• Home
  • »
  • News
  • »
  • astrology
  • »
  • Astrology: ನಿಮ್ಮ ಅದೃಷ್ಟ ಬದಲಾಯಿಸಲು ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ

Astrology: ನಿಮ್ಮ ಅದೃಷ್ಟ ಬದಲಾಯಿಸಲು ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಸಸ್ಯಗಳು ನಮ್ಮ ಬದುಕಲ್ಲಿ ಒಳ್ಳೆಯದನ್ನು ಮಾಡುತ್ತವೆ ಎಂದು ನಂಬಲಾಗಿದೆ. ಅವುಗಳನ್ನು ಮನೆಯಲ್ಲಿ ಬೆಳೆಸಿದರೆ ಸಂಪತ್ತು, ಆರೋಗ್ಯ, ಸಂತೋಷ, ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎನ್ನಲಾಗುತ್ತದೆ. ಹಾಗಿದ್ರೆ ಆ ಸಸ್ಯಗಳು ಯಾವವು ಅನ್ನೋದನ್ನು ನೋಡೋಣ.

  • Share this:

ಎಲ್ಲರೂ ತಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ತುಂಬಿರಲಿ ಎಂದು ಬಯಸುತ್ತಾರೆ. ಅದಕ್ಕಾಗಿ ಹಲವು ನಂಬಿಕೆ, ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಾರೆ. ಅದರಿಂದ ತಮಗೆ ಹಾಗೂ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೇ ಕಾರಣ. ಇದೇ ರೀತಿ ಕೆಲವು ಸಸ್ಯಗಳು ನಮ್ಮ ಬದುಕಲ್ಲಿ ಒಳ್ಳೆಯದನ್ನು ಮಾಡುತ್ತವೆ ಎಂದು ನಂಬಲಾಗಿದೆ. ಅವುಗಳನ್ನು ಮನೆಯಲ್ಲಿ ಬೆಳೆಸಿದರೆ ಸಂಪತ್ತು, ಆರೋಗ್ಯ, ಸಂತೋಷ, ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎನ್ನಲಾಗುತ್ತದೆ. ಹಾಗಿದ್ರೆ ಆ ಸಸ್ಯಗಳು ಯಾವವು ಅನ್ನೋದನ್ನು ನೋಡೋಣ.


ಸೇಜ್‌ ಗಿಡ : ಪುದೀನಾ ಜಾತಿಗೆ ಸೇರಿದ ಈ ಸೇಜ್‌ ಗಿಡ ಬೆಳೆಸುವುದರಿಂದ ಹಲವು ಧನಾತ್ಮಕ ಅಂಶಗಳು ನಮ್ಮ ಬದುಕಲ್ಲಿ ಬರುತ್ತವೆ ಎಂದು ನಂಬಲಾಗಿದೆ. ಅದರಲ್ಲೂ ಮುಖ್ಯವಾಗಿ ಈ ಸೇಜ್‌ ಮೂಲಿಕೆಯು ಆರೋಗ್ಯ, ಬುದ್ಧಿವಂತಿಕೆಯನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ. ಅಲ್ಲದೇ ನಮ್ಮನ್ನು ರಕ್ಷಣೆ ಮಾಡುತ್ತದೆ ಎನ್ನಲಾಗಿದೆ.


ಜಡೆ ಗಿಡ: ಪುಟ್ಟ ಪುಟ್ಟ ಎಲೆಗಳನ್ನು ಹೊಂದಿರುವ ಈ ಆಕರ್ಷಕ ಸಸ್ಯವನ್ನು ಬೆಳೆಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ನಿಮಗೇನಾದರೂ ಒಳ್ಳೆಯ ಆರೋಗ್ಯ, ಅದೃಷ್ಟ ಹಾಗೂ ಶಕ್ತಿ ಬೇಕು ಎಂದಾದಲ್ಲಿ ನೀವು ಜಡೆ ಗಿಡವನ್ನು ಬೆಳೆಸಿ ಅದನ್ನು ಮನಸ್ಸಿನಿಂದ ಪೋಷಿಸಿ.


ಇದನ್ನೂ ಓದಿ: ಮನೆಯಲ್ಲಿ ಹಲ್ಲಿ ಸತ್ತರೇ ಹುಷಾರ್; ಇದು ಯಾವುದರ ಲಕ್ಷಣ ಗೊತ್ತಾ?


ಅಲೋವೆರಾ : ಲೋಳೆಸರ ಅಂತಲೂ ಕರೆಯುವ ಈ ಗಿಡವನ್ನು ಬೆಳೆಸೋದ್ರಿಂದ ಸಾಕಷ್ಟು ಲಾಭಗಳಿವೆ. ಈ ಅಲೋವೆರಾ ಬಹುಪಯೋಗಿ ಸಸ್ಯ ಕೂಡ. ಇದನ್ನು ಚರ್ಮಕ್ಕೆ, ಕೂದಲಿಗೆ ಹಚ್ಚುವುದರಿಂದ ಹೆಚ್ಚು ಕಾಂತಿ ಪಡೆದುಕೊಳ್ಳಬಹುದು. ಇನ್ನು ರಕ್ಷಣೆ ಹಾಗೂ ಹೀಲಿಂಗ್‌ ಗುಣಗಳನ್ನು ಕೂಡ ಈ ಗಿಡ ಹೊಂದಿದೆ.


ತುಳಸಿ ಗಿಡ: ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿರುವ ಈ ತುಳಸಿ ಗಿಡ ಬಹುಪಯೋಗಿ. ಉತ್ತಮ ಔಷಧೀಯ ಗುಣಗಳನ್ನೂ ಹೊಂದಿರುವ ತುಳಸಿಯನ್ನು ನಾವು ಪೂಜಿಸುತ್ತೇವೆ ಕೂಡ. ಈ ತುಳಸಿ ಗಿಡ ಪಾವಿತ್ರ್ಯತೆ ಹಾಗೂ ಪ್ರೀತಿಯನ್ನು ನಮ್ಮ ಬದುಕಲ್ಲಿ ತರುತ್ತದೆ ಎಂದು ನಂಬಲಾಗುತ್ತದೆ.


ರೋಸ್ಮರಿ ಸಸ್ಯ: ಚೂಪಾದ ಎಲೆಗಳನ್ನು ಹೊಂದಿರುವ ಈ ರೋಸ್ಮರಿ ಸಸ್ಯ ಬರೀ ಆಹಾರಕ್ಕಾಗಿ ಮಾತ್ರವಲ್ಲ, ಇದು ನಿಮ್ಮ ಬದುಕಲ್ಲಿ ನಿಷ್ಠೆ ಹಾಗೂ ಪ್ರೀತಿಯನ್ನೂ ಆಕರ್ಷಿಸುತ್ತದೆ.


ಕ್ಯಾಮೋಮೈಲ್‌ ಗಿಡ: ನೀವೆಲ್ಲಾ ಕ್ಯಾಮೋಮೈಲ್‌ ಚಹಾದ ಬಗ್ಗೆ ಕೇಳಿರಬಹುದು. ಬರೀ ಆರೋಗ್ಯದ ವಿಚಾರಕ್ಕಷ್ಟೇ ಅಲ್ಲ, ಬದಲಾಗಿ ಇನ್ನೂ ಹಲವು ಅಂಶಗಳಿಗೆ ಈ ಕ್ಯಾಮೋಮೈಲ್‌ ಗಿಡ ಉಪಯೋಗಕಾರಿಯಾಗಿದೆ. ಇದು ಧನಾತ್ಮಕತೆ, ಖುಷಿ ಹಾಗೂ ಸಂತೋಷವನ್ನು ಆಕರ್ಷಿಸುತ್ತದೆ ಎಂಬುದಾಗಿ ನಂಬಲಾಗುತ್ತದೆ.


ಶುಂಠಿ : ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪ್ರತೀ ಮನೆಗಳಲ್ಲೂ ಶುಂಠಿ ಗಿಡ ಇರುತ್ತದೆ. ಆದ್ರೆ ನಗರಗಳಲ್ಲಿ ಶುಂಠಿಯನ್ನು ಅಂಗಡಿಗಳಿಂದ ತರುವವರೇ ಹೆಚ್ಚು. ಆದ್ರೆ ಈ ಶುಂಠಿ ಗಿಡವನ್ನು ನೀವು ಮನೆಯಲ್ಲಿ ಬೆಳೆಸೋದ್ರಿಂದ ಸಾಕಷ್ಟು ಉಪಯೋಗಗಳಿವೆ. ಇದನ್ನು ನೀವು ಅಡುಗೆಯಲ್ಲೂ ಬಳಸಬಹುದು ಜೊತೆಗೆ ಇದು ನಿಮ್ಮ ಬದುಕಲ್ಲಿ ಹಣ ಮತ್ತು ಅದೃಷ್ಟವನ್ನು ತರುತ್ತದೆ ಎನ್ನಲಾಗುತ್ತದೆ.


ಕೊತ್ತಂಬರಿ : ನೀವು ಮಾಡುವ ಅಡುಗೆಗೆ ವಿಶೇಷ ರುಚಿ ನೀಡುವುದೇ ಕೊತ್ತಂಬರಿ ಸೊಪ್ಪು. ಇದನ್ನು ನೀವು ಸುಲಭವಾಗಿ ಮನೆಯಲ್ಲೇ ಬೆಳೆಯಬಹುದು. ಇದು ನಿಮ್ಮ ಅಡುಗೆಯ ಜೊತೆಗೆ ಬದುಕಲ್ಲೂ ವಿಶೇಷತೆ ತರುತ್ತದೆ. ಹೌದು, ಕೊತ್ತಂಬರಿ ಗಿಡವು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗುತ್ತದೆ.


ಇದನ್ನೂ ಓದಿ: ನೀಲಮಣಿ ರತ್ನ ಧರಿಸುವುದರಿಂದ ಈ ರಾಶಿಯವರಿಗೆ ಹಾನಿಯೇ ಹೆಚ್ಚು


ದೊಡ್ಡ ಪತ್ರೆ ಗಿಡ: ಈ ದೊಡ್ಡ ಪತ್ರೆ ಗಿಡ ಬರೀ ಔಷಧೀಯ ಗುಣಗಳನ್ನು ಹೊಂದಿರುವುದು ಮಾತ್ರವಲ್ಲ, ಬದಲಾಗಿ ನಿಮ್ಮ ಮನೆಯಲ್ಲಿ ಹಲವು ಒಳ್ಳೆಯ ಅಂಶಗಳನ್ನೂ ಆಕರ್ಷಿಸುತ್ತದೆ. ನಿಮ್ಮ ಬದುಕಲ್ಲಿ ಉತ್ಸಾಹ ಅಲ್ಲದೇ ಸಂಪತ್ತು ಹಾಗೂ ಆರೋಗ್ಯವನ್ನೂ ನೀಡುತ್ತದೆ ಎಂಬುದಾಗಿ ಹೇಳಲಾಗುತ್ತದೆ.

Published by:Precilla Olivia Dias
First published: