ಪ್ರಿಯ ಭಕ್ತ ಹನುಮಂತನ ಮೇಲೆ ಬಾಣ ಪ್ರಯೋಗಕ್ಕೆ ಮುಂದಾಗಿದ್ದ ರಾಮನ ಕಥೆ ಇದು

Rama Death Sentence to hanuman: ಪ್ರಿಯ ಭಕ್ತನಿಗೆ ಸರಯೂ ನದಿ ತಟದಲ್ಲಿ ರಾಮ ಬಾಣ ಪ್ರಯೋಗಕ್ಕೆ ಮುಂದಾದ ಪೌರಾಣಿಕ ಕಥೆಯ ವಿವರ ಇಲ್ಲಿದೆ

ಆಂಜನೇಯ- ರಾಮ

ಆಂಜನೇಯ- ರಾಮ

 • Share this:
  ಹನುಮಂತ (Hanuman) ರಾಮನ (Lord Ram) ಪರಮ ಭಕ್ತ. ಆತನ ಭಕ್ತಿಗೆ ಸಾಟಿಯಿಲ್ಲ. ರಾಮನ ಭಕ್ತಿ ತೋರಿಸಲು ತನ್ನ ಎದೆಯನ್ನೇ ಸೀಳಿ ತೋರಿಸಿ, ಅಲ್ಲಿರುವುದು ಕೇವಲ ರಾಮ ಮತ್ತು ಸೀತೆ ಎಂಬುದನ್ನು ತೋರಿಸಿದ್ದ. ಇಂತಹ ಹನುಮಂತನ ಕಥೆಗಳು ಅನೇಕ ಇವೆ. ಇಂತಹ ಪ್ರಿಯ ಭಕ್ತನಿಗೆ ಸರಯೂ ನದಿ ತಟದಲ್ಲಿ ರಾಮ ಬಾಣ ಪ್ರಯೋಗಕ್ಕೆ ಮುಂದಾದ ಪೌರಾಣಿಕ ಕಥೆಯ ವಿವರ ಇಲ್ಲಿದೆ.

  ಒಮ್ಮೆ ಕಾಶಿ ರಾಜ ರಾಮನನ್ನು ನೋಡಲು ಅಯೋಧ್ಯೆಗೆ ಹೋಗುತ್ತಿದ್ದನು. ಆಗ ನಾರದರು ಅವರನ್ನು ತಡೆದು ರಾಮ್ ಆಸ್ಥಾನಕ್ಕೆ ಹೋಗಿ ಎಲ್ಲರಿಗೂ ನಮಸ್ಕರ ಮಾಡಬೇಕು. ಈ ವೇಳೆ ವಿಶ್ವಾಮಿತ್ರರಿಗೆ ನಮಿಸಬಾರದು ಎಂದು ಹೇಳುತ್ತಾರೆ. ಅದರಂತೆ ರಾಮನ ಆಸ್ಥಾನಕ್ಕೆ ಬಂದ ಕಾಶಿ ರಾಜ ಕೇವಲ ರಾಮನಿಗೆ ಮಾತ್ರ ನಮಿಸುತ್ತಾನೆ. ವಿಶ್ವಾಮಿತ್ರನ ಹೊರತಾಗಿ ಆಸ್ಥಾನದ ಎಲ್ಲಾರಿಗೂ ನಮಿಸಿದ ಕಾಶಿರಾಜನ ವರ್ತನೆಗೆ ಅವರು ಸಿಟ್ಟಾಗುತ್ತಾರೆ. ಆಗ ಕೋಪಗೊಂಡ ವಿಶ್ವಾಮಿತ್ರ ಕಾಶಿರಾಜನಿಗೆ ಶಿಕ್ಷೆ ವಿಧಿಸಬೇಕು ಎಂದು ರಾಮನಿಗೆ ತಿಳಿಸುತ್ತಾರೆ. ಆಗ ರಾಮ ಕೂಡ ಮಿಶ್ವಾಮಿತ್ರರಿಗೆ ಸಮಾಧಾನ ಮಾಡಿ, ನಿಮಗೆ ಆದ ಅವಮಾನ ನನಗೆ ಆದ ಅವಮಾನದಂತೆ ಅವರಿಗೆ ಸೂರ್ಯಾಸ್ತದೊಳಗೆ ಶಿಕ್ಷೆ ನೀಡುತ್ತೇನೆ ಎಂದು ಭರವಸೆ ನೀಡುತ್ತಾರೆ.

  ಅಂಜನಾ ದೇವಿ ಮೊರೆ 

  ಆಗ ಭಯಗೊಂಡ ಕಾಶಿ ರಾಜ ನಾರದ ಬಳಿ ಬಂದು ನಡೆದ ಘಟನೆ ವಿವರಿಸಿ, ಪ್ರಾಣ ಉಳಿಸುವಂತೆ ಕೋರುತ್ತಾನೆ. ಆಗ ನಾರದ ಮುನಿಗಳು ಹನುಮಂತನ ತಾಯಿ ಅಂಜನ ದೇವಿ ಮೊರೆ ಹೋಗುವಂತೆ ಸೂಚಿಸುತ್ತಾರೆ. ತಕ್ಷಣಕ್ಕೆ ಅಂಜನಾ ದೇವಿಗೆ ಕಾಪಾಡುವಂತೆ ಕೇಳುತ್ತಾನೆ. ವಿಷಯ ತಿಳಿಸದೇ ರಕ್ಷಣೆ ಮಾಡುವಂತೆ ಮಾತು ಕೊಟ್ಟರೆ ಮಾತ್ರ ಕಾಲು ಬಿಡುವುದಾಗಿ ತಿಳಿಸುತ್ತಾನೆ. ಅಂಜನ ದೇವಿ ಕಡೆಗೆ ನನ್ನ ಮಗ ನಿನ್ನ ರಕ್ಷಣೆ ಮಾಡುತ್ತಾನೆ ಎಂಬು ಅಭಯ ಇತ್ತು ಏನು ಸಮಸ್ಯೆ ಎಂದು ಕೇಳಿದಾಗ ನಡೆದ ಘಟನೆ ವಿವರಿಸುತ್ತಾನೆ ಕಾಶಿ ರಾಜ.

  ಇದನ್ನು ಓದಿ: ಗುರುವಿನ ದೆಸೆಯಿಂದ ಈ ರಾಶಿಯವರಿಗೆ ಇನ್ನೂ ಮೂರು ತಿಂಗಳು ಅದೃಷ್ಟವೋ ಅದೃಷ್ಟ

  ಹನುಮಂತನಿಗೆ ರಕ್ಷಣೆಯ ಹೊಣೆ

  ಇದನ್ನು ಕೇಳಿಸಿಕೊಂಡ ಅಂಜನ ನೀನು ಮಾಡಿದ ಕಾರ್ಯ ತಪ್ಪು. ಆದರೆ, ಈಗ ಮಾತು ಕೊಟ್ಟಾಗಿದೆ ನಿನ್ನ ರಕ್ಷಣೆ ಮಾಡುತ್ತೇನೆ ಎಂದು ಆಂಜನೇಯನ ಕರೆಯುತ್ತಾಳೆ. ಹನುಮ ತಾಯಿಯ ಆಜ್ಞೆಯಂತೆ ಯಾವ ಕಾರಣವೂ ಕೇಳದೇ ಕಾಶಿ ರಾಜನ ರಕ್ಷಣೆಗೆ ನಿಲ್ಲುತ್ತಾನೆ.
  ಕಾಶಿ ರಾಜನ ರಕ್ಷಣೆಗೆ ಮುನ್ನ ರಾಮನ ಜಪಿಸಿ, ತನ್ನ ಕಾರ್ಯ ಯಶಸ್ವಿಯಾಗುವಂತೆ ಕೋರಿಕೊಳ್ಳುತ್ತಾನೆ. ಕಾಶಿ ರಾಜನು ರಾಮನ ಜಪಿಸುತ್ತಾನೆ.

  ಇದನ್ನು ಓದಿ: ಮನೆಯಲ್ಲಿ ನೆಗೆಟಿವ್​ ಶಕ್ತಿ ಹೆಚ್ಚಲು ಇದು ಕೂಡ ಕಾರಣವಾಗತ್ತೆ; ನೆನಪಿರಲಿ

  ಈ ವೇಳೆ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ರಾಮ ಕಾಶಿ ರಾಜನಿಗೆ ಶಿಕ್ಷೆ ನೀಡಲು ಮುಂದಾಗುತ್ತಾನೆ. ಕಾಶಿ ರಾಜನ ಮೇಲೆ ಬಾಣ ಪ್ರಯೋಗ ಮಾಡುತ್ತಾನೆ. ದೂರದಲ್ಲಿದ್ದ ಹನುಮ ರಾಮ ನಾಮವನ್ನು ಜೋರಾಗಿ ಜಪಿಸುವಂತೆ ಹೇಳುತ್ತಾನೆ. ಆದ ರಾಮ ಬಿಟ್ಟ ಬಾಣ ಹಾಗೇ ನಿಷ್ಕ್ರಿಯವಾಗುತ್ತದೆ. ಇದರಿಂದ ಕೋಪಗೊಂಡ ರಾಮ ಮತ್ತೊಂದು ಬಾಣ ಪ್ರಯೋಗಕ್ಕೆ ಮುಂದಾಗುತ್ತಾನೆ. ಈ ವೇಳೆ ಹನುಮ ಸೀತಾರಾಮ ಸೀತಾರಾಮ ಎಂದು ಜಪಿಸಲು ಹೇಳುತ್ತಾನೆ. ಆಗಲೂ ರಾಮನ ಎರಡನೇ ಬಾಣ ನಿಷ್ಕ್ರಿಯವಾಗುತ್ತದೆ.

  ರಾಮನ ನಾಮದ ಶಕ್ತಿ

  ಕಾಶಿ ರಾಜನ ರಕ್ಷಣೆಗೆ ಹನುಮಂತ ನಿಂತಿರುವುದು ತಿಳಿದು ರಾಮ ಕುಪಿತಗೊಂಡು ಮೂರನೇ ಬಾಣ ಪ್ರಯೋಗಕ್ಕೆ ಮುಂದಾಗುತ್ತಾನೆ. ಈ ವೇಳೆ ಬಾಣ ಕಾಶಿ ರಾಜನ ತಲುಪುವ ಮೊದಲೇ ಹನುಮಂತ ಅಡ್ಡ ಬರುತ್ತಾನೆ. ಆಗ ತಕ್ಷಣಕ್ಕೆ ಕಾಶಿ ರಾಜ ವಿಶ್ವಾಮಿತ್ರರ ಕಾಲು ಹಿಡಿದು ತಪ್ಪಿಗೆ ಮನ್ನಿಸುವಂತೆ ಕೋರಿಕೊಳ್ಳುತ್ತಾರೆ. ಆಗ ವಿಶ್ವಾಮಿತ್ರ ಮತ್ತು ರಾಮ ಕಾಶಿ ರಾಜನ ತಪ್ಪು ಮನ್ನಿಸುತ್ತಾರೆ. ಹನುಮನ ರಾಮ ಭಕ್ತಿಯಿಂದ ಕಡೆಗೆ ಕಾಶಿ ರಾಜ ಬದುಕುಳಿಯುತ್ತಾನೆ
  Published by:Seema R
  First published: