• Home
  • »
  • News
  • »
  • astrology
  • »
  • Friday Born: ನೀವು ಶುಕ್ರವಾರ ಹುಟ್ಟಿದ್ರೆ ನಿಮ್ಮ ವ್ಯಕ್ತಿತ್ವ ಗ್ಯಾರಂಟಿ ಹೀಗಿರುತ್ತೆ

Friday Born: ನೀವು ಶುಕ್ರವಾರ ಹುಟ್ಟಿದ್ರೆ ನಿಮ್ಮ ವ್ಯಕ್ತಿತ್ವ ಗ್ಯಾರಂಟಿ ಹೀಗಿರುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಐಷಾರಾಮಿಯ ಸಂಕೇತ ಎಂದು ಕರೆಯಲಾಗಿದೆ. ಶುಕ್ರನನ್ನು ಪ್ರಣಯದ ದೇವರು ಎಂದೂ ಸಹ ಕರೆಯಲಾಗುತ್ತದೆ. ಅಂದರೆ ನೀವು ಶುಕ್ರವಾರದಂದು ಜನಿಸಿದ್ದರೆ, ಪ್ರೀತಿಯನ್ನು ಕಂಡುಕೊಳ್ಳುವುದು ಮತ್ತು ಪ್ರೀತಿಯಲ್ಲಿ ಇರುವುದು ನಿಮಗೆ ಇಷ್ಟ ಅಂತ ಹೇಳಲಾಗುತ್ತದೆ.

ಮುಂದೆ ಓದಿ ...
  • Share this:

ನೀವು ಯಾವ ದಿನ (Day) ಹುಟ್ಟಿದ್ದೀರಿ ಅಂತ ಕೆಲವರು ನಮ್ಮನ್ನು ಕೇಳಿರುವುದು ಇರುತ್ತದೆ. ಹುಟ್ಟಿದ ದಿನ (Born Day)  ಏಕೆ ಕೇಳುತ್ತಾ ಇದ್ದಾರೆ ಅಂತ ಸ್ವಲ್ಪ ಸಂದೇಹ ಸಹ ಬಂದಿರುತ್ತದೆ. ನಮ್ಮ ಜನ್ಮ ದಿನಾಂಕವು ಮತ್ತು ವಾರ ನಮ್ಮ ವ್ಯಕ್ತಿತ್ವದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಅಂತ ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology)  ಎಲ್ಲಾ ವಾರಗಳು ಒಂದೊಂದು ಗ್ರಹಕ್ಕೆ ಸಂಬಂಧಿಸಿದ್ದು, ನೀವು ಶುಕ್ರವಾರ (Friday) ಜನಿಸಿದರೆ, ನೀವು ಖಂಡಿತವಾಗಿಯೂ ಶುಕ್ರನಿಂದ (Shukra)  ಪ್ರಭಾವಿತರಾಗುತ್ತೀರಿ.


ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಐಷಾರಾಮಿಯ ಸಂಕೇತ ಎಂದು ಕರೆಯಲಾಗಿದೆ. ಶುಕ್ರನನ್ನು ಪ್ರಣಯದ ದೇವರು ಎಂದೂ ಸಹ ಕರೆಯಲಾಗುತ್ತದೆ. ಅಂದರೆ ನೀವು ಶುಕ್ರವಾರದಂದು ಜನಿಸಿದ್ದರೆ, ಪ್ರೀತಿಯನ್ನು ಕಂಡುಕೊಳ್ಳುವುದು ಮತ್ತು ಪ್ರೀತಿಯಲ್ಲಿ ಇರುವುದು ನಿಮಗೆ ಇಷ್ಟ ಅಂತ ಹೇಳಲಾಗುತ್ತದೆ.


ಅದೇ ಸಮಯದಲ್ಲಿ, ನೀವು ಫ್ಯಾಷನ್, ಮನರಂಜನೆ ಮತ್ತು ಸಂಗೀತದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತೀರಿ. ಭಗವಾನ್ ಶಿವನು ಶುಕ್ರನನ್ನು ನಮ್ಮ ಜೀವನದ ಎಲ್ಲಾ ಸಂತೋಷಗಳಿಗೆ ಅಧಿಪತಿಯನ್ನಾಗಿ ಮಾಡಿದ್ದಾನೆ.


ನಿಸ್ಸಂಶಯವಾಗಿ, ನೀವು ಶುಕ್ರವಾರದಂದು ಜನಿಸಿದರೆ, ನೀವು ಖಂಡಿತವಾಗಿಯೂ ಒಂಭತ್ತು ಗ್ರಹಗಳಲ್ಲಿ ಒಂದಾದ ಶುಕ್ರನ ಆಶೀರ್ವಾದವನ್ನು ಪಡೆಯುತ್ತೀರಿ.


ಶುಕ್ರವಾರದಂದು ಜನಿಸಿದ ಜನರ ವ್ಯಕ್ತಿತ್ವ ಹೇಗಿರುತ್ತದೆ?


ನೀವು ಶುಕ್ರವಾರದಂದು ಜನಿಸಿದ್ದರೆ, ನಿಮಗೆ ವಿಶೇಷ ಆಕರ್ಷಣೆ ಇರುತ್ತದೆ. ನೀವು ಜನರನ್ನು ನಿಮ್ಮ ಕಡೆಗೆ ಬಹಳ ಬೇಗನೆ ಆಕರ್ಷಿಸುತ್ತೀರಿ. ಕೆಲವೊಮ್ಮೆ ನೀವು ನಿಮ್ಮ ಮಾತುಗಳಿಂದ, ಸೌಂದರ್ಯದಿಂದ ಮತ್ತು ಕೆಲವೊಮ್ಮೆ ಜ್ಞಾನದಿಂದ ಜನರನ್ನು ಆಕರ್ಷಿಸಬಹುದು.


ಡ್ಯಾನ್ಸ್ ಮಾಡುವುದು, ಹಾಡುವುದು, ಫ್ಯಾಷನ್ ಮಾಡುವುದು, ಯಾವುದೊ ಒಂದು ಕಲೆಯೊಂದಿಗೆ ಸಂಬಂಧ ಹೊಂದಿರುವುದು ಮತ್ತು ಆಭರಣಗಳನ್ನು ಧರಿಸುವುದು, ಚಲನಚಿತ್ರಗಳನ್ನು ನೋಡುವುದು ಮತ್ತು ಸುಂದರ ಸ್ಥಳಗಳಿಗೆ ಪ್ರಯಾಣಿಸುವುದು ಮುಂತಾದ ಎಲ್ಲಾ ಕೆಲಸಗಳನ್ನು ಮಾಡಲು ನೀವು ಇಷ್ಟಪಡುತ್ತೀರಿ.


ಇದರರ್ಥ ನೀವು ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಬಯಸುತ್ತೀರಿ. ಕೆಲವೊಮ್ಮೆ ನೀವು ಸ್ವಲ್ಪ ಅಸೂಯೆ ಸ್ವಭಾವದವರಾಗಿರುತ್ತೀರಿ.




ನೀವು ಎಷ್ಟು ಸುಲಭವಾಗಿ ಐಷಾರಾಮಿಯ ಕಡೆಗೆ ಆಕರ್ಷಿತರಾಗುತ್ತೀರಿ ಎಂದರೆ ಅನೇಕ ಬಾರಿ ನೀವು ಹಣವನ್ನು ಸಂಪಾದಿಸಲು ತಪ್ಪು ಜನರೊಂದಿಗೆ ತೊಡಗಿಸಿಕೊಳ್ಳುತ್ತೀರಿ. ನಂತರ ನೀವು ನಷ್ಟವನ್ನು ಎದುರಿಸಬೇಕಾಗಬಹುದು.


ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಬಯಸುವ ಜನರು


ನೀವು ಶುಕ್ರವಾರದಂದು ಜನಿಸಿರುವುದರಿಂದ ನೀವು ಯಾವಾಗಲೂ ನಿಮ್ಮ ಸುತ್ತಲೂ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಬಯಸುತ್ತೀರಿ.


ನೀವು ಸೃಜನಶೀಲರಾಗಿದ್ದು ಮತ್ತು ಯಾವಾಗಲೂ ಹೊಸದನ್ನು ಮಾಡಲು ಬಯಸುತ್ತೀರಿ. ನಿಮ್ಮ ಕೆಲಸದ ಸ್ಥಳವನ್ನು ಸುಂದರವಾಗಿ ಅಲಂಕರಿಸಲು ಸಹ ನೀವು ಬಯಸುತ್ತೀರಿ.


ನೀವು ಪ್ರತಿದಿನ ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡಲು ಬಯಸುತ್ತೀರಿ. ನೃತ್ಯ, ಸಂಗೀತ, ಬೋಧನೆ, ಕಂಪ್ಯೂಟರ್ ಸಾಫ್ಟ್‌ವೇರ್ ಉದ್ಯಮ, ವಿಷಯ ಬರವಣಿಗೆ, ಫ್ಯಾಷನ್, ಮನರಂಜನಾ ಉದ್ಯಮ, ರತ್ನಗಳು ಮತ್ತು ಆಭರಣಗಳು, ಒಳಾಂಗಣ ವಿನ್ಯಾಸದಂತಹ ಉದ್ಯೋಗಗಳು ನಿಮಗೆ ಹೆಚ್ಚು ಸೂಕ್ತವಾಗಿವೆ.


ಶುಕ್ರವಾರ ಜನಿಸಿದವರು ತುಂಬಾನೇ ರೊಮ್ಯಾಂಟಿಕ್ ಆಗಿರುತ್ತಾರೆ..


ಶುಕ್ರವಾರ ಜನಿಸಿದವರು ರೊಮ್ಯಾಂಟಿಕ್ ಆಗಿರುತ್ತಾರೆ. ಈ ಜನರು ತಮ್ಮ ಭಾವನೆಗಳ ಬಗ್ಗೆ ತುಂಬಾ ಭಾವುಕರಾಗಿರುತ್ತಾರೆ. ಅವರು ಪ್ರೀತಿ ಮತ್ತು ಆಕರ್ಷಣೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಅಸಮರ್ಥರಾಗಿರುತ್ತಾರೆ.


ಅವರು ಪ್ರೀತಿಯಲ್ಲಿದ್ದಾಗ, ಅವರು ತಮ್ಮ ಸಂಗಾತಿಯನ್ನು ಸಂಪೂರ್ಣವಾಗಿ ಪ್ರೀತಿಸುತ್ತಾರೆ. ಅವರ ಹೃದಯವೂ ಕೂಡ ಬಹು ಬೇಗನೆ ಒಡೆದು ಹೋಗುತ್ತದೆ, ಆದರೆ ವಿಶೇಷವೆಂದರೆ ಅವರು ತಮ್ಮ ಹೃದಯವನ್ನು ಬಹು ಬೇಗನೆ ಬೇರೊಂದು ಸ್ಥಳಕ್ಕೆ ಜೋಡಿಸಿಕೊಳ್ಳುತ್ತಾರೆ.


ಇದನ್ನು ಓದಿ: ಜಾತಕದಲ್ಲಿ ಈ ಯೋಗ ಇದ್ರೆ ಸರ್ಕಾರಿ ಕೆಲಸ ಫಿಕ್ಸ್ ಅಂತೆ


ಇವರು ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು..


ಶುಕ್ರವಾರ ಜನಿಸಿದ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರು ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರು ಆಗಾಗ್ಗೆ ಧೂಳಿನ ಅಲರ್ಜಿ ಸಮಸ್ಯೆಗಳನ್ನು ಹೊಂದಿರುತ್ತಾರೆ.


ಶುಕ್ರವಾರ ಜನಿಸುವುದರಿಂದ, ಅಂತಹ ಜನರು ಆಹಾರವನ್ನು ತುಂಬಾ ಇಷ್ಟಪಡುತ್ತಾರೆ, ಆದ್ದರಿಂದ ಅವರು ಮಧುಮೇಹ ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಹೊಂದಬಹುದು.


ಶುಕ್ರವಾರ ಜನಿಸಿದವರು ಬಿಳಿ ಬಣ್ಣದ ಉಡುಪನ್ನು ಧರಿಸಬೇಕು


ಶುಕ್ರನ ಬಣ್ಣವನ್ನು ಬಿಳಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶುಕ್ರವಾರ ಜನಿಸಿದ ಜನರು ಯಾವುದೇ ಸಭೆ ಅಥವಾ ಯಾವುದೇ ವಿಶೇಷ ಸಂದರ್ಶನದಲ್ಲಿ ಬಿಳಿ ಬಣ್ಣವನ್ನು ಧರಿಸಬೇಕು.


ಇದು ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ, ಗುಲಾಬಿ ಅಥವಾ ಪ್ರಕಾಶಮಾನವಾದ ಬಣ್ಣದ ಬಟ್ಟೆಗಳನ್ನು ವಿಶೇಷ ಆಭರಣಗಳೊಂದಿಗೆ ನೀವು ಧರಿಸಬಹುದು.


ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿದರೆ ಒಳ್ಳೆಯದು..


ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು. ವಿವೇಚನಾರಹಿತವಾಗಿ ಖರ್ಚು ಮಾಡಿದ ಹಣವು ನಿಮಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು.


ಇದನ್ನೂ ಓದಿ: ಈ ರಾಶಿಯವರಿಗೆ ಜನವರಿಯಲ್ಲಿ ರಾಜಯೋಗ, ಐಶ್ವರ್ಯ ತುಂಬಿ ತುಳುಕಲಿದೆ


ಮತ್ತೊಂದೆಡೆ, ಶುಕ್ರವಾರ ಮಾತೆ ಲಕ್ಷ್ಮಿ ಮತ್ತು ದುರ್ಗಾ ಮಾತೆಯನ್ನು ಪೂಜಿಸುವುದು ನಿಮಗೆ ತುಂಬಾ ಒಳ್ಳೆಯದು. ಶುಕ್ರವಾರ ಬಡ ಹೆಣ್ಣುಮಕ್ಕಳಿಗೆ ಆಹಾರ ನೀಡುವುದು ಮತ್ತು ಅವರಿಗೆ ಅಗತ್ಯ ವಸ್ತುಗಳನ್ನು ನೀಡುವುದು ಸಹ ನಿಮಗೆ ಅದೃಷ್ಟ ತಂದು ಕೊಡಬಹುದು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು