ವಾಸ್ತು ಶಾಸ್ತ್ರ (Vastu) ಎಂಬುದು ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ (Life) ಅತಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹೆಚ್ಚಿನವರಿಗೆ ವಾಸ್ತುವಿನ ಕುರಿತು ಜ್ಞಾನವಿರುವುದಿಲ್ಲ ಹಾಗೂ ಇದನ್ನು ಪಾಲಿಸಬೇಕೇ ಬೇಡವೇ ಎಂಬ ಸಂದಿಗ್ಧತೆಗೆ ಒಳಗಾಗಿರುತ್ತಾರೆ. ಮನೆಯ ಪ್ರತಿಯೊಂದು ಕೋಣೆ (Room) , ಬಳಸುವ ಬಣ್ಣ (Color) , ಉಪಯೋಗಿಸುವ ವಸ್ತುಗಳು ಹೀಗೆ ಪ್ರತಿಯೊಂದು ಕೂಡ ವಾಸ್ತುವಿನೊಂದಿಗೆ ಮಿಳಿತಗೊಂಡಿರುತ್ತದೆ. ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಕೂಡ ಅದು ವಾಸ್ತು ದೋಷದಿಂದಲೇ ಉಂಟಾಗಿರುತ್ತದೆ ಎಂಬುದು ಹಿರಿಯರ ಮಾತಾಗಿದೆ.
ವಾಸ್ತು ತಿಳಿಸುವ ಬಣ್ಣಗಳ ಮಹತ್ವವೇನು?
ವಾಸ್ತು ಶಾಸ್ತ್ರದ ಪ್ರಕಾರ ಕುಟುಂಬದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಹಾಗೂ ಲಕ್ಷ್ಮೀ ಮನೆಯಲ್ಲಿ ವಾಸವಾಗಿರದೇ ಇದ್ದರೆ ವಾಸ್ತು ದೋಷವಿದೆ ಎಂದರ್ಥವಾಗಿದೆ.
ಅದೇ ರೀತಿ ಪ್ರತಿಯೊಂದು ವಸ್ತು ಹಾಗೂ ಬಣ್ಣಕ್ಕೂ ವಾಸ್ತು ತನ್ನದೇ ಆದ ಮಹತ್ವವನ್ನು ಸಾರುತ್ತದೆ. ಇಂದಿನ ಲೇಖನದಲ್ಲಿ ಹಸಿರು ಬಣ್ಣಕ್ಕಿರುವ ಮಹತ್ವವನ್ನು ವಾಸ್ತು ಶಾಸ್ತ್ರ ಹೇಗೆ ವಿವರಿಸಿದೆ ಎಂಬುದನ್ನು ಅರಿತುಕೊಳ್ಳೋಣ.
ಯಾವ ದಿಕ್ಕು ಹಸಿರು ಬಣ್ಣಕ್ಕೆ ಸೂಕ್ತ
ಹಸಿರು ಬಣ್ಣವು ಹಸಿರು ತರಕಾರಿಗಳು, ಕಾಳುಗಳು, ಹಾಸಿಗೆ, ಮರಗಳು, ಸಸ್ಯಗಳು ಮತ್ತು ಬಟ್ಟೆಗಳನ್ನು ಒಳಗೊಂಡಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಸಿರು ಬಣ್ಣದ ವಸ್ತುಗಳನ್ನು ಪೂರ್ವ ದಿಕ್ಕಿನಲ್ಲಿ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ. ಈ ದಿಕ್ಕುಗಳಲ್ಲಿ ಒಂದರಲ್ಲಿ ಹಸಿರು ಹುಲ್ಲಿನ ಸಣ್ಣ ಉದ್ಯಾನವನ್ನು ಮಾಡಬೇಕು ಎಂದು ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ.
ಆಹ್ಲಾದಕರ ಶಾಂತಿಯುತ ಬಣ್ಣ
ಹಸಿರು ಬಣ್ಣವು ಪ್ರಕೃತಿಯೊಂದಿಗೆ ಅನುಬಂಧಿತವಾಗಿದೆ. ಇದೊಂದು ರೀತಿಯ ಆಹ್ಲಾದಕರ ಬಣ್ಣ ಎಂದೆನಿಸಿದ್ದು ಪ್ರಕೃತಿ ಮತ್ತು ನೈಸರ್ಗಿಕ ಜಗತ್ತನ್ನು ಸಂಕೇತಿಸುತ್ತದೆ.
ಪ್ರಾಯಶಃ ಪ್ರಕೃತಿಯೊಂದಿಗೆ ಅದರ ಬಲವಾದ ಒಡನಾಟದ ಕಾರಣ, ಹಸಿರು ಸಾಮಾನ್ಯವಾಗಿ ಶಾಂತಿ, ಅದೃಷ್ಟ ಮತ್ತು ಆರೋಗ್ಯವನ್ನು ಪ್ರತಿನಿಧಿಸುತ್ತದೆ ಎಂದು ವಾಸ್ತು ತಿಳಿಸುತ್ತದೆ. ಹಸಿರು ಬಣ್ಣವನ್ನು ಅದರ ಶಾಂತಗೊಳಿಸುವ ಪರಿಣಾಮಕ್ಕಾಗಿ ಅಲಂಕಾರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಮಾನಸಿಕ ವಿಶ್ರಾಂತಿಗೆ ಕೂಡ ಹಸಿರು ಸೂಕ್ತ
ಅನೇಕ ಮನೋವಿಜ್ಞಾನಿಗಳು ತಮ್ಮ ರೋಗಿಗಳಿಗೆ ವಿಶ್ರಾಂತಿ ಪಡೆಯಲು ಮತ್ತು ಮನಸ್ಸಿನಿಂದ ಒತ್ತಡದ ವಿಷಯಗಳನ್ನು ಶಮನಗೊಳಿಸಲು ಹಸಿರಿನ ತಾಣಗಳಾದ ಹಳ್ಳಿ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗಲು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ: ನಿಮ್ಮ ಗಾಡಿ ಕೀಗಳನ್ನು ಅಪ್ಪಿ-ತಪ್ಪಿ ಈ ಜಾಗದಲ್ಲಿ ಇಡ್ಬೇಡಿ
ಇಲ್ಲಿನ ಹಚ್ಚ ಹಸಿರಿನ ನೋಟವು ಅವರ ಮನಸ್ಸನ್ನು ಶಾಂತಗೊಳಿಸುತ್ತದೆ ಹಾಗೂ ಕಣ್ಣುಗಳಿಗೆ ಇದು ಕಡಿಮೆ ಒತ್ತಡವನ್ನುಂಟು ಮಾಡುತ್ತದೆ. ಹಾಗಾಗಿ ಇದು ವಿಶ್ರಾಂತಿಯನ್ನೊದಗಿಸುವ ಬಣ್ಣ ಎಂಬುದಾಗಿ ಕೂಡ ಉಲ್ಲೇಖಗೊಂಡಿದೆ.
ವಾಸ್ತು ಶಾಸ್ತ್ರ ನಂಬಿಕೆಗಳು
ವಾಸ್ತು ಶಾಸ್ತ್ರದ ಪ್ರಕಾರ, ಹಸಿರು ಬಣ್ಣ ಮತ್ತು ಈ ದಿಕ್ಕುಗಳು ಮರಕ್ಕೆ ಸಂಬಂಧಿಸಿವೆ. ಈ ಕಾರಣಕ್ಕಾಗಿಯೇ ಹಸಿರು ಬಣ್ಣದ ವಸ್ತುಗಳು ಮತ್ತು ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಶುಭ ಎಂದು ಉಲ್ಲೇಖಿಸಲಾಗಿದೆ.
ಹಸಿರು ಬಣ್ಣದ ವಸ್ತುಗಳನ್ನು ಪೂರ್ವ ದಿಕ್ಕಿನಲ್ಲಿ ಇರಿಸಿದರೆ ಅದು ಮನೆಯ ಹಿರಿಯ ಮಗನ ಪ್ರಗತಿಗೆ ಕಾರಣವಾಗುತ್ತದೆ. ಆದಾಗ್ಯೂ, ವಾಸ್ತು ಶಾಸ್ತ್ರದ ಪ್ರಕಾರ, ಹಸಿರು ಬಣ್ಣದ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಅದು ಮನೆಯ ಇಲ್ಲವೇ ಕುಟುಂಬದ ಹಿರಿಯ ಮಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಮನೆಯಲ್ಲಿ ಉದ್ಯಾನವನ ಯಾವ ದಿಕ್ಕಿನಲ್ಲಿ ನಿರ್ಮಿಸಬೇಕು?
ಉದ್ಯಾನವನ ಮಾಡಬೇಕು ಎಂಬುದು ನಿಮ್ಮ ಆಸೆಯಾಗಿದ್ದರೆ ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿಯೇ ನಿರ್ಮಿಸಬೇಕು ಎಂದು ವಾಸ್ತು ಸಲಹೆ ನೀಡುತ್ತದೆ.
ಮನೆಗಾಗಿ ವಾಸ್ತು ಸಲಹೆಗಳು ಸಮತೋಲಿತ ಬಣ್ಣಗಳನ್ನು ಸೂಚಿಸುತ್ತವೆ. ಪೂರ್ವ ದಿಕ್ಕಿನ ಮನೆಗಳು ಪ್ರಕೃತಿಯಿಂದ ಸಾಕಷ್ಟು ಉತ್ತಮ ಶಕ್ತಿಗಳೊಂದಿಗೆ ಬಲವಾದ ಸಾಮಾಜಿಕ ಸಂಪರ್ಕಗಳನ್ನು ಹೊಂದಿವೆ.
ಹಸಿರು ಬಣ್ಣವು ವಿಶ್ರಾಂತಿ ಹಾಗೂ ಶಾಂತ ಜೀವನವನ್ನು ಪ್ರತಿನಿಧಿಸುವಂತೆ, ಪಾಶ್ಚಾತ್ಯ ಸಂಸ್ಕೃತಿಯಲ್ಲಿ ರಾಕ್ಷಸರು, ವಿಷ, ಅಪಾಯಕಾರಿ ರಾಸಾಯನಿಕಗಳನ್ನು ಹಸಿರು ಬಣ್ಣದಲ್ಲಿ ಚಿತ್ರಿಸಲಾಗುತ್ತದೆ.
ಇದನ್ನೂ ಓದಿ: ಬ್ರೇಕಪ್ ನೋವಿನಿಂದ ಹೊರ ಬರೋಕೆ ಹೆಲ್ಪ್ ಮಾಡುತ್ತೆ ಈ ವಾಸ್ತು ಟಿಪ್ಸ್
ಹಾಗಾಗಿ ಈ ಬಣ್ಣವನ್ನು ಬಳಸುವಾಗ ಹಾಗೂ ಅದರ ಧನಾತ್ಮಕ ಪರಿಣಾಮ ಜೀವನದ ಮೇಲೆ ಉಂಟಾಗಲು ಸರಿಯಾದ ರೀತಿಯಲ್ಲಿ ಬಣ್ಣವನ್ನು ಬಳಸಬೇಕು ಎಂಬುದು ವಾಸ್ತು ಸಲಹೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ