• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astrology: ಈ 8 ವಾಸ್ತು ಟಿಪ್ಸ್​​ ಫಾಲೋ ಮಾಡಿದ್ರೆ ನಿಮ್ಮ ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತೆ

Astrology: ಈ 8 ವಾಸ್ತು ಟಿಪ್ಸ್​​ ಫಾಲೋ ಮಾಡಿದ್ರೆ ನಿಮ್ಮ ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದಂಪತಿಗಳು ಮಲಗಿರುವ ಸಮಯದಲ್ಲಿ ಬಾಗಿಲನ್ನು ಯಾವಾಗಲೂ ಮುಚ್ಚಿರಬೇಕು ಎಂದು ಫೆಂಗ್‌ಶುಯಿ ತಿಳಿಸುತ್ತದೆ. ಬಾಗಿಲು ತೆರೆದಿದ್ದರೆ ಧನಾತ್ಮಕ ಶಕ್ತಿಗೆ ಉತ್ತಮ ಎಂಬುದು ಕೆಲವರ ನಂಬಿಕೆಯಾಗಿದೆ ಇದು ತಪ್ಪು ಎಂದು ಫೆಂಗ್‌ಶುಯಿ ತಿಳಿಸುತ್ತದೆ. ದಂಪತಿಗಳು ಕೊಠಡಿಯಲ್ಲಿ ಇರುವ ಸಮಯದಲ್ಲಿ ಅದರಲ್ಲೂ ಏಕಾಂತದ ಸಮಯದಲ್ಲಿ ಬಾಗಿಲು ತೆರೆದಿಟ್ಟು ಮಲಗಬಾರದು.

ಮುಂದೆ ಓದಿ ...
  • Share this:

ಸ್ವರ್ಗದಲ್ಲಿ ಸತಿಪತಿಗಳಾದ ಜೋಡಿಗಳೇ ಭೂಮಿಯಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಾರೆ ಎಂಬುದು ಹಿಂದಿನಿಂದ ಬಂದಿರುವ ನಂಬಿಕೆಯಾಗಿದೆ. ದಾಂಪತ್ಯದಲ್ಲಿ ಸಮರಸ ಸಮಬಾಳ್ವೆ ಇಲ್ಲದೇ ಹೋದರೆ ಆ ವಿವಾಹ ಸ್ವರ್ಗದಲ್ಲಿ ನಿರ್ಧಾರವಾಗಿದ್ದರೂ ವ್ಯರ್ಥ ಎಂದೇ ನಿರ್ಧಾರಗೊಳ್ಳುತ್ತದೆ. ದಾಂಪತ್ಯದಲ್ಲಿ ಪ್ರೀತಿ, ರೊಮ್ಯಾನ್ಸ್ (Romance) ಎಂಬುದು ಪ್ರಮುಖ ಅಂಶವಾಗಿದ್ದು ಸಂತಸಮಯ ವಿವಾಹ ಜೀವನಕ್ಕೆ ಈ ಅಂಶವೇ ಆಧಾರವಾಗಿದೆ. ದಾಂಪತ್ಯದಲ್ಲಿ ಇರಬೇಕಾದ ಪ್ರೀತಿ ಕೊರತೆಯಾದಲ್ಲಿ ಕೂಡ ವಿವಾಹ (Marriage) ಬಂಧಗಳು ಹಳಿತಪ್ಪುತ್ತವೆ. ಆದರೆ ನಿಮ್ಮ ವಿವಾಹ ಬಂಧನದಲ್ಲಿ ತಪ್ಪುಗಳು ಏಕೆ ಸಂಭವಿಸುತ್ತಿವೆ ಮತ್ತು ದಂಪತಿಗಳ (Couple) ನಡುವೆ ವಿಭಿನ್ನತೆ ಏಕಿದೆ? ಸಿಕ್ಕಾಪಟ್ಟೆ ಕಲಹಗಳು ಏಕೆ ನಡೆಯುತ್ತಿವೆ ಎಂಬುದನ್ನು ಫೆಂಗ್‌ಶುಯಿ ಸಲಹೆಗಳ ಮೂಲಕ ಅರಿತುಕೊಳ್ಳಬಹುದಾಗಿದೆ.


ಚೈನೀ ಪುರಾತನ ಶಾಸ್ತ್ರವಾಗಿರುವ ಫೆಂಗ್‌ಶುಯಿ ದಾಂಪತ್ಯದಲ್ಲಿ ಕಂಡುಬರುವ ಅನೇಕ ದೋಷಗಳನ್ನು ಪತ್ತೆಹಚ್ಚುತ್ತದೆ ಹಾಗೂ ಪರಿಹಾರವನ್ನು ಒದಗಿಸುತ್ತದೆ. ಸಂತಸಮಯ ವಿವಾಹ ಜೀವನಕ್ಕೆ 8 ಸರಳ ಫೆಂಗ್‌ಶುಯಿ ಸಲಹೆಗಳು ಹೀಗಿವೆ


ಅಸ್ತವ್ಯಸ್ತವಾಗಿರುವ ಕೊಠಡಿಯು ಅಸ್ತವ್ಯಸ್ತವಾಗಿರುವ ಮನಸ್ಸಿಗೂ ಕಾರಣವಾಗಿದೆ. ಫೆಂಗ್‌ಶುಯಿಯಲ್ಲಿ ಅಸ್ತವ್ಯಸ್ತತೆ ಎಂಬುದು ಅಸಮಾಧಾನ ಹಾಗೂ ಅಶಾಂತಿಗೆ ಕಾರಣವಾಗಿದೆ. ಮನೆಯಲ್ಲಿರುವ ಅಸ್ತವ್ಯಸ್ತತೆಯನ್ನು ಹೋಗಲಾಡಿಸುವುದು ಧನಾತ್ಮಕ ಶಕ್ತಿಯನ್ನು ಸರಾಗವಾಗಿ ಸಂಚರಿಸುವಂತೆ ಮಾಡುತ್ತದೆ. ಮನೆಯಲ್ಲಿ ಋಣಾತ್ಮಕ ಶಕ್ತಿ ಹೋಗಲಾಡಿಸುತ್ತದೆ.


ನಿಮ್ಮ ಮಲಗುವ ಕೋಣೆ ಅಸ್ತವ್ಯಸ್ತವಾಗಿದ್ದರೆ ಅದು ದಂಪತಿಗಳ ದಾಂಪತ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಫೆಂಗ್‌ಶುಯಿ ತತ್ವವಾಗಿದೆ. ಯಾವಾಗಲೂ ಮಲಗುವ ಕೋಣೆ ಶುಚಿಯಾಗಿ ವ್ಯವಸ್ಥಿತವಾಗಿರಬೇಕು ಎಂಬುದು ಫೆಂಗ್‌ಶುಯಿ ನೀಡುವ ಸಲಹೆಯಾಗಿದೆ.


ಇದನ್ನೂ ಓದಿ: Money Mantra: ಈ ರಾಶಿಯವರಿಗೆ ದೊಡ್ಡ ಕಂಟಕ, ಜೀವಕ್ಕೇ ಅಪಾಯ! ಇದೊಂದು ಕೆಲ್ಸ ಮಾಡಿ ಇದ್ರಿಂದ ಬಚಾವಾಗಿ!


ಸರಿಯಾದ ಹಾಸಿಗೆಯನ್ನು ಖರೀದಿಸುವುದು


ಕೊಠಡಿಯಲ್ಲಿ ಹಾಸಿಗೆಯು ಮುಖ್ಯ ಅಂಶವಾಗಿದೆ ಹಾಗೂ ಸಂಗಾತಿಗಳಿಗೆ ಏಕಾಂತವನ್ನು ಇದು ಸೃಷ್ಟಿಸುತ್ತದೆ. ಫೆಂಗ್‌ಶುಯಿ ಪ್ರಕಾರ ಕೊಠಡಿಗೆ ಹೊಂದುವಂತಹ ಹಾಸಿಗೆಯನ್ನು ಖರೀದಿಸಬೇಕು. ಮಂಚಕ್ಕೆ ಸರಿಹೊಂದುವಂತಹ ಹಾಸಿಗೆ ಇರಬೇಕು ಎಂದು ಫೆಂಗ್‌ಶುಯಿ ಸಲಹೆಯಾಗಿದೆ. ಫ್ಯಾನ್‌ನ ಸೀಲಿಂಗ್‌ನ ಕೆಳಗೆ ಹಾಸಿಗೆಯನ್ನು ಇರಿಸಬಾರದು. ಬಾಗಿಲಿಗೆ ಕಾಲುಚಾಚಿ ದಂಪತಿಗಳು ನಿದ್ರಿಸಬಾರದು. ಬೆಡ್‌ನ ಅಕ್ಕಪಕ್ಕದಲ್ಲಿ ಕನ್ನಡಿಯನ್ನು ಇರಿಸಬಾರದು ಎಂದು ಫೆಂಗ್‌ಶುಯಿ ತಿಳಿಸುತ್ತದೆ


ಮಲಗುವ ಕೋಣೆಯಲ್ಲಿನ ನಿಯಮಗಳು


ದಂಪತಿಗಳು ಮಲಗಿರುವ ಸಮಯದಲ್ಲಿ ಬಾಗಿಲನ್ನು ಯಾವಾಗಲೂ ಮುಚ್ಚಿರಬೇಕು ಎಂದು ಫೆಂಗ್‌ಶುಯಿ ತಿಳಿಸುತ್ತದೆ. ಬಾಗಿಲು ತೆರೆದಿದ್ದರೆ ಧನಾತ್ಮಕ ಶಕ್ತಿಗೆ ಉತ್ತಮ ಎಂಬುದು ಕೆಲವರ ನಂಬಿಕೆಯಾಗಿದೆ ಇದು ತಪ್ಪು ಎಂದು ಫೆಂಗ್‌ಶುಯಿ ತಿಳಿಸುತ್ತದೆ. ದಂಪತಿಗಳು ಕೊಠಡಿಯಲ್ಲಿ ಇರುವ ಸಮಯದಲ್ಲಿ ಅದರಲ್ಲೂ ಏಕಾಂತದ ಸಮಯದಲ್ಲಿ ಬಾಗಿಲು ತೆರೆದಿಟ್ಟು ಮಲಗಬಾರದು ಎಂಬುದು ಫೆಂಗ್‌ಶುಯಿ ತತ್ವವಾಗಿದೆ. ಬಾಗಿಲು ತೆರೆದಿಡುವುದು ಬಾಹ್ಯದ ಋಣಾತ್ಮಕ ಶಕ್ತಿಗಳನ್ನು ಸೆಳೆಯುತ್ತದೆ ಎಂದು ಫೆಂಗ್‌ಶುಯಿ ಎಚ್ಚರಿಸುತ್ತದೆ.




ಅಕ್ವೇರಿಯಮ್, ಸಣ್ಣ ಫೌಂಟನ್ ಇರಿಸಬಾರದು


ನೀರಿನ ಅಂಶಗಳಿಂದ ಕೂಡಿರುವ ವಸ್ತುಗಳಾದ ಅಲಂಕಾರಿಕ ಫೌಂಟನ್, ಅಕ್ವೇರಿಯಮ್ ಅನ್ನು ಮಲಗುವ ಕೋಣೆಯಲ್ಲಿ ಇರಿಸಬಾರದು ಎಂದು ಫೆಂಗ್‌ಶುಯಿ ತಿಳಿಸುತ್ತದೆ


ಮಲಗುವ ಕೋಣೆಯಲ್ಲಿ ಟಿ.ವಿ ಬೇಡ ಇರಿಸಬಾರದು
ಮಲಗುವ ಕೊಠಡಿಯಲ್ಲಿ ದೂರದರ್ಶನ  ಅಡ್ಡಿಗಳನ್ನು ಉಂಟುಮಾಡುತ್ತದೆ  ಹಾಗೂ ದಂಪತಿಗಳ ಮನಸ್ಸಿನ ಮೇಲೂ ಇದು ಪರಿಣಾಮ ಬೀರುತ್ತದೆ ಎಂಬುದು ಫೆಂಗ್‌ಶುಯಿ ತತ್ವವಾಗಿದೆ.


ಅಲಂಕಾರಿಕ ಗಿಡಗಳನ್ನು ಮಲಗುವ ಕೋಣೆಯಲ್ಲಿರಿಸಿ
ಸಣ್ಣ ಅಲಂಕಾರಿಕ ಹೂವಿನ ಗಿಡಗಳನ್ನು ಬೆಡ್‌ರೂಮ್ ಅಥವಾ ಮಲಗುವ ಕೋಣೆಯಲ್ಲಿ ಇರಿಸಬಹುದು ಎಂಬುದು ಫೆಂಗ್‌ಶುಯಿ ಸಲಹೆಯಾಗಿದೆ. ನೈಜ ಗಿಡಗಳನ್ನು ಇರಿಸುತ್ತೀರಿ ಎಂದಾದಲ್ಲಿ ಬಾಡಿದ ಹೂವು ಅಥವಾ ಎಲೆಗಳನ್ನು ಸ್ವಚ್ಛಗೊಳಿಸುತ್ತಿರಬೇಕು.


ಏನೂ ಖರೀದಿಸಿದರೂ ಜೋಡಿಯಾಗಿ ಖರೀದಿಸಿ
ನೀವು ಏನನ್ನಾದರೂ ಖರೀದಿಸಬೇಕು ಎಂದು ಬಯಸಿದಲ್ಲಿ ಒಂದೇ ಆಗಿ ಖರೀದಿಸಬೇಡಿ. ಹೆಚ್ಚು ಬೆಲೆಬಾಳುವ ವಸ್ತುಗಳಿಗೆ ಇದು ಸೀಮಿತವಾಗಿಲ್ಲ. ಮಲಗುವ ಕೋಣೆಗಾಗಿ ನೀವು ಏನನ್ನಾದರೂ ಖರೀದಿಸುತ್ತಿದ್ದಲ್ಲಿ ಜೋಡಿಯಾಗಿ ಖರೀದಿಸಿ


ರೊಮ್ಯಾಂಟಿಕ್ ಬಣ್ಣಗಳನ್ನು ಬಳಸಿ


ಮನೆಯಲ್ಲಿ ರೊಮ್ಯಾಂಟಿಕ್ ಬಣ್ಣಗಳನ್ನು ಬಳಸುವುದು ದಂಪತಿಗಳು ನಡುವಿನ ಅನುರಾಗವನ್ನು ವೃದ್ಧಿಸುತ್ತದೆ. ಕೆಂಪು ಅಥವಾ ಗುಲಾಬಿ ಬಣ್ಣ ಉತ್ತಮ ಆಯ್ಕೆಗಳಾಗಿವೆ.

First published: