Vasanth Panchamiಯಂದು ತಪ್ಪದೇ ವಿದ್ಯಾದೇವಿ ಪೂಜೆ ಮಾಡಿ; ಸರಸ್ವತಿ ಜನಿಸಿದ ದಿನ ಇದು

ವಸಂತ ಪಂಚಮಿ ಹಬ್ಬವನ್ನು  ಫೆಬ್ರವರಿ ತಿಂಗಳ ವಸಂತ ಕಾಲದಲ್ಲಿ ಆಚರಿಸಲಾಗುತ್ತದೆ. ಈ ದಿನ  ಜ್ಞಾನ, ಸಂಗೀತ ಮತ್ತು ವಾಗ್ದೇವಿ ಸರಸ್ವತಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಸಂತ ಪಂಚಮಿ (Vasanth Panchami) ಹಬ್ಬವನ್ನು  ಫೆಬ್ರವರಿ (February) ತಿಂಗಳ ವಸಂತ ಕಾಲದಲ್ಲಿ ಆಚರಿಸಲಾಗುತ್ತದೆ. ಈ ದಿನ  ಜ್ಞಾನ, ಸಂಗೀತ ಮತ್ತು ವಾಗ್ದೇವಿ ಸರಸ್ವತಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಕಾರಣ ಈ ದಿನದಂದು ಸರಸ್ವತಿ ಜನಿಸಿದ್ದು ಎಂಬ ನಂಬಿಕೆ ಇದೆ. ದೇಶದಾದ್ಯಂತ ಈ ದಿನವನ್ನು ಎಲ್ಲಾ  ಶಾಲೆ (school), ಕಾಲೇಜು(college), ಶಿಕ್ಷಣ ಸಂಸ್ಥೆಗಳು ವಿಜೃಂಭಣೆಯಿಂದ ಆಚರಿಸುತ್ತವೆ (celebrate). ವಿದ್ಯಾರ್ಥಿಗಳು ಗೀರ್ವಾಣಿಯನ್ನು ಆರಾಧಿಸಿ, ಉತ್ತಮ ಸಾಧನೆಗೆ ಆಶೀರ್ವದಿಸುವಂತೆ ಬೇಡಿಕೊಳ್ಳುತ್ತಾರೆ. ದೇವಿಯು ಹಳದಿ ಬಣ್ಣದ ಸೀರೆ ಧರಿಸುವುದರಿಂದ ಮಹಿಳೆಯರು ಹಳದಿ ಸೀರೆ ಧರಿಸಿ, ದೇವಿಯನ್ನು ಆರಾಧಿಸುತ್ತಾರೆ. ಸಿಹಿತಿಂಡಿ ತಯಾರಿಸಿ, ಸರಸ್ವತಿ ದೇವಿಗೆ ಅರ್ಪಿಸಿ, ಪ್ರಸಾದ ಹಂಚಲಾಗುತ್ತದೆ.  ಜೀವನದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ವಸಂತ ಪಂಚಮಿ ಶುಭ ದಿನವಾಗಿದೆ. 

    ಈ ದಿನ ಗೃಹ ಪ್ರವೇಶ, ಹೊಸ ವ್ಯಾಪಾರ, ಉದ್ಯೋಗ, ಮುಖ್ಯವಾದ ಯೋಜನೆಗಳನ್ನು ಆರಂಭಿಸುತ್ತಾರೆ. ವಸಂತ ಹಬ್ಬವನ್ನು ವಸಂತ ಹಬ್ಬವೆಂದೂ ಕರೆಯುತ್ತಾರೆ. ವಸಂತ ಹಬ್ಬ ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದೆ.

    ವಸಂತ ಪಂಚಮಿ ಹಬ್ಬದ ಜತೆಗೆ ವಸಂತ ಕಾಲ ಆರಂಭವಾಗುತ್ತದೆ. ಸುಗ್ಗಿ  ಮತ್ತು ಕೊಯ್ಲಿಗೆ ಇದು ಉತ್ತಮ ಸಮಯ. ವಸಂತ ಪಂಚಮಿಯನ್ನು ವಸಂತಕಾಲದ ಮೊದಲ ದಿನವೆಂದು ಪರಿಗಣಿಸಲಾಗಿದೆ. ಕೃಷಿಯ ಭೂಮಿಯನ್ನೇ ಹೆಚ್ಚು ಹೊಂದಿರುವ ರೈತರು ಸುಗ್ಗಿಯ ಕಾಲವನ್ನು ಸವಿಯುತ್ತಾರೆ. ಕರ್ನಾಟಕದಲ್ಲಿ ಸುಗ್ಗಿಯ ಕಾಲವನ್ನಾಗಿ, ಸರಸ್ವತಿ ದೇವಿಯ ಪೂಜೆ ಮಾಡಿ ರುಚಿಯಾದ ಖಾದ್ಯ ತಯಾರಿಸಿ, ಸುಗ್ಗಿಗೆ ನೈವೇದ್ಯ ಮಾಡಿ, ಇತರರಿಗೆ ಪ್ರಸಾದ ಕೊಡುತ್ತಾರೆ. ಬೆಳೆದ ಬೆಳೆಯನ್ನು ಮನೆಗಳಿಗೆ, ಮಾರುಕಟ್ಟೆಗ ಕಳುಹಿಸುವ ಮೊದಲು ಪೂಜೆ ಮಾಡಲಾಗುತ್ತದೆ.

    ಇದನ್ನೂ ಓದಿಆಫೀಸ್​ ಕೆಲಸದಿಂದ ಹೈರಾಣಾಗಲಿದ್ದಾರೆ ಈ ರಾಶಿಯವರು; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

    ವಸಂತ ಪಂಚಮಿಯ ಮುಹೂರ್ತ

    ಫೆ. 5, ಶನಿವಾರ

    ಮುಹೂರ್ತ: ಬೆ. 6:45 ರಿಂದ ಮ. 12: 34ರವರೆಗೆ

    ಸಮಯ: 5 ಗಂಟೆ 49 ನಿಮಿಷ

    ಪಂಚಮಿ ತಿಥಿ ಆರಂಭ: ಫೆ. 5, ಬೆ. 3: 47ಕ್ಕೆ

    ಪಂಚಮಿ ತಿಥಿ ಅಂತ್ಯ: ಫೆ. 6, ಬೆ. 3: 46

    ವಸಂತ ಪಂಚಮಿ ಪೂಜಾ ವಿಧಿ

    ಸ್ನಾನದ ನಂತರ ಶುಭ್ರ ಬಟ್ಟೆ ಧರಿಸಿ, ಸಂಕಲ್ಪ ಮಾಡಿಕೊಳ್ಳಿ ನಂತರ 'ಯಥೋಪಲಬ್ಧಪೂಜನಸಾಮಾಗ್ರೀಭಿಃ ಭಗವತ್ಯಾಃ ಸರಸ್ವತ್ಯಾಃ ಪೂಜನಮಹಂ ಕರಿಶ್ಯೆ' ಮಂತ್ರ ಜಪಿಸಿ. ನಂತರ ಪ್ರಥಮ ಪೂಜ್ಯನೀಯ ಗಣೇಶನನ್ನು ಪೂಜಿಸಿ. 'ಶ್ರೀ ಹೃರೀಂ ಸರಸ್ವತ್ಯೈ ಸ್ವಾಹಾ' ಎನ್ನುವ ಅಷ್ಟಾಕ್ಷರ ಮಂತ್ರ ಜಪಿಸಿ. ದೇವಿಗೆ ಆರತಿ ಮಾಡಿ, ಭಕ್ತಿಯಿಂದ ಬೇಡಿಕೊಳ್ಳಿ. ಮಾತೆ ಸರಸ್ವತಿಯ ಆರಾಧನೆಯ ವೇಳೆ ‘ಯಾ ಕುಂದೇಂದು ತುಷಾರ ಹಾರದವಳ” ಸ್ತೋತ್ರ ಪಠಿಸಿ.

    ದೇವಿಗೆ ಗಂಧ, ಹೂವು, ಸಿಹಿ ಅಡುಗೆ ನೈವೇದ್ಯ ಮಾಡಿ, ಮನೆಯಲ್ಲಿ ಸಂಗೀತ ಸೇವೆ ನೀಡಿ. ದೇವಿಯ ಫೋಟೋದ ಬಳಿ ಪೆನ್ನು, ಪುಸ್ತಕ ಇಟ್ಟು ಪೂಜಿಸಿ. ಹಾಲು, ಮೊಸರು, ಅಕ್ಕಿ, ಕಬ್ಬು, ಹೂ, ತೆಂಗಿನಕಾಯಿ, ಹಣ್ಣುಗಳನ್ನು ಪೂಜೆಗೆ ಬಳಸಿ.

    ಇದನ್ನೂ ಓದಿ: ಸೂರ್ಯ ದೇವನಿಗೆ ಸಮರ್ಪಿತವಾದ ದೇಗುಲಗಳಿವು; ವಾಸ್ತುಶಿಲ್ಪವಂತೂ ಅದ್ಭುತ

    ಜ್ಞಾನ ದೇವತೆ ಸರಸ್ವತಿಯ ಆರಾಧನೆ

    ಜ್ಞಾನಕ್ಕೆ ಪೂಜ್ಯನೀಯವೆಂದೇ ಹೆಸರಾದ ಸರಸ್ವತಿಯನ್ನು ಭಕ್ತಿಯಿಂದ ಬೇಡಿದ ವರ ಕರುಣಿಸೆಂದು ಬೇಡಿಕೊಳ್ಳಿ. ಆಲಸ್ಯ, ಅಜ್ಞಾ, ಅಂಧಕಾರ ತೊಡೆದು ಹಾಕೆಂದು ಬೇಡಿಕೊಂಡು ಪೂಜಿಸಿ. ದೇವಿಯ ಆರಾಧನೆಯ ನಂತರ ಬಂದವರಿಗೆ ಹೂವು, ಹಣ್ಣು ಪ್ರಸಾದ ನೀಡಿ. ಮಕ್ಕಳು ಅಕ್ಷರ ಕಲಿಕೆ ಆರಂಭಿಸುವ ಮೊದಲು ಸರಸ್ವತಿ ದೇವಿಯನ್ನು ಪೂಜಿಸಿ, ವಿದ್ಯಾಫಲ ನೀಡೆಂದು ಕೇಳಿಕೊಳ್ಳಿ. ಸರಸ್ವತಿ ದೇವಿಯ ಆರಾಧನೆ ಮಾಡುವ ಈ ದಿನ ತುಂಬಾ ಒಳ್ಳೆಯದೆಂದು ನಂಬಿಕೆ ಇಡಲಾಗಿದೆ.

    ಕೃಷಿಕರು, ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ತಿರುವಿಗೆ ದೇವಿಯ ಆರಾಧನೆ, ಜಪ ಮಾಡುವುದು ಪರಿಣಾಮಕಾರಿಯಾಗಿ ಮನೋಕಾಮನೆಯನ್ನು ಪೂರ್ತಿ ಮಾಡುತ್ತದೆ.
    Published by:renukadariyannavar
    First published: