Vaastu Tips: ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಈ ಬದಲಾವಣೆ ಮಾಡಿ , ಒತ್ತಡದಿಂದ ಮುಕ್ತಿ ಪಡೆಯಿರಿ

Feng Shui Method: ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮುಖ್ಯವಾಗಿ ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಬದಲಾಯಿಸಿ. ಕೆಲ ವಸ್ತುಗಳು ನಿಮಗೆ ಸಂತೋಷವನ್ನು ನೀಡುತ್ತಿಲ್ಲ ಎಂದು ಅನಿಸಿದರೆ ಅದನ್ನು ಬಳಕೆ ಮಾಡಬೇಡಿ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಮನೆಯಲ್ಲಿನ ಸಣ್ಣ ಬದಲಾವಣೆಗಳು ಉತ್ತಮ ಫಲಿತಾಂಶ ನೀಡುತ್ತದೆ. ಕೆಲವು ಸರಳ ವಸ್ತುಗಳಿಂದ ಅಲಂಕರಿಸಲ್ಪಟ್ಟ ಕೋಣೆ, ಆರಾಮದಾಯಕ ಕುರ್ಚಿ, ಕಲ್ಲಿನ ನೆಲ ಹೀಗೆ ಮನೆ ವಿಭಿನ್ನವಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಒತ್ತಡ ಸಾಮಾನ್ಯವಾಗಿದೆ. ಕೆಲಸದ ಒತ್ತಡದ(Stress) ಜೊತೆ ಮನೆಯಲ್ಲಿ ಹಲವು ಸಮಸ್ಯೆಗಳು ಆ ಒತ್ತಡವನ್ನು ಹೆಚ್ಚು ಮಾಡುತ್ತದೆ. ನಿಮ್ಮ ಮನೆಯಲ್ಲಿ ಕೆಲ ವಸ್ತುಗಳನ್ನು ಬದಲಾವಣೆ ಮಾಡಿದರೆ ನಿಮ್ಮ ಒತ್ತಡ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ನಮ್ಮಲ್ಲಿ ಒತ್ತಡ ಹೆಚ್ಚಾದಾಗ ನಾವು ಸ್ಥಳ ಬದಲಾವಣೆ ಮಾಡುತ್ತೇವೆ. ಪಾರ್ಕ್ ಅಥವಾ ಟ್ರಿಪ್ ಹೀಗೆ ಸ್ವಲ್ಪ ರಿಲ್ಯಾಕ್ಸ್ ಆಗುತ್ತೇವೆ.  ಒತ್ತಡ ನಿವಾರಣೆಗೆ ಫೆಂಗ್ ಶೂಯಿಯ(Feng-Shui) ವಿಧಾನವನ್ನು ಬಳಸುವುದು ಎರಡು ವಿಧಗಳಲ್ಲಿ ಕೆಲಸ ಮಾಡುತ್ತದೆ.

ಮೊದಲಿಗೆ, ಫೆಂಗ್ ಶೂಯಿ ಮನೆ ನಿಮಗೆ ವಿಶ್ರಾಂತಿಗೆ ಸಹಾಯ ಮಾಡುತ್ತದೆ, ಒತ್ತಡ ನಿವಾರಣೆ ಮಾಡುವುದರಲ್ಲಿ ಇದು ಮುಖ್ಯ ಪಾತ್ರವಹಿಸುತ್ತದೆ. ಎರಡನೆಯದು, ನೀವು ಫೆಂಗ್ ಶೂಯಿ ತತ್ವಗಳನ್ನು ನಿಮ್ಮ ಮನೆಯಲ್ಲಿ ಅನುಸರಿಸಿದಾಗ  ಅದು ನಿಮ್ಮ ಪರಿಸರದ ಮೇಲೆ ನಿಯಂತ್ರಣವನ್ನು  ಪಡೆಯಲು ಸಹಾಯ ಮಾಡುತ್ತದೆ. ಹೀಗೆ ನಿಯಂತ್ರಣ ಲಭಿಸಿದಾಗ ಒತ್ತಡ ಸಾಮಾನ್ಯವಾಗಿ ಕಡಿಮೆಯಾಗುತ್ತದೆ.

ಫೆಂಗ್ ಶೂಯಿಯ ವ್ಯವಸ್ಥೆಯು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಮಾನಸಿಕ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮುಖ್ಯವಾಗಿ ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಬದಲಾಯಿಸಿ. ಕೆಲ ವಸ್ತುಗಳು ನಿಮಗೆ ಸಂತೋಷವನ್ನು ನೀಡುತ್ತಿಲ್ಲ ಎಂದು ಅನಿಸಿದರೆ ಅದನ್ನು ಬಳಕೆ ಮಾಡಬೇಡಿ.

ಇದನ್ನೂ ಒದಿ: ಯಾವ ಬೆರಳಿಗೆ ಯಾವ ಉಂಗುರ ಧರಿಸಬೇಕು ಗೊತ್ತಾ?

ಬೇರೆ ಕೋಣೆಗಳಿಗಿಂತ ನಿಮ್ಮ ಮಲಗುವ ಕೋಣೆಯಲ್ಲಿ ನೀವು ಹೆಚ್ಚು ಸಮಯ ಕಳೆಯುತ್ತೀರ. ನೀವು ಈ ಕೋಣೆಗೆ ಫೆಂಗ್ ಶೂಯಿ ತತ್ವಗಳನ್ನು ಅನ್ವಯಿಸಿದಾಗ ಒಳ್ಳೆಯ ಫಲಿತಾಂಶ ಸಿಗುತ್ತದೆ. ನೀವು ಮಾಡಬೇಕಾಗಿರುವುದಿಷ್ಟೇ, ಅದು ಎಷ್ಟು ಕಷ್ಟವಾಗಿದ್ದರೂ, ನಿಮ್ಮ ಟಿವಿ, ಫೋನ್ ಮತ್ತು ರೇಡಿಯೊವನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬೇಡಿ. ಈ ಸಾಧನಗಳು ವಿದ್ಯುತ್ಕಾಂತೀಯ ತರಂಗಗಳನ್ನು ಹೊರಸೂಸುತ್ತವೆ, ಇದು ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ಸಾಬೀತಾಗಿದೆ. ನಿಮ್ಮ ಹಾಸಿಗೆ ಮುಖ್ಯ ಬಾಗಿಲಿಗೆ ನೇರವಾಗಿರಬಾರದು. ನಿಮ್ಮ ಹಾಸಿಗೆಯ ಕೆಳಗೆ ಇರುವ ಎಲ್ಲವನ್ನೂ ತೆಗಿಯಿರಿ, ಅದು ರಾತ್ರಿ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ನಿಮ್ಮ ಮನೆಯಲ್ಲಿ ನಿಂತಿರುವ ಗಾಳಿಯನ್ನು ಹೋಗಲಾಡಿಸಲು ಆಗಾಗ ಕಿಟಕಿ ತೆರೆಯುತ್ತಿರಿ, ಒಂದೆ ತರಹದ ಗಾಳಿ ಸುತ್ತಲು  ಇದ್ದರೆ, ಅದು ಒತ್ತಡವನ್ನು ಹೆಚ್ಚು ಮಾಡುತ್ತದೆ.

ಮನಸ್ಸು ನೆಮ್ಮದಿಯಾಗಿರಲು ನಿಮ್ಮ ಮನೆಯಲ್ಲಿ ಬಣ್ಣವನ್ನು ಬದಲಾಯಿಸಿ ನೋಡಿ. ನಿಮ್ಮ ಗೋಡೆಗಳಿಗೆ ಬಣ್ಣ ಹಚ್ಚಿ, ಅಥವಾ ನೀವು ಗೊಡೆಗಳ ಮೇಲೆ ಚಿತ್ರವನ್ನು ಸಹ ಬರೆಯಬಹುದು. ಹಸಿರು  ಬಣ್ಣವನ್ನು ಹೆಚ್ಚು ಬಳಕೆ ಮಾಡಬಹುದು, ಅದರಲ್ಲಿ ಒತ್ತಡವನ್ನು ಗುಣಪಡಿಸುವ ಮತ್ತು ಮನಸ್ಸನ್ನು ಶಾಂತಗೊಳಿಸುವ ಶಕ್ತಿಗಳು ಹೊರಹೊಮ್ಮುತ್ತದೆ. ಮುಖ್ಯವಾಗಿ ಈ ಬಣ್ಣವನ್ನು ನಿಮ್ಮ ಬೆಡ್​ ರೂಂನಲ್ಲಿ ಬಳಕೆ ಮಾಡುವುದು ಉತ್ತಮ.  ಇನ್ನು ನೀಲಿ ಬಣ್ಣ ಮಾನಸಿಕವಾಗಿ ವಿಶ್ರಾಂತಿ ನೀಡುತ್ತದೆ ಮತ್ತು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಒತ್ತಡದಿಂದ ದೂರ ಮಾಡುತ್ತದೆ.

ಕೆಲ ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.

ಫೆಂಗ್ ಶುಯಿ ವಿಧಾನದಲ್ಲಿ  ಬಿದಿರಿಗೆ ಬಹಳ  ಮಹತ್ವ ಇದೆ. ಮನೆಯಲ್ಲಿ ಟೇಬಲ್ ಮೇಲೆ ಬಿದಿರಿನ ಗಿಡ  ಇದ್ದರೆ ಇದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ರಾಶಿಯವರಿಗೆ ಇಂದು ಹೊಸ ವಾಹನ ಖರೀದಿ ಯೋಗ: ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಮನೆಯಲ್ಲಿಪೀಸ್ ಲಿಲ್ಲಿ ಗಿಡ ಬೆಳೆಸುವುದು ಬಹಳ ಪ್ರಯೋಜನವನ್ನು ನೀಡುತ್ತದೆ. ಆಫೀಸ್ ಅಥವಾ ಮನೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿದ್ದರೆ ಕೆಲಸದ ನಡುವೆ ಬ್ರೇಕ್ ತೆಗೆದುಕೊಂಡು ಸ್ವಲ್ಪ ಹೊತ್ತು ಪೀಸ್ ಲಿಲ್ಲಿ ಗಿಡ ನೋಡಿ.  ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಮನಸು ನಿರಾಳವಾಗುತ್ತದೆ.
Published by:Sandhya M
First published: