Gowri Ganesh Festival: ಗೌರಿ ಹಬ್ಬದಂದು ಈ ವಸ್ತುಗಳನ್ನು ದಾನ ಮಾಡಿದ್ರೆ ದೇವಿ ಆಶೀರ್ವಾದ ಇರಲಿದೆಯಂತೆ

ಆಗಸ್ಟ್ 31, 2022 ರಂದು ಗಣೇಶ ಹಬ್ಬ ಬಂದಿದೆ. ಗಣೇಶ ಮನೆಗೆ ಬರುವ ಮುಂಚಿನ ದಿನ ಮಹಿಯರಯ ಸ್ವರ್ಣ ಗೌರಿ ಆಚರಣೆ ಮಾಡುತ್ತಾರೆ. ಗೌರಿ ಹಬ್ಬದಂದು ಕೆಲವೊಂದು ವಸ್ತುಗಳನ್ನು ದಾನ ಮಾಡಿದ್ರೆ ಒಳ್ಳೆಯದಾಗುತ್ತಂತೆ. ಯಾವ ವಸ್ತುಗಳನ್ನು ದಾನ ಮಾಡಬೇಕು ಅಂತ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗಣೇಶ ಹಬ್ಬ (Ganesh Festival) ದೇಶದಾದ್ಯಂತ ಹಿಂದುಗಳು (Hindus) ಆಚರಿಸುವ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದನ್ನೂ ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ, ಇದು ಆಗಸ್ಟ್ (August) ತಿಂಗಳ ಮಧ್ಯಭಾಗದಿಂದ ಸೆಪ್ಟೆಂಬರ್ ಅಂತ್ಯದ ನಡುವೆ ಬರುತ್ತದೆ. ಗಣೇಶ ಚತುರ್ಥಿಯು ಶಿವ ಮತ್ತು ಪಾರ್ವತಿ ದೇವಿಯ ಪುತ್ರನಾದ ಗಣೇಶನ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಆನೆ ದೇವರು ಎಂದೂ ಕರೆಯಲ್ಪಡುವ ಗಣೇಶನು ಸಂಪತ್ತು, ವಿಜ್ಞಾನ, ಜ್ಞಾನ, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು. ಎಲ್ಲಾ ಹೊಸ ಆರಂಭಗಳು ಗಣೇಶನ ಆರಾಧನೆಯೊಂದಿಗೆ ಪ್ರಾರಂಭವಾಗುತ್ತವೆ. ಆಗಸ್ಟ್ 31, 2022 ರಂದು ಬಂದಿದೆ. ಗಣೇಶ ಮನೆಗೆ ಬರುವ ಮುಂಚಿನ ದಿನ ಮಹಿಯರಯ ಸ್ವರ್ಣ ಗೌರಿ (Swarna Gowri) ಆಚರಣೆ ಮಾಡುತ್ತಾರೆ. ಗೌರಿ ಹಬ್ಬದಂದು ಕೆಲವೊಂದು ವಸ್ತುಗಳನ್ನು ದಾನ (Donate) ಮಾಡಿದ್ರೆ ಒಳ್ಳೆಯದಾಗುತ್ತಂತೆ.

    ಗಂಡನ ದೀರ್ಘಾಯುಷ್ಯಕ್ಕಾಗಿ ವ್ರತ
    ಗೌರಿ ಹಬ್ಬವು ಮಹಿಳೆಯರ ತ್ಯಾಗ ಮತ್ತು ಸಮರ್ಪಣೆಯನ್ನು ತೋರಿಸುವ ಹಬ್ಬವಾಗಿದೆ. ಈ ದಿನ ಮಹಿಳೆಯರು ಉಪವಾಸ ಆಚರಿಸುವ ಮೂಲಕ ತಮ್ಮ ಗಂಡಂದಿರ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಕೇಳಿಕೊಳ್ಳತ್ತಾರೆ. ಈ ವ್ರತವು ಮನೆಯಲ್ಲಿ ವೈವಾಹಿಕ ಜೀವನದ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಯಾವ ವಸ್ತುಗಳನ್ನು ದಾನ ಮಾಡಬೇಕು ಅಂತ ನೋಡಿ.

    ಗೌರಿ ಹಬ್ಬದಂದು ಅಕ್ಕಿ ದಾನ ಮಾಡಿ
    ಅನ್ನ ದಾನ ಶ್ರೇಷ್ಠ ದಾನ ಎನ್ನುತ್ತಾರೆ. ಗೌರಿ ಹಬ್ಬದ ದಿನ ಅಕ್ಕಿಯನ್ನು ದಾನ ಮಾಡುವುದರಿಂದ ಅಕ್ಷಯ ಫಲ ಪಡೆದುಕೊಳ್ಳುತ್ತಾರೆ ಎಂದು ಹಿರಿಯರು ಹೇಳಿದ್ದಾರೆ. ಅಕ್ಕಿ ದಾನ ಮಾಡುವುದರಿಂದ ಮನೆಯವರಿಗೆ ಒಳ್ಳೆಯದಾಗುತ್ತೆ.

    Ganesh festival 2022, Ganesh festival 2022 rules, donate rice, clothes, Puja shubh muhurta, ಗೌರಿ-ಗಣೇಶ ಹಬ್ಬ, ಗಣೇಶ ಹಬ್ಬದ ದಿನಾಂಕ, ಗಣೇಶ ಹಬ್ಬದ ಪೂಜೆ ಶುಭ ಮುಹೂರ್ತ, ಗೌರಿ ಹಬ್ಬದಂದು ಈ ವಸ್ತುಗಳನ್ನು ದಾನ ಮಾಡಿ, Kannada news, Karnataka news,
    ಅಕ್ಕಿ ದಾನ


    ಹಣ್ಣುಗಳನ್ನು ದಾನ ಮಾಡಿ
    ಗೌರಿ ಹಬ್ಬದಂದು ವ್ರತ ಮಡುವ ಮಹಿಳೆಯರು ದೇವಸ್ಥಾನಕ್ಕೆ ಹಣ್ಣುಗಳನ್ನು ದಾನ ಮಾಡಬೇಕು. ಹಣ್ಣುಗಳನ್ನು ದಾನ ಮಾಡಿದ್ರೆ ನೀವು ಶುಭ ಸುದ್ದಿ ಕೇಳ್ತೀರಿ. ಕಟ್ಟಿನಿಟ್ಟಿನಿಂದ ವ್ರತ ಮಾಡಿದ್ರೆ ನೀವು ಅಂದು ಕೊಂಡಿದ್ದು ಆಗುತ್ತೆ.

    Ganesh festival 2022, Ganesh festival 2022 rules, donate rice, clothes, Puja shubh muhurta, ಗೌರಿ-ಗಣೇಶ ಹಬ್ಬ, ಗಣೇಶ ಹಬ್ಬದ ದಿನಾಂಕ, ಗಣೇಶ ಹಬ್ಬದ ಪೂಜೆ ಶುಭ ಮುಹೂರ್ತ, ಗೌರಿ ಹಬ್ಬದಂದು ಈ ವಸ್ತುಗಳನ್ನು ದಾನ ಮಾಡಿ, Kannada news, Karnataka news,
    ಹಣ್ಣುಗಳನ್ನು ದಾನ ಮಾಡಿ


    ಇದನ್ನೂ ಓದಿ: Ganesh Festival: ಗಣೇಶನ ಮೂರ್ತಿಗಳಿಗೆ ಜೀವ ಕೊಡುವವರನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಅಂತಿಮ ಸ್ಪರ್ಶದ ಕ್ಷಣ

    ಬಟ್ಟೆ ದಾನ ಮಾಡಿ
    ಗೌರಿ ಹಬ್ಬದಂದು, ವಿವಾಹಿತ ಮಹಿಳೆಯರಿಗೆ ಬಟ್ಟೆಗಳನ್ನು ದಾನ ಮಾಡಿದ್ರೆ ಒಳ್ಳೆಯದಾಗುತ್ತಂತೆ. ಇಲ್ಲವೇ ಮದುವೆಯಾದ ಮಹಿಳೆಯರು ಬ್ರಾಹ್ಮಣ ಮಹಿಳೆಯರಿಗೆ ಬಟ್ಟೆ ದಾನ ಮಾಡಿದ್ರೆ ಒಳ್ಳೆಯದು. ಇದರಿಂದ ನಿಮ ಜಾತಕದಲ್ಲಿ ತೊಂದ್ರೆ ಇದ್ರೆ ಸರಿ ಹೋಗುತ್ತದೆ.

    Ganesh festival 2022, Ganesh festival 2022 rules, donate rice, clothes, Puja shubh muhurta, ಗೌರಿ-ಗಣೇಶ ಹಬ್ಬ, ಗಣೇಶ ಹಬ್ಬದ ದಿನಾಂಕ, ಗಣೇಶ ಹಬ್ಬದ ಪೂಜೆ ಶುಭ ಮುಹೂರ್ತ, ಗೌರಿ ಹಬ್ಬದಂದು ಈ ವಸ್ತುಗಳನ್ನು ದಾನ ಮಾಡಿ, Kannada news, Karnataka news,
    ಬಟ್ಟೆ ದಾನ


    ಗೋಧಿ ದಾನ ಮಾಡಿ
    ಗೌರಿ ಹಬ್ಬದಂದು ನೀವು ಉಪವಾಸ ಇರುತ್ತೀರಿ. ಆಗ ನೀವು ಗೋಧಿ ದಾನ ಮಡಿದ್ರೆ ನಿಮ್ಮ ಉಪವಸ ಸಂಪೂರ್ಣ ಆಗುವುದು. ಅಥವಾ ಬಾರ್ಲಿಯನ್ನು ಸಹ ನಿಮ್ಮ ಕೈಲಾದಷ್ಟು ದಾನ ಮಾಡಿದ್ರೆ ಒಳ್ಳೆಯದಾಗುತ್ತೆ.

    Ganesh festival 2022, Ganesh festival 2022 rules, donate rice, clothes, Puja shubh muhurta, ಗೌರಿ-ಗಣೇಶ ಹಬ್ಬ, ಗಣೇಶ ಹಬ್ಬದ ದಿನಾಂಕ, ಗಣೇಶ ಹಬ್ಬದ ಪೂಜೆ ಶುಭ ಮುಹೂರ್ತ, ಗೌರಿ ಹಬ್ಬದಂದು ಈ ವಸ್ತುಗಳನ್ನು ದಾನ ಮಾಡಿ, Kannada news, Karnataka news,
    ಗೋಧಿ ದಾನ ಮಾಡಿ


    ಇದನ್ನೂ ಓದಿ: Ganesh Festival: ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡಬಾರದು ಏಕೆ? ನೋಡಿದ್ರೆ ಶಾಪ ತಟ್ಟುತ್ತಾ?

    ಉದ್ದು ಮತ್ತು ಕಡಲೆ ಬೇಳೆಯನ್ನು ದಾನ ಮಾಡಿ

    ಹಣ್ಣುಗಳು, ಅಕ್ಕೆ, ಬಟ್ಟೆ ಜೊತೆಯಲ್ಲಿ, ಉದ್ದು ಮತ್ತು ಕಡಲೆ ಬೇಳೆಯನ್ನು ದಾನ ಮಾಡುವುದು ಕೂಡ ಅತ್ಯಂತ ಒಳ್ಳೆಯದಂತೆ. ಅದಕ್ಕೆ ನಿಮ್ಮ ಕೈಲಾದಷ್ಟು ದಾನ ಮಾಡಿ ಪುಣ್ಯ ಬರುತ್ತೆ ಅಂತ ದೊಡ್ಡವರು ಹೇಳುತ್ತಾರೆ. ಗೌರಿ ಹಬ್ಬದಂದು ನೀವೂ ಈ ವಸ್ತುಗಳನ್ನು ದಾನ ಮಾಡಿ ದೇವರ ಕೃಪೆಗೆ ಪಾತ್ರರಾಗಿ.

    Ganesh festival 2022, Ganesh festival 2022 rules, donate rice, clothes, Puja shubh muhurta, ಗೌರಿ-ಗಣೇಶ ಹಬ್ಬ, ಗಣೇಶ ಹಬ್ಬದ ದಿನಾಂಕ, ಗಣೇಶ ಹಬ್ಬದ ಪೂಜೆ ಶುಭ ಮುಹೂರ್ತ, ಗೌರಿ ಹಬ್ಬದಂದು ಈ ವಸ್ತುಗಳನ್ನು ದಾನ ಮಾಡಿ, Kannada news, Karnataka news,
    ಉದ್ದು ದಾನ


    ಗಣೇಶ ಹಬ್ಬವು, ಈ ವರ್ಷ ಆಗಸ್ಟ್ 31 ರಂದು ಆಚರಿಸಲಾಗುವುದು. ಗಣೇಶ ಚತುರ್ಥಿಯ ಹಬ್ಬವು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಪ್ರಾರಂಭವಾಗುತ್ತದೆ ಮತ್ತು ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಉತ್ಸವವು 10 ದಿನಗಳವರೆಗೆ ಇರುತ್ತದೆ. ಆಚರಣೆಯ ನಂತರ 'ವಿಸರ್ಜನ' ಅಂಗವಾಗಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಈ ಹಬ್ಬವು ಗಣೇಶನು ತನ್ನ ತಾಯಿ ಪಾರ್ವರ್ತಿ/ಗೌರಿ ದೇವತೆಯೊಂದಿಗೆ 'ಕೈಲಾಸ ಪರ್ವತ'ದಿಂದ ಇಳಿಯುವುದನ್ನು ಸೂಚಿಸುತ್ತದೆ.
    Published by:Savitha Savitha
    First published: