ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹಣ ಮತ್ತು ಪ್ರೀತಿ (Money and Love) ಬೇಕು. ಹಣವು ನಿಮ್ಮನ್ನು ಆರ್ಥಿಕವಾಗಿ ಬಲಪಡಿಸುತ್ತದೆ. ನಿಮ್ಮ ಭೌತಿಕ ಅಗತ್ಯಗಳನ್ನು ಪೂರೈಸುತ್ತದೆ, ಆದರೆ ಪ್ರೀತಿ ಭಾವನಾತ್ಮಕ ಶಕ್ತಿಯನ್ನು ನೀಡುತ್ತದೆ. ಇದೇ ಕಾರಣ ಇವೆರಡರ ನಡುವೆ ಸಮತೋಲನ ಇರಬೇಕು. ಒಂದು ವೇಳೆ ಇದರಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ, ಈ ಕೆಲವು ಫೆಂಗ್ ಶೂಯಿ (Feng shui) ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಸ್ಯೆಗೆ ನಿವಾರಣೆ ಕಂಡು ಕೊಳ್ಳಬಹುದು. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು, ಹಾಗೆಯೇ ವೈವಾಹಿಕ ಜೀವನ ಅಥವಾ ಪ್ರೇಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೆ, ಅದು ನಿರ್ಮೂಲನೆ ಆಗಿ ಸಂಬಂಧವನ್ನು ಬಲಪಡಿಸಬಹುದು.
1. ಫೆಂಗ್ ಶೂಯಿ ಮತ್ತು ವಾಸ್ತು ಎರಡರಲ್ಲೂ ಶಕ್ತಿಯನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣ ಅಡುಗೆ ಮನೆಯ ವಾಸ್ತುವಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅಡುಗೆ ಮೆನ ಅಚ್ಚುಕಟ್ಟಾಗಿದ್ದರೆ ಆದಾಯ ಹೆಚ್ಚಾಗುತ್ತದೆ.
2. ನಿಮ್ಮ ಜೀವನದಲ್ಲಿ ಪ್ರೀತಿಯ ಸಂಗಾತಿಯನ್ನು ಬಯಸಿದರೆ, ನಿಮ್ಮ ಕೋಣೆಯಲ್ಲಿ ಜೋಡಿ ವಸ್ತುಗಳನ್ನು ತಂದು ಇಡಿ. ಕುರ್ಚಿಗಳು, ದಿಂಬುಗಳು, ಕಪ್, ಪೇಟಿಂಗ್, ಫೋಟೋ ಫ್ರೇಮ್ಗಳು ಇತ್ಯಾದಿಗಳನ್ನು ಜೊತೆ ಜೊತೆಯಲ್ಲಿರುವಂತೆ ನೋಡಿಕೊಳ್ಳಿ. ಇದನ್ನು ಮಾಡುವುದರಿಂದ ಪಾಲುದಾರಿಕೆ ಶಕ್ತಿಯು ಸೃಷ್ಟಿಯಾಗುತ್ತದೆ ಎಂದು ನಂಬಲಾಗಿದೆ,
3. ನಿಮ್ಮ ಮನೆಯ ಮುಖ್ಯ ದ್ವಾರವನ್ನು ನೀವು ಆಕರ್ಷಕವಾಗಿ ಮತ್ತು ಅಲಂಕರಿಸಬೇಕೆಂದು ಫೆಂಗ್ ಶೂಯಿಯಲ್ಲಿ ತಿಳಿಸಲಾಗಿದೆ. ಅದು ಇತರರಿಗೆ ಆಕರ್ಷಕವಾಗಿರಬೇಕು. ಅಲ್ಲಿ ಅಳವಡಿಸಿರುವ ಗಂಟೆ ಸರಿಯಾಗಿರ ಬೇಕು. ಜೊತೆಗೆ ಸ್ವಾಗತಿಸುವ ಚಿತ್ರಗಳು ಅಥವಾ ಪೇಂಟಿಂಗ್ಗಳನ್ನು ಬಾಗಿಲಿಗೆ ಹಾಕಬಹುದು. ಹೀಗೆ ಮಾಡುವುದರಿಂದ ನಿಮ್ಮ ಆದಾಯ ಹೆಚ್ಚುತ್ತದೆ. ಹೀಗೆ ಮಾಡುವುದರಿಂದ ಹೊಸ ಅವಕಾಶಗಳು ಸಿಗುತ್ತವೆ ಎಂಬ ನಂಬಿಕೆ ಇದೆ.
ಇದನ್ನು ಓದಿ: ದಾರಿಯಲ್ಲಿ ಅಚಾನಕ್ ಆಗಿ ಹಣ ಸಿಕ್ಕಿದ್ರೆ ಏನು ಅರ್ಥ ಗೊತ್ತಾ?
4. ಮನೆಯಲ್ಲಿ ಮನಿ ಪ್ಲಾಂಟ್, ಜೇಡ್ ಪ್ಲಾಂಟ್ ಇತ್ಯಾದಿಗಳನ್ನು ನೆಟ್ಟರೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಆದಾಯದ ಮೂಲವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.
5 ಹಣ, ಆಸ್ತಿ ಮತ್ತು ಹಣದ ಜೊತೆ ಬಣ್ಣಗಳು ನಂಟು ಹೊಂದಿವೆ. ಬಣ್ಣಗಳು ನಿಮ್ಮ ಭಾವನೆಗಳಿಗೆ ಸಂಬಂಧಿಸಿವೆ. ಕೆಂಪು, ನೇರಳೆ ಮತ್ತು ಹಸಿರು ಬಣ್ಣಗಳು ಸಮೃದ್ಧಿಗೆ ಸಂಬಂಧಿಸಿವೆ. ನೀವು ಬಯಸಿದರೆ, ನೀವು ಕೆಂಪು ಬಣ್ಣದ ಕರವಸ್ತ್ರ, ರೆಡ್ ಕಾರ್ಪೆಟ್ ಅನ್ನು ಬಳಸಬಹುದು. ನೀವು ಕೋಣೆಯ ಬಣ್ಣವನ್ನು ಹಸಿರು ಅಥವಾ ನೇರಳೆ ಬಣ್ಣವನ್ನು ಮಾಡಬಹುದು.
6. ಮನೆಯೊಳಗೆ ಮುರಿದ ವಸ್ತುಗಳನ್ನು ಎಸೆಯಿರಿ ಅಥವಾ ಅವುಗಳನ್ನು ಸರಿಪಡಿಸಿ. ಮುರಿದ ಅಥವಾ ಹಾನಿಗೊಳಗಾದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ, ಅದು ನಿಮ್ಮ ಆದಾಯದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನು ಓದಿ: ಮನೆ ಬದಲಾಯಿಸಲಿರುವ ಶನಿ; ಇನ್ನು 33 ದಿನ ಈ ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ
7. ಫೆಂಗ್ ಶೂಯಿಯಲ್ಲಿ ಗಾಢ ಬಣ್ಣವನ್ನು ಅತ್ಯಂತ ಪ್ರಭಾವಶಾಲಿ ಮತ್ತು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಮನೆಯ ಮುಖ್ಯ ಬಾಗಿಲಿಗೆ ಕೆಂಪು ಬಣ್ಣವನ್ನು ಆರಿಸುವುದು ಉತ್ತಮ. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯು ದೂರ ಆಗುತ್ತದೆ. ಜೊತೆಗೆ ಹೊಸ ಅವಕಾಶಗಳು ಆಹ್ವಾನ ನೀಡುತ್ತದೆ.
8. ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸಲು, ಮನೆಯ ಒಳಗಿನಿಂದ ನಕಾರಾತ್ಮಕತೆ ಮತ್ತು ಹಿಂಸೆಗೆ ಸಂಬಂಧಿಸಿದ ಚಿಹ್ನೆಗಳು ಅಥವಾ ಚಿತ್ರಗಳನ್ನು ಬಳಸಬೇಡಿ.
9. ನಿಮ್ಮ ಕುಟುಂಬ ಅಥವಾ ವೈವಾಹಿಕ ಜೀವನದಲ್ಲಿ ಪ್ರೀತಿ ಇಲ್ಲದಿದ್ದರೆ, ನೀವು ನಿಮ್ಮ ಕುಟುಂಬದ ಫೋಟೋ ಅಥವಾ ಗಂಡ ಮತ್ತು ಹೆಂಡತಿಯ ಜೊತೆಗೆ ಕಳೆದ ಮಧುರ ಕ್ಷಣಗಳ ಫೋಟೋಗಳನ್ನು ಹಾಲ್ ಅಥವಾ ಅಡುಗೆಮನೆಯಲ್ಲಿ ಇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ