• Home
  • »
  • News
  • »
  • astrology
  • »
  • Astrology: ಬೇಸರವಾದಾಗ ಈ ರಾಶಿಯ ಜನರು ಹೀಗೆಲ್ಲಾ ಮಾಡ್ತಾರಂತೆ

Astrology: ಬೇಸರವಾದಾಗ ಈ ರಾಶಿಯ ಜನರು ಹೀಗೆಲ್ಲಾ ಮಾಡ್ತಾರಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How Each Zodiac Act: ಸಂಬಂಧ ಎಂದರೆ ಅದು ಗಂಡ-ಹೆಂಡತಿಯ ಸಂಬಂಧ ಆಗಿರಬಹುದು ಅಥವಾ ಪ್ರಿಯತಮೆ ಮತ್ತು ಪ್ರಿಯಕರನ ಸಂಬಂಧವಾಗಿರಬಹುದು. ಬನ್ನಿ ಹಾಗಾದರೆ ಹೀಗೆ ಸಂಬಂಧಗಳಲ್ಲಿ ನಾವು ಬೇಸರವಾಗಿದ್ದಾಗ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇರೆ ಬೇರೆ ರಾಶಿಚಕ್ರ ಚಿಹ್ನೆಯ ಜನರು ಹೇಗೆ ವರ್ತಿಸುತ್ತಾರೆ ಅಂತ ಇಲ್ಲಿದೆ. 

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಸಾಮಾನ್ಯವಾಗಿ ನಾವು ಮನುಷ್ಯರು ಜೀವನದಲ್ಲಿ (Life) ತುಂಬಾನೇ ಸಂತೋಷವಾದಾಗ (Happy) , ನಮ್ಮ ವರ್ತನೆ ತುಂಬಾನೇ ಸಕರಾತ್ಮಕವಾಗಿರುತ್ತದೆ. ಆದರೆ ಅದೇ ನಾವು ಅಸಂತುಷ್ಟರಾಗಿದ್ದರೆ, ನಮ್ಮ ವರ್ತನೆಯಲ್ಲಿ ತುಂಬಾನೇ ಬದಲಾವಣೆಯನ್ನು (Changes) ನಮ್ಮ ಜೊತೆಗಿರುವ ಜನರು ಗಮನಿಸುತ್ತಾರೆ ಅಂತ ಹೇಳಬಹುದು. ಹೌದು. ಎಲ್ಲವೂ ಸರಿಯಾಗಿದ್ದಾಗ ನಾವು ಬೇರೆ ರೀತಿಯಲ್ಲಿ ಸಮಾಧಾನವಾಗಿ ಮತ್ತು ಎಲ್ಲವನ್ನೂ ಸಮಚಿತ್ತದಿಂದ ತೆಗೆದುಕೊಳ್ಳುತ್ತೇವೆ. ಅದರಲ್ಲೂ ಈ ಸಂಬಂಧಗಳ (Relationship) ವಿಚಾರಕ್ಕೆ ಬಂದರೆ, ಅಸಂತುಷ್ಟರಾಗಿರುವಾಗ ನಮ್ಮ ವರ್ತನೆಯಲ್ಲಿ ಭಾರಿ ಬದಲಾವಣೆ ಬಂದಿರುತ್ತದೆ ಅಂತ ಹೇಳಬಹುದು.


ಸಂಬಂಧ ಎಂದರೆ ಅದು ಗಂಡ-ಹೆಂಡತಿಯ ಸಂಬಂಧ ಆಗಿರಬಹುದು ಅಥವಾ ಪ್ರಿಯತಮೆ ಮತ್ತು ಪ್ರಿಯಕರನ ಸಂಬಂಧವಾಗಿರಬಹುದು. ಬನ್ನಿ ಹಾಗಾದರೆ ಹೀಗೆ ಸಂಬಂಧಗಳಲ್ಲಿ ನಾವು ಬೇಸರವಾಗಿದ್ದಾಗ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇರೆ ಬೇರೆ ರಾಶಿಚಕ್ರ ಚಿಹ್ನೆಯ ಜನರು ಹೇಗೆ ವರ್ತಿಸುತ್ತಾರೆ ಅಂತ ಇಲ್ಲಿದೆ.


1. ಮೇಷ ರಾಶಿ


ಮೇಷ ರಾಶಿಯ ಜನರು ತಮ್ಮ ಸಂಬಂಧಗಳಲ್ಲಿ ಅಷ್ಟೊಂದು ಸಂತುಷ್ಟರಾಗಿರದೆ ಇದ್ದಾಗ ಅವರು ತುಂಬಾನೇ ಕೂಲ್ ಆಗಿ ಎಲ್ಲರಿಂದಲೂ ದೂರವಿರಲು ಬಯಸುತ್ತಾರೆ ಮತ್ತು ಅದೇ ರೀತಿಯಾಗಿ ಅವರು ವರ್ತಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಸಂಬಂಧಗಳಲ್ಲಿ ನಿರಾಸಕ್ತಿಯನ್ನು ವ್ಯಕ್ತಪಡಿಸುತ್ತಾರೆ.


2. ವೃಷಭ ರಾಶಿ


ವೃಷಭ ರಾಶಿಯ ಜನರು ಸಂಬಂಧಗಳಲ್ಲಿ ಎಲ್ಲವೂ ಚೆನ್ನಾಗಿಲ್ಲ ಅಂತಾದಾಗ ಇದ್ದಕ್ಕಿದ್ದಂತೆ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಫೀಡ್ ಗಳನ್ನು ಹಾಕುವುದು, ಸುಂದರವಾದ ಫೋಟೋಗಳನ್ನು ಹಾಕುವುದು ಮಾಡುತ್ತಾರೆ.


ಒಟ್ಟಿನಲ್ಲಿ ಸತ್ಯವನ್ನು ಮರೆಮಾಚಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಇವರು ಮಾಡುತ್ತಾರೆ. ಏಕೆಂದರೆ ಇವರಿಗೆ ಸತ್ಯವನ್ನು ಎದುರಿಸಲು ಇಷ್ಟವಿರುವುದಿಲ್ಲ.


3. ಮಿಥುನ ರಾಶಿ


ಈ ರಾಶಿಯ ಜನರು ತಮ್ಮ ಸಂಬಂಧವನ್ನು ತುಂಬಾನೇ ಶಾಂತತೆಯಿಂದ ನಿಭಾಯಿಸಲು ಇಷ್ಟ ಪಡುತ್ತಾರೆ ಎನ್ನುವುದನ್ನು ಹೊರತುಪಡಿಸಿ ಎಲ್ಲಾ ವಿಷಯಗಳ ಬಗ್ಗೆ ಸಿಡಿದೇಳುತ್ತಾರೆ. ಅವರು ಎಲ್ಲಾ ಸಮಯದಲ್ಲೂ ಸಿಡಿದೇಳುತ್ತಾರೆ ಅಂತ ಹೇಳಬಹುದು.


4. ಕರ್ಕಾಟಕ ರಾಶಿ


ಈ ರಾಶಿಚಕ್ರ ಚಿಹ್ನೆಯ ಜನರು ಸಂಬಂಧಗಳಲ್ಲಿ ಅಸಂತುಷ್ಟಗೊಂಡಾಗ ತುಂಬಾನೇ ಕ್ಷುಲ್ಲಕರಾಗುತ್ತಾರೆ. ಎಲ್ಲವೂ ಸರಿಯಾಗಿದ್ದಾಗ ತುಂಬಾನೇ ಒಳ್ಳೆಯವರಾದ ಇವರು ನೋವಿನ ಸಂದರ್ಭದಲ್ಲಿ ತುಂಬಾನೇ ವಿಷಕಾರಿಯಾಗುತ್ತಾರೆ. ಇದು ಅವರ ವ್ಯಕ್ತಿತ್ವಕ್ಕೆ ತದ್ವಿರುದ್ಧವಾಗಿರುತ್ತದೆ.

5. ಸಿಂಹ ರಾಶಿ


ಸಿಂಹ ರಾಶಿಯ ಜನರು ಸಂಬಂಧದಲ್ಲಿ ಎಲ್ಲವೂ ಸರಿಯಾಗಿರದೆ ಇದ್ದಾಗ ಪ್ರಾರಂಭದಲ್ಲಿ ಅವರು ಸ್ವಲ್ಪ ಆಕ್ರಮಣಶೀಲತೆಯನ್ನು ತೋರಿಸುತ್ತಾರೆ, ನಂತರದಲ್ಲಿ ಅದು ಉದಾಸೀನತೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಬಹುದು.


6. ಕನ್ಯಾ ರಾಶಿ


ಕನ್ಯಾ ರಾಶಿಯ ಜನರು ಸಂಬಂಧಗಳಲ್ಲಿ ತೀರ ಅಸಂತುಷ್ಟರಾಗಿರುವಾಗ ತಮ್ಮನ್ನು ತಾವು ತುಂಬಾನೇ ಚಂಚಲತೆಯಲ್ಲಿ ಮುಳುಗಿಸಿಕೊಳ್ಳುತ್ತಾರೆ. ನಂತರ ನಿಧಾನವಾಗಿ ಅವರು ಆ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾ ಬರುತ್ತಾರೆ.


ಇದನ್ನೂ ಓದಿ: ಈ ರಾಶಿಯವರಿಗೆ ಇಂದು ಮದುವೆ ಆಫರ್ ಬರುವ ಸಾಧ್ಯತೆ! ನಿಮ್ಮ ದಿನಭವಿಷ್ಯ ಹೀಗಿದೆ


7. ತುಲಾ ರಾಶಿ


ಈ ರಾಶಿಯ ಜನರು ಸಂಬಂಧದಲ್ಲಿ ಅಸಂತುಷ್ಟರಾಗಿದ್ದಾಗ, ಅವರು ತಮ್ಮ ಜೀವನದ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಅವರು ಘರ್ಷಣೆ ಮತ್ತು ನಕಾರಾತ್ಮಕತೆಯಿಂದ ದೂರವಿರಲು ಬಯಸುತ್ತಾರೆ. ಅವರ ವೃತ್ತಿಜೀವನದ ಮೇಲೆ ಗಮನ ಹರಿಸುವುದರ ಮೂಲಕ ಈ ಪರಿಸ್ಥಿತಿಯನ್ನು ನಿಭಾಯಿಸಲು ನೋಡುತ್ತಾರೆ.


8. ವೃಶ್ಚಿಕ ರಾಶಿ


ಈ ರಾಶಿಯ ಜನರು ಸಂಬಂಧದಲ್ಲಿ ಕೆಟ್ಟ ಸಮಯವನ್ನು ಎದುರಿಸುತ್ತಿದ್ದರೆ ಮತ್ತು ಅದನ್ನು ಇನ್ನು ಮುಂದೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಈ ರಾಶಿಚಕ್ರ ಚಿಹ್ನೆಯ ಜನರು ಎಲ್ಲರ ಮೇಲೆ ಚಿಕ್ಕಪುಟ್ಟ ವಿಷಯಗಳಿಗಾಗಿ ಸಿಡಿಯುತ್ತಿರುತ್ತಾರೆ. ಅವರು ಹಾಗೆ ಸಿಡಿದೇಳುವಾಗ ನೀವು ಅವರ ಸುತ್ತಲೂ ಇರಲು ಬಯಸದಿರಬಹುದು.


9. ಧನು ರಾಶಿ


ಈ ರಾಶಿಯ ಜನರು ನಿಷ್ಕ್ರಿಯ ಆಕ್ರಮಣಕಾರಿ ವಿಧಾನವನ್ನು ತೆಗೆದುಕೊಳ್ಳುತ್ತಾರೆ. ಅವರು ತುಂಬಾನೇ ಮೂಡಿ ಆಗುತ್ತಾರೆ, ಅವರಲ್ಲಿರುವ ಆಶಾವಾದ ಗುಣವು ಸಂಪೂರ್ಣವಾಗಿ ಕಣ್ಮರೆಯಾಗಿರುತ್ತದೆ, ಇದು ಅವರ ವ್ಯಕ್ತಿತ್ವಕ್ಕೆ ದೊಡ್ಡ ವ್ಯತಿರಿಕ್ತವಾಗಿದೆ ಎಂದು ಹೇಳಬಹುದು.


10. ಮಕರ ರಾಶಿ


ಮಕರ ರಾಶಿಯ ಜನರು ತುಂಬಾ ಸಕ್ರಿಯ ವಿಧಾನವನ್ನು ತೆಗೆದುಕೊಳ್ಳುತ್ತಾರೆ ಮತ್ತು ತಮ್ಮ ಸಂಗಾತಿಯೊಂದಿಗೆ ಕೋಣೆಯಲ್ಲಿ ಆ ಸಂಬಂಧದ ಅಸಂತುಷ್ಟತೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾರೆ.


11. ಕುಂಭ ರಾಶಿ


ಈ ರಾಶಿಯ ಜನರು ತಮ್ಮ ದುಃಖವನ್ನು ಮರೆಯಲು ಬೇರೆ ಏನನ್ನಾದರೂ ಮಾಡಲು ಪ್ರಯತ್ನ ಮಾಡುತ್ತಾರೆ. ಒಟ್ಟಿನಲ್ಲಿ ಅವರು ಆ ಸಮಸ್ಯೆಯಿಂದ ಹೊರ ಬರಲು ಇತರೆ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಬಹುದು.


ಇದನ್ನೂ ಓದಿ: ನಿಮ್ಮ ಜನ್ಮದಿನಾಂಕದಲ್ಲಿ ಈ ಡೇಟ್‌ಗಳಿದ್ರೆ ನಿಮ್ಮ ಲೆಕ್ಕ ಪಕ್ಕಾ! ನೀವು ಬ್ಯುಸಿನೆಸ್‌ಮೆನ್ ಆಗೇ ಆಗ್ತೀರಿ!


12. ಮೀನ ರಾಶಿ


ಈ ರಾಶಿಯ ಜನರು ತಮ್ಮ ಸ್ವಾತಂತ್ರ್ಯವನ್ನು ಇನ್ನೂ ಹೆಚ್ಚು ವ್ಯಕ್ತಪಡಿಸಲು ಮತ್ತು ಮುಂದುವರಿಸಲು ಪ್ರಯತ್ನಿಸುತ್ತಾರೆ. ಕೆಲವು ಕ್ರಿಯೆಗಳು ಸಂಬಂಧಗಳಲ್ಲಿನ ಚಲನಶೀಲತೆಯನ್ನು ಬದಲಾಯಿಸುತ್ತವೆ ಎಂದು ಅವರಿಗೆ ತಿಳಿದಿದ್ದರೂ ಸಹ, ಅದರ ಬಗ್ಗೆ ಅವರು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು