ಫೆಬ್ರವರಿ ತಿಂಗಳು ಬಂದಾಯಿತು. ಯುವ ಪ್ರೇಮಿಗಳಿಗೆ ಇದು ಒಂದು ರೀತಿಯ ಅಚ್ಚುಮೆಚ್ಚಿನ ತಿಂಗಳು ಅಂತಾನೆ ಹೇಳಬಹುದು. ಏಕೆಂದರೆ ಫೆಬ್ರುವರಿ 14 ರಂದು ವ್ಯಾಲೆಂಟೈನ್ ಡೇ ಎಂದರೆ ಪ್ರೇಮಿಗಳ ದಿನದಂದು ಹುಡುಗ ಮತ್ತು ಹುಡುಗಿ ಇಬ್ಬರು ಪರಸ್ಪರರು ಗುಲಾಬಿ ಕೊಟ್ಟು ಪ್ರಪೋಸ್ ಮಾಡುವುದನ್ನು ನಾವು ನೋಡಿರುತ್ತೇವೆ. ಬಣ್ಣ ಬಣ್ಣದ ಗುಲಾಬಿಗಳನ್ನು ನೀಡಿ ಪ್ರಪೋಸ್ ಮಾಡಿ ತಮ್ಮ ಪ್ರೀತಿಯನ್ನು ಹೇಳುತ್ತಾರೆ. ಆದರೆ ಅದಕ್ಕೂ ಮುನ್ನ ಎಂದರೆ ಫೆಬ್ರುವರಿ 7 ರಂದು ರೋಸ್ ಡೇ ಅಂತ ಆಚರಿಸುತ್ತಾರೆ.
ಅನೇಕ ಯುವಕ ಮತ್ತು ಯುವತಿಯರು ತಮ್ಮ ಪ್ರೀತಿ ಪಾತ್ರರಿಗೆ ಪ್ರಪೋಸ್ ಮಾಡಲು ಗುಲಾಬಿ ಹೂಗಳನ್ನು ಹಿಡಿದುಕೊಂಡು ಗ್ರೀಟಿಂಗ್ ಕಾರ್ಡ್ ಗಳನ್ನು ಕೈಯಲ್ಲಿ ಹಿಡಿದುಕೊಂಡು ಸಾಲುದ್ದ ಕವಿತೆಗಳನ್ನು ಬರೆದುಕೊಂಡು ಪಾರ್ಕ್ ಗಳಲ್ಲಿ ಅತ್ತಿಂದಿತ್ತ ಗಂಟೆ ಗಟ್ಟಲೆ ಕಾಯುತ್ತಾ ಕುಳಿತಿರುವುದನ್ನು ನಾವೆಲ್ಲಾ ನೋಡುತ್ತೇವೆ.
ನಿಮ್ಮ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಪ್ರೀತಿಗಾಗಿ ಯಾವ ಬಣ್ಣದ ಗುಲಾಬಿಗಳನ್ನು ತೆಗೆದುಕೊಂಡು ಹೋಗಬೇಕು ಅನ್ನೋ ಗೊಂದಲದಲ್ಲಿ ಇರುತ್ತೀರಿ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಪ್ರತಿ ಗುಲಾಬಿಯ ಬಣ್ಣದ ಹಿಂದಿನ ನಿಜವಾದ ಮಹತ್ವ ಮತ್ತು ಅರ್ಥವನ್ನು ಕಂಡುಕೊಳ್ಳುವುದೇ ಒಂದು ರೀತಿಯ ಮಜವಾದ ಸಂಗತಿಯಾಗಿರುತ್ತದೆ ಅಂತ ಹೇಳಬಹುದು.
ಹಾಗಾದರೆ ಬನ್ನಿ ಈ ರೋಸ್ ಡೇ ಆಚರಿಸಲು ಇಲ್ಲಿದೆ ಕೆಲವು ವಿಶೇಷವಾದ ಟಿಪ್ಸ್ ಗಳು. ನಿಮ್ಮ ಸಂಗಾತಿಗೆ ಅವರ ರಾಶಿಚಕ್ರ ಚಿಹ್ನೆಯ ಅನುಗುಣವಾಗಿ ಯಾವ ಬಣ್ಣದ ಗುಲಾಬಿಯನ್ನು ನೀಡಿದರೆ ಒಳ್ಳೆಯದು ಅಂತ ಹೇಳಿದ್ದೇವೆ ನೋಡಿ.
ಮೇಷ ರಾಶಿ
ಮೇಷ ರಾಶಿಯು ಮಂಗಳ ಗ್ರಹದಿಂದ ಆಳಲ್ಪಡುವ ಉಜ್ವಲ ರಾಶಿಚಕ್ರ ಚಿಹ್ನೆಯಾಗಿದೆ. ಮೇಷ ರಾಶಿಯವರಿಗೆ ಶುಭವಾಗುವ ಬಣ್ಣ ಅಂತ ಹೇಳಿದರೆ ಅದು ಕೆಂಪು.
ಈ ಬಣ್ಣ ಅವರಿಗೆ ಜೀವನದಲ್ಲಿ ಯಶಸ್ಸು ಮತ್ತು ಅದೃಷ್ಟವನ್ನು ತರುತ್ತದೆ. ಕೆಂಪು ಬಣ್ಣವನ್ನು ಹೊರತುಪಡಿಸಿ ನೀವು ಹಳದಿ ಮತ್ತು ಬಿಳಿ ಬಣ್ಣದ ಗುಲಾಬಿಗಳನ್ನು ಸಹ ಅವರಿಗೆ ಕೊಡಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರು ಕಲಾತ್ಮಕ ಪ್ರವೃತ್ತಿಯುಳ್ಳವರು ಆಗಿರುತ್ತಾರೆ ಮತ್ತು ಇವರು ತುಂಬಾನೇ ಶಾಂತ ಜೀವಿಗಳು ಆಗಿರುತ್ತಾರೆ. ಇವರಲ್ಲಿ ತಾಳ್ಮೆ, ಸಂಯಮ ಮತ್ತು ಸ್ಥಿರತೆ ಹೆಚ್ಚಿರುವುದರಿಂದ ಗುಲಾಬಿ ಬಣ್ಣದ ಹೂ ಕೊಡುವುದು ಒಳ್ಳೆಯದು.
ಮಿಥುನ ರಾಶಿ
ಮಿಥುನ ರಾಶಿಯು ರಾಶಿಚಕ್ರ ಚಿಹ್ನೆಗಳಲ್ಲಿ ಮೂರನೆಯದ್ದಾಗಿದ್ದು, ಮೇ 21 ರಿಂದ ಜೂನ್ 21 ರ ನಡುವೆ ಸೂರ್ಯನು ಈ ರಾಶಿಯಲ್ಲಿ ಸಂಚರಿಸುತ್ತಾನೆ.
ಗ್ರೀಕ್ ಪುರಾಣದಲ್ಲಿ ಡಿಸ್ಕುರಿ ಎಂದು ಕರೆಯಲ್ಪಡುವ ಅವಳಿಗಳು, ಕ್ಯಾಸ್ಟರ್ ಮತ್ತು ಪೊಲಕ್ಸ್ ಇದನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ ಈ ರಾಶಿಯವರಿಗೆ ಗುಲಾಬಿ, ತಿಳಿ ಹಳದಿ ಮತ್ತು ಹಸಿರು ಬಣ್ಣದ ಗುಲಾಬಿ ನೀಡುವುದು ಒಳ್ಳೆಯದು.
ಕರ್ಕಾಟಕ ರಾಶಿ
ಈ ರಾಶಿಯವರು ತುಂಬಾನೇ ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ, ಪ್ರೀತಿಗೆ ಪಾತ್ರರಾಗಿರುವ, ಪ್ರೀತಿಯನ್ನು ಹುಡುಕುವ ಮತ್ತು ನೀಡುವ ಗುಣವನ್ನು ಹೊಂದಿದವರಾಗಿರುತ್ತಾರೆ ಅಂತ ಹೇಳಬಹುದು.
ಈ ರಾಶಿಯ ಜನರು ತುಂಬಾನೇ ಭಾನಾತ್ಮಕ ಜೀವಿಗಳು ಅಂತಾನೆ ಹೇಳಲಾಗುತ್ತದೆ. ಇವರಿಗೆ ಬಿಳಿ ಮತ್ತು ಕೆಂಪು ಗುಲಾಬಿಗಳನ್ನು ಸೇರಿಸಿ ಕೊಡುವುದು ಒಳ್ಳೆಯದು.
ಸಿಂಹ ರಾಶಿ
ಈ ರಾಶಿಯ ಜನರು ತುಂಬಾನೇ ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ ಮತ್ತು ಪ್ರಾಬಲ್ಯ ಹೊಂದಲು ಬಯಸುವ ಇವರು ತುಂಬಾನೇ ಕ್ರಿಯೆಟಿವ್ ಆಗಿ ಯೋಚಿಸುತ್ತಾರೆ ಅಂತ ಹೇಳಬಹುದು. ಸಿಂಹ ರಾಶಿಯವರಿಗೆ ಕೇಸರಿ, ಹಳದಿ ಮತ್ತು ಕೆಂಪು ಬಣ್ಣದ ಗುಲಾಬಿ ಕೊಡುವುದು ಒಳ್ಳೆಯದು.
ಕನ್ಯಾ ರಾಶಿ
ಕನ್ಯಾ ರಾಶಿಯು ಆರನೆಯ ರಾಶಿಚಕ್ರ ಚಿಹ್ನೆಯಾಗಿದ್ದು, ಈ ರಾಶಿಯವರಿಗೆ ನೀಲಿ, ಬಿಳಿ ಮತ್ತು ಹಸಿರು ಗುಲಾಬಿಗಳನ್ನು ನೀಡುವುದು ಒಳ್ಳೆಯದು ಅಂತ ಹೇಳಬಹುದು.
ತುಲಾ ರಾಶಿ
ಈ ತುಲಾ ರಾಶಿಯ ಜನರು ತುಂಬಾನೇ ಸಹಾನುಭೂತಿಯುಳ್ಳ ಜನರು ಆಗಿರುತ್ತಾರೆ ಅಂತ ಹೇಳಬಹುದು. ಆದ್ದರಿಂದ ಇವರಿಗೆ ಗುಲಾಬಿ ಬಣ್ಣದ ಮತ್ತು ನೀಲಿ ಬಣ್ಣದ ಗುಲಾಬಿ ನೀಡುವುದು ಒಳ್ಳೆಯದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ದೃಢನಿಶ್ಚಯ ಮತ್ತು ಸಹಾನುಭೂತಿಯುಳ್ಳ ಜನರಾಗಿದ್ದು, ಅವರಲ್ಲಿರುವ ಮುಖ್ಯವಾದ ಗುಣಲಕ್ಷಣವೆಂದರೆ ಅವರು ತುಂಬಾನೇ ದೃಢವಾದ ನಿರ್ಧಾರಗಳನ್ನು ಜೀವನದಲ್ಲಿ ತೆಗೆದುಕೊಳ್ಳುತ್ತಾರೆ. ಈ ರಾಶಿಯವರಿಗೆ ಗಾಢವಾದ ಕೆಂಪು ಗುಲಾಬಿ ನೀಡುವುದು ಒಳ್ಳೆಯದು ಅಂತ ಹೇಳಬಹುದು.
ಧನು ರಾಶಿ
ಈ ರಾಶಿಯ ಜನರು ತುಂಬಾನೇ ನೇರ ನುಡಿ ಮತ್ತು ತುಂಬಾನೇ ವಿಶಾಲವಾದ ಮನಸ್ಥಿತಿಯನ್ನು ಮತ್ತು ದೃಷ್ಟಿಕೋನವನ್ನು ಹೊಂದಿರುವವರಾಗಿರುತ್ತಾರೆ. ಕೇಸರಿ ಮತ್ತು ನೇರಳೆ ಬಣ್ಣದ ಗುಲಾಬಿ ಇವರಿಗೆ ಸೂಕ್ತ ಅಂತ ಹೇಳಬಹುದು.
ಮಕರ ರಾಶಿ
ಮಕರ ರಾಶಿಯ ಜನರು ಯಾವಾಗಲೂ ಸ್ವಲ್ಪ ಗಂಭೀರವಾಗಿಯೇ ಇರುತ್ತಾರೆ ಅಂತ ಹೇಳಬಹುದು. ಇವರು ಸಾಮಾನ್ಯವಾಗಿ ಜವಾಬ್ದಾರಿ ತೆಗೆದುಕೊಳ್ಳುವ ಜನರಾಗಿರುತ್ತಾರೆ ಅಂತ ಹೇಳಬಹುದು. ನೇರಳೆ ಬಣ್ಣದ ಗುಲಾಬಿ ಇವರಿಗೆ ಸರಿಹೊಂದುವ ಬಣ್ಣದ ಗುಲಾಬಿ ಆಗಿದೆ.
ಇದನ್ನೂ ಓದಿ: Rose Day : ಈ ಸುಂದರ ಗುಲಾಬಿ ಹೂವಿನ ಬೆಲೆ ಬರೋಬ್ಬರಿ 130 ಕೋಟಿ ರೂ; ಅಷ್ಟಕ್ಕೂ ಏನಿದರ ವಿಶೇಷತೆ ಗೊತ್ತಾ?
ಕುಂಭ ರಾಶಿ
ಈ ರಾಶಿ ಇಡೀ ರಾಶಿಚಕ್ರ ಚಿಹ್ನೆಗಳಲ್ಲಿ 11ನೇ ರಾಶಿಚಕ್ರ ಚಿಹ್ನೆ ಆಗಿದೆ. ಇವರು ತುಂಬಾನೇ ಸತ್ಯವಂತರು, ದೃಢ ನಿರ್ಧಾರ ತೆಗೆದುಕೊಳ್ಳುವ, ಆತ್ಮವಿಶ್ವಾಸ ಹೊಂದಿರುವ ಮತ್ತು ತುಂಬಾನೇ ವಿಭಿನ್ನ ರೀತಿಯಲ್ಲಿ ಯೋಚಿಸುವ ಜನರಾಗಿರುತ್ತಾರೆ ಅಂತ ಹೇಳಬಹುದು. ಇವರಿಗೆ ತಿಳಿ ನೀಲಿ ಬಣ್ಣದ ಮತ್ತು ಕೆಂಪು ಮಿಶ್ರಿತ ಕೇಸರಿ ಮತ್ತು ಬಿಳಿ ಬಣ್ಣದ ಗುಲಾಬಿ ಸರಿ ಹೊಂದುತ್ತವೆ.
ಮೀನ ರಾಶಿ
ಮೀನ ರಾಶಿಯು ಈ ರಾಶಿಚಕ್ರ ಚಿಹ್ನೆಯಲ್ಲಿ ಕೊನೆಯದ್ದಾಗಿದ್ದು, ಎರಡು ಮೀನುಗಳು ವಿರುದ್ಧವಾಗಿ ಈಜುತ್ತಿರುವ ಚಿಹ್ನೆಯನ್ನು ಹೊಂದಿದೆ. ಇವರು ತಮ್ಮ ಸಂಗಾತಿಯನ್ನು ತುಂಬಾನೇ ಪ್ರೀತಿ ಮಾಡುವವರಾಗಿರುತ್ತಾರೆ. ಈ ರಾಶಿಯ ಜನರಿಗೆ ಬಿಳಿ, ಹಸಿರು, ಗುಲಾಬಿ ಮತ್ತು ಕೆಂಪು ಬಣ್ಣದ ಗುಲಾಬಿಗಳು ಸರಿ ಹೊಂದುತ್ತವೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ