Karinjeshwara Temple: ಮಂಗಗಳಿಗೆ ಇಲ್ಲಿ ಪ್ರಥಮ ನೈವೇದ್ಯ; ಬಂಟ್ವಾಳದ ಕಾರಿಂಜೇಶ್ವರ ದೇಗುಲದ ವಿಶೇಷತೆ

ಶಿವನ ದೇವಸ್ಥಾನದ ಜೊತೆಗೆ ಪಾರ್ವತಿ ದೇವಸ್ಥಾನವೂ ಇಲ್ಲಿದ್ದು, ಕಾರಿಂಜೇಶ್ವರ ತಮ್ಮ ಅಭಿಷ್ಟಗಳನ್ನು ಸಿದ್ದಿಸುವ ಶಿವ ಎಂಬ ನಂಬಿಕೆ ಭಕ್ತರದ್ದು, ಅಲ್ಲದೆ ತೋಟಗಳಿಗೆ ಹಾನಿ ಮಾಡುವ ಮಂಗಗಳ ಉಪಟಳ ತಡೆಯಲು ಎಳನೀರನ್ನು ಕಾಣಿಕೆಯಾಗಿ ನೀಡುವ ಸಂಪ್ರದಾಯ ಇಲ್ಲಿದೆ.

ಪ್ರಸಾದ ಸ್ವೀಕರಿಸುತ್ತಿರುವ ಮಂಗಗಳು

ಪ್ರಸಾದ ಸ್ವೀಕರಿಸುತ್ತಿರುವ ಮಂಗಗಳು

  • Share this:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಲವು ಇತಿಹಾಸ ಪ್ರಸಿದ್ದ ದೇವಾಲಯಗಳಲ್ಲಿ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನವೂ (Karinjeshwara Temple) ಒಂದು. ಇಲ್ಲಿಯ ಆರಾಧ್ಯದೈವ ಶಿವನಿಗೆ ಅರ್ಪಣೆ ಮಾಡಿದ ನೈವೇದ್ಯದ ಮೊದಲ ಪಾಲು ಇಲ್ಲಿರುವ ಮಂಗಗಳದು (Monkey). ಈ ಸಂಪ್ರದಾಯ ತೇತ್ರಾಯುಗದಿಂದ ಆಚರಿಸಿಕೊಂಡು ಬರುತ್ತಿದ್ದು, ಶ್ರೀರಾಮನೇ ಈ ಆಜ್ಞೆ ನೀಡಿದ್ದ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.  ಹಸಿರಿನ ರುದ್ರರಮಣೀಯ ಪ್ರಕೃತಿಯ ನಡುವಿನ ಮುಗಿಲು ಮುಟ್ಟಿದ ಬೆಟ್ಟದ ಮೇಲಿದೆ ಈ ಕಾರಿಂಜೇಶ್ವರ ದೇವಾಲಯ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಧರ್ಮಸ್ಥಳ ಹಾದಿಯ ನಡುವೆ ಸಿಗುವ ಈ ಪುಣ್ಯ ಕ್ಷೇತ್ರಕ್ಕೆ ಸಾವಿರ ಶತಮಾನಗಳ ಇತಿಹಾಸವಿದೆ.

ಮಂಗಗಳಿಗೆ ಮೊದಲ ನೈವೇದ್ಯ

ಸಮುದ್ರ ಮಟ್ಟದಿಂದ 1800 ಅಡಿ ಎತ್ತರಲ್ಲಿರುವ  ಕರಿಕಲ್ಲು ಗುಡ್ಡದ ಮೇಲೆ ಕುಳಿತ ಶಿವನಿಗೆ ಕಾರಿಂಜೇಶ್ವರ ಎಂಬ ಹೆಸರು ಬಂದಿದೆ.  ಇದು ದಕ್ಷಿಣಕನ್ನಡ ಜಿಲ್ಲೆಯ ಅತ್ಯಂತ ಪುರಾತನ ಹಾಗೂ ಅತ್ಯಂತ ಎತ್ತರದಲ್ಲಿರುವ ಕ್ಷೇತ್ರ. ಸಮುದ್ರ ಮಟ್ಟದಿಂದ 1 ಸಾವಿರ ಅಡಿ ಎತ್ತರದಲ್ಲಿರುವ ಕಾರಿಂಜ ಬೆಟ್ಟದ ಮೇಲೆ ಆರಾಧಿಸಲ್ಪಡಲಾಗುವುದು.  ತ್ರೇತಾಯುಗದಲ್ಲಿ ರುದ್ರಮುನಿ ಎನ್ನುವ ಮುನಿ ಇಲ್ಲಿ ತಪಸ್ಸಾಚರಿಸಿದ, ಗಜಾಸರು ಎನ್ನುವ ದಾನವನನ್ನು ಶ್ರೀರಾಮ ಸಂಹರಿಸಿದ. ಭೀಮಾರ್ಜುನನರು ಶಿವನಿಗೆ ಗಧಾತೀರ್ಥ, ಚಾಮ ತೀರ್ಥ ಸೇವೆ ಸಲ್ಲಿಸಿದ ಪುಣ್ಯ ಭೂಮಿ ಇದು. ಈ ಕುರಿತು ಕುರುಹುಗಳೂ ಇಲ್ಲಿ ಲಭ್ಯವಿದೆ. ಮಹಾಪೂಜೆಯ ಬಳಿಕ ಶಿವನಿಗೆ ಅರ್ಪಿಸಿದ ನೈವೇದ್ಯವನ್ನು ಇಲ್ಲಿ ಮೊದಲಿಗೆ ಮಂಗಗಳಿಗೆ ನೀಡಲಾಗುತ್ತದೆ.

ಇದನ್ನು ಓದಿ: ಕೃಷ್ಣನಿಗೆ ಪ್ರಿಯವಾದ ಕೊಳಲು ಕೊಟ್ಟಿದ್ದು ರಾಧ ಅಲ್ಲ, ಮತ್ಯಾರು ಗೊತ್ತಾ?

ಶ್ರೀರಾಮ ಸೀತಾನ್ವೇಷಣೆ ಬಳಿಕ ಹಿಂತಿರುಗುವಾಗ ತನ್ನಲ್ಲಿ ಸೇವೆಸಲ್ಲಿಸಿದ ಅಪಾರ ಕಪಿಸೈನ್ಯದಲ್ಲಿ ಒಂದು ಅಂಶವನ್ನು ಇಲ್ಲಿ ಬಿಟ್ಟು ಹೋದರು. ಇದೇ ಕಾರಣಕ್ಕೆ ಕ್ಷೇತ್ರದಿಂದ ದೇವರ ನೈವೇದ್ಯವನ್ನು ಮಂಗಳಗಳಿಎ ನೀಡುವ ವ್ಯವಸ್ಥೆ ಮಾಡಿದ್ದು ಈಗಲೂ ಅದೇ ಸಂಪ್ರದಾಯ ಮಂದುವರಿದಿದೆ. ದೇವರ ಪೂಜೆಯ ಬಳಿಕ ಬಿಸಿಯಾದ ನೈವೇದ್ಯವನ್ನು ಇಲ್ಲಿರುವ ದೊಡ್ಡ ಕಲ್ಲಿನಲ್ಲಿ ಹಾಕಲಾಗುತ್ತದೆ. ಇದನ್ನು ಇಲ್ಲಿನ ಅತ್ಯಂತ ದೊಡ್ಡ ಕೋತಿಯೊಂದು ಮೊದಲಿಗೆ ತಿನ್ನುವುದು ಅದನ್ನು ಕಾರಿಂಜದ ದಡ್ಡ ಎನ್ನಲಾಗುತ್ತದೆ.

ಹಿಂದೆ ಸೀತೆಯನ್ನು ಕರೆ ತರಲು ಸಮುದ್ರದಲ್ಲಿ ಸೇತುವೆ ನಿರ್ಮಿಸುತ್ತಿದ್ದಾಗ ವಾನರ ಸೈನ್ಯ ಈ ಕ್ಷೇತ್ರದಿಂದ ಕಲ್ಲುಗಳನ್ನು ಸಾಗಿಸಿತ್ತೆಂದೂ, ಶಿವನ ಸಾನಿಧ್ಯದ ಕಲ್ಲಾದ್ದರಿಂದ ಕಲ್ಲುಗಳನ್ನು ಅಲ್ಲೇ ಬಿಡಲು ಶ್ರೀರಾಮನು ವಾನರ ಸೈನ್ಯಕ್ಕೆ ಆಜ್ಞೆ ಮಾಡಿದ್ದಾನಂತೆ ಹಾಗೂ ವಾನರಗಳ ಸೇವೆಯನ್ನು ಗುರುತಿಸಿ ಈ ಕ್ಷೇತ್ರದ ಶಿವನಿಗೆ ಸಲ್ಲಿಸುವ ನೈವೇದ್ಯವನ್ನು ಮೊದಲು ಮಂಗಗಳಿಗೆ ನೀಡಬೇಕೆಂದು ಆಜ್ಞೆ ಮಾಡಿದ್ದನಂತೆ . ಈ ಸಂಪ್ರದಾಯ ಇಂದಿಗೂ ಇಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನು ಓದಿ: ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇಲ್ವಾ? ಹಾಗಾದ್ರೆ ಈ ಸಣ್ಣ ಬದಲಾವಣೆ ಮಾಡಿ

ಇಷ್ಟಾರ್ಥ ಸಿದ್ಧಿಸುವ ದೈವ
ಶಿವನ ದೇವಸ್ಥಾನದ ಜೊತೆಗೆ ಪಾರ್ವತಿ ದೇವಸ್ಥಾನವೂ ಇಲ್ಲಿದ್ದು, ಕಾರಿಂಜೇಶ್ವರ ತಮ್ಮ ಅಭಿಷ್ಟಗಳನ್ನು ಸಿದ್ದಿಸುವ ಶಿವ ಎಂಬ ನಂಬಿಕೆ ಭಕ್ತರದ್ದು, ಅಲ್ಲದೆ ತೋಟಗಳಿಗೆ ಹಾನಿ ಮಾಡುವ ಮಂಗಗಳ ಉಪಟಳ ತಡೆಯಲು ಎಳನೀರನ್ನು ಕಾಣಿಕೆಯಾಗಿ ನೀಡುವ ಸಂಪ್ರದಾಯ ಇಲ್ಲಿದೆ.

ಬೆಟ್ಟದ ತುದಿಯಲ್ಲಿರುವ ಈ ದೇವಾಲಯವನ್ನು ತಲುಪುವುದೇ ಒಂದು ಸಾಹಸ. ಬೆಟ್ಟದ ತುದಿ ತಲುಪಿ ಶಿವನ ದರ್ಶನವಾದಾಗ ಜೀವನ ಸಾರ್ಥಕ ಎಂಬ ನಿಟ್ಟುಸಿರು ಇಲ್ಲಿಗೆ ಬರುವ ಎಲ್ಲಾ ಭಕ್ತರದು. ಜನರ ಜೊತೆ ವಾನರರಿಗೂ ಇಲ್ಲಿ ಸಮಾನ ಅವಕಾಶ.

ಇದೇ ಕಾರಣಕ್ಕೆ ಕಾರಿಂಜೇಶ್ವರ ಬೆಟ್ಟದ ತುಂಬಾ ವಾನರ ಪಡೆಗಳೇ ತುಂಬಿದ್ದು,  ಭಕ್ತರು ನೀಡುವ ಆಹಾರ ಪದಾರ್ಥಗಳನ್ನೂ ಇವುಗಳು ಸ್ವೀಕರಿಸುವ ಮೂಲಕ ಭಕ್ತರ ಮನಸ್ಸಿಗೂ ಮುದ ನೀಡುತ್ತದೆ. ಬೆಟ್ಟದ ಸುತ್ತಲೂ ಹೆಚ್ಚಿನ ಕೃಷಿಭೂಮಿಗಳೇ ಇದ್ದು, ಕೃಷಿಗೆ ಮಂಗಗಳ ಉಪಟಲವೂ ಹೆಚ್ಚಾಗಿದ್ದು, ಈ ಕಾರಣಕ್ಕಾಗಿಯೇ ಇಲ್ಲಿನ ಸ್ಥಳೀಯ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ದೇವರಿಗೆ ಸೀಯಾಳಾಭಿಷೇಕವನ್ನು ಮಾಡಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ.
Published by:Seema R
First published: