Astrology: ಮೀನ ರಾಶಿಯವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು: ಇಲ್ಲಿದೆ ದಿನಭವಿಷ್ಯ

Horoscope Today July 26: 26 ಜುಲೈ 2021 ಸೋಮವಾರ: ಶ್ರೀ ಪ್ಲವನಾಮ ಸಂವತ್ಸರ ದಕ್ಷಿಣಾಯಣ - ಗ್ರೀಷ್ಮ ಋತು ಕರ್ಕಾಟಕ ಮಾಸದ ೧೦ ನೇ ದಿನ ತಿಥಿ: (ಆಷಾಢ ಕೃಷ್ಣ) ತೃತೀಯ ಗಂ. 26-55 ನಕ್ಷತ್ರ: ಧನಿಷ್ಠಾ ಗಂ. 10-26 ಯೋಗ: ಸೌಭಾಗ್ಯ ಗಂ. 22-39, ಕರಣ: ವಣಿಜ ಗಂ. 15-25, ವಿಷ್ಟಿ ಗಂ. 26-55. ರಾಹುಕಾಲ : ಬೆಳೆಗ್ಗೆ 07-30 ರಿಂದ 09-00 ಮುಸ್ಲಿಂ ದಿನಾಂಕ : 15 ಜುಲ್ಹಿಜಾ ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

ಈ ದಿನದ 12 ರಾಶಿಗಳ ಭವಿಷ್ಯ ಹೀಗಿದೆ

ಈ ದಿನದ 12 ರಾಶಿಗಳ ಭವಿಷ್ಯ ಹೀಗಿದೆ

  • Share this:
    astrology
    ಈ ದಿನದ 12 ರಾಶಿಗಳ ಭವಿಷ್ಯ ಹೀಗಿದೆ




    ಈ ದಿನ ನಿಮ್ಮ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಕೆಲಸದತ್ತ ಹೆಚ್ಚಿನ ಗಮನ ಹರಿಸುವಿರಿ. ನಿಮ್ಮ ಆರನೇ ಇಂದ್ರಿಯದ ಮಾತಿಗೆ ಬೆಲೆ ಕೊಡುವುದು ಯಶಸ್ಸಿಗೆ ಬಹಳ ಮುಖ್ಯವಾಗಿದೆ.


    ಶ್ರೇಯಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಹೆಚ್ಚಿನ ಸಂತಸ ಸಿಗಲಿದೆ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಇದು ಸಕಾಲವಾಗಿದೆ. ನಡವಳಿಕೆಯನ್ನು ಕೊಂಚ ಹಿಡಿತದಲ್ಲಿಟ್ಟುಕೊಂಡರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವುದು ತಪ್ಪುವುದು.


    ಮಿಥುನ

    ಈ ದಿನ ನಿಮ್ಮ ಅಪರಿಚಿತ ವ್ಯಕ್ತಿಯೊಬ್ಬರು ಅತಿ ಉತ್ತಮ ಉಪಾಯಗಳನ್ನು ಮತ್ತು ಅವರ ಅನುಭವಗಳನ್ನು ನೀಡುವುದಾಗಿ ಹೇಳಿ ನಿಮ್ಮ ಗುರಿಯನ್ನು ತಪ್ಪಿಸುವ ಮಾರ್ಗಕ್ಕೆ ಎಳೆಯಲಿದ್ದಾರೆ, ಜಾಗ್ರತರಾಗಿರಿ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವಿರಿ.


    ನಿಮ್ಮೊಡನೆ ಹರಿದು ಬರುವ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಇಲೆಕ್ಟಿçಕಲ್ ಕಂಟ್ರಾಕ್ಟರುಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ವಿದೇಶಿ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದಗಳನ್ನು ಮಾಡಿಕೊಳ್ಳುವುದು ಬಹಳ ಸಮಂಜಸವಾಗಿ ಕಾಣುವುದಿಲ್ಲ.


    ಇಂಟೀರಿಯರ್ ಡೆಕೊರೇಟರ್ ಕೋರ್ಸ್ ಕಲಿಯುಗುರಿಯನ್ನು ಮುಟ್ಟುವತ್ತ ನಿಮ್ಮ ಹಾದಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡಲ್ಲಿ ನಿಮ್ಮ ಯೋಜನೆಗಳು ನೀವು ಆಲೋಚಿಸಿದಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿರುವುದು. ಸತ್ಯದ ಹಾದಿಗೆ ಯಾವಾಗಲೂ ಅಡೆತಡೆಗಳಿರುತ್ತವೆ ಎಂಬುದನ್ನು ಮರೆಯದಿರಿ. ಅಂತಹ ಆಸೆ ಹೊಂದಿದವರಿಗೆ ಶುಭ ಕಾಲ. ಯೋಗಾಭ್ಯಾಸದಿಂದ ಮನಸ್ಸಿಗೆ ಹಿತವೆನಿಸುವುದು. ದೃಡ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ


    ಇಂದಿನ ನಿಮ್ಮ ನಡವಳಿಕೆ ಎಲ್ಲರ ಕೇಂದ್ರ ಬಿಂದುವಾಗಲಿದೆ. ಈ ದಿನ ಕಂಪನಿಯಲ್ಲಿ ಸಿಗುವ ಗೌರವಮನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸುವುದು ಉತ್ತಮ. ಬಡಗಿ ಕೆಲಸ ಮಾಡುವವರಿಗೆ ಇಂದು ಸುಯೋಗ. ಹಸಿರು ಬಣ್ಣ ಅದೃಷ್ಟ ತರುವುದು.


    ಜಮೀನು ಖರೀದಿ ಅಥವಾ ನಿವೇಶನಗಳ ಖರೀದಿಯ ವ್ಯವಹಾರಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು ಅನಿವಾರ್ಯವಾಗುತ್ತದೆ. ದಾಂಪತ್ಯದಲ್ಲಿ ಬಿರುಕು ಬರದಂತೆ ನೋಡಿಕೊಳ್ಳಿ.


    ನಿಮ್ಮ ಸುಪ್ತ ಮನಸ್ಸು ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸುತ್ತಿದೆ. ಯಾವುದೇ ಪರಿಸ್ಥಿತಿಯಲ್ಲಿಯೂ ನಿಮ್ಮ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡುವುದು ನಿಮ್ಮ ಅಭ್ಯಾಸವಾಗಿರಲಿ. ನಿಮ್ಮ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿ ಪರಿಹಾರವಾಗುವುದು.


    ಧನು

    ನಿಮ್ಮ ಯೋಜನೆಗಳು ಅರ್ಧದಲ್ಲಿಯೇ ನಿಂತಿರುವುದರಿAದ ಆಗಿದ್ದ ನಿರಾಸೆಯು ನಿಮ್ಮ ಆತ್ಮವಿಶ್ವಾಸದಿಂದ ಈ ದಿನ ಸಕಾರಾತ್ಮಕ ತಿರುವು ಪಡೆದುಕೊಳ್ಳಲಿದೆ. ಅದು ನಿಮ್ಮಲ್ಲಿ ಹೆಚ್ಚಿನ ಉತ್ಸಾಹ ಕಾಣಿಸುತ್ತಿದ್ದು ಹೊಸದೊಂದು ಹಾದಿಯಲ್ಲಿ ನಡೆಯಲಿದ್ದೀರಿ.

    ಈ ದಿನ ನೀವು ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ಖರ್ಚು ವೆಚ್ಚಕ್ಕೆ ಸಂಬAಧಿಸಿದAತೆ ಯೋಚಿಸಿ ಹೆಜ್ಜೆ ಇಡುವುದು ಸೂಕ್ತ. ಕಠಿಣ ಪರಿಶ್ರಮದ ಮೂಲಕ ಮೇಲಧಿಕಾರಿಗಳ ಮನವನ್ನು ಗೆಲ್ಲಲು ಪ್ರಯತ್ನಿಸಿ. ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದರಿಂದ ಲಾಭವಿದೆ.


    ಬದುಕನ್ನು ವಿಲಾಸಿಯಾಗಿ ಕಳೆಯುವ ಹೊರತಾಗಿ ಅನೇಕ ಜವಾಬ್ದಾರಿಗಳಿವೆ ಎಂಬುದನ್ನು ಮರೆಯದಿರಿ. ಕ್ಷಣಿಕ ಸುಖಗಳಿಗೆ ಗಮನ ನೀಡದೆ, ಮುಖ್ಯವಾದ ವಿಷಯಗಳ ಬಗ್ಗೆ ಗಂಭೀರವಾಗಿ ಆಲೋಚಿಸುವುದು ನಿಮ್ಮ ಏಳೀಗೆಗೆ ಅಭಿವೃದ್ಧಿಯ ಮೆಟ್ಟಿಲಾಗುವುದು.


    ಇಂದು ನೀವು ಸರಿಯಾದ ಹಾದಿಯಲ್ಲಿಯೇ ನಡೆಯುವಿರಿ. ವಸ್ರ್ತಾಭರಣ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಿಕ್ಕಿ ದೂರ ಪ್ರಯಾಣ ಮಾಡಬೇಕಾಗುವುದು. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಬಹುದು.
    Published by:HR Ramesh
    First published: