ಸಾಮಾನ್ಯವಾಗಿ ನಾವು ರಾತ್ರಿ ಹೊತ್ತಿನಲ್ಲಿ ಗಾಢವಾಗಿ ನಿದ್ರೆ ಮಾಡುತ್ತಿರುವಾಗ ನಮಗೆ ಅರಿವಿಲ್ಲದಂತೆಯೇ ಬೇರೆಯೊಂದು ಚಿತ್ರಣ ನಮ್ಮ ಸುಪ್ತಮನಸ್ಸಿನಲ್ಲಿ ಮೂಡುತ್ತದೆ. ಇದು ಕೆಲವೊಮ್ಮೆ ನಮಗೆ ಚಿತ್ರಣ ರೂಪದಲ್ಲಿ ಇದ್ದರೆ, ಇನ್ನೂ ಕೆಲವೊಮ್ಮೆ ಅದು ಕಥೆಯ ರೂಪದಲ್ಲಿರುತ್ತದೆ. ರಾತ್ರಿ (Night) ಹೊತ್ತಿನಲ್ಲಿ ನಮಗೆ ಬಿದ್ದ ಕನಸುಗಳು ಕೆಲವೊಂದು ನೆನಪಿರುತ್ತವೆ ಮತ್ತು ಇನ್ನೂ ಕೆಲವು ನೆನಪಿನಲ್ಲಿ ಸಹ ಉಳಿದಿರುವುದಿಲ್ಲ. ಆದರೆ ಇಂತಹ ಕನಸುಗಳ ನಿಖರವಾದ ಅರ್ಥವಾದರೂ ಏನು ಗೊತ್ತೇ? ಕೆಲವು ಕನಸುಗಳನ್ನು (Dream) ಇತರ ಕನಸುಗಳಿಗಿಂತಲೂ ನೆನಪಿಟ್ಟುಕೊಳ್ಳುವುದು ಹೇಗೆ ಸುಲಭವಾಗುತ್ತದೆ ಅನ್ನೋದನ್ನು ಇಲ್ಲಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಇನ್ಸ್ಟಿಟ್ಯೂಟ್ ಫಾರ್ ಡ್ರೀಮ್ ಸ್ಟಡೀಸ್ ನ ಶಿಕ್ಷಣ ನಿರ್ದೇಶಕರಾದ ಜೀವಿಯಾ ಗೋವರ್ ಅವರು “ಪುನರಾವರ್ತಿತ ಕನಸುಗಳು ಕೆಲವೊಮ್ಮೆ ಒತ್ತಡದ ಸಂಕೇತವಾಗಿರಬಹುದು ಅಥವಾ ಇನ್ನೂ ಕೆಲವು ಕನಸುಗಳು ನಮಗೆ ಏನು ಮಾಡಬೇಕೆಂದು ಹೇಳುತ್ತಿವೆ ಅಂತ ಸೂಚಿಸುತ್ತವೆ” ಅಂತ ಹೇಳುತ್ತಾರೆ.
ನೀವು ನಿಮ್ಮ ಕನಸುಗಳನ್ನು ನೆನಪಿಟ್ಟುಕೊಳ್ಳಲು ಬಯಸಿದರೆ, ನೆನಪು ಜಾರುವ ಮೊದಲು ನೀವು ಎದ್ದ ತಕ್ಷಣ ಅವುಗಳನ್ನು ಬರೆಯಲು ಅವರು ಸೂಚಿಸುತ್ತಾರೆ.
ಕನಸು ನಿಜ ಜೀವನದ ಪರಿಸ್ಥಿತಿಯನ್ನು ಅನುಕರಿಸುತ್ತಿದೆಯೇ ಅಥವಾ ಪ್ರಸ್ತುತ ಸಮಸ್ಯೆಯನ್ನು ಎದುರಿಸುವಾಗ ನೀವು ಎಚ್ಚರವಾದಾಗ ಅದೇ ರೀತಿಯ ಭಾವನೆಗಳನ್ನು ಅನುಭವಿಸುತ್ತೀರಾ ಎಂದು ಯೋಚಿಸಿ.
ಕನಸಿನ ಅರ್ಥಗಳ ಬಗ್ಗೆ ಮಾತನಾಡುವಾಗ ಪ್ರೀತಿಯಿಂದ ಹಿಡಿದು ಆತಂಕ ಮತ್ತು ಭಯ ಹುಟ್ಟಿಸುವಂತಹ ಅತ್ಯಂತ ಸಾಮಾನ್ಯವಾದ ಕನಸುಗಳಿಗೆ ಅನೇಕ ವ್ಯಾಖ್ಯಾನಗಳಿವೆ.
ಇದನ್ನೂ ಓದಿ: ಕುಳಿತಲ್ಲೇ ಕಾಲು ಅಲುಗಾಡಿಸುವ ಅಭ್ಯಾಸ ಇದೆಯಾ? ಈ ಎಲ್ಲಾ ಸಮಸ್ಯೆ ಆಗುತ್ತೆ ಎಚ್ಚರ
ವಿಷಯಗಳನ್ನು ಸ್ಪಷ್ಟಪಡಿಸಲು, ನಿಮ್ಮ ಕನಸುಗಳು ನಿಮಗಾಗಿ ಏನು ಅರ್ಥೈಸುತ್ತವೆ ಎಂಬುದನ್ನು ನಿರ್ಧರಿಸಲು ನಾವು ಕ್ಷೇತ್ರದ ತಜ್ಞರೊಂದಿಗೆ ಮಾತನಾಡಿದ್ದೇವೆ. ಆ ಕುರಿತು ಕೆಲ ಮಾಹಿತಿ ಇಲ್ಲಿದೆ ನೋಡಿ.
ನೀವು ಹಾರುತ್ತಿರುವ ಕನಸು ಕಂಡರೆ..
“ನಿಮಗೆ ಬಿದ್ದಿರುವ ಕನಸಿನಲ್ಲಿ ನೀವು ಮರಗಳ ಮೇಲೆ ಹಾರುವಂತೆ ಅಥವಾ ಮಹಡಿಯ ಮೇಲೆ ಹಾರುವಂತಹ ಕನಸುಗಳು ಸಾಮಾನ್ಯವಾಗಿ ಸಂತೋಷ ಮತ್ತು ವಿಮೋಚನೆಯನ್ನು ಅನುಭವಿಸುತ್ತವೆ" ಎಂದು ಗೋವರ್ ಹೇಳುತ್ತಾರೆ.
"ಈ ಕನಸುಗಳನ್ನು ವ್ಯಾಖ್ಯಾನಿಸುವ ಮೊದಲು, ಈ ಅನುಭವವನ್ನು ಸವಿಯುವುದು ಯೋಗ್ಯವಾಗಿದೆ. ನಂತರ ನಿಮ್ಮ ಜೀವನದ ಯಾವುದಾದರೂ ಒಂದು ದೊಡ್ಡ ಸಮಸ್ಯೆ ನಿವಾರಣೆಯಾಗಿ ನೀವು ಮುಕ್ತರಾಗಿರುವಂತೆ ಮತ್ತು ಹಗುರವಾಗಿರುವಂತೆ ಭಾಸವಾಗುತ್ತದೆ" ಎಂದು ಗೋವರ್ ಹೇಳಿದರು.
ಹೇಗಾದರೂ, ನಿಮ್ಮ ಕನಸಿನಲ್ಲಿ ಹಾರುವುದು ದುಃಸ್ವಪ್ನದಂತೆ ಅನ್ನಿಸಿದರೆ, ಇದು ಏಕೆ ಹೀಗೆ ಆಗುತ್ತಿದೆ ಅನ್ನೋದನ್ನು ಪರಿಗಣಿಸುವುದು ಒಳ್ಳೆಯದು ಎಂದು ಗೋವರ್ ಹೇಳುತ್ತಾರೆ.
ಕನಸಿನಲ್ಲಿ ನೀವು ಕೆಳಗೆ ಬಿದ್ದರೆ ಏನರ್ಥ?
ನೀವು ರಾತ್ರಿ ಹೊತ್ತಿನಲ್ಲಿ ಹಾಸಿಗೆಯ ಮೇಲಿಂದ ಕೆಳಗೆ ಬಿದ್ದಂತೆ ಮತ್ತು ಇದ್ದಕ್ಕಿದ್ದಂತೆ ನಿಮ್ಮನ್ನು ಕೆಳಗೆ ಬೀಸಾಡಿದಂತೆ ಕನಸುಗಳು ಬಿದ್ದರೆ, ನೀವು ಥಟ್ ಅಂತ ನಿದ್ರೆಯಿಂದ ಎಚ್ಚರಗೊಳ್ಳುತ್ತೀರಿ.
ವೃತ್ತಿಪರ ಕನಸಿನ ವಿಶ್ಲೇಷಕ ಮತ್ತು "ಡ್ರೀಮ್ ಆನ್ ಇಟ್" ನ ಲೇಖಕ ಲೌರಿ ಕ್ವಿನ್ ಲೋವೆನ್‌ಬರ್ಗ್ ಅವರ ಪ್ರಕಾರ, ಕನಸಿನಲ್ಲಿ ಬೀಳುವುದು ಭಾವನಾತ್ಮಕವಾಗಿ ಅಥವಾ ಆರ್ಥಿಕವಾಗಿ ನಿರಾಶೆಯ ಭಾವನೆಯ ಸಂಕೇತವಾಗಿದೆ.
"ಹೀಗೆ ಕೆಳಗೆ ಬೀಳುವ ಕನಸನ್ನು ನೀವು ಕಂಡರೆ, ಎಚ್ಚರದ ಜೀವನದಲ್ಲಿ ವೇಗವಾಗಿ ತಪ್ಪು ದಿಕ್ಕಿನಲ್ಲಿ ನೀವು ಹೋಗುತ್ತಿರುವದನ್ನು ಇದು ಸೂಚಿಸಬಹುದು. ನಿಮ್ಮ ಆತ್ಮಗೌರವ ಕುಸಿಯುತ್ತಿದೆಯೇ ಅಂತ ನೋಡಿಕೊಳ್ಳಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಅಥವಾ ಹೊಸ ಕೌಶಲ್ಯದ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸಿ, ಅದು ನಿಮ್ಮ ಬಗ್ಗೆ ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ" ಎಂದು ಲೋವೆನ್‌ಬರ್ಗ್ ಅವರು ಹೇಳುತ್ತಾರೆ.
"ಯಾವುದಾದರೂ ಒಂದು ಸಂಬಂಧವು ಮುರಿದು ಬೀಳುತ್ತಿದೆಯೇ? ಇದು ಉಳಿಸಿಕೊಳ್ಳಲು ಯೋಗ್ಯವಾಗಿದೆಯೇ ಅಥವಾ ಸಂಬಂಧದಲ್ಲಿ ನಿಮ್ಮ ಮೌಲ್ಯವನ್ನು ಗೌರವಿಸಲಾಗುತ್ತಿದೆಯೇ ಎಂದು ಮರುಮೌಲ್ಯಮಾಪನ ಮಾಡುವ ಸಮಯ ಇದಾಗಿರಬಹುದು” ಅಂತ ಗೋವರ್ ಹೇಳುತ್ತಾರೆ.
ಕನಸಿನಲ್ಲಿ ಜೇಡಗಳು ಮತ್ತು ಹಾವುಗಳು ಬಂದರೆ ಏನರ್ಥ?
ಗೋವರ್ ಪ್ರಕಾರ, ನಿಮ್ಮ ಕನಸಿನಲ್ಲಿ ಜೇಡಗಳು ಮತ್ತು ಹಾವುಗಳು ಬರುವುದು ಭಯಾನಕವಾಗಿರಬಹುದು, ಆದರೆ ಇದು ಸ್ಪೂರ್ತಿದಾಯಕವಾಗಿರಬಹುದು.
ನೀವು ಜೇಡಗಳು ಅಥವಾ ಹಾವುಗಳನ್ನು ನಿಮ್ಮ ಕನಸಿನಲ್ಲಿ ನೋಡಿ ನಿಮಗೆ ಹೆದರಿಕೆಯಾಗಬಹುದು. ಆದರೆ ನಿಮ್ಮ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಈ ಕನಸುಗಳನ್ನು ನೀವು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡಲು ಇದು ನಿಮಗೆ ಒಂದು ಆಹ್ವಾನವಾಗಿರಬಹುದು.
"ಹಾವಿನ ವಿಷಯದಲ್ಲಿ, ಹಾವು ಭೂಮಿಗೆ ಹೇಗೆ ಹತ್ತಿರವಾಗಿರುತ್ತದೆ ಮತ್ತು ಎಂತಹದೇ ಸಮಯದಲ್ಲಿ ತುಂಬಾನೇ ನೆಲದ ಮೇಲೆ ಉಳಿಯುವುದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ನೀವು ಯೋಚಿಸಬಹುದು" ಎಂದು ಗೋವರ್ ಹೇಳುತ್ತಾರೆ.
"ಅಥವಾ ಬಹುಶಃ ನಿಮ್ಮ ಜೀವನದಲ್ಲಿ ಆಗುವ ಅನೇಕ ಬದಲಾವಣೆಗಳ ಮೂಲಕ ಸುಲಭವಾಗಿ ಚಲಿಸಲು ಸಹಾಯ ಮಾಡಲು ಹಾವಿನ ರೀತಿಯ ಸಾಮರ್ಥ್ಯದ ಅಗತ್ಯವಿದೆ ಅಂತ ನೀವು ತಿಳಿದುಕೊಳ್ಳಬಹುದು” ಅಂತ ಗೋವರ್ ಹೇಳಿದರು.
ನಿಮಗೆ ಕನಸಿನಲ್ಲಿ ಸಿಕ್ಕಿಹಾಕಿಕೊಂಡಂತೆ ಭಾಸವಾಗಬಹುದು
ಕನಸಿನಲ್ಲಿ ನೀವು ಸಿಕ್ಕಿಹಾಕಿಕೊಂಡಿರುವುದು ನಿಜ ಜೀವನದಲ್ಲಿ ನೀವು ಸಿಕ್ಕಿಹಾಕಿಕೊಂಡ ಭಾವನೆಯನ್ನು ಪ್ರತಿಬಿಂಬಿಸುತ್ತದೆ. "ಈ ಕನಸು ನಿಮಗೆ ನಿಮ್ಮ ಪ್ರಸ್ತುತ ಎಚ್ಚರದ ಜೀವನದ ಸಂದರ್ಭಗಳ ದೃಶ್ಯ, ಭಾವನಾತ್ಮಕ ಮತ್ತು ದೈಹಿಕ ಪ್ರಾತಿನಿಧ್ಯವನ್ನು ನೀಡುತ್ತದೆ, ಆದ್ದರಿಂದ ನೀವು ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬಹುದು" ಎಂದು ಲೋವೆನ್‌ಬರ್ಗ್ ಹೇಳುತ್ತಾರೆ.
ನಿಮ್ಮ ಜೀವನದ ಯಾವ ಭಾಗವು ಸಿಲುಕಿಕೊಂಡಿದೆ ಎಂದು ನಿರ್ಧರಿಸಲು ಸಮಯ ತೆಗೆದುಕೊಳ್ಳಲು ಅವರು ಶಿಫಾರಸು ಮಾಡುತ್ತಾರೆ. ಒಂದಕ್ಕಿಂತ ಹೆಚ್ಚು ಇರಬಹುದು ಮತ್ತು ಅದರಿಂದ ನೀವು ಮುಂದಕ್ಕೆ ಹೋಗಲು ಅಥವಾ ಹೊಸ ಹಾದಿಯಲ್ಲಿ ಹೋಗಲು ಸಣ್ಣ ಕ್ರಮಗಳನ್ನು ತೆಗೆದುಕೊಳ್ಳಲು ಇಂದಿನಿಂದಲೇ ಪ್ರಾರಂಭಿಸಿ.
ಕನಸಿನಲ್ಲಿ ನಿಮ್ಮನ್ನು ಯಾರೋ ಬೆನ್ನಟ್ಟಿದಂತಾಗುವುದು..
ಕೆಲವು ಸಂಸ್ಕೃತಿಗಳಲ್ಲಿ, ಕನಸು ಕಾಣುತ್ತಿರುವಾಗ ಓಡುವ ಸಂವೇದನೆ ಹಿಂದಿನ ಪಾಪಗಳಿಂದ ಮುಕ್ತವಾದ ಹೊಸ ಜೀವನವನ್ನು ಪ್ರಾರಂಭಿಸುವ ಪ್ರಯತ್ನವನ್ನು ಸಂಕೇತಿಸುತ್ತದೆ ಎಂದು ಚಾಯ್ಸ್ ಪಾಯಿಂಟ್ ನ ಕ್ಲಿನಿಕಲ್ ನಿರ್ದೇಶಕ ಜೋರ್ಡಿನ್ ಮಾಸ್ಟ್ರೋಡೊಮೆನಿಕೊ ಹೇಳುತ್ತಾರೆ.
ಇದರರ್ಥ ನೀವು ಯಾವುದೊ ಒಂದು ಜವಾಬ್ದಾರಿಯಿಂದ ದೂರಕ್ಕೆ ಓಡಿ ಹೋಗುತ್ತೀರಿ ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಎದುರಿಸುವುದನ್ನು ತಪ್ಪಿಸಲು ನೋಡುತ್ತಿದ್ದೀರಿ ಎಂದರ್ಥ.
"ಈ ಕನಸಿನ ವಿಷಯವೆಂದರೆ ನಮ್ಮನ್ನು ಬೆನ್ನಟ್ಟುತ್ತಿರುವವರು ಅಥವಾ ಯಾರು ನಮ್ಮ ಹಿಂದೆ ಇದ್ದಾರೆ, ಇದು ನಿಜ ಜೀವನದಲ್ಲಿ ಒಂದು ದೊಡ್ಡ ಸುಳಿವು ನೀಡುತ್ತದೆ" ಎಂದು ಲೋವೆನ್‌ಬರ್ಗ್ ಹೇಳುತ್ತಾರೆ.
"ಈ ಕನಸನ್ನು ಬಾರದಂತೆ ನೋಡಿಕೊಳ್ಳುವ ಮಾರ್ಗವೆಂದರೆ ಆ ಸಮಸ್ಯೆಯನ್ನು ಎದುರಿಸುವುದು, ನಿಮ್ಮ ಭೂತಕಾಲವನ್ನು ಎದುರಿಸುವುದು ಆಗಿದೆ” ಎಂದು ಹೇಳುತ್ತಾರೆ.
ಕನಸಿನಲ್ಲಿ ನಿಮ್ಮ ಹಲ್ಲುಗಳು ಉದುರುವುದು
ನಿಮ್ಮ ಕನಸಿನಲ್ಲಿ ಬಾಯಿಯಲ್ಲಿರುವ ಒಂದರ ನಂತರ ಇನ್ನೊಂದು ಹಲ್ಲುಗಳು ಬೀಳುವುದು ಅಥವಾ ಎಲ್ಲಾ ಹಲ್ಲುಗಳು ಒಮ್ಮೆಲೆ ಉದುರುವುದು ದುಃಸ್ವಪ್ನಕ್ಕಿಂತ ಕಡಿಮೆ ಏನಿಲ್ಲ.
"ಇದರ ಅರ್ಥದ ಬಗ್ಗೆ ವಿಭಿನ್ನ ಸಿದ್ಧಾಂತಗಳಿವೆ" ಎಂದು ಗೋವರ್ ಹೇಳುತ್ತಾರೆ. "ಎಲ್ಲಾ ಕನಸಿನ ಚಿತ್ರಣಗಳಂತೆ, ನಿಮಗೆ ನಿಜವಾಗಿರುವ ಏಕೈಕ ವ್ಯಾಖ್ಯಾನವೆಂದರೆ ನಿಮ್ಮ ಜೀವನದಲ್ಲಿ ಒಂದು ಸವಾಲನ್ನು ಅಥವಾ ಅವಕಾಶವನ್ನು ಹಿಡಿದಿಟ್ಟುಕೊಳ್ಳಲು ನೀವು ವಿಫಲರಾಗುತ್ತಿದ್ದೀರಿ" ಎಂದು ನಿಮ್ಮನ್ನು ಕೇಳಿಕೊಳ್ಳುವಂತೆ ಗೋವರ್ ಸಲಹೆ ನೀಡುತ್ತಾರೆ.
ಮಾಸ್ಟ್ರೋಡೊಮೆನಿಕೊ ಪ್ರಕಾರ, ಇದು ನೀವು ಅನುಭವಿಸುತ್ತಿರುವ ಯಾವುದೊ ಒಂದು ಒತ್ತಡ ಅಥವಾ ಆತಂಕವನ್ನು ಸೂಚಿಸುತ್ತದೆ.
ನೀವು ಮುಳುಗಿರುವ ಹಾಗೆ ಕನಸು ಕಂಡರೆ ಈ ಅರ್ಥ ಬರುವುದು ನೋಡಿ
ಲೋವೆನ್‌ಬರ್ಗ್ ಅವರ ಪ್ರಕಾರ, ನೀವು ಭಾವನೆಗಳಲ್ಲಿ ಅಥವಾ ಜವಾಬ್ದಾರಿಗಳಲ್ಲಿ ಸಂಪೂರ್ಣವಾಗಿ ಮುಳುಗಿದಾಗ ಈ ರೀತಿಯ ಮುಳುಗುವ ಕನಸುಗಳು ಬೀಳುತ್ತವೆ.
"ಬೀಳುವ ಕನಸಿನಂತೆ, ಕೆಲವು ಬಾರಿ ನಾವು ನಿಜಜೀವನದಲ್ಲಿ ಸೋಲುವುದು ಅಥವಾ ಇನ್ನೂ ಕೆಲವು ಬಾರಿ ನೀವು ಜೀವನದಲ್ಲಿ ತುಂಬಾನೇ ಉತ್ತುಂಗಕ್ಕೆ ತಲುಪಬಹುದು" ಎಂದು ಅವರು ಹೇಳುತ್ತಾರೆ.
"ನೀರಿನ ಮೇಲ್ಮೈಗೆ ಹೋಗಲು ಅಥವಾ ಮೇಲಕ್ಕೆ ಹೋಗಲು ಪ್ರಯತ್ನಿಸುವಾಗ ನೀವು ಅನುಭವಿಸುವ ಹೋರಾಟದ ಬಗ್ಗೆ ನೀವು ಗಮನ ಹರಿಸಿ. ನಿಮ್ಮ ನಿಜ ಜೀವನದಲ್ಲಿ ಯಾವ ಹೋರಾಟವು ಒಂದೇ ರೀತಿ ಅನಿಸುತ್ತದೆ? ಅದೇ ಸಮಯದಲ್ಲಿ, ಯಾರು ನಿಮಗೆ ಸಹಾಯ ಮಾಡಬಹುದು" ಎಂಬುದರ ಬಗ್ಗೆ ಯೋಚಿಸಿ.
ಕನಸಿನಲ್ಲಿ ಸಾರ್ವಜನಿಕವಾಗಿ ನಗ್ನರಾಗಿರುವುದರ ಅರ್ಥವೇನು?
ಕನಸಿನಲ್ಲಿ ನೀವು ಸಾರ್ವಜನಿಕವಾಗಿ ನಗ್ನರಾಗುವುದರ ಹಿಂದಿನ ಅರ್ಥವೇನು ಅಂತ ನೋಡಿದರೆ, ಯಾರೂ ಉದ್ದೇಶಪೂರ್ವಕವಾಗಿ ಸಾರ್ವಜನಿಕವಾಗಿ ನಿಮ್ಮ ಬಗ್ಗೆ ಕೆಟ್ಟದನ್ನು ಹೇಳುತ್ತಿದ್ದಾರೆ ಎಂದರ್ಥ.
"ಕನಸಿನಲ್ಲಿ ಬಟ್ಟೆಗಳಿಲ್ಲದೆ ನಾವು ನಮ್ಮನ್ನು ನೋಡಿದಾಗ, ಜನರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಕಂಡುಕೊಳ್ಳುತ್ತಾರೆ ಎಂದು ನಾವು ಹೆದರುತ್ತೇವೆ ಎಂದು ಇದು ಸೂಚಿಸುತ್ತದೆ" ಎಂದು ಮಾಸ್ಟ್ರೋಡೊಮೆನಿಕೊ ಹೇಳುತ್ತಾರೆ.
ಕನಸಿನಲ್ಲಿ ಯಾರೋ ಸತ್ತಂತೆ ಬೀಳುವುದು
ನಿಮ್ಮನ್ನು ಅಥವಾ ನೀವು ಪ್ರೀತಿಸುವ ಯಾರಾದರೂ ಸಾಯುವುದನ್ನು ನೋಡುವುದಕ್ಕಿಂತ ಹೆಚ್ಚು ಗೊಂದಲಕಾರಿ ಏನೂ ಇಲ್ಲ. ಅದು ಕನಸಿನಲ್ಲಿ ನೋಡಿದಾಗ ಇನ್ನೂ ಭಯಾನಕವಾಗಿರುತ್ತದೆ.
ಇದನ್ನೂ ಓದಿ: ಮನೆಯಲ್ಲಿಈ ಹೂವು ಒಂದಿದ್ರೆ ಸಾಕು, ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ! ಇಲ್ಲಿದೆ ನೋಡಿ ಸಲಹೆಗಳು
ಎಚ್ಚರಗೊಳ್ಳಲು ತೊಂದರೆಯಾಗುತ್ತಿದ್ದರೂ, ಅವು ನಿಜವಾದ ಸಾವಿಗಿಂತ ಹೆಚ್ಚಾಗಿ ಅಂತ್ಯಗಳ ಸಂಕೇತವಾಗಿ ನಿಲ್ಲುತ್ತವೆ. "ಸಾವು ಜೀವನದ ಅಂತ್ಯವಾಗಿದೆ. ನಮ್ಮ ಕನಸುಗಳು ನಮ್ಮ ಜೀವನದಲ್ಲಿನ ಬದಲಾವಣೆಗಳು ಮತ್ತು ಅಂತ್ಯಗಳನ್ನು ಸಾವಿನ ರೂಪದಲ್ಲಿ ನಮಗೆ ತೋರಿಸುತ್ತವೆ" ಎಂದು ಲೋವೆನ್‌ಬರ್ಗ್ ವಿವರಿಸುತ್ತಾರೆ.
ಬೇರೆ ಯಾರಾದರೂ ಸಾಯುತ್ತಾರೆ ಎಂದು ನೀವು ಕನಸು ಕಂಡರೆ, ಈ ಬದಲಾವಣೆಯು "ಆ ವ್ಯಕ್ತಿಯೊಂದಿಗೆ ಅಥವಾ ಆ ವ್ಯಕ್ತಿಯೊಂದಿಗೆ ನೀವು ಹೊಂದಿರುವ ಸಂಬಂಧದಲ್ಲಿ ಸಂಭವಿಸುತ್ತದೆ" ಅಂತ ಹೇಳುತ್ತಾರೆ.
ಮುಂದಿನ ಬಾರಿ ನೀವು ನಿಮಗೆ ತಿಳಿದಿರುವ ವ್ಯಕ್ತಿಯ ಸಾವಿನ ಬಗ್ಗೆ ಕನಸು ಕಂಡಾಗ, ಅವರೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ಸ್ವಲ್ಪ ಯೋಚಿಸಿ ಮತ್ತು ಇತ್ತೀಚೆಗೆ ಏನಾದರೂ ಬದಲಾಗಿದೆಯೇ ಅಂತ ನೋಡಿಕೊಳ್ಳಿ.
ಕನಸಿನಲ್ಲಿ ಕೊಲೆ ಆಗುವುದು
ಸಾವಿನ ಕುರಿತಾದ ಕನಸುಗಳಿಗಿಂತ ಭಿನ್ನವಾಗಿ, ಕೊಲೆಯು ಅನೇಕ ವೇಳೆ ಬಲವಂತದ ಬದಲಾವಣೆ ಅಥವಾ ಅಂತ್ಯವನ್ನು ಪ್ರದರ್ಶಿಸುತ್ತದೆ. "ಏನು ಬದಲಾಗುತ್ತಿದೆ ಅಥವಾ ಕೊನೆಗೊಳ್ಳುತ್ತಿದೆ ಎಂಬುದನ್ನು ಗುರುತಿಸಿ ಮತ್ತು ನಂತರ ಅದರ ಬಗ್ಗೆ ನೀವು ನಿಜವಾಗಿಯೂ ಹೇಗೆ ಭಾವಿಸುತ್ತೀರಿ ಮತ್ತು ಈ ಬದಲಾವಣೆ ಅಥವಾ ಅಂತ್ಯವು ನಿಮಗೆ ನಿಜವಾಗಿಯೂ ಪ್ರಯೋಜನಕಾರಿಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಆಳವಾಗಿ ಯೋಚಿಸಿ" ಎಂದು ಲೋವೆನ್‌ಬರ್ಗ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ