Vastu Tips: ಮನೆಯ ಪ್ರವೇಶ (Home Entrance) ಆರಂಭವಾಗುವುದೇ ಮನೆಯ ಮುಖ್ಯ ದ್ವಾರದಿಂದ (Main Door). ಹೀಗಾಗಿ ಮನೆಯ ಮೊದಲ ಮತ್ತು ಮುಖ್ಯ ಬಾಗಿಲಿಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮನೆಯ ಬಾಗಿಲು, ಹೊಸಲು ನೋಡಿಯೇ ಲಕ್ಷ್ಮಿ (Goddess Laxmi) ಬರುತ್ತಾಳೆ ಅನ್ನೋ ಹಿರಿಯರ ಮಾತನ್ನು ನೀವು ಕೇಳಿರಬಹುದು. ಅದರಂತೆಯೇ ಮನೆಯ ಬಾಗಿಲು ಮನೆಗೆ ಬೇಕಾದ ಎಲ್ಲಾ ಧನಾತ್ಮಕ ಅಂಶಗಳನ್ನು (Positive Energy) ಸೆಳೆಯುತ್ತದೆ. ಹೀಗಾಗಿ ಮನೆಯ ಮುಖ್ಯ ದ್ವಾರವನ್ನು ನಿರ್ಮಿಸುವಾಗ ಎಲ್ಲಾ ವಾಸ್ತು ಅಂಶಗಳನ್ನು ಇಲ್ಲಿ ಪರಿಗಣಿಸುವುದು ತುಂಬಾನೇ ನಿರ್ಣಾಯಕ.
ಮನೆ ಅಂದರೆ ಎಲ್ಲರ ನೆಚ್ಚಿನ ಸ್ಥಳ. ಇಲ್ಲಿ ಪ್ರತಿಯೊಬ್ಬರು ಶಾಂತಿ, ನೆಮ್ಮದಿಯನ್ನು ಬಯಸುತ್ತಾರೆ. ಮನೆಗೆ ಬಂದ ಕೂಡಲೇ ಹಾಯಾದ ಅನುಭವ ಮನೆಯಲ್ಲಿ ಸಿಗಬೇಕು ಎಂದರೆ ನಾವು ಕಟ್ಟುವ ಮನೆಯ ವಾಸ್ತು ಕೂಡ ಅಷ್ಟೇ ಉತ್ತಮವಾಗಿರಬೇಕು.
ಮುಖ್ಯ ದ್ವಾರದ ವಾಸ್ತು ಸಲಹೆಗಳು
1. ಮುಖ್ಯ ಬಾಗಿಲಿನ ದಿಕ್ಕು: ವಾಸ್ತು ಶಾಸ್ತ್ರವು ಮನೆಯ ಮುಖ್ಯ ದ್ವಾರವು ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿದ್ದರೆ ಉತ್ತಮ ಎನ್ನುತ್ತದೆ. ಮನೆಯ ಮೇನ್ ಎಂಟ್ರೈನ್ಸ್ ಈ ದಿಕ್ಕುಗಳಲಿದ್ದರೆ ಧನಾತ್ಮಕ ಶಕ್ತಿಯು ಮನೆಯೊಳಗೆ ಹರಿದು ಬರುತ್ತದೆ ಎನ್ನಲಾಗುತ್ತದೆ.
2. ಬಾಗಿಲನ್ನು ಸ್ವಚ್ಛವಾಗಿಡಿ: ನಿಮ್ಮ ಮುಖ್ಯ ದ್ವಾರದ ಮೇಲೆ ನೆರಳು ಬೀಳದಂತೆ ಇನ್ನೊಂದು ಬಾಗಿಲು, ಮರ, ಕಂಬ ಅಥವಾ ಯಾವುದೇ ರೀತಿಯ ಅಡಚಣೆಗಳು ಇರದಂತೆ ನೋಡಿಕೊಳ್ಳಿ.
ಬಾಗಿಲ ಮುಂದೆ ಅಥವಾ ಬಾಗಿಲ ಮೇಲೆ ಧೂಳು, ಕಸ ಸಂಗ್ರಹವಾಗದಂತೆ ನೋಡಿಕೊಳ್ಳಿ. ಇದು ಅಶುಭವಾಗಿದ್ದು, ಮನೆಯೊಳಗೆ ನಕಾರತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಬಾಗಿಲ ಹೊಸಲಿಗೆ ಪ್ರತಿನಿತ್ಯ ನೀರು ಹಾಕಿ ಕುಂಕುಮ, ರಂಗೋಲಿ, ಹೂ ಇಡಿ. ಪ್ರವೇಶದ್ವಾರವನ್ನು ಸಾಧ್ಯವಾದಷ್ಟು ಸ್ವಚ್ಛವಾಗಿ ಮತ್ತು ಶುದ್ಧವಾಗಿಟ್ಟುಕೊಳ್ಳಿ.
3. ಬಾಗಿಲು ತಯಾರಿಕೆ ಮತ್ತು ವಸ್ತು: ಮನೆಯ ಮುಖ್ಯ ದ್ವಾರ 1: 2 ಅನುಪಾತದಲ್ಲಿ (ಅಗಲ : ಉದ್ದ) ಇರಬೇಕು. ಮನೆಯ ಬಾಗಿಲು ತೆರೆದಾಗ ಅದು ಒಳಕ್ಕೆ ತೆರೆದುಕೊಳ್ಳುವ ಹಾಗೆ ನಿರ್ಮಿಸಬೇಕು.
ಬಾಗಿಲು ಒಳಮುಖವಾಗಿ ತೆರೆದುಕೊಂಡರೆ ಧನಾತ್ಮಕ ಶಕ್ತಿ ಸೆಳೆಯುವಿಕೆ ಹೆಚ್ಚಾಗಿರುತ್ತದೆ. ಪ್ರವೇಶದ್ವಾರದಲ್ಲಿ ನೀವು ಅಮೃತಶಿಲೆಯ ಹೊಸ್ತಿಲನ್ನು ನಿರ್ಮಿಸುವುದು ಮನೆಗೆ ಒಳಿತು ಮಾಡುತ್ತದೆ.
ನಕಾರಾತ್ಮಕತೆಯನ್ನು ಮನೆಯಿಂದ ಓಡಿಸಲು ಉತ್ತಮವಾದ ವರ್ಣರಂಜಿತ ಕಾಲು ಚಾಪೆಯನ್ನು ಬಾಗಿಲ ಮುಂದೆ ಹಾಕಿ. ಇದನ್ನು ಕೂಡ ಆಗಾಗ್ಗೆ ತೊಳೆದು ಸ್ವಚ್ಛವಾಗಿಡಿ.
4. ಬಾಗಿಲ ಮುಂದೆ ಚಪ್ಪಲಿ ಬಿಡಬೇಡಿ: ಬಾಗಿಲ ಮುಂದೆಯೇ ಚಪ್ಪಲಿ, ಶೂಗಳನ್ನು ಬಿಡಬೇಡಿ ಮತ್ತು ಕಸದ ಬುಟ್ಟಿ, ಶೂ ರ್ಯಾಕ್‌ಗಳನ್ನು ಸಹ ಬಾಗಿಲ ಪಕ್ಕದಲ್ಲಿ ಇರಿಸಬೇಡಿ.
5. ದೀಪಗಳು ಮತ್ತು ಬಣ್ಣಗಳು: ಬಣ್ಣದಲ್ಲಿ ಪ್ರಕಾಶಮಾನವಾದ, ವರ್ಣರಂಜಿತ ದೀಪಗಳಿಂದ ಚೆನ್ನಾಗಿ ಬೆಳಗುವ ಮನೆಯ ಬಾಗಿಲು ಧನಾತ್ಮಕ ಶಕ್ತಿಗಳು ಮತ್ತು ಅತಿಥಿಗಳಿಗೆ ಸ್ವಾಗತವನ್ನು ನೀಡುತ್ತದೆ. ಪ್ರವೇಶದ್ವಾರದ ಗೋಡೆಗಳ ಮೇಲೆ ಕಪ್ಪು ಮತ್ತು ಕೆಂಪು ಬಣ್ಣದಂತಹ ಗಾಢ ಬಣ್ಣಗಳನ್ನು ಬಳಿಯಬೇಡಿ.
ಇದನ್ನೂ ಓದಿ: Vastu Tips: ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡ್ರೆ ಸರ್ವನಾಶವಾಗುತ್ತಂತೆ! ಈಗಲೇ ಇವನ್ನು ಬೀಸಾಕಿ
6. ಅಲಂಕಾರ: ಬಾಗಿಲ ಮುಂದೆ ಸುಂದರವಾದ ಹಸಿರು ಎಲೆಯ ಹೂವಿನ ಅಲಂಕಾರ ಸಸ್ಯಗಳನ್ನು ಅಥವಾ ಸುಂದರವಾದ ರಂಗೋಲಿಯನ್ನು ಇರಿಸಿ.
ಇದು ಪ್ರವೇಶದ್ವಾರದ ವಾತಾವರಣವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಪ್ರತಿದಿನ ಪ್ರವೇಶದ್ವಾರದ ಬಳಿ ಕೆಲವು ಧೂಪದ್ರವ್ಯಗಳನ್ನು ಬೆಳಗಿಸಿ, ಕೆಲವು ಪರಿಮಳಯುಕ್ತ ಮೇಣದಬತ್ತಿಗಳನ್ನು ಸಹ ಹಚ್ಚಬಹುದು. ಇದು ಸಂಪತ್ತನ್ನು ಮನೆಗೆ ಆಕರ್ಷಿಸಲು ಉತ್ತಮ ಮಾರ್ಗವಾಗಿದೆ.
7. ದೇವರ ಚಿಹ್ನೆ : ಮನೆಯ ಮುಖ್ಯ ದ್ವಾರದ ಮೇಲೆ ದೃಷ್ಟಿ ಗಣಪತಿ, ಓಂ, ತ್ರಿಶೂಲ್, ಸ್ವಸ್ತಿಕದಂತಹ ಪವಿತ್ರ ಚಿಹ್ನೆಗಳನ್ನು ಇರಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.
ದೈವಿಕ ಶಕ್ತಿಯನ್ನು ಮನೆಗೆ ಆಕರ್ಷಿಸಲು ನೀವೂ ಸಹ ಇವುಗಳನ್ನು ಇರಿಸಬಹುದು. ಜೊತೆಗೆ ಮತ್ತು ಸಂಪತ್ತನ್ನು ಸ್ವಾಗತಿಸಲು ಪ್ರವೇಶದ್ವಾರದ ಒಳಭಾಗದಲ್ಲಿ ಲಕ್ಷ್ಮಿ ಪಾದಗಳನ್ನು ಇರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ