• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Feng Shui Tips: ಈ ಫೆಂಗ್‌ ಶೂಯಿ ಸಲಹೆಗಳನ್ನು ಪಾಲಿಸಿದರೆ ನಕಾರಾತ್ಮಕ ಶಕ್ತಿ ತೊಡೆದು ಹಾಕಬಹುದು!  

Feng Shui Tips: ಈ ಫೆಂಗ್‌ ಶೂಯಿ ಸಲಹೆಗಳನ್ನು ಪಾಲಿಸಿದರೆ ನಕಾರಾತ್ಮಕ ಶಕ್ತಿ ತೊಡೆದು ಹಾಕಬಹುದು!  

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮನೆಯೆಂದರೆ ಅದು ಸಂಬಂಧ, ಸುಖ, ಹಾಗೂ ನೆಮ್ಮದಿಯ ತಾಣವಾಗಬೇಕು. ಇಲ್ಲಿ ಜನರು ಭಾವನೆಗಳೊಂದಿಗೆ ಹಾಗೂ ಸಂಬಂಧಗಳೊಂದಿಗೆ ಬೆರೆತುಕೊಂಡಿರುತ್ತಾರೆ. ಇಲ್ಲಿ ಧನಾತ್ಮಕ ಶಕ್ತಿಯಿದ್ದರೆ ಮಾತ್ರ ಶಾಂತಿಯಿಂದ ಇರಲು ಸಾಧ್ಯ. ಆದ್ಧರಿಂದ ಇದಕ್ಕೆ ಸಹಾಯ ಮಾಡುವಂಥ ಫೆಂಗ್‌ ಶೂಯಿ ಅಭ್ಯಾಸಗಳು ಯಾವುವು ಅನ್ನೋದನ್ನು ನೋಡೋಣ.

ಮುಂದೆ ಓದಿ ...
  • Share this:

ಚೀನಾದ ಸಾಂಪ್ರದಾಯಿಕ ಅಭ್ಯಾಸಗಳಾದ (Traditional Practice) ಫೆಂಗ್‌ ಶೂಯಿಯನ್ನು (Feng Shui) ಅನೇಕ ಜನರು ನಂಬುತ್ತಾರೆ. ಜೊತೆಗೆ ಆ ಅಭ್ಯಾಸಗಳನ್ನು ಪಾಲಿಸುತ್ತಾರೆ. ಈ ಮೂಲಕ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಸಂಪತ್ತು ಲಭಿಸುತ್ತದೆ ಎಂದು ಭಾವಿಸುತ್ತಾರೆ. ಹೌದು, ಬಹಳಷ್ಟು ಜನರು ನಮ್ಮ ಮನೆಯಲ್ಲಿ ಅಥವಾ ಕೆಲಸದ ಸ್ಥಳದಿಂದ ನಕಾರಾತ್ಮಕ ಶಕ್ತಿಯನ್ನು (Negative Energy) ತೆಗೆದುಹಾಕಲು ಫೆಂಗ್ ಶೂಯಿ ನಿಯಮಗಳನ್ನು ಅನುಸರಿಸುತ್ತಾರೆ. ಇದು ಅದ್ಭುತ ಪರಿಣಾಮಗಳನ್ನು ಬೀರುತ್ತದೆ ಎಂದು ನಂಬುತ್ತಾರೆ.


ಅದರಲ್ಲೂ ಮನೆಯೆಂದರೆ ಅದು ಸಂಬಂಧ, ಸುಖ, ಹಾಗೂ ನೆಮ್ಮದಿಯ ತಾಣವಾಗಬೇಕು. ಇಲ್ಲಿ ಜನರು ಭಾವನೆಗಳೊಂದಿಗೆ ಹಾಗೂ ಸಂಬಂಧಗಳೊಂದಿಗೆ ಬೆರೆತುಕೊಂಡಿರುತ್ತಾರೆ. ಇಲ್ಲಿ ಧನಾತ್ಮಕ ಶಕ್ತಿಯಿದ್ದರೆ ಮಾತ್ರ ಶಾಂತಿಯಿಂದ ಇರಲು ಸಾಧ್ಯ. ಆದ್ಧರಿಂದ ಇದಕ್ಕೆ ಸಹಾಯ ಮಾಡುವಂಥ ಫೆಂಗ್‌ ಶೂಯಿ ಅಭ್ಯಾಸಗಳು ಯಾವುವು ಅನ್ನೋದನ್ನು ನೋಡೋಣ.


1. ನಿಮ್ಮ ಮನೆಯ ಸ್ಟೌವ್‌ ಸ್ವಚ್ಛವಾಗಿಡಿ: ಫೆಂಗ್‌ಶುಯಿಯಲ್ಲಿ, ಆಹಾರ ತಯಾರಿಸುವ ಒಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅವುಗಳನ್ನು ಅದೃಷ್ಟ ಮತ್ತು ಹಣ ವರ್ಧಕವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಸ್ಟೌವ್ಅನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಗ್ರೀಸ್ ಮುಕ್ತವಾಗಿರಿಸಿ. ನಿಮ್ಮ ಬದುಕಿನಲ್ಲಿ ಇದು ಹಣದ ಹರಿವನ್ನು ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.


ಇದನ್ನೂ ಓದಿ: ಮನೆಯ ನೈಋತ್ಯ ಮೂಲೆಯಲ್ಲಿ ಉಪ್ಪು, ನೀರು ಇಟ್ರೆ ಸಂತಸ ಗ್ಯಾರಂಟಿ!


2. ಮಲಗುವ ಕೋಣೆಯಲ್ಲಿ ಎಲೆಕ್ಟ್ರಾನಿಕ್ಸ್ ಬೇಡ!: ಇದು ಕಠಿಣವಾಗಿದ್ದರೂ, ಎಲೆಕ್ಟ್ರಾನಿಕ್ಸ್ ಉಪಕರಣಗಳು ಮಾನಸಿಕ ತೊಂದರೆಗಳನ್ನು ಉಂಟುಮಾಡುವ ಎಲೆಕ್ಟ್ರೋ-ಸ್ಟ್ಯಾಟಿಕ್ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೇ ಇದು ನಿದ್ರಾಹೀನತೆಗೆ ಕಾರಣವಾಗಬಹುದು. ಏಕಾಗ್ರತೆಗೆ ಅಸಮರ್ಥತೆಯನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ.


3. ಬೆಡ್ ಎದುರು ಬಾಗಿಲು ಬರುವುದನ್ನು ತಡೆಯಿರಿ: ಋಣಾತ್ಮಕ ಶಕ್ತಿಯು ಬಾಗಿಲಿನ ಮೂಲಕ ಪ್ರವೇಶಿಸಬಹುದು. ಆದ್ದರಿಂದ ಬಾಗಿಲಿನ ಜೊತೆಯಲ್ಲಿ ಹಾಸಿಗೆಯನ್ನು ಜೋಡಿಸುವುದು ಶಕ್ತಿಯುತ ಅಡಚಣೆಗಳನ್ನು ಉಂಟುಮಾಡುತ್ತದೆ.


ಸಾಂಕೇತಿಕ ಚಿತ್ರ


ಇದು ಕೆಟ್ಟದ್ದನ್ನು ಉಂಟುಮಾಡಬಹುದು. ಅಲ್ಲದೇ ಹಾಸಿಗೆಯನ್ನು ಉತ್ತರ ದಿಕ್ಕಿಗೆ ಇರಿಸಬೇಡಿ, ಏಕೆಂದರೆ ಇದು ನಿಮ್ಮ ಬದುಕಿನಲ್ಲಿ ಹೆಚ್ಚು ದುಃಖವನ್ನು ತರಬಹುದು.


4. ನಿಮ್ಮ ಪ್ರವೇಶಮಾರ್ಗವನ್ನು ಸ್ವಚ್ಛಗೊಳಿಸಿ: ನಿಮ್ಮ ಮನೆಯ ಪ್ರವೇಶವು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿದ್ದರೆ, ನಿಮ್ಮ ಮನೆಗೆ ಪ್ರವೇಶಿಸುವ ಶಕ್ತಿಯು ಧನಾತ್ಮಕ ವೈಬ್‌ಗಳನ್ನು ತರುತ್ತದೆ. ಅದು ಕಾಮನ್‌ ಏರಿಯಾ ಆಗಿದ್ದರೂ ಸಹ, ಈ ವಲಯವನ್ನು ಅಚ್ಚುಕಟ್ಟಾಗಿ ಮತ್ತು ಕೊಳಕು ಮುಕ್ತವಾಗಿಡಲು ಮರೆಯದಿರಿ.


5. ಮುಖ್ಯದ್ವಾರದ ಹಾಗೂ ಬೆಡ್‌ ಎದುರು ಕನ್ನಡಿ ಇರಬೇಡಿ: ಕನ್ನಡಿಗಳು ಇತರ ಪ್ರಪಂಚಗಳು ಮತ್ತು ಆಯಾಮಗಳಿಂದ ಶಕ್ತಿಯನ್ನು ಹೊರತರುತ್ತವೆ. ಅವುಗಳು ಒಂದು ರೀತಿಯ ಪೋರ್ಟಲ್. ನಿಮ್ಮ ಮುಖ್ಯ ದ್ವಾರದ ಎದುರಿನ ಗೋಡೆಯು ಎಂದಿಗೂ ಕನ್ನಡಿಯನ್ನು ಹೊಂದಿರಬಾರದು.


6. ಅಡುಗೆ ಮನೆಯನ್ನು ಸ್ವಚ್ಛವಾಗಿರಿಸಿ: ಅಡುಗೆ ಮಾಡುವುದು ಮತ್ತು ತಿನ್ನುವುದು ಪವಿತ್ರ ಚಟುವಟಿಕೆಗಳು ಎಂದು ನಂಬಲಾಗುತ್ತದೆ. ಹಾಗೆಯೇ ಅಡುಗೆಮನೆಯು ಕುಟುಂಬ ಮತ್ತು ಬಾಂಧವ್ಯವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ನಿಮ್ಮ ಕೌಂಟರ್ ಅನ್ನು ನೀವು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಕಿಚನ್‌ ಕೌಂಟರ್‌ನಲ್ಲಿ ಯಾವುದೇ ಎಣ್ಣೆ, ಮಸಾಲೆ, ಬಿದ್ದಿರದಂತೆ ನೋಡಿಕೊಳ್ಳಿ.


7. ಮಕ್ಕಳ ಕೊಠಡಿಗೆ ನೀಲಿಬಣ್ಣ: ಮಕ್ಕಳ ಕೊಠಡಿಗಳಲ್ಲಿ ಗಾಢ ಬಣ್ಣಗಳನ್ನು ಬಳಸಬೇಡಿ. ಏಕೆಂದರೆ ಇದು ಅವರನ್ನು ಪ್ರಚೋದಿಸುತ್ತದೆ. ಆದರೆ ತಿಳಿ ನೀಲಿಬಣ್ಣದ ಬಣ್ಣಗಳು ಅವರನ್ನು ಶಾಂತವಾಗಿ ಇರಿಸುತ್ತವೆ. ಮಕ್ಕಳಿಗೆ ವಿಶ್ರಾಂತಿ ಬೇಕು. ಆದ್ದರಿಂದ ನೀವು ಮನೆಗೆ ಪುನಃ ಬಣ್ಣ ಬಳಿಸುವಾಗ ಈ ವಿಷಯವನ್ನು ನೆನಪಿಟ್ಟುಕೊಳ್ಳಿ.


8. ಮುರಿದ ಪಾತ್ರೆಗಳು ಅಥವಾ ಪೀಠೋಪಕರಣಗಳನ್ನು ಇಟ್ಟುಕೊಳ್ಳಬೇಡಿ: ಕೊಳಕು ಹಳೆಯ ಸೋಫಾ ನಿಮ್ಮ ಮನೆಯಲ್ಲಿದ್ದರೆ ಅದನ್ನು ಆದಷ್ಟು ಬೇಗ ಎಸೆಯಿರಿ. ಮುರಿದ ವಸ್ತುಗಳನ್ನು ಮನೆಯ ಸುತ್ತಲೂ ಇಟ್ಟುಕೊಳ್ಳುವುದು ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟದ್ದಾಗಬಹುದು. ಮುರಿದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು, ದುರದೃಷ್ಟವನ್ನು ಒಳತರುತ್ತದೆ.


ಆದ್ದರಿಂದ ನೀವು ಹೊಸ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದಿದ್ದರೂ ಸಹ, ಕೆಲಸಕ್ಕೆ ಬಾರದ ಹಳೆಯದನ್ನು ಹೊರಹಾಕಿ. ಆ ಜಾಗವನ್ನು ಖಾಲಿಯಾಗಿ ಇರಿಸಿ.




9. ಬಾತ್ರೂಮ್ ಬಾಗಿಲುಗಳನ್ನು ಹಾಕಲು ಮರೆಯಬೇಡಿ: ವಾಶ್ ರೂಂ ಅನ್ನೋದು ವಿಸರ್ಜನೆಯ ಸ್ಥಳವಾಗಿದೆ. ಆದ್ದರಿಂದ ಈ ಸ್ಥಳವು ನಕಾರಾತ್ಮಕ ಶಕ್ತಿಗಳಿಂದ ಕೂಡಿರುತ್ತದೆ.


ಆದ್ದರಿಂದ ಬಳಕೆಯಲ್ಲಿರದಿದ್ದಾಗ ಅದನ್ನು ಯಾವಾಗಲೂ ಮುಚ್ಚಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಈ ಸ್ಥಳವು ಗಾಢವಾದ ಶಕ್ತಿಯನ್ನು ಹೊಂದಿದೆ. ನಿಮಗೆ ಸಾಧ್ಯವಾದರೆ ಪ್ರತಿ ರಾತ್ರಿ ನಿಮ್ಮ ಬಾತ್‌ರೂಂ ನಲ್ಲಿ ಸ್ವಲ್ಪ ಉಪ್ಪನ್ನು ಸಿಂಪಡಿಸಿ.


10. ಸೋರುವ ಟ್ಯಾಪ್‌ : ಸೋರಿಕೆಯಾಗುವ ಟ್ಯಾಪ್‌ಗಳು ಅದೃಷ್ಟವು ಬರಿದಾಗುತ್ತಿರುವುದನ್ನು ಸಂಕೇತಿಸುತ್ತದೆ. ಆದ್ದರಿಂದ ಪ್ರತಿ ಸೋರಿಕೆಯನ್ನು ಆದಷ್ಟು ಬೇಗ ಸರಿಪಡಿಸಲು ಪ್ರಯತ್ನಿಸಿ.


ಒಂದು ಹನಿ ನೀರು ಹಾನಿಯಬಾರದು. ನಿಮ್ಮ ಪ್ಲಂಬರ್‌ಗೆ ಕರೆ ಮಾಡಿ ಮತ್ತು ಇದನ್ನು ಸರಿಪಡಿಸಿ ಇಲ್ಲವಾದರೆ. ಇದು ನಿಮ್ಮ ಹಣಕಾಸು ಮತ್ತು ಅದೃಷ್ಟವನ್ನು ಹರಿಸುತ್ತದೆ ಎಂಬುದನ್ನು ನೆನಪಿಡಿ.

top videos
    First published: