ದೇವಿ ಕಾತ್ಯಾಯಿನಿ ಕಾಶಿಯಲ್ಲಿ ಅನ್ನಪೂರ್ಣೆಯಾಗಿ ನೆಲೆಯೂರಿದ ಕಥೆ ಇದು

ಅನ್ನಪೂರ್ಣೆಯು (Goddess Annapurna) ರಾಜನ ಪ್ರಾರ್ಥನೆಗೆ ಮನ್ನಣೆ ನೀಡಿ ಶಾಶ್ವತವಾಗಿ ಕಾಶಿಯಲ್ಲಿ (Kashi) ನೆಲೆಸುವೆ ಎಂದು ಅಭಯವಿತ್ತಳು. ಇಂದಿಗೂ ಕಾಶಿಯಲ್ಲಿ ಪ್ರಸಿದ್ಧವಾದ ಅನ್ನಪೂರ್ಣೆಯ ದೇವಾಲಯವಿದೆ.

ಅನ್ನಪೂರ್ಣೆ ವಿಗ್ರಹ

ಅನ್ನಪೂರ್ಣೆ ವಿಗ್ರಹ

 • Share this:
  ಶಿವನು (Shiva)  ಒಮ್ಮೆ ಕೈಲಾಸದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದನು. ಪಾರ್ವತಿದೇವಿಯು (Parvati) ಹಿಂದಿನಿಂದ ತಮಾಷೆಗಾಗಿ ಶಿವನ ಎರಡೂ ಕಣ್ಣುಗಳನ್ನು ತನ್ನ ಕೈಯಿಂದ ಮುಚ್ಚಿದಳು. ಗಾಬರಿಗೊಂಡ ಶಿವನು,  ಇದೇನಿದು ಎಂದು ಕೇಳಿದಾಗ ಪಾರ್ವತಿ ತಮಾಷೆಯಿಂದ  ನಕ್ಕಳು.  ಶಿವನ ಕಣ್ಣುಗಳನ್ನು ಮುಚ್ಚಿದ್ದರಿಂದ ಜಗತ್ತೆಲ್ಲ ಕತ್ತಲಿನಲ್ಲಿ ಮುಳುಗಿಹೋಯಿತು. ಸಮಸ್ತ ಲೋಕಗಳಲ್ಲಿನ ಜೀವಿಗಳೂ ಒಮ್ಮೆಲೆ ಏನೂ ಕಾಣದಂತೆ ತಬ್ಬಿಬ್ಬಾಗಿಬಿಟ್ಟವು. ದೇವತೆಗಳು, ಭಕ್ತರು ಭಗವಂತನಲ್ಲಿ ಮೊರೆಯಿಟ್ಟರು. ಜಗತ್ತಿನ ಪರಿಸ್ಥಿತಿಯ ಅರಿವು ಬಂದ ಕೂಡಲೇ ದೇವಿಗೆ ಭಯವಾಯಿತು. ಶಿವನ ಕಣ್ಣುಗಳನ್ನು ಮುಚ್ಚಿದ್ದ ಕೈಗಳನ್ನು ಹಿಂದಕ್ಕೆ ತೆಗೆದುಕೊಂಡುಬಿಟ್ಟಳು.

  ತನ್ನ ಹುಡುಗಾಟದಿಂದ ಆದ ತಪ್ಪಿಗೆ ಪಾರ್ವತಿ ಪ್ರಾಯಶ್ಚಿತ್ತವೆಂದು ತಪಸ್ಸು ಮಾಡಲು ಶುರು ಮಾಡಿದಳು. ಆಗ ಶಿವ ಜಗನ್ಮಾತೆಯಾದ ನಿನಗೆ ಪಾಪ ತಗುಲುವುದಿಲ್ಲ ಎಂದರೂ ಪಾರ್ವತಿ ತಪ್ಪಸಿಗೆ ಮುಂದಾದಳು.

  ಕಾತ್ಯಾಯನ ಋಷಿಗಳ ಮಗಳಾಗಿ ಜನಿಸಿದ ಅನ್ನಪೂರ್ಣೆ

  ಆಗ ಪಾರ್ವತಿ, ಬದರಿಕಾಶ್ರಮಕ್ಕೆ ಹೋಗಿ ಮಗಳಿಗಾಗಿ ತಪ್ಪಸು ಮಾಡುತ್ತಿದ್ದ ಕಾತ್ಯಾಯನ ಋಷಿಗಳಿ ಮಗಳಾಗಿ ಜನಿಸಿಸುವುದಾಗಿ ತಿಳಿಸಿದಳು. ದೇವಿ ಪಾರ್ವತಿ ತಮ್ಮ ಮಗಳಾಗಿ ಹುಟ್ಟಿದ ಸುದ್ದಿಯಿಂದ ಸಂತಸಗೊಂಡ ಋಷಿಗಳು ಆಕೆಗೆ ಕಾತ್ಯಾಯಿನಿ ಎಂದು ಹೆಸರಿಟ್ಟಿ ಬೆಳೆಸಿದರು. ಕಾತ್ಯಾಯಿನಿ ಯುವತಿಯಾಗಿದ್ದಾಗ ಕಾಶೀಪಟ್ಟಣದಲ್ಲಿ ಕ್ಷಾಮ ಉಂಟಾಗುತ್ತದೆ.

  ಕ್ಷಾಮಕ್ಕೆ ಒಳಗಾದ ಕಾಶಿ ಜನರಿಗೆ ಅನ್ನಪೂರ್ಣೆಯಾದ ಕಾತ್ಯಾಯಿನಿ

  ಈ ವೇಳೆ ಜನರ ಸಂಕಷ್ಟಕ್ಕೆ ಮಿಡಿಯಲು ಮುಂದಾದ ಕಾತ್ಯಾಯಿನಿ ಅಪ್ಪನ ಆಶೀರ್ವಾದ ಪಡೆದು, ಕಾಶಿಗೆ ಹೋಗುತ್ತಾಳೆ. ಬರಪೀಡಿತ ಕಾಶೀಪಟ್ಟಣವನ್ನು ತಲುಪಿದ ಕಾತ್ಯಾಯಿನಿಯು, ಅಲ್ಲಿ ತನ್ನ ದಿವ್ಯಶಕ್ತಿಯಿಂದ ಸುಂದರವಾದ ಅರಮನೆಯೊಂದನ್ನು ನಿರ್ಮಿಸಿದಳು. ಕೈಯಲ್ಲಿ ಅಕ್ಷಯಪಾತ್ರೆಯನ್ನು ಧರಿಸಿ, ಅನ್ನಪೂರ್ಣೆಯಾಗಿ ವಿರಾಜಿಸಿದಳು. ಆ ಪಾತ್ರೆಯಿಂದ ಎಷ್ಟೇ ಭೋಜನವನ್ನು ನೀಡಿದರೂ ಅದು ಬರಿದಾಗುತ್ತಿರಲಿಲ್ಲ.

  ಈ ವೇಳೆ ನಾನು ಅನ್ನಪೂರ್ಣೆ, ನಿಮ್ಮೆಲ್ಲರನ್ನೂ ಕರೆಯುತ್ತಿದ್ದೇನೆ. ಯಾರು ಹೊಟ್ಟೆ ಹಸಿವಿನಿಂದ ಬಳಲಬೇಡಿ. ಬನ್ನಿ, ಹೊಟ್ಟೆತುಂಬಾ ತೃಪ್ತಿಯಾಗಿ ಊಟ ಮಾಡಿ  ಎಂದು ಊರಿನ ಜನರನ್ನೆಲ್ಲಾ ಆಹ್ವಾನಿಸಿದಳು. ಬಂದವರೆಲ್ಲ ಊಟ ಮಾಡಿ ತೃಪ್ತರಾಗಿ ಅನ್ನಪೂರ್ಣೆಯನ್ನು ಮನಸಾರೆ ಪ್ರಶಂಸಿಸುತ್ತಿದ್ದರು.

  ದೇವಿಯ ಪರೀಕ್ಷಿಸಲು ಮುಂದಾದ ರಾಜ

  ಇತ್ತ ಬರದ ದೆಸೆಯಿಂದ ರಾಜನ ಉಗ್ರಾಣ ಬರಿದಾಗಿತ್ತು. ಆದರೆ ಅನ್ನಪೂರ್ಣೆಯು ತನ್ನ ಹತ್ತಿರ ಬಂದ ಎಲ್ಲರಿಗೂ ಪುಷ್ಕಳವಾದ ಭೋಜನವನ್ನು ನೀಡುತ್ತಿದ್ದಳು. ಎಷ್ಟೇ ಜನ ಬರಲಿ, ಎಲ್ಲರಿಗೂ ಊಟ ಸಿಗುತ್ತಿತ್ತು. ರಾಜನು ಇದು ಹೇಗೆ ಸಾಧ್ಯ ಎಂದು ತಿಳಿಯಬಯಸಿದನು. ಅನ್ನಪೂರ್ಣೆಯ ಬಳಿಗೆ ದೂತನೊಬ್ಬನನ್ನು ಕಳುಹಿಸಿದನು.

  ಇದನ್ನು ಓದಿ:  ಹೊಸ ವರ್ಷದ ಆಗಮನಕ್ಕೂ ಮುನ್ನ ಮನೆಯಲ್ಲಿನ ಈ ವಸ್ತುಗಳನ್ನು ಮೊದಲು ತೆಗೆಯಿರಿ

  ರಾಜದೂತ ಬಂದು ಕಾಶೀರಾಜರು ನಿಮ್ಮಿಂದ ಅಕ್ಕಿಯನ್ನು ಸಾಲವಾಗಿ ಕೇಳುತ್ತಿದ್ದಾರೆ ಎಂದು ಅನ್ನಪೂರ್ಣೆಗೆ ಕೋರಿದನು. ಅದಕ್ಕೆ ಅನ್ನಪೂರ್ಣೆಯು  ನಾನು ಇಲ್ಲಿ ಅಕ್ಕಿಯನ್ನು ಮಾರಾಟಕಿಟ್ಟಿಲ್ಲ. ಬಂದವರಿಗೆಲ್ಲ, ಉಚಿತವಾಗಿ, ತೃಪ್ತಿಯಾಗುವಷ್ಟು ಅನ್ನವನ್ನು ನೀಡುತ್ತಿದ್ದೇನೆ. ದಯವಿಟ್ಟು ನಿಮ್ಮ ರಾಜನಿಗೆ ಈ ವಿಷಯವನ್ನು ತಿಳಿಸು ಎಂದು ಹೇಳಿ ಕಳುಹಿಸಿದಳು.

  ನಿಜ ಸ್ವರೂಪ ತೋರಿಸಿದ ದೇವಿ

  ಅನ್ನಪೂರ್ಣೆಯ ಬಗ್ಗೆ ಅನುಮಾನಗೊಂಡು ಪರೀಕ್ಷಿಸಲು ಮುಂದಾದ ರಾಜ ಇದಕ್ಕೆ ಉತ್ತರ ಕಂಡು ಹಿಡಿಯಲು ಮುಂದಾದ. ತನ್ನ ಪರೀಕ್ಷಿಸಲು ಬಂದ ರಾಜನಿಗೆ ಅನ್ನಪೂರ್ಣೆ  ಪುಷ್ಕಳ ಭೋಜನ ನೀಡಿದಳು. ಆಕೆಯನ್ನು ಗಮನಿಸಿದ ರಾಜನಿಗೆ ಒಬ್ಬ ಸಾಮಾನ್ಯ ಮಹಿಳೆಯಿಂದ ಇದು ಸಾಧ್ಯವಿಲ್ಲ. ಇವಳು ದೇವಿಯೇ ಇರಬೇಕು. ದಿವ್ಯಶಕ್ತಿಯಿಂದ ಇವುಗಳನ್ನೆಲ್ಲಾ ಒದಗಿಸಿದ್ದಾಳೆ ಎಂದು ಗೋಚರಿಸತೊಡಗಿತು.

  ಇದನ್ನು ಓದಿ: 100 ವರ್ಷದ ಹಿಂದೆ ಕಾಶಿ ತೊರೆದಿದ್ದ ಅನ್ನಪೂರ್ಣೆ ಮರಳಿ ವಾರಾಣಸಿಗೆ

  ದೇವಿಯ ನಿಜ ಸ್ವರೂಪ ಅರಿತ ರಾಜ ಬಳಿಕ ದೇವಿಗೆ ಅರಮನೆಗೆ ದಯಮಾಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ಅದಕ್ಕೆ ಉತ್ತರಿಸಿದ ಅನ್ನಪೂರ್ಣೆ, ನನ್ನ ಕೃಪೆಯಿಂದ ಇಲ್ಲಿ ಮಳೆಯಾಗುವುದು. ಮುಂದೆ ಕ್ಷಾಮ ಡಾಮರಗಳಿರುವುದಿಲ್ಲ. ನಿನ್ನ ನಾಡು ಸಂಪದ್ಭರಿತವಾಗಿರುತ್ತದೆ. ನಾನು ಇಲ್ಲಿಯೇ ಶಾಶ್ವತವಾಗಿ ಇರಲಾಗುವುದಿಲ್ಲ. ನಾನು ತಪಸ್ಸಿಗಾಗಿ ಹಿಂತಿರುಗಬೇಕಾಗಿದೆ. ಈ ಜನ್ಮದಲ್ಲಿಯೇ ನೀನು ಮುಕ್ತಿಯನ್ನು ಪಡೆ ಎಂದು ಆಶೀರ್ವದಿಸಿದಳು.

  ಈ ವೇಳೆ ರಾಜ ನೀನು ತಪಶ್ಚರ್ಯೆಗಾಗಿ ಕಾಶಿಯನ್ನು ಬಿಟ್ಟು ಹೋದರೂ, ಇಲ್ಲಿ ನಿನ್ನ ಶಾಶ್ವತ ನೆಲೆಯನ್ನು ಅನುಗ್ರಹಿಸಬೇಕು ಎಂದು ಪ್ರಾರ್ಥಿಸಿದನು. ಆಗ ಅನ್ನಪೂರ್ಣೆಯು ರಾಜನ ಪ್ರಾರ್ಥನೆಯ ಅನುಸಾರ, ಶಾಶ್ವತವಾಗಿ ಕಾಶಿಯಲ್ಲಿ ನೆಲೆಸುವೆ ಎಂದು ಅಭಯವಿತ್ತಳು. ಇಂದಿಗೂ ಕಾಶಿಯಲ್ಲಿ ಪ್ರಸಿದ್ಧವಾದ ಅನ್ನಪೂರ್ಣೆಯ ದೇವಾಲಯವಿದೆ. ಇಲ್ಲಿ ಬೇಡಿದವರ ಇಷ್ಟಾರ್ಥಗಳನ್ನು ಆ ತಾಯಿ ಕರುಣಿಸುತ್ತಿದ್ದಾಳೆ.
  Published by:Seema R
  First published: