.
ಚೀನೀ ಜ್ಯೋತಿಷ್ಯವು ಪ್ರಕೃತಿಯಲ್ಲಿ ಪ್ರತಿಯೊಂದೂ ನಿರ್ದಿಷ್ಟ ಸಂಖ್ಯೆಯೂ ಒಂದೊಂದು ಪರಿಣಾಮಗಳನ್ನು ಹೊಂದಿದೆ ಎಂದು ನಂಬುತ್ತದೆ. ಆದ್ದರಿಂದ ಈ ಸಂಖ್ಯೆಗಳಿಂದ ರಚಿಸಲಾದ ಮಾದರಿಗೆ ಪ್ರಾಮುಖ್ಯತೆಯನ್ನು ನೀಡುವುದು ಅರ್ಥಪೂರ್ಣವಾಗಿದೆ ಎಂದೇ ಭಾವಿಸಲಾಗುತ್ತದೆ.
ಚೀನೀ ಸಂಖ್ಯಾಶಾಸ್ತ್ರದ ಇತಿಹಾಸ
ಫೆಂಗ್ ಶೂಯಿಯು, ಲುವೋ ಶೂ ಚದರ ತತ್ವಶಾಸ್ತ್ರದ ಆಧಾರದ ಮೇಲೆ ಚೀನೀ ಸಂಖ್ಯಾಶಾಸ್ತ್ರದ ತತ್ವಗಳನ್ನು ಅನುಸರಿಸುತ್ತದೆ. ಅಂದಹಾಗೆ ಚೀನಿಯರ ಈ ಸಂಖ್ಯಾಶಾಸ್ತ್ರವು ಸುಮಾರು 4,000 ವರ್ಷಗಳ ಹಿಂದೆ ಸಮ್ಮಿತೀಯ ಒಂಬತ್ತು ಚೌಕಗಳ ನಿಖರವಾದ 'ಮೂರು ಗುಣಿಸಿದ ಮೂರು' ಮಾದರಿಯೊಂದಿಗೆ ಅಸ್ತಿತ್ವಕ್ಕೆ ಬಂದಿತು. ಇದು ಸಾಂಪ್ರದಾಯಿಕ ಚೀನೀ ಸಂಸ್ಕೃತಿಯ ಪ್ರಕಾರ ಅದೃಷ್ಟ ಮತ್ತು ದುರದೃಷ್ಟಕರ ಸಂಖ್ಯೆಗಳನ್ನು ವರ್ಗೀಕರಿಸುವ ಲೌ ಶು ಚೌಕದ ಆಧಾರವಾಗಿದೆ.
ನಿಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
ಚೈನೀಸ್ ಸಂಖ್ಯಾಶಾಸ್ತ್ರ ಕ್ಯಾಲ್ಕುಲೇಟರ್ ಪ್ರಕಾರ ನಿಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಸುಲಭ. ಚೀನೀ ವಿಧಾನದ ಪ್ರಕಾರ ನಿಮ್ಮ ಲಕ್ಕೀ ಸಂಖ್ಯೆಯನ್ನು ಲೆಕ್ಕಾಚಾರ ಮಾಡುವುದು ಪಾಶ್ಚಾತ್ಯ ಸಂಖ್ಯಾಶಾಸ್ತ್ರದ ತಂತ್ರಕ್ಕೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನವಾಗಿದೆ. ಇಲ್ಲಿ, ಅದೃಷ್ಟ ಸಂಖ್ಯೆಯನ್ನು ನಿಮ್ಮ ಜನ್ಮ ವರ್ಷದ ಆಧಾರದಿಂದ ಕಂಡುಹಿಡಿಯಲಾಗುತ್ತದೆ.
ಹಾಗೆಯೇ ನೀವು ಗಂಡಾಗಿದ್ದರೆ ಅದಕ್ಕೆ ನಿರ್ದಿಷ್ಟ ಸಂಖ್ಯೆಯನ್ನು ಕಳೆಯಲಾಗುತ್ತದೆ. ಹಾಗೆಯೇ ನೀವು ಹೆಣ್ಣಾದರೆ ನಿರ್ದಿಷ್ಟ ಸಂಖ್ಯೆಯನ್ನು ಕೂಡಿಸಲಾಗುತ್ತದೆ. ಈ ಲೆಕ್ಕಾಚಾರವನ್ನು ಹೇಗೆ ಮಾಡುವುದು ಅನ್ನೋದನ್ನು ತಿಳಿಯೋಣ.
ಉದಾಹರಣೆಗೆ, ನಿಮ್ಮ ಜನ್ಮ ವರ್ಷವು 1989 ಆಗಿದ್ದರೆ, ನೀವು ಕೊನೆಯ ಎರಡು ಅಂಕೆಗಳನ್ನು ಸೇರಿಸುವ ಅಗತ್ಯವಿದೆ. ಅಂದರೆ 8+9 = 17. ಬಂದ ಉತ್ತರವು 2 ಸಂಖ್ಯೆಯದ್ದಾದರೆ ಅದನ್ನು ಒಂದು ಸಂಖ್ಯೆಯನ್ನಾಗಿ ಮಾಡಬೇಕಾಗುತ್ತದೆ. ಅಂದರೆ 1+7 ಮಾಡಿದಾಗ ಬರುವ ಉತ್ತರವು 8 ಆಗಿರುತ್ತದೆ.
ನೀವು ಪುರುಷರಾಗಿದ್ದರೆ ಬಂದಂತಹ ಉತ್ತರವನ್ನು 10 ರಿಂದ ಕಳೆಯಬೇಕು. ಅಂದರೆ 10-8 = 2. ಈಗ ನಿಮ್ಮ ಅದೃಷ್ಟ ಸಂಖ್ಯೆಯು 2 ಆಗಿರುತ್ತದೆ.
ಇನ್ನು ನೀವು ಹೆಣ್ಣಾಗಿದ್ದರೆ ಬಂದಂತಹ ಉತ್ತರಕ್ಕೆ 5 ಅನ್ನು ಸಂಖ್ಯೆಗೆ ಸೇರಿಸಬೇಕು. ಈ ಸಂದರ್ಭದಲ್ಲಿ, 8+5 = 13. ಆದರೆ ಹೀಗೆ ಎರಡು ಸಂಖ್ಯೆ ಬಂದಲ್ಲಿ ಅದನ್ನು ಮತ್ತೆ ಒಡೆದು ಕೂಡಿಸಬೇಕು ಅಂದರೆ 1+3 = 4 ಹೀಗೆ. ಆದ್ದರಿಂದ ನಿಮ್ಮ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.
ಅದೃಷ್ಟ ಸಂಖ್ಯೆಗಳು ಮತ್ತು ಅವುಗಳ ಮಹತ್ವ
ಇನ್ನು, ಚೀನೀ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಂಖ್ಯೆಗೂ ಒಂದು ನಿರ್ದಿಷ್ಟ ಮಹತ್ವವಿದೆ. ಆಗಿದ್ದರೆ ಚೀನೀ ಸಂಖ್ಯಾಶಾಸ್ತ್ರದ ಪ್ರಕಾರ ಅದೃಷ್ಟ ಸಂಖ್ಯೆಗಳು ಮತ್ತು ಅವುಗಳ ಒಳ ಅರ್ಥಗಳೇನು ಅನ್ನೋದನ್ನು ನೋಡೋಣ.
ನಂಬರ್ 1: ಶಕ್ತಿ, ಸಕಾರಾತ್ಮಕತೆ ಮತ್ತು ಚಾಲನೆಯ ಸಂಕೇತ ಹೊಂದಿರುವಂಥದ್ದು 1ನೇ ನಂಬರ್ ಆಗಿದೆ. ಚೀನೀ ಸಂಖ್ಯಾಶಾಸ್ತ್ರದಲ್ಲಿ ಈ ಸಂಖ್ಯೆಯು ಖಂಡಿತವಾಗಿಯೂ ಅದೃಷ್ಟದ ಸಂಖ್ಯೆಯಾಗಿದೆ. ಇದು ಪುರುಷ ಶಕ್ತಿಯನ್ನು ಪ್ರತಿನಿಧಿಸುವ ಯಾಂಗ್ ತತ್ವವನ್ನು ಪ್ರತಿನಿಧಿಸುತ್ತದೆ. ಭಾವೋದ್ರಿಕ್ತ ಮತ್ತು ಸ್ವಾತಂತ್ರವನ್ನು ಈ ಸಂಖ್ಯೆ ಸಂಕೇತಿಸುತ್ತದೆ. ಯಾವ ವ್ಯಕ್ತಿಯ ಅದೃಷ್ಟ ಸಂಖ್ಯೆ 1 ಆಗಿರುತ್ತದೆಯೋ ಅಂಥ ವ್ಯಕ್ತಿಗಳು ಸಾಮಾನ್ಯವಾಗಿ ಜೀವನದಲ್ಲಿ ವೃತ್ತಿಪರ ಮತ್ತು ಹಣಕಾಸಿನ ಯಶಸ್ಸನ್ನು ಪಡೆಯುತ್ತಾರೆ.
ನಂಬರ್ 2: ಇದು ಚೀನೀ ಸಂಖ್ಯಾಶಾಸ್ತ್ರದಲ್ಲಿ ಅದೃಷ್ಟದ ಸಂಖ್ಯೆಗಳಲ್ಲಿ ಒಂದಾಗಿದೆ ಎಂದೇ ಹೇಳಲಾಗುತ್ತದೆ ಸಾಮರಸ್ಯ ಮತ್ತು ಸಮತೋಲನದ ಯಿನ್ ತತ್ವವನ್ನು ಈ ಸಂಖ್ಯೆ ಪ್ರತಿನಿಧಿಸುತ್ತದೆ. ಯಾವುದೇ ರೀತಿಯ ಪಾಲುದಾರಿಕೆಗಳು ಮತ್ತು ಸಂಬಂಧಗಳಿಗೆ ಇದು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಚೀನೀ ಸಂಖ್ಯಾಶಾಸ್ತ್ರದಲ್ಲಿ 2ನೇ ನಂಬರ್ ಅರ್ಥವನ್ನು ಒಂದೇ ಪದದಲ್ಲಿ ವಿವರಿಸಬೇಕು ಎಂದರೆ ಅದು “ಸಾಮರಸ್ಯ” ಎಂದು ಹೇಳಬಹುದು.
ನಂಬರ್ 3: ಬೆಳವಣಿಗೆ, ಸಮೃದ್ಧಿ ಇವುಗಳು ನಂಬರ್ 3ರ ಅರ್ಥಗಳಾಗಿವೆ. ಅಲ್ಲಿನ ಸಂಸ್ಕೃತಿಯಲ್ಲಿ ಈ ಸಂಖ್ಯೆಯು “ಜನ್ಮ” ಪದದಂತೆ ಧ್ವನಿಸುತ್ತದೆ. ಆದ್ದರಿಂದ, ಇದು ಸಾಮಾನ್ಯವಾಗಿ ಹೊಸ ಆರಂಭದೊಂದಿಗೆ ಸಂಬಂಧಿಸಿದೆ. ಅದರ ಹೊರತಾಗಿ, ಚಂದ್ರನ ಕಪ್ಪೆ ಎಂದು ಕರೆಯಲ್ಪಡುವ ಚೀನಾದ ಪೌರಾಣಿಕ ಜೀವಿ ಮೂರು ಕಾಲುಗಳನ್ನು ಹೊಂದಿದ್ದು, ಆದ್ದರಿಂದಲೇ ನಂಬರ್ 3 ಅನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ನಂಬರ್ 4: ಚೀನೀ ಸಂಸ್ಕೃತಿಯಲ್ಲಿ ನಾಲ್ಕನೇ ಸಂಖ್ಯೆಯು ಅಂತಹ ಭಯಾನಕ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಒಂದು ಕಾರಣವಿದೆ. ಇದು ಸಾವಿನ ಚೀನೀ ಪದದಂತೆ ಧ್ವನಿಸುತ್ತದೆ. ಜೊತೆಗೆ ವ್ಯಕ್ತಿ ಜೀವನದಲ್ಲಿ ಮತ್ತು ವಿನಾಶವನ್ನು ತರುತ್ತದೆ ಎಂದು ನಂಬಲಾಗಿದೆ. ಚೈನೀಸ್ ಸಂಖ್ಯಾಶಾಸ್ತ್ರದ ಪ್ರಕಾರ ಸಂಖ್ಯೆ ನಾಲ್ಕು ದುರದೃಷ್ಟಕರ ಸಂಖ್ಯೆಯಾಗಿದೆ.
ನಂಬರ್ 5: ನಂಬರ್ 5 ಸಮತೋಲನಕ್ಕೆ ಸಂಬಂಧಿಸಿದ್ದಾಗಿದೆ. ಫೆಂಗ್ ಶೂಯಿ ತತ್ವಗಳ ಪ್ರಕಾರ ಮರ, ಬೆಂಕಿ, ನೀರು, ಗಾಳಿ ಮತ್ತು ಲೋಹ ಇವುಗಳು ಐದು ಅಂಶಗಳ ಸಮತೋಲನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದ್ದರಿಂದ ಐದನೇ ನಂಬರ್ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.
ನಂಬರ್ 6: ಚೀನೀ ಸಂಸ್ಕೃತಿಯಲ್ಲಿ ಸಂಖ್ಯೆ ಆರನ್ನು ಅದೃಷ್ಟದ ಸಂಖ್ಯೆ ಎಂದೇ ಹೇಳಲಾಗುತ್ತದೆ. ಏಕೆಂದರೆ ಇದು ಮನಸ್ಸಿನ ಹರಿವನ್ನು ಸಂಕೇತಿಸುವ ಆರನೇ ಅರ್ಥವನ್ನು ಸೂಚಿಸುತ್ತದೆ. 6ನೇ ನಂಬರ್ ಅನ್ನು ಲಕ್ಕೀ ನಂಬರ್ ಆಗಿ ಪಡೆದಿರುವಂಥ ಜನರು ಬುದ್ಧಿವಂತ ಮತ್ತು ಹೆಚ್ಚು ಗ್ರಹಿಸುವ ಜನರಾಗಿದ್ದು, ಸಾಮಾನ್ಯವಾಗಿ ಅವರು ಮಾಡುವ ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ.ಆರನೆಯ ಸಂಖ್ಯೆಯು ಚೀನೀ ಜನರಿಗೆ ಬಹಳಷ್ಟು ಧನಾತ್ಮಕ ಅರ್ಥಗಳನ್ನು ಹೊಂದಿದೆ. ಜೊತೆಗೆ ಸಂತೋಷದ ದಾಂಪತ್ಯಕ್ಕಾಗಿ ಇದನ್ನು ಒಳ್ಳೆಯದು ಎಂದು ಹೇಳಲಾಗುತ್ತದೆ.
ನಂಬರ್ 7: ಚೀನಿ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಏಳನೇ ನಂಬರ್ ಮೃತಪಟ್ಟವರೊಂದಿಗೆ ಸಂಬಂಧ ಹೊಂದಿದೆ. ಚೈನೀಸ್ ಕ್ಯಾಲೆಂಡರ್ ಪ್ರಕಾರ ವರ್ಷದ ಏಳನೇ ತಿಂಗಳು 'ಭೂತ ತಿಂಗಳು' ಎಂದು ಕರೆಯಿಸಿಕೊಳ್ಳುತ್ತದೆ. ಆದರೆ ಅದರೊಂದಿಗೆ ಸಂಬಂಧಿಸಿದ ಅರ್ಥವು ಋಣಾತ್ಮಕವಾಗಿರಬೇಕಾಗಿಲ್ಲ. ಏಕೆಂದರೆ ಮರಣವು ಮಂಗಳಕರವಾದ ಹೊಸ ಆರಂಭವನ್ನು ಸೂಚಿಸುತ್ತದೆ ಎಂಬುದಾಗಿ ಹೇಳಲಾಗುತ್ತದೆ.
ನಂಬರ್ 8: ಚೀನೀ ಸಂಖ್ಯಾಶಾಸ್ತ್ರದಲ್ಲಿ ಎಂಟನೇ ನಂಬರ್ ಬಹಳ ಅದೃಷ್ಟ ಸಂಖ್ಯೆಯಾಗಿದೆ. ಇದು ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಜೀವನದಲ್ಲಿ ಸಂಪತ್ತನ್ನು ಗಳಿಸುವ ಗುರಿಯನ್ನು ಹೊಂದಿರುವವರಿಗೆ ಡಬಲ್ ಎಂಟನ್ನು ಅತ್ಯಂತ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ಸಂಖ್ಯೆಯು ಸಮೃದ್ಧಿಯ ಪದಕ್ಕೆ ಹೋಲುತ್ತದೆ.
ನಂಬರ್ 9: ಚೀನೀ ಸಂಖ್ಯಾಶಾಸ್ತ್ರದ ಪಟ್ಟಿಯಲ್ಲಿ ಕೊನೆಯ ಸಂಖ್ಯೆ ಒಂಬತ್ತು ಆಗಿದೆ. ಈ ಸಂಖ್ಯೆಯು ಅದೃಷ್ಟ, ಖ್ಯಾತಿಯನ್ನು ಪ್ರತಿನಿಧಿಸುತ್ತದೆ. ಇದು ಅಲ್ಲಿನ ಸಂಸ್ಕೃತಿಯಲ್ಲಿ ಒಂಬತ್ತು ಡ್ರ್ಯಾಗನ್‌ಗಳೊಂದಿಗೆ ರಾಯಲ್ ನಿಲುವಂಗಿಯನ್ನು ಧರಿಸಲು ಆಯ್ಕೆ ಮಾಡಿದ ಪ್ರಾಚೀನ ಚೀನೀ ಚಕ್ರವರ್ತಿಯೊಂದಿಗೆ ಸಹ ಸಂಬಂಧ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ