Astrology: ಕೋಪಗೊಂಡರೆ ತಮ್ಮ ಮೂಗನ್ನೇ ಕೊಯ್ದುಕೊಳ್ಳುವ ಸ್ಥಿತಿ ಸಿಂಹ ರಾಶಿಯವರದ್ದು! ಹೀಗಿದೆ ಓದಿ ದಿನ ಭವಿಷ್ಯ

ರಾಶಿ ಭವಿಷ್ಯದ ಮಾಹಿತಿಯನ್ನು ಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಪೂಜಾ ಚಂದ್ರ ಅವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಹಾಗಾದ್ರೆ ನಾವು ಇಂದು – ಆಗಸ್ಟ್ 6ನೇ ತಾರೀಕಿನ ಎಲ್ಲಾ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ...

ದಿನ ಭವಿಷ್ಯ

ದಿನ ಭವಿಷ್ಯ

 • Share this:
  ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯದ ಮಾಹಿತಿಯನ್ನು ಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಪೂಜಾ ಚಂದ್ರ ಅವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಹಾಗಾದ್ರೆ ನಾವು ಇಂದು – ಆಗಸ್ಟ್ 6ನೇ ತಾರೀಕಿನ ಎಲ್ಲಾ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.

  ಮೇಷ ರಾಶಿ: ಮಾರ್ಚ್ 21- ಏಪ್ರಿಲ್ 19

  ಇಂದು ನೀವು ನಿಮ್ಮನ್ನು ಸಶಕ್ತಗೊಳಿಸಲು ಮತ್ತು ಹೊಸದನ್ನು ಪ್ರಯೋಗಿಸಲು ಅನುಕೂಲಕರ ದಿನವಾಗಿದೆ. ಕೆಲವು ಸಂಗತಿಗಳ ಬಗ್ಗೆ ನೀವು ತಕ್ಷಣದ ಪರಿಣಾಮದ ಜೊತೆ ಸೂಕ್ತ ಗಮನಹರಿಸಬೇಕು. ಸಂಗಾತಿಯ ಆರೋಗ್ಯದತ್ತ ಸ್ವಲ್ಪ ಗಮನ ಹರಿಸಿ. ಅದೃಷ್ಟ ಚಿಹ್ನೆ - ಸಾಲಿಟೇರ್

   ವೃಷಭ ರಾಶಿ: ಏಪ್ರಿಲ್ 20- ಮೇ 20

  ಇಂದು ನೀವು ನಿಮ್ಮ ಗತಕಾಲದಲ್ಲಿ ನಡೆದು ಹೋಗಿರುವ ಘಟನೆಯನ್ನು ಮೆಲುಕು ಹಾಕಲಿದ್ದೀರಿ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಇನ್ನೂ ಕೆಲವು ಮೈಲಿಗಲ್ಲುಗಳನ್ನು ಸಾಧಿಸಬೇಕಿದೆ. ಮದುವೆ ಮಾತುಕತೆ ಅಂತಿಮಗೊಳಿಸಿ, ಇದು ನಿಮ್ಮ ಕುಟುಂಬದಲ್ಲಿ ಸಂತೋಷ ಹೊತ್ತು ತರಲಿದೆ. ಅದೃಷ್ಟದ ಚಿಹ್ನೆ – ಗರಿ

  ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬದ ಶುಭದಿನ ನಿಮ್ಮ ಸಂಖ್ಯಾಫಲ ಹೇಗಿದೆ? ಇಲ್ಲಿ ಚೆಕ್ ಮಾಡಿ

   ಮಿಥುನ ರಾಶಿ: ಮೇ 21- ಜೂನ್ 21

  ನೀವು ಕೈಗೊಂಡಿರುವ ಕೆಲಸ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಹಾಗಾಗಿ ಈ ಕೆಲಸ ಆಗುವುದಿಲ್ಲ ಎಂದು ಭಾವಿಸಬೇಡಿ. ಯಾವುದಕ್ಕೂ ತಾಳ್ಮೆಯಿಂದ ಇರಿ. ಬೇರೆ ವಿಷಯಗಳತ್ತ ಗಮನ ಕೇಂದ್ರೀಕರಿಸಿ. ಕೆಲಸದ ಸ್ಥಳದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬರಬಹುದು. ಅದೃಷ್ಟದ ಚಿಹ್ನೆ - ಮರದ ಪೆಟ್ಟಿಗೆ

   ಕರ್ಕ ರಾಶಿ: ಜೂನ್ 22- ಜುಲೈ 22

  ನಿಮ್ಮ ಜವಾಬ್ದಾರಿಗಳು ನಿಮಗೆ ನೀಡಿರುವ ಟೈಮ್‌ಲೈನ್‌ ನೆನಪಿಸುತ್ತವೆ. ನೀವು ಕೆಲಸದತ್ತ ಚಿತ್ತ ಕೇಂದ್ರೀಕರಿಸಿ, ಕೆಲಸವನ್ನು ವೇಗಗೊಳಿಸಿ. ಹೊಸ ಅವಕಾಶಗಳು ಬರಲಿದ್ದು, ನೀವು ಕೆಲಸ ಮಾಡಲು ಹೊಸ ಉತ್ಸಾಹ ತರಲಿವೆ. ಯಾವುದಕ್ಕೂ ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯ. ಅದೃಷ್ಟದ ಚಿಹ್ನೆ - ಬಿಳಿ ಚಪ್ಪಡಿ

   ಸಿಂಹ ರಾಶಿ: ಜುಲೈ 23- ಆಗಸ್ಟ್ 22

  ನೀವು ಯಾವುದನ್ನು ತಡೆ ಹಿಡಿಯಲು ಪ್ರಯತ್ನಿಸುತ್ತಿದ್ದೀರೋ ಅದನ್ನು ಅದರಷ್ಟಕ್ಕೆ ಬಿಟ್ಟು ಬಿಡುವ ಸಮಯ ಇದು. ನೀವು ಕೋಪ ಕಡಿಮೆ ಮಾಡಿ. ನೀವು ಪ್ರದರ್ಶಿಸುವ ಅತಿಯಾದ ಕೋಪ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಸ್ನೇಹಪರ ಗೆಸ್ಚರ್ ನಿಮಗೆ ದಿನವನ್ನು ಚೆನ್ನಾಗಿ ಕಳೆಯಲು ಸಹಕರಿಸುತ್ತದೆ. ಅದೃಷ್ಟದ ಚಿಹ್ನೆ - ಜಡೆ ಸಸ್ಯ

   ಕನ್ಯಾ ರಾಶಿ: ಆಗಸ್ಟ್ 23-ಸೆಪ್ಟೆಂಬರ್ 22

  ನೀವು ನಿಮಗಾಗಿ ಗಳಿಸಿರುವ ವಿಷಯಗಳ ಬಗ್ಗೆ ಸೆಲೆಬ್ರೇಷನ್ ಮಾಡುವ ವಿಚಾರ ಯಾವುದೋ ಮೂಲೆಯಲ್ಲಿ ಗಿರಕಿ ಹೊಡೆಯುತ್ತದೆ. ನಿಮ್ಮ ಯೋಜನೆಗಳು ಈಗ ಕಾರ್ಯಗತಗೊಳ್ಳುವ ಸಮಯ. ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಯೋಚಿಸಲು ಮತ್ತು ಪ್ರತಿಬಿಂಬಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ - ಸ್ಟಿಕ್ಕರ್

   ತುಲಾ ರಾಶಿ: ಸೆಪ್ಟೆಂಬರ್ 23- ಅಕ್ಟೋಬರ್ 23

  ಯಾವ ವಿಷಯ ನಿಮ್ಮನ್ನು ವಿಚಲಿತಗೊಳಿಸುತ್ತಿದೆಯೋ, ಅದನ್ನೇ ನೀವು ಮಾಡಲು ಮುಂದಾಗುತ್ತಿದ್ದೀರಿ. ನಿಮ್ಮ ಸಹೋದ್ಯೋಗಿಯು ಹೊಸ ಆದಾಯ ಗಳಿಕೆಯ ಮೂಲ ಸೃಷ್ಟಿಸುವ ಹೊಸ ಐಡಿಯಾ ನೀಡಬಹುದು. ನೀವು ಪ್ರವಾಸ ಹೋಗುವ ಆಲೋಚನೆಯಲ್ಲಿದ್ದರೆ ಶೀಘ್ರದಲ್ಲೇ ಹೋಗಿ ಬನ್ನಿ. ಅದೃಷ್ಟದ ಚಿಹ್ನೆ - ಸೂರ್ಯನ ಬೆಳಕು

   ವೃಶ್ಚಿಕ ರಾಶಿ: ಅಕ್ಟೋಬರ್ 24 - ನವೆಂಬರ್ 21

  ನಿಮಗೆ ಇಂದು ಅದೃಷ್ಟದ ದಿನವಾಗಲಿದೆ. ಇಂದು ನೀವು ನಿಯೋಜಿಸಿದ ಹಾಗೂ ಕೈಗೊಂಡ ಎಲ್ಲಾ ಕಾರ್ಯಗಳು ಕಾರ್ಯಗತಗೊಳ್ಳಲಿವೆ. ಅತಂತ್ರವಾಗಿದ್ದ ಹಣಕಾಸು ವಿಷಯಗಳು ನಿಮ್ಮ ಪರವಾಗಿ ಉತ್ತಮ ಸಂಕೇತ ನೀಡಲಿವೆ. ಅದೃಷ್ಟದ ಚಿಹ್ನೆ - ಹಳದಿ ಮೇಣದಬತ್ತಿ

   ಧನುಸ್ಸು ರಾಶಿ: ನವೆಂಬರ್ 22 - ಡಿಸೆಂಬರ್ 21

  ನೀವು ಯಾವುದೋ ಆಲೋಚನೆಯನ್ನು ಇಟ್ಟುಕೊಂಡು ಓಡುತ್ತಿದ್ದೀರಿ. ಆದರೆ ಎಚ್ಚರಿಕೆ ವಹಿಸಿ, ಅದು ನಿಮಗೆ ವಿರುದ್ಧವಾಗಬಹುದು. ಬಹಳ ಮುಖ್ಯ ಕೆಲಸ ಮಾಡಲು ಧೈರ್ಯದ ಕೊರತೆ ಎದುರಿಸಬಹುದು. ಇಂದು ನಿಮಗೆ ಒತ್ತಡದ ದಿನವಾಗಿದೆ. ಹಾಗೂ ಇದು ನಿಮ್ಮನ್ನು ಕಾಡಲಿದೆ. ಅದೃಷ್ಟದ ಚಿಹ್ನೆ - ಸಿಲಿಕಾನ್ ಅಚ್ಚು

  ಮಕರ ರಾಶಿ: ಡಿಸೆಂಬರ್ 22 - ಜನವರಿ 19

  ಆಶ್ಚರ್ಯಕರ ಸಂಗತಿಗಳು ವಿವಿಧ ರೀತಿಯಲ್ಲಿ ನಿಮಗೆ ಕಾಣಬಹುದು. ಅವುಗಳಲ್ಲಿ ಕೆಲವು ನಿಮಗೆ ಇಷ್ಟ ಇಲ್ಲದಿರಬಹುದು. ನಿಮ್ಮ ವರ್ತನೆಯಿಂದ ಯಾರಿಗಾದರೂ ನೋವುಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಮ್ಮ ಕೋಪವನ್ನು ನೀವು ನಿಯಂತ್ರಿಸಿ. ಸಣ್ಣ ಪ್ರಕರಣವೇ ಆದರೂ ನೀವು ಇಂದು ಹೆಚ್ಚು ಎಚ್ಚರಿಕೆ ವಹಿಸಿ. ಅದೃಷ್ಟದ ಚಿಹ್ನೆ - ಸ್ಫಟಿಕ ಟಂಬ್ಲರ್

   ಕುಂಭ ರಾಶಿ: ಜನವರಿ 20- ಫೆಬ್ರವರಿ 18

  ಪರೀಕ್ಷೆಯ ಫಲಿತಾಂಶಗಳು ನಿರೀಕ್ಷಿತವಾಗಿ ಬರದೇ ಇರಬಹುದು. ಸ್ವಲ್ಪ ಚಾತುರ್ಯ ಮತ್ತು ರಾಜತಾಂತ್ರಿಕತೆಯು ನಿಮ್ಮ ಕೆಲಸ ಪೂರ್ಣವಾಗಲು ಸಹಕರಿಸುತ್ತದೆ. ಇಂದು ನೀವು ಹೆಚ್ಚು ದಣಿಯುತ್ತೀರಿ. ಆದರೆ ದಿನದ ಕೊನೆಯು ಉತ್ತಮವಾಗಿರುತ್ತದೆ. ಅತೀ ವೇಗದ ಚಾಲನೆ ತಪ್ಪಿಸಿ. ಅದೃಷ್ಟ ಚಿಹ್ನೆ - ಒಂದು ಛತ್ರಿ

  ಇದನ್ನೂ ಓದಿ: ಮೀನರಾಶಿಯವರೇ ಎಚ್ಚರ ಬೆನ್ನ ಹಿಂದಿದೆ ಸಮಸ್ಯೆ; ಇಲ್ಲಿದೆ ದಿನಭವಿಷ್ಯ

   ಮೀನ ರಾಶಿ: ಫೆಬ್ರವರಿ 19 - ಮಾರ್ಚ್ 20

  ನಿಮ್ಮ ಸುತ್ತಮುತ್ತಲಿನವರಿಂದ ನೀವು ಸ್ಫೂರ್ತಿ ಪಡೆಯಬಹುದು. ಆದರೆ ಇಂದು ನೀವು ಅಂತರ್ಮುಖಿಯಾಗಿರುವುದು ಉತ್ತಮವಲ್ಲ. ಕೆಲಸದ ಸ್ಥಳದಲ್ಲಿ ಇತರರು ನಿಮ್ಮ ಬಗ್ಗೆ ಆಕಸ್ಮಿಕವಾಗಿ ದೂರು ನೀಡಬಹುದು. ಇಂದಿನ ದಿನವು ನಿಮಗೆ ಸಾಕಷ್ಟು ಒರಟಾಗಿದೆ. ಅದೃಷ್ಟ ಚಿಹ್ನೆ - ನೀಲಿ ಆಕಾಶ
  Published by:renukadariyannavar
  First published: