Astrology: Negative Energyಗಳು ಯಾವ ರಾಶಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿ ವ್ಯಕ್ತಿಯಲ್ಲೂ ನಕಾರಾತ್ಮಕ ( Negative thinking)  ಆಲೋಚನೆಗಳು ಹರಿದಾಡುತ್ತವೆ, ಆ ಆಲೋಚನೆಗಳು ಮನುಷ್ಯನ ಆತ್ಮದಲ್ಲಿಯೇ ಸಂಚರಿಸುತ್ತದೆ ಎಂದು ಸಹ ಹೇಳಲಾಗುತ್ತದೆ.  ಉದ್ದೇಶಪೂರ್ವಕವಾಗಿ ಎಲ್ಲ ವಿಚಾರಗಳಲ್ಲಿ ಮೂಗು ತೂರಿಸುವ  ಸ್ವಭಾವ  ಬರುತ್ತದೆ. ಇದು ಕೇವಲ ಒಂದು ವ್ಯಕ್ತಿಯನ್ನಲ್ಲದೇ ಅವರ ಸುತ್ತಮುತ್ತಲಿನ ಪರಿಸರವನ್ನು ಹಾಗೂ ವ್ಯಕ್ತಿಗಳನ್ನು ಹಾಳು ಮಾಡುತ್ತದೆ.

ಮುಂದೆ ಓದಿ ...
  • Share this:

ಭಾರತೀಯರು ಹೆಚ್ಚಿನ ವಿಚಾರಗಳಲ್ಲಿ ರಾಶಿ, ನಕ್ಷತ್ರಗಳನ್ನು ನಂಬುತ್ತಾರೆ. ಯಾವುದಾದರೂ ಒಳ್ಳೆಯ ಕೆಲಸವಾಗಬೇಕಿದ್ದರೇ ಅಥವಾ ಜೀವನದಲ್ಲಿ ಏರುಪೇರಾಗಿದ್ದರೆ ಅದಕ್ಕೆ ಕಾರಣವನ್ನು ತಮ್ಮ ಜನ್ಮ ರಾಶಿಯಲ್ಲಿ(Zodiac Sign)  ಹುಡುಕಿಕೊಂಡು ಹೋಗುತ್ತಾರೆ. ಆದರೆ ಬಹಳಷ್ಟು ಜನರಿಗೆ ಕೆಲ ವಿಚಾರಗಳು ತಿಳಿದಿಲ್ಲ. ಪ್ರತಿ ವ್ಯಕ್ತಿಯಲ್ಲೂ ನಕಾರಾತ್ಮಕ ( Negative thinking)  ಆಲೋಚನೆಗಳು ಹರಿದಾಡುತ್ತವೆ, ಆ ಆಲೋಚನೆಗಳು ಮನುಷ್ಯನ ಆತ್ಮದಲ್ಲಿಯೇ ಸಂಚರಿಸುತ್ತದೆ ಎಂದು ಸಹ ಹೇಳಲಾಗುತ್ತದೆ.  ಉದ್ದೇಶಪೂರ್ವಕವಾಗಿ ಎಲ್ಲಾ ವಿಚಾರಗಳಲ್ಲಿ ಮೂಗು ತೂರಿಸುವ  ಸ್ವಭಾವ  ಬರುತ್ತದೆ. ಇದು ಕೇವಲ ಒಂದು ವ್ಯಕ್ತಿಯನ್ನಲ್ಲದೇ ಅವರ ಸುತ್ತಮುತ್ತಲಿನ ಪರಿಸರವನ್ನು ಹಾಗೂ ವ್ಯಕ್ತಿಗಳನ್ನು ಹಾಳು ಮಾಡುತ್ತದೆ. ನಕಾರಾತ್ಮಕ ಚಿಂತನೆ ಹೊಂದಿರುವ ವ್ಯಕ್ತಿಗಳ ಜೊತೆ ಇದ್ದಾಗ ನಕಾರಾತ್ಮಕ ಚಿಂತನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತದೆ. ನಮ್ಮಲ್ಲಿ ಅಂತಹ ಗುಣಲಕ್ಷಣಗಳನ್ನು ಗುರುತಿಸುವುದು ಕಷ್ಟದ ಕೆಲಸ.  ಆದರೆ ನಿಮ್ಮೊಳಗೆ ಅಂತಹ ಲಕ್ಷಣಗಳನ್ನು ಗುರುತಿಸಲು ನೀವು  ಆಲೋಚಿಸುತ್ತಿದ್ದರೆ, ಚಿಂತಿಸಬೇಡಿ ನಿಮಗೆ ಇಲ್ಲಿದೆ ಉತ್ತಮ ಮಾಹಿತಿ.  ಜ್ಯೋತಿಷ್ಯವು ಹನ್ನೆರಡು ರಾಶಿಚಕ್ರ ಚಿಹ್ನೆಗಳನ್ನು ಆಧರಿಸಿ ಒಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವ ಒಂದು ಉತ್ತಮ ಕೆಲಸವನ್ನು ಮಾಡುತ್ತದೆ. ಆದ್ದರಿಂದ, ನಿಮ್ಮ ಸನ್‌ಸೈನ್( Zodiac Sign) ನಕಾರಾತ್ಮಕ ಶಕ್ತಿಯನ್ನು ಹೇಗೆ ಆಕರ್ಷಿಸುತ್ತದೆ ಎಂಬುದು ಇಲ್ಲಿದೆ.


ಮೇಷ


ಮೇಷ ರಾಶಿಯವರು  ಹೆಚ್ಚು ಭಾವೋದ್ರಿಕ್ತ ಮತ್ತು  ಹೆಚ್ಚು ಪ್ರೇರೆಪಿಸುವ ನಾಯಕತ್ವದ ಗುಣ ಹೊಂದಿರುವವರು.  ಇವರು ಅಂತರ್ನಿರ್ಮಿತ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಅವರ ಈ ಗುಣವೇ ಸಮಾಜ ಅವರನ್ನು ಬಹಳ ಗೌರವಿಸಲು ಕಾರಣವಾಗುತ್ತದೆ. ಅವರು ಜನರ ಜೊತೆ ಇದ್ದಾಗ ಹೆಚ್ಚು ಸಂತೋಷವಾಗಿರುತ್ತಾರೆ. ಆದರೆ ಕೆಲ ನಕಾರಾತ್ಮಕ ಚಿಂತನೆಯ ಜನರೊಂದಿಗೆ ಇದ್ದಾಗ  ಅವರು ತೊಂದರೆಗಳನ್ನು ಅನುಭವಿಸುತ್ತಾರೆ. ಹತಾಶರಾಗುತ್ತಾರೆ. ಅದು ಅವರನ್ನು ಧೃತಿಗೆಡಿಸುತ್ತದೆ.


ಇದನ್ನೂ ಓದಿ: ತೂಕ ಇಳಿಸಬೇಕೆಂದರೆ ಯಾವುದೇ ಕಾರಣಕ್ಕೂ ಈ 7 ತಪ್ಪುಗಳನ್ನು ಮಾಡಬೇಡಿ!


ವೃಷಭ ರಾಶಿ


ಈ ರಾಶಿಯವರು ಆರಾಮದಾಯಕ ಮತ್ತು ಅತ್ಯಂತ ನಿಷ್ಠಾವಂತ ಜನರಾಗಿರುತ್ತಾರೆ.  ಅಲ್ಲದೇ ಇವರು ಒಳ್ಳೆಯ ಮಾತನಾಡುವ ಕೌಶಲ್ಯವನ್ನು ಹೊಂದಿರುತ್ತಾರೆ. ಆದರೆ ಅವರು ನೇರವಾಗಿ  ಮಾತನಾಡುವವರಾಗಿರುತ್ತಾರೆ.  ಕೆಲವೊಮ್ಮೆ ಮೊಂಡು ಸ್ವಭಾವವನ್ನು ಹೊಂದಿರುತ್ತಾರೆ.  ಕೆಲವು ನಕಾರಾತ್ಮಕ  ಜನರು ಇವರ ಮೇಲೆ ಕಠಿಣ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಈ ರಾಶಿಯವರು  ತಮ್ಮ ಅತ್ಯಂತ ನಕಾರಾತ್ಮಕ  ಮನೋಭಾವವನ್ನು ಮುಂದುವರಿಸಿದರೆ  ಹಠಮಾರಿಗಳಾಗುತ್ತಾರೆ.


ಮಿಥುನ


ಈ ರಾಶಿಯವರು ಸಂತೋಷ ಮತ್ತು ಅದೃಷ್ಟದ ಜನರು, ಅವರು ಸಾಕಷ್ಟು ಸಾಮಾಜಿಕವಾಗಿ ಜನಪ್ರಿಯರಾಗಿದ್ದಾರೆ. ಇವರು ಬಹಳ ಸೌಮ್ಯ  ಸ್ವಭಾವದವರಾಗಿರುತ್ತಾರೆ. ನಕರಾತ್ಮಕ ಚಿಂತೆಗಳು ಅವರನ್ನು ಸೆಳೆದಾಗ ಹೆಚ್ಚು ಆತಂಕಗೊಳ್ಳುತ್ತಾರೆ. ಅವರು ಹೆಚ್ಚು ಚಂಚಲ ಮನಸ್ಸಿನವರಾಗಿದ್ದರಿಂದ ಅವರಲ್ಲಿ ಪರಿಸ್ಥಿತಿ ನಿಭಾಯಿಸುವ ಶಕ್ತಿ ಇರುವುದಿಲ್ಲ.


ಕಟಕ


ಈ ರಾಶಿಯವರು ಹೆಚ್ಚು ಸ್ಮೂಕ್ಷ ಸ್ವಭಾವದವರಾಗಿರುತ್ತಾರೆ. ಹಾಗೆಯೇ ಹೆಚ್ಚು ಪ್ರೀತಿ ಪಾತ್ರರೂ ಸಹ ಆಗಿರುತ್ತಾರೆ. ಅವರು ಹೆಚ್ಚು ಶಾಂತಿಯಿಂದ ಬದುಕಲು ಬಯಸುತ್ತಾರೆ. ಇವರು ನಕಾರತ್ಮಕ ವ್ಯಕ್ತಿಗಳೊಂದಿಗೆ ಬೆರೆತರೆ ಅದೇ ಮನೋಭಾವವನ್ನು ಬೆಳೆಸಿಕೊಳ್ಳುವ ಸಾಧ್ಯತೆ  ಕಡಿಮೆ. ಅವರು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಸಿದ್ಧರಿರುವುದಿಲ್ಲ.


ಸಿಂಹ


ಈ ರಾಶಿಯವರು ಬೆಂಕಿಯ ಅಂಶ.  ಹುಟ್ಟು ಆಡಳಿತಗಾರ. ಇವರಲ್ಲಿನ ಅಧಿಕಾರದ ಗೀಳು ಅವರನ್ನು ಅಹಂಕಾರಿಯಾಗಿಸುತ್ತದೆ. ನಕರಾತ್ಮಕ ಆಲೋಚನೆಗಳು ಇವರನ್ನು ಹಠಮಾರಿಯನ್ನಾಗಿ ಮಾಡುವ ಸಾಧ್ಯತೆ ಹೆಚ್ಚು.


ಇದನ್ನೂ ಓದಿ: 2022ರಲ್ಲಿ ಮಕ್ಕಳಿಗೆ ಸಿಗಲಿದೆ Covovax ಲಸಿಕೆ, ಅಕ್ಟೋಬರ್​ನಿಂದ ವಯಸ್ಕರಿಗೆ ಲಭ್ಯ; ಅದಾರ್​ ಪೂನವಾಲಾ


ಕನ್ಯಾರಾಶಿ


ಇವರ ಪರಿಪೂರ್ಣ ಸ್ವಭಾವದವರು ( Perfect character). ಎಲ್ಲವನ್ನೂ ನಿಖರವಾಗಿ ವಿಶ್ಲೇಷಿಸುವ ಮತ್ತು ಗಮನಿಸುವ ಪ್ರವೃತ್ತಿಯವರು.  ಇದು ಸಕಾರಾತ್ಮಕ ಲಕ್ಷಣವಾಗಿದ್ದರೂ ಸಹ ನಕಾರಾತ್ಮಕ ಚಿಂತೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದು ಅನಗತ್ಯವಾಗಿ ವಾದ ಮತ್ತು ಹಠಮಾರಿತನಕ್ಕೆ ಕಾರಣವಾಗುತ್ತದೆ. ಇದಲ್ಲದೇ, ಅವರು ಜೀವನದಲ್ಲಿ ಎಲ್ಲದರ ಬಗ್ಗೆಯೂ ಬಹಳ ವಿಮರ್ಶಾತ್ಮಕವಾಗಿರುತ್ತಾರೆ.


ತುಲಾ


ಅವರು ಬಹಳ ಸಂತೋಷಯುಕ್ತ ಮತ್ತು ನ್ಯಾಯಾಸ ಸ್ವಭಾವವುಳ್ಳ ಜನರು. ಅವರು ತಮ್ಮನ್ನು ಸ್ವಲ್ಪ ಹೆಚ್ಚು ಇಷ್ಟಪಡುತ್ತಾರೆ, ಅತಿಯಾದ ಸ್ವಯಂ-ಆದ್ಯತೆ ನೀಡುತ್ತದೆ. ಅವರ ಈ ಸ್ವಭಾವವವೇ ಅವರನ್ನು ತೊಂದರೆಗೆ ದೂಡುತ್ತದೆ. ಅವರು ಬಹು ಬೇಗನೆ ನಕಾರಾತ್ಮಕ ಅಂಶಗಳಿಗೆ ಒಗ್ಗಿ ಬಿಡುತ್ತಾರೆ. ಕೆಟ್ಟ ಹವ್ಯಾಸಗಳಿಗೆ ಸುಲಭವಾಗಿ ಆಕರ್ಷಿತರಾಗುತ್ತಾರೆ.


ವೃಶ್ಚಿಕ


ಈ ರಾಶಿಯವರು  ಭಾವೋದ್ರಿಕ್ತರು, ನಿಷ್ಠಾವಂತರು ಮತ್ತು ಪ್ರಾಮಾಣಿಕ ಜನರು. ಆದರೆ  ತಮ್ಮೊಳಗೆ ಒಂದು ಕರಾಳ ಮುಖವನ್ನು ಹೊಂದಿರುತ್ತಾರೆ.  ಅವರು ತಮ್ಮ ಸಂಗಾತಿಯನ್ನು ಹೆಚ್ಚು  ಸ್ವಾಧೀನದಲ್ಲಿ ಇಟ್ಟುಕೊಳ್ಳಲು  ಬಯಸುತ್ತಾರೆ. ಅದು ಸಂಬಂಧದಲ್ಲಿ ಉಸಿರುಗಟ್ಟಿಸುವ ವಾತಾವರಣವನ್ನು ಸೃಷ್ಟಿಸುತ್ತದೆ. ಈ ರೀತಿಯಾಗಿ ಅವರ ಮೇಲೆ ನಕಾರಾತ್ಮಕ ಅಂಶಗಳು ಪರಿಣಾಮ ಬೀರುತ್ತದೆ.


ಇದನ್ನೂ ಓದಿ: ಫಿನಾಲೆಗೂ ಮುನ್ನವೇ ದೊಡ್ಡ ಮೊತ್ತದ ಹಣ ಪಡೆದ ಅರವಿಂದ್​ ಕೆ ಪಿ


ಧನು ರಾಶಿ


ಈ ರಾಶಿಯವರು ಬಲವಾದ ನೈತಿಕ ಗುಣವನ್ನು ಹೊಂದಿದ್ದಾರೆ.  ಅವರು ಪ್ರಯಾಣ ಮತ್ತು ಸಾಹಸವನ್ನು ಇಷ್ಟಪಡುತ್ತಾರೆ . ಅವರ  ಮನಸ್ಸಿಗೆ ನೋವಾದಲ್ಲಿ ಅವರು ಯಾವುದನ್ನು ಹೇಳಿಕೊಳ್ಳುವುದಿಲ್ಲ.  ನಕಾರಾತ್ಮಕ ಅಂಶಗಳು ಅವರನ್ನು ಸುಳಿದಾಗ ನಿರಾಶರಾಗುತ್ತಾರೆ.


ಮಕರ ರಾಶಿ


ಈ ರಾಶಿಯವರನ್ನು ಸಾಮಾನ್ಯವಾಗಿ ಅದೃಷ್ಟವಂತರು ಎಂದು ಕರೆಯುತ್ತಾರೆ, ಅವರು ಬಯಸಿದ್ದನ್ನು ಪಡೆಯಲು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಅವರು ಬಯಸಿದ ವಸ್ತು ಸಿಗದಿದ್ದಾಗ ನಿರ್ದಯರಾಗುತ್ತಾರೆ. ಅವರಲ್ಲಿ ವೈಫಲ್ಯದ ಭಯ ಹೆಚ್ಚಾಗಿ ಕಾಡುತ್ತದೆ.


 ಕುಂಭ ರಾಶಿ


ಅವರು ತಮ್ಮ ಲೋಕದಲ್ಲಿಯೇ ಉಳಿಯಲು ಬಯಸುತ್ತಾರೆ. ದೇವರೆಂದರೆ  ಅವರಿಗೆ ಬಹಳ ಭಯ.  ಅವರು ಸುಲಭವಾಗಿ ಗೊಂದಲಕ್ಕೆ ಈಡಾಗುತ್ತಾರೆ. ನಕಾರಾತ್ಮಕ ಅಂಶಗಳು ಅವರನ್ನು ಸೆಳೆದಾಗ ಹೆಚ್ಚು ವಿಚಲಿತರಾಗುತ್ತಾರೆ. ಏನು ಮಾಡಬೇಕೆಂಬುದು ಅವರಿಗೆ ತಿಳಿಯುವುದಿಲ್ಲ.


ಮೀನ ರಾಶಿ


ಮೀನ ರಾಶಿಯವರು ತುಂಬಾ ಸೃಜನಶೀಲರು ಮತ್ತು ಭಾವನಾತ್ಮಕವಾಗಿ ಪ್ರಬುದ್ಧರು. ಅವರು ಇತರರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ಅದೇ ಸಮಯದಲ್ಲಿ, ಅವರು ತುಂಬಾ ಸೂಕ್ಷ್ಮವಾಗಿರುತ್ತಾರೆ.  ಅವರ ನಂಬಿಕೆಯು ಯಾವುದೇ ರೀತಿಯಲ್ಲಿ ಮುರಿದರೆ, ಅವರು ನಿರಾಶರಾಗುತ್ತಾರೆ.  ಅವರು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

top videos
    First published: