• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Astrology: ವೃಷಭ ರಾಶಿಯವರ ಸಂಬಂಧ ಹೇಗಿರುತ್ತದೆ? ಇವರಿಗೆ ಯಾರು ಬೆಸ್ಟ್ ಜೋಡಿಯಾಗ್ತಾರೆ ಗೊತ್ತಾ?

Astrology: ವೃಷಭ ರಾಶಿಯವರ ಸಂಬಂಧ ಹೇಗಿರುತ್ತದೆ? ಇವರಿಗೆ ಯಾರು ಬೆಸ್ಟ್ ಜೋಡಿಯಾಗ್ತಾರೆ ಗೊತ್ತಾ?

ವೃಷಭ ರಾಶಿ

ವೃಷಭ ರಾಶಿ

ಯಾವ ರಾಶಿಯವರು ತಮಗೆ ಜೋಡಿಯಾದರೆ ಒಳ್ಳೆಯದು ಅಂತ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಿದ್ರೆ ಇಂದು ಬೇರೆ ಬೇರೆ ರಾಶಿಯವರೊಂದಿಗೆ ವೃಷಭ ರಾಶಿಯವರ ಸಂಬಂಧ ಹೇಗಿರುತ್ತದೆ ಎಂಬುದನ್ನು ಈ ಲೇಖನದ ಮೂಲಕ ನೋಡೋಣ.

 • Share this:

  ಜ್ಯೋತಿಷ್ಯ ಶಾಸ್ತ್ರವು (Astrology) ತನ್ನದೇ ಆದ ವೈಶಿಷ್ಠ್ಯತೆ ಹೊಂದಿದೆ. ವ್ಯಕ್ತಿಯೊಬ್ಬನ ಜನ್ಮ ದಿನಾಂಕ (Birth Date), ಸಮಯದ ಹಿನ್ನೆಲೆಯಲ್ಲಿ ರಚಿಸಲಾಗುವ ಕುಂಡಲಿಯು ಅವರ ಸ್ವಭಾವವನ್ನು ತೆರೆದಿಡುತ್ತದೆ. ಅಂತೆಯೇ ಜನ್ಮ ನಕ್ಷತ್ರ, ರಾಶಿಯು ಅವರ ಸಂಬಂಧಗಳು ಹೇಗಿರುತ್ತದೆ? ಜೀವನ, ಹೊಂದಾಣಿಕೆ ಹಾಗೂ ಅಭಿವೃದ್ಧಿ ಹೇಗೆ ಎಂಬುದರ ಬಗ್ಗೆಯೂ ಮುನ್ಸೂಚನೆ ನೀಡುತ್ತದೆ. ಹಾಗೆಯೇ ಒಂದು ಸಂಬಂಧ ಕೂಡಬೇಕೆಂದರೆ ಅದರಲ್ಲಿ ರಾಶಿ, ನಕ್ಷತ್ರ ಕೂಡ ಪ್ರಾಮುಖ್ಯತೆ ಪಡೆಯುತ್ತವೆ. ಹಾಗೆಯೇ ತಮ್ಮ ರಾಶಿಯ ಅನುಸಾರ ತನ್ನ ಜೀವನ ಹೇಗೆ, ವೃತ್ತಿ ಹೇಗೆ ಹಾಗೂ ಸಂಬಂಧ ಹೇಗೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.


  ಅದರಲ್ಲೂ ಯಾವ ರಾಶಿಯವರು ತಮಗೆ ಜೋಡಿಯಾದರೆ ಒಳ್ಳೆಯದು ಅಂತ ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಹಾಗಿದ್ರೆ ಇಂದು ಬೇರೆ ಬೇರೆ ರಾಶಿಯವರೊಂದಿಗೆ ವೃಷಭ ರಾಶಿಯವರ ಸಂಬಂಧ ಹೇಗಿರುತ್ತದೆ ಎಂಬುದನ್ನು ನೋಡೋಣ.


  1) ವೃಷಭ – ಮೇಷ:


  ವೃಷಭ ಮತ್ತು ಮೇಷ ರಾಶಿಯವರ ಮಧ್ಯೆ ಒಳ್ಳೆಯ ಅಭಿಮಾನ ಇರುತ್ತದೆ. ಈ ಎರಡೂ ರಾಶಿಗಳು ಶಕ್ತಿ ಮತ್ತು ನಿರ್ಣಯಗಳಿಂದ ತುಂಬಿವೆ. ಆದ್ರೆ ತಪ್ಪು ಅರ್ಥ ಮಾಡಿಕೊಳ್ಳುವುದು ಅಥವಾ ತಪ್ಪು ವಿಷಯಗಳು ಈ ಎರಡೂ ರಾಶಿಯವರ ಪ್ರೀತಿ ಮತ್ತು ಪ್ರಣಯದ ವಿಷಯದಲ್ಲಿ ಬೇರೆ ಮಾಡುತ್ತವೆ ಎನ್ನಲಾಗಿದೆ. ಮೇಷ ರಾಶಿಯವರು ಯಾವಾಗಲೂ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ತಮ್ಮ ಬಹಳಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದಿಲ್ಲ.
  ಆದರೆ ವೃಷಭ ರಾಶಿಯವರು ಇದಕ್ಕೆ ವಿರುದ್ಧವಾಗಿರುತ್ತಾರೆ. ಅಲ್ಲದೇ ವೃಷಭ ರಾಶಿಯು ಮೇಷ ರಾಶಿಯ ಸಾಹಸ ಮನೋಭಾವದ ಬಗ್ಗೆ ಅಸೂಯೆಪಡಬಹುದು.


  ಆದರೆ ಮೇಷ ರಾಶಿಯು ವೃಷಭ ರಾಶಿಯನ್ನು ಯಾವಾಗಲೂ ರಕ್ಷಣೆ ಮಾಡಲು ಯತ್ನಿಸುತ್ತದೆ. ಆದರೆ ತಪ್ಪು ಕಾರಣಗಳಿಗಾಗಿ ಮೇಷ ಮತ್ತು ವೃಷಭ ರಾಶಿಯವರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು.


  2) ವೃಷಭ – ವೃಷಭ:


  ವೃಷಭ ರಾಶಿಯವರು ತಮ್ಮ ಪರಿಪೂರ್ಣ ಯೋಜನೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ವೃಷಭ ರಾಶಿಯವರು ಪರಸ್ಪರರ ವರ್ಚಸ್ವಿ ವ್ಯಕ್ತಿತ್ವದವರಾಗಿದ್ದು ಸಾಂಸ್ಕೃತಿಕ ಸಂಪ್ರದಾಯಗಳನ್ನು ಮೆಚ್ಚುತ್ತಾರೆ.


  ಅವರು ಕುಟುಂಬದ ಅಭಿವೃದ್ಧಿ ಹಾಗೂ ತಮ್ಮ ಜೀವನದ ಏಳಿಗೆಯನ್ನು ಬಯಸುವವರಾಗಿರುತ್ತಾರೆ. ಅಲ್ಲದೇ ಈ ರಾಶಿಯವರ ಬಾಂಧವ್ಯ ಕಾಲಕ್ಕೆ ತಕ್ಕಂತೆ ಬದಲಾಗುವುದಿಲ್ಲ ಬದಲಾಗಿ ಇದು ಕೊನೆಯವರೆಗೂ ಉಳಿಯುತ್ತದೆ.


  3) ವೃಷಭ – ಮಿಥುನ:


  ವೃಷಭ ರಾಶಿ ಮತ್ತು ಮಿಥುನ ರಾಶಿಯವರ ಮಧ್ಯೆ ಪ್ರೀತಿ ಮತ್ತು ಪ್ರಣಯದ ವಿಷಯಕ್ಕೆ ಬಂದಾಗ ಹೊಂದಾಣಿಕೆ ಹೆಚ್ಚಾಗಿರುತ್ತದೆ.


  ಎರಡೂ ರಾಶಿಚಕ್ರಗಳು ತಮ್ಮ ಅಭಿಪ್ರಾಯಗಳ ಬಗ್ಗೆ ತುಂಬಾ ನೇರವಾಗಿರುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಇಬ್ಬರೂ ವಿಭಿನ್ನ ವ್ಯಕ್ತಿತ್ವದವರಾಗಿರುವುದರಿಂದ ಪರಸ್ಪರರ ಅಭಿಪ್ರಾಯಗಳಿಗೆ ಅವರು ತಲೆಬಾಗುವುದಿಲ್ಲ.


  ವೃಷಭ ರಾಶಿ


  ಇವರು ತಡವಾಗಿ ಮದುವೆಯಾದರೆ ವೈವಾಹಿಕ ಸಂಬಂಧ ಉತ್ತಮವಾಗಿ ಉಳಿಯುತ್ತವೆ. ಯಾವುದೇ ರಾಶಿಚಕ್ರದ ಏಳನೇ ಮನೆಯು ಪ್ರಬಲವಾಗಿದ್ದರೆ ಮಿಥುನ ಮತ್ತು ವೃಷಭ ರಾಶಿಯು ಅತ್ಯುತ್ತಮ ಪ್ರಣಯ ಸಂಬಂಧವನ್ನು ಹೊಂದಬಹುದು.


  4) ವೃಷಭ – ಕರ್ಕಾಟಕ:


  ವೃಷಭ ರಾಶಿಯ ಕರ್ಕಾಟಕ ರಾಶಿಯವರ ಸಂಬಂಧವು ಪ್ರತಿದಿನವೂ ಬಲಗೊಳ್ಳುತ್ತದೆ. ಏಕೆಂದರೆ ಅವರ ಹೊಂದಾಣಿಕೆಯು ತುಂಬಾ ಬಲವಾಗಿರುತ್ತದೆ.


  ವೃಷಭ ರಾಶಿಯವರು ಸ್ವಾಭಾವಿಕವಾಗಿ ಕರ್ಕ ರಾಶಿಯವರತ್ತ ಆಕರ್ಷಿತರಾಗುತ್ತಾರೆ. ಆದರೆ ಎರಡೂ ರಾಶಿಚಕ್ರಗಳು ಕೆಲವು ಸಮಸ್ಯೆಗಳು ಬಂದಾಗ ಅದನ್ನು ಸರಿಪಡಿಸುವ ಬಗ್ಗೆ ಹಾಗೂ ಅಂಥ ಸಂದರ್ಭಗಳಲ್ಲಿ ತಮ್ಮ ನಡವಳಿಕೆಯೊಂದಿಗೆ ಹೆಚ್ಚು ಜಾಗರೂಕರಾಗಿರಬೇಕು. ಈ ಎರಡೂ ರಾಶಿಚಕ್ರಗಳು ಸಮಾನವಾಗಿ ಅವಕಾಶವಾದಿಗಳಾಗಿವೆ.


  5) ವೃಷಭ – ಸಿಂಹ:


  ಸಿಂಹ ರಾಶಿಯವರ ಆಕರ್ಷಕ ವಿಧಾನಗಳು ವೃಷಭ ರಾಶಿಯವರನ್ನು ಸೆಳೆಯುತ್ತವೆ. ವಿರೋಧಾಭಾಸವೆಂದರೆ, ಸಿಂಹ ರಾಶಿಯವರ ನಿರೀಕ್ಷಿತ ಆತಂಕ ಮತ್ತು ಉದ್ರಿಕ್ತ ಚಟುವಟಿಕೆಯು ವೃಷಭ ರಾಶಿಯವರ ಮಾನಸಿಕ ಶಾಂತತೆಯನ್ನು ಕೆಡಿಸಬಹುದು. ಜಗಳಗಳಾದಾಗ ಸಿಂಹ-ವೃಷಭ ರಾಶಿಯ ಸಂಬಂಧವು ಹಳಸಬಹುದು. ಎರಡೂ ರಾಶಿಯವರೂ ಪ್ರಬಲರಾಗಿರುವ ಕಾರಣ ಇಬ್ಬರೂ ಶರಣಾಗಲು ಇಷ್ಟಪಡುವುದಿಲ್ಲ.


  ಸಿಂಹ ಮತ್ತು ವೃಷಭ ರಾಶಿಯವರು ವಿರೋಧಗಳನ್ನು ಬಗೆಹರಿಸಲು ಮತ್ತು ಪರಸ್ಪರರ ದೃಷ್ಟಿಕೋನವನ್ನು ಹೇಗೆ ನೋಡಬೇಕೆಂದು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ದಾಂಪತ್ಯ ಕುಸಿಯಲು ಪ್ರಾರಂಭವಾಗುತ್ತದೆ.


  6) ವೃಷಭ – ಕನ್ಯಾರಾಶಿ:


  ವೃಷಭ ರಾಶಿ ಮತ್ತು ಕನ್ಯಾ ರಾಶಿಯವರು ಅನೇಕ ವ್ಯಕ್ತಿತ್ವದ ಲಕ್ಷಣಗಳನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಸಂಬಂಧದಿಂದ ಏನನ್ನು ನಿರೀಕ್ಷೆ ಮಾಡುತ್ತೇವೆ ಎಂಬುದರ ಕುರಿತು ಎರಡೂ ರಾಶಿಯವರು ಸ್ಪಷ್ಟವಾಗಿರುತ್ತಾರೆ.


  ಈ ರಾಶಿಚಕ್ರಗಳು ಪರಸ್ಪರ ಆಕರ್ಷಣೆಯೊಂದಿಗೆ ಕೆಲವು ಸ್ವಭಾವಗಳಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಅತ್ಯುತ್ತಮ ಪಾರ್ಟ್‌ನರ್‌ಗಳಾಗುತ್ತಾರೆ. ವೃಷಭ ರಾಶಿಯವರು ಕನ್ಯಾರಾಶಿಯ ಮಹತ್ವಾಕಾಂಕ್ಷೆಯ ಸ್ವಭಾವವನ್ನು ಅಭಿನಂದಿಸುತ್ತಾರೆ.


  7) ವೃಷಭ – ತುಲಾ:


  ವೃಷಭ ಹಾಗೂ ತುಲಾ ರಾಶಿ ಅಷ್ಟೊಂದು ಹೊಂದುವುದಿಲ್ಲ ಎಂದೇ ಹೇಳಬಹುದು. ಹೊಂದಾಣಿಕೆಯ ಬಗ್ಗೆ ಮಾತನಾಡುವಾಗ, ಪ್ರೀತಿ ಮತ್ತು ಪ್ರಣಯಕ್ಕೆ ಬಂದಾಗ ಅವರು ಶೇ. 35 ರಷ್ಟು ಹೊಂದಿಕೆಯಾಗುವುದಿಲ್ಲ ಎಂದು ಖಚಿತವಾಗಿ ಹೇಳಬಹುದು. ಎರಡೂ ಚಿಹ್ನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.


  ಆದರೆ ಎರಡೂ ರಾಶಿಚಕ್ರಗಳು ಸಂಬಂಧದಿಂದ ವಿರುದ್ಧ ವಿಷಯಗಳನ್ನು ನಿರೀಕ್ಷಿಸುತ್ತವೆ. ತುಲಾ ರಾಶಿಯವರು ಹೆಚ್ಚು ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ವೃಷಭ ರಾಶಿಯವರು ನಿರ್ದಿಷ್ಟ ವಿಷಯಗಳನ್ನು ಪ್ರತ್ಯೇಕವಾಗಿ ಆನಂದಿಸುತ್ತಾರೆ.


  ಈ ಎರಡೂ ರಾಶಿಯವರು ವಾದಗಳಿಗೆ ಒಳಗಾಗುವ ಸಾಧ್ಯತೆಯಿದೆ. ಅದು ಅವರ ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದಲೇ ಈ ಎರಡೂ ರಾಶಿಯವರ ನಡುವೆ ಮದುವೆಯನ್ನು ಹೆಚ್ಚಾಗಿ ಶಿಫಾರಸ್ಸು ಮಾಡಲಾಗುವುದಿಲ್ಲ.


  8) ವೃಷಭ – ವೃಶ್ಚಿಕ:


  ವೃಷಭ ರಾಶಿಯವರ ಜೀವನದಲ್ಲಿ ಪ್ರೀತಿ ಮತ್ತು ಒಡನಾಟವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವೃಶ್ಚಿಕ ರಾಶಿಯವರೂ ಅದನ್ನೇ ಇಷ್ಟಪಡುತ್ತಾರೆ. ಆದ್ದರಿಂದ ಇದು ಅವರಿಬ್ಬರನ್ನೂ ತುಂಬಾ ಸೂಕ್ತವಾದ ಜೋಡಿಯನ್ನಾಗಿ ಮಾಡುತ್ತದೆ. ಎರಡೂ ರಾಶಿಯವರು ಒಂದೇ ತಾತ್ವಿಕ ಮತ್ತು ಆರ್ಥಿಕ ನಂಬಿಕೆಗಳನ್ನು ಹಂಚಿಕೊಳ್ಳುತ್ತಾರೆ. ಆದ್ದರಿಂದ ಅವರ ಸಂಬಂಧದಲ್ಲಿ ವಿವಾದಗಳು ಕಡಿಮೆ.


  ವೃಷಭ ರಾಶಿಯವರು ತುಂಬಾ ಭಾವನಾತ್ಮಕವಾಗಿದ್ದರೂ ವೃಶ್ಚಿಕ ರಾಶಿಯವರು ತರ್ಕಬದ್ಧತೆಯಿಂದ ಎಲ್ಲವನ್ನೂ ನಿಭಾಯಿಸುತ್ತಾರೆ. ಇಬ್ಬರೂ ಪರಸ್ಪರರ ದೌರ್ಬಲ್ಯಗಳನ್ನು ಸರಿದೂಗಿಸಿಕೊಂಡು ಹೋಗುತ್ತಾರೆ. ಹಾಗಾಗಿ ಈ ಎರಡೂ ರಾಶಿಗಳ ಕಾಂಬಿನೇಷನ್‌ ಶೇ. 90ರಷ್ಟು ಹೊಂದಾಣಿಕೆಯಾಗುತ್ತದೆ ಎಂದು ಹೇಳಬಹುದು.


  9) ವೃಷಭ - ಧನು ರಾಶಿ:


  ಧನು ರಾಶಿಯು ವೃಷಭ ರಾಶಿಯ ಕೆಟ್ಟ ಅಭ್ಯಾಸಗಳನ್ನು ಗೇಲಿ ಮಾಡಬಹುದು. ಅದು ಸುಲಭವಾಗಿ ಕೋಪ - ಪ್ರಕೋಪಕ್ಕೆ ಕಾರಣವಾಗಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವೃಷಭ-ಧನು ರಾಶಿಯಯವರು ಒಟ್ಟಾದರೆ ವಿರುದ್ಧ ಚಿಹ್ನೆಗಳು ಒಂದಾದಂತೆ.


  ಇದರಿಂದ ತಮ್ಮ ಜೀವನ, ಆದ್ಯತೆಗಳ ಮೇಲಿನ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಈ ಎರಡೂ ರಾಶಿಯವರ ಜೋಡಿಯು ಯೋಗ್ಯವೆಂದು ಪರಿಗಣಿಸುವುದಿಲ್ಲ.


  10) ವೃಷಭ – ಮಕರ:


  ವೃಷಭ ರಾಶಿ ಮತ್ತು ಮಕರ ರಾಶಿಯ ಜೋಡಿ ಹೆಚ್ಚು ರೋಮ್ಯಾಂಟಿಕ್ ಆಗಿರುತ್ತದೆ. ಅಲ್ಲದೇ ಎರಡೂ ಚಿಹ್ನೆಗಳು ಆಧ್ಯಾತ್ಮಿಕತೆ ಮತ್ತು ದೈವತ್ವದ ಕಡೆಗೆ ಸಮಾನವಾಗಿ ಒಲವು ತೋರುತ್ತವೆ. ಎರಡೂ ರಾಶಿಚಕ್ರಗಳು ಸ್ವಾಭಾವಿಕವಾಗಿ ಶುಕ್ರನ ಅನುಕೂಲಕರ ಸ್ಥಾನದಿಂದ ಬೆಂಬಲಿತವಾಗಿದೆ. ಇದು ಅವರಿಬ್ಬರನ್ನೂ ಚೆನ್ನಾಗಿ ಹೊಂದುವಂತೆ ಮಾಡುತ್ತದೆ. ವೃಷಭ ರಾಶಿಯವರು ಯಾವಾಗಲೂ ಇತರರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.


  ಮಕರ ರಾಶಿಯವರು ದಯೆ ಹೊಂದಿರುತ್ತಾರೆ. ಆದ್ದರಿಂದ ಅವರು ಉತ್ತಮ ಜೋಡಿಯಾಗುತ್ತಾರೆ. ಮಕರ ರಾಶಿ ಶಾಂತ ಮತ್ತು ಹೊಂದಾಣಿಕೆ ಸ್ವಭಾವ ಹೊಂದಿದ್ದು ಅದು ವೃಷಭ ರಾಶಿಯ ಮನಸ್ಥಿತಿ ಮತ್ತು ಕೋಪವನ್ನು ನಿಭಾಯಿಸುತ್ತದೆ. ಆದ್ದರಿಂದ ಎರಡೂ ರಾಶಿಯವರು ಪರಸ್ಪರ ಚೆನ್ನಾಗಿ ಹೊಂದಿಕೊಳ್ಳುತ್ತಾರೆ.


  11) ವೃಷಭ – ಕುಂಭ:


  ವೃಷಭ ರಾಶಿ ಮತ್ತು ಕುಂಭ ರಾಶಿ ಹೆಚ್ಚು ಸಾಮ್ಯತೆ ಹೊಂದಿಲ್ಲ ಎಂದೇ ಹೇಳಬಹುದು. ಇವರಿಬ್ಬರ ನಡುವೆ ಹೊಂದಾಣಿಕೆ ಕಷ್ಟವಾಗುತ್ತದೆ. ಕುಂಭ ರಾಶಿಯವರು ಹೆಚ್ಚು ಪರಿಚಯಸ್ಥರನ್ನು ಮನೆಗೆ ಕರೆತಂದಾಗ ವೃಷಭ ರಾಶಿಯವರಿಗೆ ಅವರನ್ನು ಒಪ್ಪಿಕೊಳ್ಳಲು ಹಾಗೂ ಹೊಂದಿಕೊಳ್ಳಲು ಕಷ್ಟವಾಗುತ್ತದೆ.


  ಕುಂಭದವರ ಸ್ವಭಾವಗಳಿಗೆ ಹೊಂದಿಕೊಳ್ಳಲು ವೃಷಭ ರಾಶಿಯವರು ಕಷ್ಟ ಪಡುತ್ತಾರೆ. ಹೀಗಾಗಿ ಈ ಎರಡೂ ರಾಶಿಯವರ ವಿರುದ್ಧ ದಿಕ್ಕಿಗೆ ಎಳೆಯಲ್ಪಡುತ್ತಾರೆ. ಇದರಿಂದ ಇವರಿಬ್ಬರ ನಡುವೆ ಸಾಮರಸ್ಯ ಕಷ್ಟವಾಗುತ್ತದೆ.


  ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಅದೃಷ್ಟ ನೆಲೆಸಲು ಈ ವಾಸ್ತು ಟಿಪ್ಸ್​​ ಫಾಲೋ ಮಾಡಿ


  12) ವೃಷಭ – ಮೀನ:


  ಮೀನ ರಾಶಿಯವರು ತಮ್ಮ ಆಗಾಗ್ಗೆ ಹೆಚ್ಚಿನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರುವುದು ಇಬ್ಬರ ಮಧ್ಯೆ ಬಿಕ್ಕಟ್ಟನ್ನು ತಂದಿಡಬಹುದು.


  ತಮ್ಮ ಸಂಗಾತಿಯು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ವೃಷಭ ರಾಶಿಯವರು ಅನುಮಾನ ಪಡಲು ಕಾರಣವಾಗಬಹುದು. ಕೆಲವೊಮ್ಮೆ ಮೀನ ರಾಶಿಯವರ ಉದ್ದೇಶ ಸರಿಯಾಗಿದ್ದರೂ ಸಹ, ವೃಷಭ ರಾಶಿಯವರು ರಹಸ್ಯ ಹಗೆತನದಿಂದ ಮನನೋಯಬಹುದು. ಇದರಿಂದ ಇಬ್ಬರ ನಡುವೆ ಸಾಮರಸ್ಯ ಕುಸಿಯಬಹುದು.

  Published by:Prajwal B
  First published: