ಗಣೇಶ ಚತುರ್ಥಿಯ (Ganesh Festival) 10 ದಿನಗಳ (10 days) ಅದ್ದೂರಿ ಆಚರಣೆ ಆಗಿದೆ. ಈ ವರ್ಷ ಆಗಸ್ಟ್ 31 ರಂದು ಅಂದ್ರೆ ನಾಳೆಯಿಂದ ಹಬ್ಬ ಪ್ರಾರಂಭವಾಗುತ್ತದೆ. ಮತ್ತು ಸೆಪ್ಟೆಂಬರ್ 9 (September) ರಂದು ವಿಸರ್ಜನಾ ಸಮಾರಂಭದೊಂದಿಗೆ ಕೊನೆಗೊಳ್ಳುತ್ತದೆ. ಕಳೆದ ಎರಡು ವರ್ಷಗಳಿಂದ, ಕೋವಿಡ್ -19 (Covid 19) ಮಹಾಮಾರಿ ಹಬ್ಬದ ಮೇಲೆ ಹೆಚ್ಚು ಪರಿಣಾಮ ಬೀರಿತ್ತು. ಯಾರೂ ಸಂಭ್ರದಿಂದ ಹಬ್ಬವನ್ನು ಆಚರಣೆ ಮಾಡಿರಲಿಲ್ಲ. ಆದ್ರೆ 2 ವರ್ಷಗಳ ಬಳಿಕ ದೇಶದೆಲ್ಲೆಡೆ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹಬ್ಬಕ್ಕೆ ಸಕಲ ತಯಾರಿ ನಡೆದಿದೆ. ಗಣೇಶನ ವಿಗ್ರಹಗಳು ಪೂಜೆಗೆ ಸಿದ್ಧವಾಗಿವೆ. ಬಗೆ ಬಗೆಯ ಸಿಹಿ ತಿನಿಸುಗಳು ರೆಡಿಯಾಗುತ್ತಿವೆ. ಎಲ್ಲ ಸಂಭ್ರಮದ ಜೊತೆಗೆ ಸುರಕ್ಷಿತವಾಗಿ (Safely) ಹಬ್ಬವನ್ನು ಮಾಡಿ.
ಕೋವಿಡ್-19 ಪ್ರಕರಣಗಳು ಸದ್ಯಕ್ಕೆ ಹೆಚ್ಚಿಲ್ಲ. ಆದ್ರೆ ಮಂಕಿಪಾಕ್ಸ್, ಟೊಮೆಟೊ ಜ್ವರ ಹಬ್ಬುತ್ತಿವೆ. ಅದಕ್ಕೆ ಗಣೇಶ ಮಹೋತ್ಸವವನ್ನು ಆಚರಿಸುವಾಗ ನಿಮ್ಮನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಟ್ಟುಕೊಳ್ಳುವುದು ಅವಶ್ಯಕ.
ಮನೆಯಲ್ಲಿ ಗಣೇಶ ಚತುರ್ಥಿಯನ್ನು ಸುರಕ್ಷಿತವಾಗಿ ಹೇಗೆ ಆಚರಿಸಬಹುದು?
ರಶ್ ಕಡಿಮೆ ಇರುವ ಸಮಯದಲ್ಲಿ ಶಾಪಿಂಗ್ ಮಾಡಿ
ನಿಮ್ಮ ಮನೆಗೆ ಗಣೇಶನ ವಿಗ್ರಹವನ್ನು ತರಲು ನೀವು ಯೋಜಿಸುತ್ತಿದ್ದರೆ, ನೀವು ಮಾರುಕಟ್ಟೆಗಳಿಗೆ ಭೇಟಿ ನೀಡುತ್ತೀರಿ. ಮತ್ತು ಶಾಪಿಂಗ್ ಮಾಡಲು ಹೋಗುತ್ತೀರಿ. ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಮಾರುಕಟ್ಟೆಯಲ್ಲಿ ಜನ ಜಂಗುಳಿ ಇರುತ್ತದೆ. ಆದ್ದರಿಂದ ನೀವು ಹಗಲಿನ ವೇಳೆಯಲ್ಲಿ ನಿಮ್ಮ ಶಾಪಿಂಗ್ ಅನ್ನು ಪೂರ್ಣಗೊಳಿಸಿ. ರಶ್ ಕಡಿಮೆ ಇರುವ ಸಮಯದಲ್ಲಿ ಶಾಪಿಂಗ್ ಮಾಡಿ.
ಆನ್‍ಲೈನ್‍ನಲ್ಲಿ ಖರೀದಿಸಬಹುದು.
ಕೈಯಲ್ಲಿ ಮೊಬೈಲ್ ಇದ್ರೆ, ಬೇಕಾದ ವಸ್ತಗಳು ನಿಮ್ಮ ಮನೆಯ ಬಾಗಿಲಿಗೆ ಬರುತ್ತವೆ. ಜನಸಂದಣಿಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಲು ನೀವು ಎಲ್ಲಾ ಅಲಂಕಾರ-ಸಂಬಂಧಿತ ಉತ್ಪನ್ನಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಬಹುದು.
ಇದನ್ನೂ ಓದಿ: Swarna Gowri Festival: ಸ್ವರ್ಣಗೌರಿ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು? ವ್ರತ ಆಚರಣೆ ಬಗ್ಗೆ ತಿಳಿದುಕೊಳ್ಳಿ
ಸಣ್ಣ ಮೂರ್ತಿಗಳನ್ನೇ ಆರಿಸಿಕೊಳ್ಳಿ
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸಣ್ಣ ಅಥವಾ ಮಧ್ಯಮ ಗಾತ್ರದ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಆರಿಸಿಕೊಳ್ಳಿ. ನಿಮ್ಮ ಸ್ಥಳದಲ್ಲಿ ಪೂಜೆಗೆ ಹಾಜರಾಗುವ ಅತಿಥಿಗಳ ಬಗ್ಗೆಯೂ ಗಮನ ಇರಲಿ. ಗಾಳಿ ಹೆಚ್ಚಾಗಿ ಬೀಸುವ ಕೋಣೆಯಲ್ಲಿ ಹಬ್ಬವನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸಿ. ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಬಳಸಿ.
ಎಣ್ಣೆಯುಕ್ತ ಆಹಾರವನ್ನು ಅತಿಯಾಗಿ ಸೇವಿಸಬೇಡಿ
ನೀವು ಏನು ತಿನ್ನುತ್ತಿದ್ದೀರಿ ಎಂಬುದರ ಮೇಲೆ ನಿಗಾ ಇರಿಸಿ. ಏಕೆಂದರೆ ಹಬ್ಬದ ಸಮಯ ಎಂದು ಹೆಚ್ಚು ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಸಿಹಿತಿಂಡಿಗಳು ಮತ್ತು ಎಣ್ಣೆಯುಕ್ತ ಆಹಾರವನ್ನು ಅತಿಯಾಗಿ ಸೇವಿಸಬೇಡಿ.
ಮಕ್ಕಳ ಬಗ್ಗೆ ಇರಲಿ ಗಮನ
ಹಬ್ಬ ಹರಿದಿನಗಳಲ್ಲಿ ಮಕ್ಕಳು ಹೆಚ್ಚು ಉತ್ಸಾಹದಿಂದ ಇರುತ್ತಾರೆ. ಅವರ ಶಕ್ತಿಯ ಮಟ್ಟಗಳು ಮೇಲೇರುತ್ತವೆ. ಆದ್ದರಿಂದ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ದೀಪಗಳು ಮತ್ತು ಕಪೂರ್ ಬೆಂಕಿಯ ಘಟನೆಗಳು ನಡೆಯದಂತೆ ಜಾಗೃತರಾಗಿರಿ.
ಆನ್‍ಲೈನ್ ದರ್ಶನ ಮಾಡಿ
ಕಳೆದ ವರ್ಷದಂತೆ, ಈ ವರ್ಷವೂ ನೀವು ಗಣಪತಿ ಪೂಜೆಯ ಆನ್‍ಲೈನ್ ದರ್ಶನವನ್ನು ಮಾಡಬಹುದು. ಜನಸಂದಣಿಗೆ ನೀವು ಹೋಹುವುದು ತಪ್ಪುತ್ತದೆ. ನೀವು ಆನ್‍ಲೈನ್‍ನಲ್ಲಿ ಆರತಿಯನ್ನು ಸಲ್ಲಿಸಬಹುದು ಮತ್ತು ಭಗವಂತನ ಆಶೀರ್ವಾದವನ್ನು ಪಡೆಯಬಹುದು.
ಇದನ್ನೂ ಓದಿ: Ganesh Chaturthi 2022: ಮನೆ-ಮನ ತುಂಬಲಿರುವ ಗಣೇಶ; ಇಲ್ಲಿದೆ ನೋಡಿ ವಿಧ-ವಿಧದ ಪ್ರತಿಮೆಗಳು
ಮನೆಯಲ್ಲೇ ಗಣೇಶನ ಮೂರ್ತಿ ವಿಸರ್ಜನೆ ಮಾಡಿ
ನೀವು ಸಣ್ಣ ಅಥವಾ ಮಧ್ಯಮ ಗಾತ್ರದ ವಿಗ್ರಹವನ್ನು ಹೊಂದಿದ್ದರೆ, ಟಬ್ ಅಥವಾ ಡ್ರಮ್‍ನಲ್ಲಿ ವಿಗ್ರಹವನ್ನು ಮುಳುಗಿಸುವ ಮೂಲಕ ಮನೆಯಲ್ಲಿ ವಿಸರ್ಜನೆ ಅನ್ನು ಆರಿಸಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ