Personality Of Taurus: ಈ ರಾಶಿಯವರು ಬದುಕಲು ತಿನ್ನುವುದಿಲ್ಲ, ತಿನ್ನಲು ಬದುಕುತ್ತಾರೆ.. ಯಾವುದು ಗೊತ್ತಾ ಈ ರಾಶಿ?

Astrology: ನೀವು  ಯಾವುದಾದರೂ  ಕೆಲಸ ಮಾಡಲು  ನಿರ್ಧರಿಸಿದರೆ ವೃಷಭ ರಾಶಿಯವರನ್ನು ಕೇಳಿ. ಅವರನ್ನು ಸೋಲಿಸುವ ಯಾವುದೇ ಕೆಲಸ ಅಥವಾ ಸವಾಲು ಇಲ್ಲವೇ ಇಲ್ಲ ಎಂದು ಹೇಳಲಾಗುತ್ತದೆ.  ಅವರು ಯಾವುದೇ ಕೆಲಸವನ್ನು ಬೇಕಾದರೂ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.  ಸ್ಥಿರತೆ, ತಾಳ್ಮೆ  ಹೆಚ್ಚಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವೃಷಭ ರಾಶಿ (Taurus)ಎಂದರೆ ಹೆಚ್ಚು ತಪ್ಪಾಗಿ ಅರ್ಥ ಮಾಡಿಕೊಂಡಿರುವ ರಾಶಿಗಳಲ್ಲಿ ಒಂದು. ಅನೇಕ ಜನರು  ವೃಷಭ ರಾಶಿಯವರನ್ನು ನಿರಾಶಾದಾಯಕ, ಸೋಮಾರಿ (Lazy)ಮತ್ತು ಅತ್ಯಂತ ಹಠಮಾರಿ ಎಂದು ಭಾವಿಸಿದ್ದಾರೆ. ಖಂಡಿತವಾಗಿಯೂ  ಅವರು ಕೆಲವೊಮ್ಮೆ ಈ ರೀತಿ  ವರ್ತನೆ ಮಾಡುತ್ತಾರೆ. ಆದರೆ ವಾಸ್ತವವಾಗಿ  ಅವರ ನಡವಳಿಕೆಗಳು ಬೌದ್ಧಿಕ ಮತ್ತು ವಿಶ್ಲೇಷಣಾತ್ಮಕವಾಗಿರುತ್ತದೆ.  

ವೃಷಭ ರಾಶಿಯವರು, ಏಪ್ರಿಲ್ 21 ಮತ್ತು ಮೇ 21 ರ ನಡುವೆ ಜನಿಸಿದವರು. ಇವರು , ಪ್ರೀತಿ, ಜೀವನ, ಹಣ, ಕೆಲಸ, ಹವಾಮಾನ, ಎಲ್ಲ ವಿಷಯಗಳ ಬಗ್ಗೆ ಆಳವಾಗಿ ಆಲೋಚನೆ ಮಾಡುತ್ತಾರೆ. ಅವರು ಪರಿಸ್ಥಿತಿಯನ್ನು  ಎಚ್ಚರಿಕೆಯಿಂದ  ಅವಲೋಕಿಸಿ, ಹೇಗೆ ಕೆಲಸ ಮಾಡುತ್ತದೆ ಹಾಗೂ ಜನರು ಏನು ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಅವರು ಸೋಮಾರಿಗಳಂತೆ ವರ್ತಿಸುತ್ತಾರೆ ನಂತರ ಅವರ ತೀರ್ಮಾನಗಳು ಒಮ್ಮೆ ನಿರ್ಧರಿಸಿದಂತೆ. ಅದು ಬದಲಾಗುವುದಿಲ್ಲ. ಹಾಗಾಗಿ ಅವರು ಹಠಮಾರಿ ಎಂದು ಅನಿಸುತ್ತದೆ.

ವೃಷಭ ರಾಶಿಯವರು ಸೌಮ್ಯವಾಗಿರಬಹುದು ಅಥವಾ ಒಮ್ಮೊಮ್ಮೆ ಹೆಚ್ಚು ಕೋಪವನ್ನು ಕೂಡ ಮಾಡಿಕೊಳ್ಳಬಹುದು. ಆದರೆ ಅವರು ಬಹಳ ವಿಭಿನ್ನ. ಈ ರಾಶಿಯವರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರುತ್ತಾರೆ. ಹಾಗೆಯೇ ಅವರು ತಮ್ಮ ಮನೆಯನ್ನು ಹೆಚ್ಚು ಇಷ್ಟಪಡುತ್ತಾರೆ.

ಕಾರ್ಯಕ್ಷಮತೆ

ನೀವು  ಯಾವುದಾದರೂ  ಕೆಲಸ ಮಾಡಲು  ನಿರ್ಧರಿಸಿದರೆ ವೃಷಭ ರಾಶಿಯವರನ್ನು ಕೇಳಿ. ಅವರನ್ನು ಸೋಲಿಸುವ ಯಾವುದೇ ಕೆಲಸ ಅಥವಾ ಸವಾಲು ಇಲ್ಲವೇ ಇಲ್ಲ ಎಂದು ಹೇಳಲಾಗುತ್ತದೆ.  ಅವರು ಯಾವುದೇ ಕೆಲಸವನ್ನು ಬೇಕಾದರೂ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.  ಸ್ಥಿರತೆ, ತಾಳ್ಮೆ  ಹೆಚ್ಚಿರುತ್ತದೆ.

ಇದನ್ನೂ ಓದಿ: ವೀರಾಂಜನೇಯ ಸ್ತೋತ್ರ ಪಠಣೆಯಿಂದ ಈ ರಾಶಿಯವರಿಗೆ ಮಾನಸಿಕ ಧೈರ್ಯ ವೃದ್ಧಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಈ ರಾಶಿಯವರು ಉತ್ತಮ ಜೀವನವನ್ನು  ನಡೆಸಲು ಇಷ್ಟಪಡುತ್ತಾರೆ.  ಎಲ್ಲಕ್ಕಿಂತ ಹೆಚ್ಚಾಗಿ ಅವರ ಸೌಕರ್ಯ ಮತ್ತು ಆನಂದಕ್ಕೆ ಆದ್ಯತೆ ನೀಡುತ್ತಾರೆ. ಇವರಿಗೆ  ಐಷಾರಾಮಿ ಜೀವನ ಎಂದರೆ ಇಷ್ಟ. ಈ ರಾಶಿಯವರು ಪ್ರತಿ ಬಾರಿಯೂ ಉತ್ತಮವಾಗಿರಬೇಕು ಹಾಗೂ ಎಲ್ಲವೂ ಪರಿಪೂರ್ಣವಾಗಿರಬೇಕು ಎಂದು ಬಯಸುತ್ತಾರೆ. ಇವರು ಹಣ ಗಳಿಸಲು  ಸಾಕಷ್ಟು ಶ್ರಮವನ್ನು ಹಾಕುತ್ತಾರೆ.  ವಿಶ್ವಾಸಾರ್ಹ ವರ್ತನೆ, ಕಠಿಣ ಪರಿಶ್ರಮ, ತಾಳ್ಮೆ ಮತ್ತು ಗುರಿಯಿಂದಾಗಿ ಮಾಡುವ ಉದ್ಯೋಗದಲ್ಲಿ ಒಳ್ಳೆಯ ಬೆಳವಣಿಗೆ ಕಾಣುತ್ತಾರೆ. ಸುತ್ತಲಿನ  ಜನರ ಜೊತೆ ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು,  ಸ್ನೇಹ ಭಾವದೊಂದಿಗೆ ಎಲ್ಲವನ್ನೂ ಸುಲಭವಾಗಿ ನಿರ್ವಹಣೆ ಮಾಡುವ ಗುಣ ಇವರಲ್ಲಿದೆ.

ವೃಷಭ ರಾಶಿಯವರು ಪ್ರತಿಯೊಂದು ವಿಚಾರದ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತಾರೆ.  ಯಾವುದೇ ವಿಚಾರವನ್ನು ಚಿಂತಿಸಿ, ಅದರ ಪರಿಣಾಮಗಳನ್ನು ತಿಳಿದುಕೊಂಡು ಮುಂದಿನ ನಿರ್ಧಾರ ಮಾಡುತ್ತಾರೆ. ಈ ರಾಶಿಯವರು ಒಮ್ಮೆ ನಿರ್ಧಾರ ಮಾಡಿದರೆ ಅದನ್ನು ಬದಲಾಯಿಸುವುದಿಲ್ಲ. ಹಠಮಾರಿ ಸ್ವಭಾವ ಇವರ ಕೆಟ್ಟ ಮತ್ತು ಒಳ್ಳೆಯ ಗುಣಗಳಲ್ಲಿ ಇದು ಒಂದು.

ಕೆಲವೊಮ್ಮೆ ವೃಷಭ ರಾಶಿಯವರು ಲೋಕದ ಪರಿವೆ ಇಲ್ಲದಂತೆ ವರ್ತನೆ ಮಾಡುತ್ತಾರೆ. ಶಾಂತವಾಗಿ, ಆರಾಮವಾಗಿ ಇರಲು ಬಯಸುತ್ತಾರೆ.  ಏನನ್ನೂ ಮಾಡಲು ಇಷ್ಟಪಡುವುದಿಲ್ಲ. ಸ್ವಲ್ಪ ಖಾಲಿಯಾಗಿ, ಯಾವುದೇ ಚಿಂತೆ ಇಲ್ಲದೆ, ಏಕಾಂತವಾಗಿರಲು ಬಯಸುತ್ತಾರೆ. ಅವರು ಯಾವ ವಿಚಾರಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಗಲಾಟೆ, ಕೋಪ ಇದ್ಯಾವುದನ್ನು ಮಾಡಿಕೊಳ್ಳದೆ ನೆಮ್ಮದಿಯಾಗಿರಲು ಬಯಸುತ್ತಾರೆ.

ವೃಷಭ ರಾಶಿಯವರು ಬದುಕಲು ತಿನ್ನುವುದಿಲ್ಲ, ತಿನ್ನಲು ಬದುಕುತ್ತಾರೆ. ಆಹಾರ ಅವರಿಗೆ  ಬಹಳ ಮುಖ್ಯ.  ಅವರು ವಿಭಿನ್ನವಾದ ಆಹಾರ ಪದಾರ್ಥಗಳನ್ನು ರುಚಿ ನೋಡಲು ಇಷ್ಟಪಡುತ್ತಾರೆ. ಅವರಿಗೆ ತಿನ್ನುವುದು ಎಂದರೆ ಬಹಳ ಇಷ್ಟ.

ಇದನ್ನೂ ಓದಿ: ಹೆಚ್ಚು ಮಾತನಾಡುವ ರಾಶಿಗಳು ಯಾವುವು ಗೊತ್ತಾ? ನಿಮ್ಮ ರಾಶಿಯೂ ಈ ಲಿಸ್ಟ್​ನಲ್ಲಿದೆಯಾ ನೋಡಿ..

ಈ ರಾಶಿಯವರಿಗೆ ಬೇರೆಯವರನ್ನು ಬೇಗನೆ ಆಕರ್ಷಿಸುವ ಗುಣ ಇರುತ್ತದೆ.  ಪ್ರೀತಿ ಮತ್ತು ಸ್ನೇಹದ ವಿಚಾರದಲ್ಲಿ ಇವರು ಹೆಚ್ಚು ವಿಶ್ವಾಸಕ್ಕೆ ಅರ್ಹರು ಹಾಗೂ ಹಾಗೆಯೇ ಉತ್ತಮ ಸಂಗಾತಿಯನ್ನು ಮತ್ತು ಸ್ನೇಹಿತರನ್ನು ಪಡೆಯುತ್ತಾರೆ.
Published by:Sandhya M
First published: