Ganesh Festival: ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡಬಾರದು ಏಕೆ? ನೋಡಿದ್ರೆ ಶಾಪ ತಟ್ಟುತ್ತಾ?

ಶ್ರೀ ಕೃಷ್ಣನು ಕೂಡ ಒಮ್ಮೆ ಚತುರ್ಥಿಯಂದು ಚಂದ್ರನನ್ನು ನೋಡಿದ್ದನು. ಈ ಕಾರಣದಿಂದಾಗಿ ಆತನು ಶ್ಯಮಂತಕ ಎಂಬ ರತ್ನವನ್ನು ಕದ್ದನೆಂಬ ಆರೋಪಕ್ಕೆ ಒಳಗಾದನು. ಇದೇ ಕಾರಣಕ್ಕೆ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎನ್ನಲಾಗುತ್ತದೆ.

ಗಣೇಶ ಚತುರ್ಥಿ

ಗಣೇಶ ಚತುರ್ಥಿ

  • Share this:
    ಗಣೇಶ ಹಬ್ಬ (Ganesh Festival) ದೇಶದಾದ್ಯಂತ ಹಿಂದೂಗಳು (Hindus) ಆಚರಿಸುವ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದನ್ನೂ ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ, ಇದು ಆಗಸ್ಟ್ (August) ತಿಂಗಳ ಮಧ್ಯಭಾಗದಿಂದ ಸೆಪ್ಟೆಂಬರ್ ಅಂತ್ಯದ ನಡುವೆ ಬರುತ್ತದೆ. ಗಣೇಶ ಚತುರ್ಥಿಯು ಶಿವ (Shiva) ಮತ್ತು ಪಾರ್ವತಿ ದೇವಿಯ ಪುತ್ರನಾದ ಗಣೇಶನ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಆನೆ ದೇವರು ಎಂದೂ ಕರೆಯಲ್ಪಡುವ ಗಣೇಶನು ಸಂಪತ್ತು, ವಿಜ್ಞಾನ, ಜ್ಞಾನ, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು. ಎಲ್ಲಾ ಹೊಸ ಆರಂಭಗಳು ಗಣೇಶನ ಆರಾಧನೆಯೊಂದಿಗೆ ಪ್ರಾರಂಭವಾಗುತ್ತವೆ ಏಕೆಂದರೆ ಅವನು ಅಡೆತಡೆಗಳನ್ನು ನಿವಾರಿಸುವವನು ಎಂದು ಕರೆಯಲಾಗುತ್ತದೆ. ಈ ತಿಂಗಳ ಗಣೇಶ ಹಬ್ಬವು, ಆಗಸ್ಟ್ 31, 2022 ರಂದು ಬಂದಿದೆ. ಗಣೇಶ ಚತುರ್ಥಿ ತಿಥಿಯಂದು ಚಂದ್ರನ ದರ್ಶನ  ಮಾಡಬಾರದಂತೆ (Avoid Moon Sighting). ಏಕೆ? ಓದಿ

    ಗಣೇಶ ಹಬ್ಬದಂದು ಚಂದ್ರನನ್ನು ನೋಡಬಾರದು ಏಕೆ?
    ಪುರಾಣಗಳ ಪ್ರಕಾರ, ಒಮ್ಮೆ ಗಣೇಶನು ಚಂದ್ರಲೋಕದಿಂದ ಲಡ್ಡುಗಳೊಂದಿಗೆ ಬರುತ್ತಿದ್ದನಂತೆ. ಆಗ ದಾರಿಯಲ್ಲಿ ಚಂದ್ರದೇವನನ್ನು ಎದುರಾದನಂತೆ. ಗಣೇಶನ ಕೈಯಲ್ಲಿರುವ ಲಡ್ಡುಗಳು ಮತ್ತು ಗಣೇಶನ ದೊಡ್ಡ ಹೊಟ್ಟೆಯನ್ನು ನೋಡಿ ಚಂದ್ರ ನಗಲು ಆರಂಭಿಸಿದನಂತೆ.

    ಇದರಿಂದ ಕೋಪಗೊಂಡ ಗಣಪತಿಯು ಚಂದ್ರ ದೇವನನ್ನು ಶಪಿಸಿದನು. ನನ್ನನ್ನು ನೋಡಿ ಅಪಹಾಸ್ಯ ಮಾಡುತ್ತೀಯಾ? ನಾನು ನಿನಗೆ ಕ್ಷಯ ರೋಗ ಬರುವಂತೆ ಶಾಪವನ್ನು ನೀಡಿದ್ದೇನೆಂದು ಶಪಿಸುತ್ತಾನೆ. ಅಲ್ಲದೇ ಚತುರ್ಥಿ ದಿನ ನಿನ್ನನ್ನು ಬೇರೆ ಯಾರಾದ್ರೂ ನೋಡಿದ್ರೆ ಅವರಿಗೂ ಕಳಂಕ ಅಂಟಿಕೊಳ್ಳುತ್ತೆ ಎಂದು ಹೇಳಿದನಂತೆ. ಅದಕ್ಕೆ ಯಾರೂ ಚಂದ್ರನ್ನನ್ನು ನೋಡಲ್ಲ.

    ನಕ್ಕ ಚಂದ್ರದೇವನಿಗೆ ಶಾಪವಿತ್ತ ಗಣೇಶ
    ಗಣೇಶ ಚತುರ್ಥಿಯ ಇನ್ನೊಂದು ಕಥೆಯು ಪ್ರಕಾರ, ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಎಲ್ಲಿಗೂ ಸವಾರಿ ಹೋಗುತ್ತಿದ್ದನು. ಇಲಿಗೆ ಹಾವೊಂದು ಅಡ್ಡ ಬರುತ್ತೆ, ಗಾಬರಿಯಿಂದ ಮೂಶಿಕನು ಜಿಗಿಯುತ್ತಾನೆ. ಆಗ ಮೂಶಿಕನ ಬೆನ್ನ ಮೇಲಿದ್ದ ಗಣೇಶನು ನೆಲಕ್ಕೆ ಬೀಳುತ್ತಾನೆ.

    ಇದನ್ನೂ ಓದಿ: Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

    ನಂತರ ಗಣೇಶನು ತಕ್ಷಣ ಎದ್ದು ತನ್ನ ಸುತ್ತಾ ಯಾರಾದರೂ ಇದ್ದಾರೆಯೇ ಎನ್ನುವುದನ್ನು ನೋಡುತ್ತಾನೆ. ಆಗ ಅವನಿಗೆ ಯಾರೋ ನಗುವ ಶಬ್ದ ಕೇಳಿಸಿತು. ಅದು ಚಂದ್ರ ದೇವನಾಗಿದ್ದ. ಚಂದ್ರದೇವ ತನ್ನನ್ನು ನೋಡಿ ನಗುತ್ತಿರುವುದನ್ನು ಕಂಡ ಗಣೇಶನು ಕೋಪಗೊಂಡು ಚಂದ್ರದೇವನು ಕ್ಷೀಣಿಸುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ.

    ಚಂದ್ರನ ಪ್ರಾಣ ಕಾಪಾಡಿದ ಶಿವ
    ಗಣೇಶನ ಶಾಪದಿಂದಾಗಿ, ಚಂದ್ರ ಮತ್ತು ಅದರ ಹೊಳಪು ಪ್ರತಿದಿನ ಕ್ಷೀಣಿಸಲು ಆರಂಭಿಸಿತು ಮತ್ತು ಚಂದ್ರನು ನಿರಂತರವಾಗಿ ಸಾವಿನ ಕಡೆಗೆ ಚಲಿಸಲು ಆರಂಭಿಸಿದನು. ಚಂದ್ರನ ಈ ಸ್ಥಿತಿಯನ್ನು ಕಂಡು ದೇವರುಗಳು ಚಿಂತಿತರಾದರು, ಚಂದ್ರದೇವನು ಗುಜರಾತ್‍ನ ಸಮುದ್ರತೀರದಲ್ಲಿ ಶಿವಲಿಂಗವನ್ನು ಮಾಡುವ ಮೂಲಕ ಕಠಿಣ ತಪಸ್ಸು ಮಾಡಿದನು. ಈ ಕಾರಣದಿಂದಾಗಿ ಶಿವನು ಚಂದ್ರನನ್ನು ತನ್ನ ಶಿರದ ಮೇಲೆ ಇಟ್ಟುಕೊಳ್ಳುವುದರ ಮೂಲಕ ಪ್ರಾಣವನ್ನು ಕಾಪಾಡಿದನು ಎಂದು ಹೇಳಲಾಗುತ್ತೆ.

    ಇದನ್ನೂ ಓದಿ: Swarna Gowri Vratha: ಸ್ವರ್ಣ ಗೌರಿ ವ್ರತ ಮಾಡುವಾಗ ಈ ವಿಷಯಗಳನ್ನು ಮರೆಯಬೇಡಿ

    ವಿಷ್ಣು ಪುರಾಣದಲ್ಲಿ ಕಳಂಕ ಚತುರ್ಥಿ ಕಥೆ ಏನು?
    ವಿಷ್ಣು ಪುರಾಣದಲ್ಲಿ ಕಳಂಕ ಚತುರ್ಥಿಯ ಬಗ್ಗೆ ಒಂದು ಕಥೆಯಿದೆ. ಇದರ ಪ್ರಕಾರ, ಶ್ರೀ ಕೃಷ್ಣನು ಕೂಡ ಒಮ್ಮೆ ಚತುರ್ಥಿಯಂದು ಚಂದ್ರನನ್ನು ನೋಡಿದ್ದನು. ಈ ಕಾರಣದಿಂದಾಗಿ ಆತನು ಶ್ಯಮಂತಕ ಎಂಬ ರತ್ನವನ್ನು ಕದ್ದನೆಂಬ ಆರೋಪಕ್ಕೆ ಒಳಗಾದನು. ಇದೇ ಕಾರಣಕ್ಕೆ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎನ್ನಲಾಗುತ್ತದೆ.
    Published by:Savitha Savitha
    First published: