ಸಂಸ್ಕೃತಿ (Culture)ಆಚಾರ ವಿಚಾರಗಳು ನಮ್ಮ ಹಿರಿಯರಿಂದ ಹಾಗೂ ಪರಂಪರೆಯಿಂದ ಬಂದಿರುವಂತವು, ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳು ಎಲ್ಲೋ ಒಂದು ಕಡೆ ನಶಿಸುತ್ತಿದೆ ಅನ್ನಬಹುದು. ಪ್ರಸ್ತುತ ದಿನಗಳಲ್ಲಿ ಎದ್ದ ತಕ್ಷಣ ಮೊಬೈಲ್ (Mobile)ಫೋನ್ ನೋಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂತಹ ಕೆಲ ಮಂದಿ ಅವುಗಳನ್ನು ಬಿಟ್ಟು ಬೆಳಿಗ್ಗೆ ಕೈಗಳನ್ನು(Hands) ನೋಡಿದ್ರೆ ನಿಮ್ಮ ಆ ದಿನವನ್ನು (Day) ನೀವು ಉತ್ತಮ ದಿನ ಮತ್ತು ಶುಭದಿನವನ್ನಾಗಿ ಕಾಣಬಹುದು. ಬೆಳಿಗ್ಗೆ ಕೈಗಳನ್ನು ನೋಡುವ ಮೂಲಕ ದಿನದ ಆರಂಭವನ್ನು ಮಾಡುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಮಾಡುವುದರಿಂದ, ಸಕಾರಾತ್ಮಕ ಶಕ್ತಿಯನ್ನು (Positive Energy)ಮನಸ್ಸಿನಲ್ಲಿ ಅನುಭವಿಸಲಾಗುತ್ತದೆ, ಒಳ್ಳೆಯ ಆಲೋಚನೆಗಳು ಮತ್ತು ಭಾವನೆಗಳು ಮನಸ್ಸಿನಲ್ಲಿ ಬರುತ್ತವೆ. ಇದರೊಂದಿಗೆ, ಕೆಲಸ ಮಾಡುವ ಸಾಮರ್ಥ್ಯವೂ ಹೆಚ್ಚಾಗುತ್ತದೆ ಮತ್ತು ಸೋಮಾರಿತನವೂ ದೂರಾಗುವುದು..
ಅಂಗೈನಲ್ಲಿ ದೇವತೆಗಳ ವಾಸ
ಅಂಗೈಯಲ್ಲಿ ದೇವರು ಮತ್ತು ದೇವತೆಗಳು ವಾಸಿಸುತ್ತಾರೆ ಎನ್ನುವ ನಂಬಿಕಯೂ ಇದೆ. ಬೆಳಿಗ್ಗೆ ಎದ್ದಾಕ್ಷಣ ಅಂಗೈಯನ್ನು ನೋಡುವುದರಿಂದ, ಈ ದೇವತೆಗಳ ಆಶೀರ್ವಾದ ಸಿಗುತ್ತದೆ. ಇದರೊಂದಿಗೆ ಹಣ, ಆರೋಗ್ಯ ಮತ್ತು ಜೀವನ ಹಾಗೂ ವೃತ್ತಿಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ತೆಗೆದುಹಾಕಲಾಗುತ್ತದೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ, ಏಕೆಂದರೆ ಅಂಗೈಯಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿ ನೆಲೆಸಿರುತ್ತಾರೆ ಎಂದು ಪಂಡಿತರು ಹೇಳುತ್ತಾರೆ. ಆಗಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಪ್ರಾರ್ಥನೆಯಿಂದ ಸಿಗಲಿದೆ ದೇವರ ಆಶೀರ್ವಾದ
ಇನ್ನು ಕರಾಗ್ರೇ ವಸತೇ ಲಕ್ಷ್ಮಿ, ಕರ್ಮಧೇ ಸರಸ್ವತಿ, ಕರ್ಮೂಲೇ ತು ಗೋವಿಂದಾಃ ಪ್ರಭಾತೇ ಕರದರ್ಶನಂ’ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಎಂದರೆ ನನ್ನ ಕೈಗಳ ಮುಂಭಾಗದಲ್ಲಿ ಸಂಪತ್ತಿನ ದೇವತೆ, ಮಧ್ಯದಲ್ಲಿ ಜ್ಞಾನವನ್ನು ನೀಡುವ ತಾಯಿ ಸರಸ್ವತಿ ನೆಲೆಸಿದ್ದಾಳೆ. ಮತ್ತು ಗೋವಿಂದ ಅಂದರೆ ಭಗವಾನ್ ವಿಷ್ಣುವು ಮೂಲದಲ್ಲಿ ನೆಲೆಸಿದ್ದಾನೆ.
ವಿದ್ಯೆಗೆ ಅಧಿದೇವತೆಯಾದ ಸರಸ್ವತಿ, ಬನಕೆ ಅಧಿದೇವತೆಯಾದ ಲಕ್ಷ್ಮಿಯನ್ನು,ಜಯಕ್ಕೆ ಆದಿ ದೇವರಾದ ಶ್ರೀ ಮಹಾವಿಷ್ಣುವನ್ನು ಅಂಗೈಯಲ್ಲಿ ಬಂದು ನೆಲೆಸುವಂತೆ ಪ್ರಾರ್ಥಿಸಿ ಸಮಸ್ತವೂ ಶುಭವೇ ಜರುಗುವಂತೆ ಎಲ್ಲರಿಗೂ ಮಂಗಳವಾಗುವಂತೆ ನನ್ನ ಕೈಯಲ್ಲಿ ನೆಲೆಸಿ ಕಾರ್ಯಗಳನ್ನು ನಿರ್ವಹಿಸು ಎಂದು ಆ ಪರಮೇಶ್ವರನನ್ನು ಪ್ರಾರ್ಥನೆ ಮಾಡುವುದರಿಂದ ಆ ಮೂರು ಜನ ನಿಮ್ಮನ್ನು ಮುಂದೆ ನಡೆಸಿ ನಿಮಗೆ ಆ ದಿನ ಶುಭವಾಗುವಂತೆ ಮಾಡುತ್ತಾರೆ ಎಂಬುವ ನಂಬಿಕೆ ಕೂಡ ಬಹಳಷ್ಟು ಜನರಿಗೆ ಇದೆ.
ಇದನ್ನೂ ಓದಿ: ಕೈಯಲ್ಲಿನ ಈ ರೇಖೆಯ ಪರಿಣಾಮವಾಗಿ ವಿದೇಶ ಪ್ರವಾಸದ ಭಾಗ್ಯ ಅಂತೆ!
ಅಂಗೈ ರೇಖೆಗಳಿಂದ ಅದೃಷ್ಟ
ಋಷಿ ಮುನಿಗಳು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ಹಸ್ತದ ದರ್ಶನವನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಜ್ಯೋತಿಷ್ಯದಲ್ಲಿ, ಅಂಗೈಯಲ್ಲಿ ಮಾಡಿದ ರೇಖೆಗಳನ್ನು ಅದೃಷ್ಟದೊಂದಿಗೆ ಸಂಪರ್ಕಿಸುವ ಮೂಲಕ ನೋಡಲಾಗುತ್ತದೆ. ಕಣ್ಣು ತೆರೆದ ತಕ್ಷಣ ಮೊದಲು ನಿಮ್ಮ ಅಂಗೈಗಳನ್ನು ನೋಡಿಕೊಳ್ಳಬೇಕು. ಅಂಗೈಗಳಲ್ಲಿ ಮೂಡಿರುವ ರೇಖೆಗಳು ಅದೃಷ್ಟವನ್ನು ತಂದುಕೊಡುತ್ತವೆ ಎನ್ನಲಾಗುತ್ತೆ.
ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿ
ಗೋ ಮಾತೆ ದರ್ಶನ: ನೀವು ಬೆಳಗ್ಗೆ ಎದ್ದ ತಕ್ಷಣ ಗೋ ಮಾತೆಯ ದರ್ಶನ ಮಾಡಿದರೆ ಗೋವಿನಲ್ಲಿ ಅಷ್ಟ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಅದಕ್ಕಾಗಿ ಬೆಳಿಗ್ಗೆ ಗೋವಿನ ದರ್ಶನ ಮಾಡಿದ್ದರೆ ಅಷ್ಟ ದೇವತೆಗಳ ದರ್ಶನ ಮಾಡಿದ ಪುಣ್ಯ ದೊರಕುತ್ತದೆಯಂತೆ.
ಭೂಮಿ ತಾಯಿ ಹಾಗೂ ಸೂರ್ಯನಿಗೆ ನಮಸ್ಕಾರ: ಬೆಳಿಗ್ಗೆ ಎದ್ದ ತಕ್ಷಣ ಭೂಮಿ ತಾಯಿ ಹಾಗೂ ಸೂರ್ಯನಿಗೆ ನಮಸ್ಕರಿಸಬೇಕು. ಹಾಗೆ ತುಳಸಿ ಗಿಡಕ್ಕೂ ಕೂಡ ನಮಸ್ಕರಿಸಬಹುದು. ಇದರಿಂದ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಹಾಗೇ ಅಗ್ನಿ, ಜಲವನ್ನು ನೋಡಿದರೆ ಆ ದಿನ ಒಳ್ಳೆದಾಗುತ್ತದೆ.
ದೇವರುಗಳ ಫೋಟೋ: ದೇವರುಗಳ ಫೋಟೋ, ನರಿ, ಕುದುರೆ, ತೆಂಗಿನಮರ, ಬಾಳೆಗಿಡ, ತುಳಸಿಗಿಡ, ಫಲ ನೀಡುವ ಯಾವುದೇ ನೀರು, ಮರಗಳನ್ನು ನೋಡಬಹುದು.
ಇದನ್ನೂ ಓದಿ: ಯಾರ ಅಂಗೈಯಲ್ಲಿ ಈ ರೇಖೆಗಳು ಇರುತ್ತವೋ ಅವರಿಗೆ ಅದೃಷ್ಟ ಒಲಿಯೋದು ಪಕ್ಕಾ..!
ಬೆಳಗ್ಗೆ ಏನನ್ನು ನೋಡಬಾರದು..?
*ಬೆಳಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಹರಡಿಕೊಂಡ ಹೆಂಡತಿಯನ್ನು ನೋಡಬಾರದು.
*ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು.
*ಪ್ರಾಣಿಗಳ ಅದರಲ್ಲೂ ಕ್ರೂರ ಪ್ರಾಣಿಗಳ ಪೋಟೋವನ್ನು ನೋಡಲೇಬಾರದು.
*ಚಪ್ಪಲಿ, ಪೊರಕೆಯನ್ನು ನೋಡಬಾರದು.
* ಕನ್ನಡಿ ಹಾಗೂ ತೊಳೆಯದ ಪಾತ್ರೆಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ