Navaratri Special: ವಿಜಯದಶಮಿ ದಿನ ಶಮಿ ಮರವನ್ನು ಪೂಜಿಸುವುದು ಏಕೆ ಗೊತ್ತಾ? ಈ ದಿನ ಮಹತ್ವವೇನು?

Vijayadashami: ಉತ್ತರ ಭಾರತದಲ್ಲಿ ಆಶ್ವಯುಜ ಮಾಸದ ಮೊದಲ ದಿನದಂದು ಬಾರ್ಲಿ ಬೀಜಗಳನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿಡುತ್ತಾರೆ. ವಿಜಯದಶಮಿಯ ದಿನ ಮೊಳಕೆಗಳು ಬಂದಿರುವ ಈ ಬಾರ್ಲಿಗಳನ್ನು ನೆಡುತ್ತಾರೆ. ಅವರ ಸಂಪ್ರದಾಯದಲ್ಲಿ ಇವು ಅದೃಷ್ಟವನ್ನು ತರುವ ಸಸಿ ಎಂಬ ನಂಬಿಕೆ .

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಜಯದಶಮಿ(Vijayadashami) ನವರಾತ್ರಿಯ(Navaratri) ಕೊನೆಯ ದಿನ. ಈ ಇದನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ರಾಜಮಹಾರಾಜರಿಗೆ ಸಹ ಬಹಳ ಪ್ರಮುಖವಾದ ದಿನ. ಆದರೆ ಇಷ್ಟಕ್ಕೂ ವಿಜಯದಶಮಿಯನ್ನು ನವರಾತ್ರಿಯ ಹತ್ತನೇ ದಿನದಂದು ಏಕೆ ಆಚರಣೆ ಮಾಡಲಾಗುತ್ತದೆ. aದರ ಮಹತ್ವವೇನು ಎಂಬುದು ಗೊತ್ತಾ?. ಈ ದಿನ ನಮ್ಮ ಪುರಾಣ ಹಾಗೂ ಮಹಾಕಾವ್ಯಗಳ ಜೊತೆ ಸಂಬಂಧವನ್ನು ಹೊಂದಿದೆ. ಈ ವಿಜಯದಶಮಿ ಹಿಂದುಗಳ ಪ್ರಮುಖ ದಿನ ಎಂದು ಹೇಳಲಾಗುತ್ತದೆ.

ವಿಜಯದಶಮಿ ಕಥೆ

ರಾಮನು ಅಶ್ವಿನ ಮಾಸದ ವೇಳೆ ಸಮುದ್ರ ತಟದಲ್ಲಿ  ದುರ್ಗಾ ದೇವಿಯ ಹೊಸ ರೂಪಗಳನ್ನು ಪೂಜಿಸಲು ಆರಂಭಿಸಿದನು. ಆತನ ಪೂಜೆಯಿಂದ ಸಂತೋಷಗೊಂಡ ದುರ್ಗಾ ದೇವಿಯು 9 ನೇ ದಿನದಂದು ರಾಮನಿಗೆ ವಿಜಯವನ್ನು ಆನುಗ್ರಹಿಸಿದ್ದಳು ಎಂದು ಹೇಳಲಾಗುತ್ತದೆ. ದುರ್ಗೆಯ ಅನುಗ್ರಹದಿಂದ ರಾಮನು ಹತ್ತನೇ ದಿನ = ರಾವಣನ ವಿರುದ್ದ ಜಯಗಳಿಸುತ್ತಾನೆ. ಅಂದಿನಿಂದ ನವರಾತ್ರಿ ಪೂಜೆಯ ನಂತರ ಹತ್ತನೇ ದಿನವನ್ನು ವಿಜಯದಶಮಿ ಎಂದು ಹಾಗೂ  ಅಧರ್ಮದ ವಿರುದ್ಧ ಧರ್ಮವು ಜಯ ಸಾಧಿಸಿರುವ ದಿನವೆಂದು ಆಚರಿಸಲಾಗುತ್ತದೆ. ಈ ಕಾರಣದಿಂದ ವಿವಿಧ ಪ್ರದೇಶಗಳಲ್ಲಿ ಈ ದಿನ ರಾವಣನ ಪ್ರತಿಕೃತಿಯನ್ನು ದಹನ ಮಾಡಲಾಗುತ್ತದೆ.

ಪುರಾಣಗಳ ಪ್ರಕಾರ, ಮಹಿಷಾಸುರ ಎಂಬ ರಾಕ್ಷಸ ಅಮರನಾಗಲು ತೀವ್ರ ತಪಸ್ಸು ಮಾಡುತ್ತಾನೆ, ಆದರು ಸಹ ಬ್ರಹ್ಮ ದೇವರು ಅವನಿಗೆ ಅದು ಸಾಧ್ಯವಿಲ್ಲ ಎಂದು ಹೇಳಿದಾಗ, ರಾಕ್ಷಸನು ಅವನ ಕೋರಿಕೆಯನ್ನು ಬದಲಾಯಿಸಿ,  ಅವನನ್ನು ಕೊಲ್ಲಬೇಕಾದರೆ, ಅದು ಮಹಿಳೆಯಿಂದ ಆಗಬೇಕೆಂದು ವರ ಕೇಳುತ್ತಾನೆ.ಮಹಿಷಾಸುರನು ತನ್ನನ್ನು ಕೊಲ್ಲುವಷ್ಟು ಬಲಶಾಲಿ ಮಹಿಳೆ ಜನಿಸಲು, ಇರಲು ಸಾಧ್ಯವಿಲ್ಲ ಎನ್ನುವ  ಆಲೋಚನೆಯಲ್ಲಿ ಈ ವರವನ್ನು ಬೇಡುತ್ತಾನೆ. ಆದರೆ ತಾಯಿ ಮಹಿಷಾಸುರನನ್ನ ವಧಿಸುತ್ತಾಳೆ. ಅಷ್ಟೇ ಅಲ್ಲದೇ ತಾಯಿ ದುರ್ಗೆ ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ, ಮಹಿಷಾಸುರ ಸೇರಿದಂತೆ ಅನೇಕ ರಾಕ್ಷಸರನ್ನು ಸಂಹರಿಸಿ ವಿಜಯೋತ್ಸವ ಸಾಧಿಸಿದ ದಿನವೇ ವಿಜಯದಶಮಿ.ಎಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: :ಆಯುಧ ಪೂಜೆಯ ದಿನ ವಾಹನಗಳಿಗೆ ಯಾಕೆ ಪೂಜೆ ಮಾಡ್ತಾರೆ? ಈ ಆಚರಣೆಯ ಮಹತ್ವವೇನು?

ಎಲ್ಲೆಲ್ಲಿ ಹೇಗೆ ಆಚರಣೆ ಮಾಡಲಾಗುತ್ತದೆ?

ಉತ್ತರ ಭಾರತದಲ್ಲಿ ಆಶ್ವಯುಜ ಮಾಸದ ಮೊದಲ ದಿನದಂದು ಬಾರ್ಲಿ ಬೀಜಗಳನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿಡುತ್ತಾರೆ. ವಿಜಯದಶಮಿಯ ದಿನ ಮೊಳಕೆಗಳು ಬಂದಿರುವ ಈ ಬಾರ್ಲಿಗಳನ್ನು ನೆಡುತ್ತಾರೆ. ಅವರ ಪ್ರಕಾರ ಇವು ಅದೃಷ್ಟವನ್ನು ತರುವ ಸಸಿಗಳಾಗಿರುತ್ತವೆಯಂತೆ.  ಇನ್ನು ಕರ್ನಾಟಕದಲ್ಲಿ ಮೈಸೂರು ದಸರಾ ಉತ್ಸ ಹೆಚ್ಚು ಪ್ರಸಿದ್ಧ . ಇಲ್ಲಿ ಈ ದಿನ ದೇವರನ್ನು ಆರಾಧಿಸಿ ಪೂಜೆಗಳನ್ನು ಮಾಡಲಾಗುತ್ತದೆ.

ಶಮಿ ವೃಕ್ಷ ಪೂಜೆಯ ಮಹತ್ವ

ಶಮಿ ಮರವು ನಮ್ಮ ಹಲವಾರು ಕಷ್ಟಗಳಿಗೆ ಪರಿಹಾರ ನೀಡುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ನಿಮಗೆ  ಜೀವನದಲ್ಲಿ ಹೆಚ್ಚು ಕಷ್ಟವಿದ್ದು,  ಯಶಸ್ಸು ಸಿಗದಿದ್ದರೆ ಅಥವಾ ನಿಮ್ಮ ಅದೃಷ್ಟ ಸರಿಯಿಲ್ಲ ಎಂದು ನೀವು ಭಾವಿಸಿದ್ದರೆ,  ವಿಜಯದಶಮಿಯಂದು ಶಮಿ ಮರವನ್ನು ಪೂಜಿಸಿ. ಇದರ ನಂತರ, ಅದರ ಕೆಲವು ಎಲೆಗಳನ್ನು ನಿಮ್ಮ ಜೊತೆ ಯಾವಾಗಲೂ ಇಟ್ಟುಕೊಳ್ಳಿ, ಇದು ನಿಮ್ಮ ಬದುಕಿನ ಕಷ್ಟಗಳನ್ನು ನಿವಾರಿಸಿ , ಯಶಸ್ಸು ಲಭಿಸಲು ಸಹಕಾರಿಯಾಗುತ್ತದೆ.

ಇನ್ನು ನಿಮಗೆ ಆರೋಗ್ಯ ಸಮಸ್ಯೆ ಇದ್ದಲ್ಲಿ, ಈ ಶಮಿ ಮರದ ಎಲೆಗುಳು ಪರಿಹಾರ ನೀಡುತ್ತವೆ ಎಂಬ ನಂಬಿಕೆ ಇದೆ.  ದಸರಾ ದಿನದಂದು ಶಮಿ ಮರವನ್ನು ಪೂಜಿಸಿ. ಇದರ ನಂತರ, ಅದರ ಸಣ್ಣ ಮರದ ತುಂಡನ್ನು ಕಪ್ಪು ದಾರದಲ್ಲಿ ಸುತ್ತಿ ಮತ್ತು ಅದನ್ನು ನಿಮ್ಮ ಕುತ್ತಿಗೆಗೆ ಧರಿಸಿ. ಹೀಗೆ ಮಾಡುವುದರಿಂದ ನಿಮಮ್ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಶಮಿ ವೃಕ್ಷದ ಶ್ಲೋಕ
ಬನ್ನಿ ಪತ್ರೆಯನ್ನು ಮನೆಗೆ ತಂದ ನಂತರ ತಾಯಿ ದುರ್ಗೆಯನ್ನು ನೆನೆದು ಪೂಜಿಸಿ. ಹೀಗೆ ಪೂಜಿಸುವಾಗ ಈ ಕೆಳಗೆ ಸೂಚಿಸಲಾಗಿರುವ ಶ್ಲೋಕವನ್ನು ಪಠಿಸಿ.
"ಶಮೀ ಶಮೀಯತೇ ಪಾಪಂ ಶಮೀ ಶತ್ರುವಿನಾಶಿನೀ

ಇದನ್ನೂ ಓದಿ: ಕಾಲರಾತ್ರಿಯ ಆರಾಧನೆ ಮಾಡುವುದರಿಂದ ಜೀವನದಲ್ಲಿ ಭಯ ನಿವಾರಣೆಯಾಗುತ್ತದೆ, ತಾಯಿಯ ಪೂಜಾ ವಿಧಿ-ವಿಧಾನ ಇಲ್ಲಿದೆ

ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ
ತತ್ರ ನಿರ್ವಿಘ್ನಕತ್ರಿತ್ವಂ ಭವ ಶ್ರೀರಾಮಪೂಜಿತಾ||"
Published by:Sandhya M
First published: