Home Vastu: ನಿಮ್ಮ ಮನೆಯಲ್ಲಿ ಅದೃಷ್ಟ ನೆಲೆಸಲು ಈ ವಾಸ್ತು ಟಿಪ್ಸ್​​ ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮ್ಮ ಕಚೇರಿಗಳು ಮತ್ತು ಮನೆಗಳ ವಾಸ್ತುಶಾಸ್ತ್ರದ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ವಾಸಸ್ಥಳವನ್ನು ಹೆಚ್ಚು ಧನಾತ್ಮಕ ಮತ್ತು ಶಕ್ತಿಯುತವಾಗಿಸಲು ಈ ಟಿಪ್ಸ್​ ಫಾಲೋ ಮಾಡಿ.

  • Share this:

ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿರಬೇಕು ಮತ್ತು ಸದಾ ಮನೆಯು ನಂದಗೋಕುಲದ ರೀತಿಯಲ್ಲಿ ಸಂತೋಷದಿಂದರಬೇಕು (Happy) ಅಂತ ಯಾರಿಗೆ ತಾನೇ ಆಸೆ ಇರುವುದಿಲ್ಲ ಹೇಳಿ? ಹೌದು ಪ್ರತಿಯೊಬ್ಬರಿಗೂ ಅವರ ಮನೆ ಚೆನ್ನಾಗಿರಬೇಕು ಅಂತ ಆಸೆ ಇದ್ದೇ ಇರುತ್ತದೆ. ಬಹುಶಃ ಅದಕ್ಕೆ ಇರಬೇಕು ಇತ್ತೀಚೆಗೆ ಜನರು (People) ತಮ್ಮ ಮನೆಯನ್ನು (Home) ಕಟ್ಟಿಸುವಾಗ ಪೂರ್ತಿಯಾಗಿ ವಾಸ್ತುಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡು ಮನೆಯನ್ನು ಕಟ್ಟಿಸಿಕೊಳ್ಳುತ್ತಾರೆ ಅಂತ ಹೇಳಬಹುದು. ಮನೆಯಲ್ಲಿ ಸಕಾರಾತ್ಮಕ ಶಕ್ತಿ (Strength) ಮನೆ ಮಾಡಲು, ಮನೆಯ ವಾಸ್ತುವಿಗೂ ಮತ್ತು ಜೋತಿಷ್ಯಕ್ಕೂ ಏನು ಸಂಬಂಧ ಅಂತ ಕೆಲವರು ಕೇಳಬಹುದು.


ಭೂಮಿಯ ವಿದ್ಯುತ್ಕಾಂತೀಯ ಬಲಗಳು ಮತ್ತು ಇತರ ಗ್ರಹಗಳಿಂದ ಉತ್ಪತ್ತಿಯಾಗುವ ವಿಕಿರಣಕ್ಕೆ ನೇರವಾಗಿ ಸಂಬಂಧಿಸಿವೆ. ಆದ್ದರಿಂದ ವಾಸ್ತು ಮತ್ತು ಜ್ಯೋತಿಷ್ಯವು ಪರಸ್ಪರ ಸಂಬಂಧ ಹೊಂದಿದೆ ಅಂತ ಹೇಳುತ್ತಾರೆ. ಜ್ಯೋತಿಷ್ಯವು ವಿಜ್ಞಾನವಲ್ಲದೆ ಬೇರೇನೂ ಅಲ್ಲ ಮತ್ತು ಮಾನವನ ಮೇಲೆ ನಕ್ಷತ್ರಗಳು, ಗ್ರಹಗಳು ಮತ್ತು ಇತರ ಆಕಾಶಕಾಯಗಳ ಪರಿಣಾಮಗಳು ಇದ್ದೆ ಇರುತ್ತದೆ.


ವಾಸ್ತು ವಾಸಸ್ಥಳಗಳ ಮೇಲೆ ಪರಿಣಾಮ ಬೀರುತ್ತದೆ  ಆದ್ದರಿಂದ 9 ಗ್ರಹಗಳು, 27 ನಕ್ಷತ್ರಪುಂಜಗಳು ಮತ್ತು 12 ರಾಶಿಚಕ್ರ ಚಿಹ್ನೆಗಳು ನಿಮ್ಮ ಕೆಲಸ ಮತ್ತು ವಾಸಿಸುವ ಸ್ಥಳದ ಮೇಲೆ ಪ್ರಭಾವ ಬೀರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗಿರುವಾಗ, ನಿಮ್ಮ ಕಚೇರಿಗಳು ಮತ್ತು ಮನೆಗಳ ವಾಸ್ತುಶಾಸ್ತ್ರದ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ವಾಸಸ್ಥಳವನ್ನು ಹೆಚ್ಚು ಧನಾತ್ಮಕ ಮತ್ತು ಶಕ್ತಿಯುತವಾಗಿಸಲು ಮತ್ತು ಪಂಚತತ್ವದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಲು ವಾಸ್ತುವಿನ ಬಗ್ಗೆ ಕೆಲವು ಸಲಹೆಗಳನ್ನು ಇಲ್ಲಿ ಜೋತಿಷಿ ಚಿರಾಗ್ ಅವರು ತಿಳಿಸಿದ್ದಾರೆ ನೋಡಿ.


ಇದನ್ನೂ ಓದಿ: Dream Meaning: ಕನಸಿನಲ್ಲಿ ಹಲ್ಲು ಮುರಿದ್ರೆ ಯಾವುದರ ಸೂಚನೆ? ಇಲ್ಲಿದೆ ಮಾಹಿತಿ


1. ಪೂರ್ವದಲ್ಲಿರುವ ಕಿಟಕಿಯಿಂದ ಮನೆಯ ಒಳಗೆ ತುಂಬಾನೇ ಸೂರ್ಯನ ಬೆಳಕು ಬರುವ ರೀತಿಯಲ್ಲಿರಬೇಕು, ಏಕೆಂದರೆ ಅದು ಮನೆಗೆ ಸಮೃದ್ಧಿಯನ್ನು ತರುತ್ತದೆ.


2. ಕೇತುವಿನ ಈಶಾನ್ಯ ದಿಕ್ಕಿನ ಪ್ರಕಾರ, ಮುಖ್ಯ ದ್ವಾರದ ಪ್ರವೇಶದ್ವಾರದ ಬಳಿ ಪ್ರಮುಖ ಮೆಟ್ಟಿಲುಗಳನ್ನು ಹೊಂದಿರುವುದು ಒಳ್ಳೆಯದಲ್ಲ ಏಕೆಂದರೆ ಇದು ಭ್ರಮೆಯ ಸಂಕೇತವಾಗಿದೆ ಮತ್ತು ಕಡಿಮೆ ಅದೃಷ್ಟಶಾಲಿ ಎಂದು ಪರಿಗಣಿಸಲಾಗಿದೆ.


3. ಗುರುಗ್ರಹದ ದಿಕ್ಕಾಗಿರುವುದರಿಂದ ಪೂಜಾ ಕೋಣೆಗೆ ಈಶಾನ್ಯ ದಿಕ್ಕು ಹೆಚ್ಚು ಸೂಕ್ತವಾಗಿದೆ.


4. ಪ್ರವೇಶ ದ್ವಾರಕ್ಕೆ ಉತ್ತರ ಮತ್ತು ಪೂರ್ವ ಎರಡೂ ದಿಕ್ಕುಗಳು ತುಂಬಾ ಸೂಕ್ತವಾಗಿರಬೇಕು ಮತ್ತು ಇಲ್ಲಿ ಶೂ ರ್ಯಾಕ್ ಗಳನ್ನು ಇಡುವುದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು.




5. ಮನೆಯಲ್ಲಿ ಪ್ರವೇಶದ್ವಾರದ ಬಳಿ 3 ಕ್ಕಿಂತ ಹೆಚ್ಚು ಬಾಗಿಲುಗಳನ್ನು ಹೊಂದಿರುವುದು ದುರದೃಷ್ಟಕರ, ಏಕೆಂದರೆ ಇದು ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ.


6. ನದಿ ಅಥವಾ ಸಾಗರದ ರಮಣೀಯ ನೋಟದ ವರ್ಣಚಿತ್ರಗಳು, ಅಥವಾ ಹರಿಯುವ ನೀರು ಮತ್ತು ಸಮುದ್ರದ ಕಲಾತ್ಮಕ ಚಿತ್ರಗಳು ನಿಮ್ಮ ಜೀವನಕ್ಕೆ ಸಾಕಷ್ಟು ಅದೃಷ್ಟವನ್ನು ತರುತ್ತದೆ.


7. ಅಗ್ನಿಯ ಅಧಿಪತಿ (ಅಗ್ನಿ) ಆಗ್ನೇಯ ದಿಕ್ಕಿನ ಮೇಲೆ ಆಳ್ವಿಕೆ ನಡೆಸುತ್ತಾನೆ ಮತ್ತು ಆದ್ದರಿಂದ ಅಡುಗೆಮನೆಯು ಈ ದಿಕ್ಕಿನಲ್ಲಿಯೇ ಇರಬೇಕು. ಅಡುಗೆ ಮಾಡುವ ವ್ಯಕ್ತಿಯು ಪೂರ್ವಕ್ಕೆ ಮುಖ ಮಾಡಿ ಆಡುಗೆ ಮಾಡುವ ದಿಕ್ಕಿನಲ್ಲಿ ಪ್ಲಾಟ್ಫಾರ್ಮ್ ಅನ್ನು ಹೊಂದಲು ಸಲಹೆ ನೀಡುತ್ತಾರೆ.


8. ಗುರುಗ್ರಹವು ಈಶಾನ್ಯ ದಿಕ್ಕನ್ನು ಆಳುತ್ತದೆ ಮತ್ತು ಆದ್ದರಿಂದ ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿರಬೇಕು, ಆದರೆ ದೇವತೆಗಳು, ದೇವರುಗಳು ಮತ್ತು ಮೂರ್ತಿಗಳ ಫೋಟೋಗಳು ಪೂರ್ವ ದಿಕ್ಕಿಗೆ ಮುಖವಾಗಿರಬೇಕು. ನಿಮ್ಮನ್ನು ಅಗಲಿದ ಹಿರಿಯರ ಫೋಟೋಗಳನ್ನು ಇಲ್ಲಿಡುವುದು ಸೂಕ್ತವಲ್ಲ.


9. ಮನೆಯಲ್ಲಿ ಹಿಂಸಾಚಾರವನ್ನು ಚಿತ್ರಿಸುವ ಚಿತ್ರಗಳನ್ನು ಹಾಕಲೆಬೇಡಿ, ಏಕೆಂದರೆ ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.


10. ಚಂದ್ರನು ವಾಯುವ್ಯ ದಿಕ್ಕನ್ನು ಆಳುತ್ತಾನೆ, ಆದ್ದರಿಂದ ಮನೆಯ ಆ ಬದಿಯನ್ನು ವ್ಯರ್ಥ ವಸ್ತುಗಳಿಂದ ತುಂಬಬಾರದು ಮತ್ತು ಕತ್ತಲೆಯಿಂದ ತುಂಬಿರಬಾರದು. ಹೀಗೆ ತುಂಬಿದ್ದಲ್ಲಿ ಮನೆಯ ಸ್ತ್ರೀಯರು ಅನಾರೋಗ್ಯಕ್ಕೆ ಒಳಗಾಗಬಹುದು.


11. ಕುಟುಂಬ ಸದಸ್ಯರ ನಡುವಿನ ಜಗಳವನ್ನು ತಪ್ಪಿಸಲು ವರಾಂಡಾದಲ್ಲಿ ವಿಂಡ್ ಚೈಮ್ ಮತ್ತು ಮಲಗುವ ಕೋಣೆಯಲ್ಲಿ ಹರಳುಗಳನ್ನು ಬಳಸಿರಿ.


12. ಕುಟುಂಬ ಸದಸ್ಯರ ರಾಶಿಚಕ್ರ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಿಂದ ಮನೆಗಳಲ್ಲಿ ಕೆಲಸ ಮಾಡದ ಎಲ್ಲಾ ಗಡಿಯಾರಗಳನ್ನು ಮನೆಯಿಂದ ಹೊರಕ್ಕೆ ಹಾಕಿರಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು