Sudarshan Chakra: ಸುದರ್ಶನ ಚಕ್ರ ವಿಷ್ಣುವಿನ ಕೈಗೆ ಬಂದಿದ್ದೇಗೆ? ಇಲ್ಲಿದೆ ಪೌರಾಣಿಕ ಮಾಹಿತಿ

ಈ ಸುದರ್ಶನ ಚಕ್ರದ ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನೊಂದಿಗೆ ಬೇರ್ಪಡಿಸಲಾಗದಂತ ಸಂಬಂಧ ಹೊಂದಿದೆ.

ಸುದರ್ಶನ ಚಕ್ರ

ಸುದರ್ಶನ ಚಕ್ರ

  • Share this:
    ಹಿಂದೂ ಧರ್ಮದಲ್ಲಿ, ಎಲ್ಲಾ ದೇವರು ಮತ್ತು ದೇವತೆಗಳು ತಮ್ಮ ವಿಭಿನ್ನ ಆಯುಧಗಳನ್ನು (Weapon) ಹೊಂದಿದ್ದಾರೆ. ಈ ಆಯುಧಗಳ ಅಧರ್ಮದ ನಾಶಕ್ಕೆ ಬಳಸುತ್ತಾರೆ ಎಂಬ ಅನೇಕ ಪೌರಣಿಕ ಕಥೆಗಳಲ್ಲಿ (Mythology Story) ಕೇಳಿದ್ದೇವೆ. ಇನ್ನು ದೇವತೆಗಳ ಈ ಆಯುಧಗಳು ಹಿಂದೆ ಕೂಡ ಅನೇಕ ಕಥೆಗಳನ್ನು ಇರುವುದನ್ನು ಕೇಳಿದ್ದೇವೆ. ಅದರಲ್ಲೂ ವಿಷ್ಣುವಿನ ಸುದರ್ಶನ ಚಕ್ರದ (Sudarshan Chakra) ಬಗ್ಗೆ ಹೆಚ್ಚಿನ ಪೌರಣಿಕ ಕಥೆ ಇದೆ. ಈ ಸುದರ್ಶನ ಚಕ್ರದ ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನೊಂದಿಗೆ ಬೇರ್ಪಡಿಸಲಾಗದಂತ ಸಂಬಂಧ ಹೊಂದಿದೆ. ವಿಷ್ಣುವಿಗೆ ಈ ಸುದರ್ಶನ ಚಕ್ರ ಎಲ್ಲಿಂದ ಬಂತು. ಹಿಂದೂ ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಮಹಾಭಾರತದಲ್ಲಿ ಸುದರ್ಶನ ಚಕ್ರವನ್ನು ಯಾವಾಗ ಬಳಸಿದನು ಎಂಬ ಮಾಹಿತಿ ಇಲ್ಲಿದೆ.

    ಶಿವನ ಜಪಿಸಿದ ವಿಷ್ಣು
    ಪುರಾಣಗಳ ಪ್ರಕರಣ ವಿಷ್ಣವಿಗೆ ಈ ಸುದರ್ಶನ ಚಕ್ರ ನೀಡಿದ್ದು ಆತನ ಪ್ರಿಯ ಗೆಳೆಯ ಶಂಕರ. ಶಕ್ತಿಶಾಲಿಯಾದ, ಸುದರ್ಶನ ಚಕ್ರವನ್ನು ನಿರ್ಮಿಸಿದ ಶಿವ ಇದನ್ನು ಲೋಕ ಕಲ್ಯಾಣಕ್ಕೆ ವಿಷ್ಣುವಿಗೆ ಹಸ್ತಾಂತರಿಸಿದನು. ಇದಕ್ಕೆ ಸಂಬಂಧಿಸಿದ ಕಥೆಯನ್ನು ಶಿವ ಮಹಾಪುರಾಣದಲ್ಲಿ ವಿವರಿಸಲಾಗಿದೆ, ಭೂಮಿಯ ಮೇಲೆ ರಾಕ್ಷಸರ ದಬ್ಬಾಳಿಕೆಯು ಬಹಳವಾಗಿ ಹೆಚ್ಚಾದಾಗ ಮತ್ತು ರಾಕ್ಷಸರು ಸ್ವರ್ಗಲೋಕವನ್ನು ತಲುಪಿದಾಗ, ಎಲ್ಲಾ ದೇವತೆಗಳು ಭಯಭೀತರಾಗಿ ವಿಷ್ಣುವಿನ ಬಳಿಗೆ ಹೋಗಿ ರಾಕ್ಷಸರನ್ನು ಸೋಲಿಸಲು ದೈವಿಕ ಆಯುಧವನ್ನು ಹುಡುಕಿದರು. ಈ ದೈವಿಕ ಶಕ್ತಿ ಶಾಲಿ ಆಯುಧಕ್ಕಾಗಿ ವಿಷ್ಣುವು ಕೈಲಾಸಕ್ಕೆ ಹೋಗಿ ಶಿವನ ಕುರಿತು ಪೂಜಿಸಲು ಮುಂದಾದ. ಆಗ ಶಿವ ಪೂಜೆಯಲ್ಲಿ ವಿಷ್ಣುವು ಸಾವಿರ ಕಮಲದ ಹೂ ಅರ್ಪಿಸಿ ಶಿವನಾಮದಿಂದ ಭಕ್ತಿಯಿಂದ ಪೂಜಿಸುತ್ತಿದ್ದ. ಈ ವೇಳೆ ಶಿವ ಸಾವಿರದಲ್ಲಿ ಒಂದು ಕಮಲದ ಹೂ ಅನ್ನು ಮರೆ ಮಾಡಿದರು.



    ಹರಿಯ ಭಕ್ತಿಗೆ ಸೋತು ಸುದರ್ಶನ ಚಕ್ರ ನೀಡಿದ ಶಿವ
    ಪೂಜೆಯಲ್ಲಿ ತಲ್ಲೀನನಾಗಿದ್ದ ವಿಷ್ಣವಿಗೆ ಒಂದು ಕಮಲದ ಹೂ ಕಣ್ಮರೆಯಾದ ವಿಷಯ ತಿಳಿಯಲಿಲ್ಲ. ಕಡೆಗೆ ಹೂವು ಸಿಗದ ಹಿನ್ನಲೆ ವಿಷ್ಣು ಶಿವನಿಗೆ ತನ್ನ ಕಣ್ಣನ್ನು ಅರ್ಪಿಸಿ ಸಾವಿರ ಮಂತ್ರಗಳ ಪೂಜೆ ಪೂರೈಸಿದರು. ಈ ವೇಳೆ ವಿಷ್ಣು ಭಕ್ತಿಗೆ ಮೆಚ್ಚಿದ ಶಿವ ತನಗೆ ಬೇಕಾದ ವರ ಕೇಳುವಂತೆ ಆಶೀರ್ವಾದ ನೀಡಿದರು. ಈ ವೇಳೆ ಆಗ ಶ್ರೀ ಹರಿಯು ರಾಕ್ಷಸರನ್ನು ಕೊಲ್ಲಲು ಶಿವನಿಂದ ಅಜೇಯ ಆಯುಧವನ್ನು ಕೇಳಿದನು. ಸಂತುಷ್ಟನಾದ ಶಿವ ತಾನೇ ತಯಾರಿಸಿದ ಸುದರ್ಶನ ಚಕ್ರವನ್ನು ಶ್ರೀ ಹರಿ ವಿಷ್ಣುವಿಗೆ ಅರ್ಪಿಸಿದನು. ಶ್ರೀ ಹರಿಯು ತನ್ನ ಎಲ್ಲಾ ಅವತಾರದಲ್ಲೂ ಅನೇಕ ಬಾರಿ ದೇವತೆಗಳನ್ನು ಈ ಚಕ್ರದ ಸಹಾಯದಿಂದ ರಾಕ್ಷಸರ ದೌರ್ಜನ್ಯದಿಂದ ಮುಕ್ತರಾನ್ನಾಗಿಸಿದ.

    ಇದನ್ನು ಓದಿ: ಬ್ರಹ್ಮಚಾರಿಯಾಗಿರುತ್ತೇನೆ ಎಂದ ಗಣೇಶ ಸಿದ್ದಿ-ಬುದ್ದಿ ಮದುವೆಯಾದ ಕಥೆ ಇದು

    ಕೃಷ್ಣನಿಗೆ ಮರಳಿದ ಚಕ್ರ

    ವಿಷ್ಣುವಿನ ಪ್ರತಿ ಅವತಾರದಲ್ಲೂ ಜೊತೆಗಿದ್ದ ಈ ಸುದರ್ಶನ ಚಕ್ರವನ್ನು ಒಮ್ಮೆ ಶ್ರೀ ಹರಿಯು ಈ ಚಕ್ರವನ್ನು ತಾಯಿ ಪಾರ್ವತಿಗೆ ಕೊಟ್ಟನು. ತಾಯಿ ಪಾರ್ವತಿಯಿಂದ, ಈ ಚಕ್ರವು ಅನೇಕ ದೇವತೆಗಳ ಮೂಲಕ ಪರಶುರಾಮನನ್ನು ತಲುಪಿತು. ಕಡೆಗೆ ಪರಶುರಾಮನಿಂದ ಈ ಚಕ್ರವು ಮರಳಿ ಶ್ರೀ ಕೃಷ್ಣನಿಗೆ ಬಂದಿತು.

    ಇದನ್ನು ಓದಿ: ಮಂಗಗಳಿಗೆ ಇಲ್ಲಿ ಪ್ರಥಮ ನೈವೇದ್ಯ; ಬಂಟ್ವಾಳದ ಕಾರಿಂಜೇಶ್ವರ ದೇಗುಲದ ವಿಶೇಷತೆ

    ಕೃಷ್ಣನ ಕೈಯಲ್ಲಿ ಸದಾ ವೇಗವಾಗಿ ತಿರುಗುತ್ತಿದ್ದ ಈ ಸುದರ್ಶನ ಚಕ್ರ ಶಿಶುಪಾಲನ ವಧೆ ಮಾಡಿತು. ಮಿಂಚಿನ ವೇಗದಲ್ಲಿ ಕೃಷ್ಣ ಕೈಯಲ್ಲಿ ಈ ಚಕ್ರ ತಿರುಗುತ್ತಿದ್ದ ಪರಿಣಾಮ ಕೃಷ್ಣದ ತೋರು ಬೆರಳಿಗೂ ಒಮ್ಮೆ ಗಾಯವಾಗಿತ್ತಂತೆ ಈ ವೇಳೆ ಕೃಷ್ಣನ ಪ್ರೀತಿ ತಂಗಿ ಅಣ್ಣನ ಬೆರಳಿನಿಂದ ರಕ್ತ ಒಸರುವುದು ಕಂಡು ತನ್ನ ಸೀರೆ ಸೆರಗು ಹರಿದು ಆರೈಕೆ ಮಾಡಿದಳು ಎನ್ನುತ್ತದೆ ಪುರಾಣ.

    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: