ದಿನವೀಡಿ ಕೆಲಸ(Work) ಮಾಡಿ ಮನೆಗೆ ಬಂದು ಊಟ ಮಾಡಿ ಹಾಯಾಗಿ ಮನೆಗೆ ಬಂದು ದಿಂಬಿಗೆ ತಲೆ ಕೊಟ್ಟು ಮಲಗುವ ಕೋಣೆಗೆ(Bed Room) ಮನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಸಾಮಾನ್ಯವಾಗಿ ನಿದ್ರೆಯು ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಧನಾತ್ಮಕ(Positive) ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು(Health Experts) ಹೇಳುತ್ತಾರೆ. ರಾತ್ರಿಯ ಸುಖಕರವಾದ ನಿದ್ದೆ ಬೆಳಗ್ಗೆ ನಮ್ಮ ಚೈತನ್ಯ ಹೆಚ್ಚಿಸುತ್ತೆ. ಹೀಗೆ ಸರಿಯಾಗಿ ನಿದ್ದೆ ಮಾಡಲು ಬೆಡ್‌ರೂಮ್ ಅಚ್ಚುಕಟ್ಟಾಗಿರಬೇಕು. ಅಚ್ಚುಕಟ್ಟು ಎಂದರೆ ವಾಸ್ತು(Vastu) ಪ್ರಕಾರ ಇರಬೇಕು.
ಮನೆಯ ಬಾಗಿಲು, ಪೂಜಾ ಕೊಠಡಿ, ಅಗ್ನಿ ಮೂಲೆ ಹೀಗೆ ಇವನ್ನೆಲ್ಲಾ ಹೇಗೆ ವಾಸ್ತು ಪ್ರಕಾರ ಪರಿಗಣಿಸುತ್ತೇವೆಯೋ ಅದೇ ರೀತಿ ನಾವು ಮಲಗುವ ಕೋಣೆ ಕೂಡ ವಾಸ್ತು ಪ್ರಕಾರ ಇರಬೇಕು. ವಾಸ್ತುವಿನ ದೃಷ್ಟಿಕೋನದಿಂದ ನಿಮ್ಮ ಮಲಗುವ ಕೋಣೆಯನ್ನು ನೀವು ಅಲಂಕರಿಸಿದ್ದರೆ, ಕಷ್ಟಗಳನ್ನು ನೀವೇ ಆಹ್ವಾನ ಮಾಡಿ ಕರೆಸಿಕೊಂಡಂತೆ ಎನ್ನುತ್ತಾರೆ ವಾಸ್ತು ತಜ್ಞರು.
ಮನೆಯ ಇತರೆ ಭಾಗಗಳಂತೆ ಮಲಗುವ ಕೋಣೆಯನ್ನು ಅಲಂಕರಿಸುವಾಗ ವಾಸ್ತುವನ್ನು ನೆನಪಿಟ್ಟುಕೊಳ್ಳಬೇಕು. ಆಗ ಜೀವನದಲ್ಲಿ ಸಂತೋಷ , ನೆಮ್ಮದಿ, ಸುಖಕರವಾದ ನಿದ್ರೆ ಎಲ್ಲವೂ ದೊರೆಯುತ್ತದೆ.
ಮಲಗುವ ಕೋಣೆ ಅಲಂಕರಿಸುವಲ್ಲಿ ವಾಸ್ತು ಸಲಹೆ
* ನೀವು ಮಲಗುವ ಹಾಸಿಗೆಯ ಮೇಲೆ ಸಿಂಪಲ್ ಆದ ಡಿಸೈನ್ ಹೊಂದಿರುವ ದಿಂಬುಗಳು ಮತ್ತು ಬೆಡ್‌ಶೀಟ್‌ಗಳನ್ನು ಇರಿಸಿ. ಅತಿಯಾಗಿ ವಿನ್ಯಾಸಗೊಳಿಸಿದ ಅಥವಾ ವರ್ಣರಂಜಿತ ದಿಂಬುಕೇಸ್ ಮತ್ತು ಬೆಡ್‌ಶೀಟ್‌ಗಳನ್ನು ತಪ್ಪಿಸಿ.
* ನಿಮ್ಮ ತಲೆಯ ಕೆಳಗೆ ಅಥವಾ ಹಾಸಿಗೆಯ ಹಿಂದೆ ಗಡಿಯಾರವನ್ನು ಇಟ್ಟುಕೊಂಡು ಮಲಗಬೇಡಿ. ಇದನ್ನು ಹಾಸಿಗೆಯ ಎಡ ಅಥವಾ ಬಲಭಾಗದಲ್ಲಿ ಇಡಬೇಕು.
* ನಿಮ್ಮ ಮಲಗುವ ಕೋಣೆಯಲ್ಲಿ ಯಾವುದೇ ದೇವರು ಅಥವಾ ಪೂರ್ವಜರ ಚಿತ್ರಗಳನ್ನು ಇಡಬೇಡಿ.
ಇದನ್ನೂ ಓದಿ: Home Vastu: ನಿಮ್ಮ ಮನೆಯ ವಾಸ್ತು ಹೀಗಿದ್ರೆ ಅದೃಷ್ಟ ಒಲಿದು ಬರುವುದು ಗ್ಯಾರಂಟಿ
* ನಿಮ್ಮ ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಅಥವಾ ಕನ್ನಡಿ ಇದ್ದರೆ, ಅದನ್ನು ಹಾಸಿಗೆಯ ಮುಂದೆ ಇರದಂತೆ ನೋಡಿಕೊಳ್ಳಿ. ನಿಮ್ಮ ಕೋಣೆ ಚಿಕ್ಕದಾಗಿದ್ದರೆ, ಕನ್ನಡಿಯನ್ನು ಅಲ್ಲಿಂದ ತೆಗೆಯಲು ಸಾಧ್ಯವಿಲ್ಲ ಎಂದಾದರೆ ಮಲಗುವಾಗ ಆ ಕನ್ನಡಿಯ ಮೇಲೆ ಬಟ್ಟೆ ಹಾಕಿ ಸಂಪೂರ್ಣವಾಗಿ ಮುಚ್ಚಿ ಮಲಗಿ.
* ಮಲಗುವ ಕೋಣೆಯಲ್ಲಿ ಯಾವುದೇ ದೇವರ ಚಿತ್ರ ಹಾಕಬಾರದು. ಅಲ್ಲದೆ, ನಿಮ್ಮ ಮಲಗುವ ಕೋಣೆಯ ಗೋಡೆಯ ಮೇಲೆ ಯಾರಾದರೂ ಅಳುತ್ತಿರುವ ಅಥವಾ ಯಾವುದೇ ರೀತಿಯಲ್ಲಿ ದುಃಖಿತರಾಗಿರುವಂತಹ ಯಾವುದೇ ಚಿತ್ರವನ್ನು ಹಾಕಬೇಡಿ. ಅಂತಹ ಚಿತ್ರವನ್ನು ಹಾಕುವುದು ನಿಮ್ಮ ಮನೆಯಲ್ಲಿರುವವರ ಅಥವಾ ಸಂಗಾತಿ ಜೊತೆಗಿನ ಸಂಬಂಧವನ್ನು ಹಾಳುಮಾಡುತ್ತದೆ.
* ಮಲಗುವ ಕೋಣೆಯ ಗೋಡೆಗಳಿಗೆ ಯಾವಾಗಲೂ ತಿಳಿ ಬಣ್ಣಗಳನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ. ಆದ್ದರಿಂದ ಬೆಡ್‌ರೂಮ್ ಗೋಡೆಗಳಿಗೆ ದಪ್ಪ ಅಥವಾ ಗಾಢವಾದ ಬಣ್ಣಗಳನ್ನು ಬಳಿಯದಂತೆ ಎಚ್ಚರವಹಿಸಿ.
ಗಾಢವಾದ ಬಣ್ಣಗಳು, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಬಿರಕನ್ನು ತರಬಹುದು. ಹೀಗಾಗಿ ನೀವು ಮಲಗುವ ಕೋಣೆಯ ಗೋಡೆಗೆ ತಿಳಿ ಬಣ್ಣಗಳನ್ನು ಬಳಿಯಿರಿ.
* ಮಲಗುವ ಕೋಣೆ ಯಾವಾಗಲೂ ಉತ್ತರ ದಿಕ್ಕಿನಲ್ಲಿರಬೇಕು. ವಾಸ್ತು ಪ್ರಕಾರ, ಹಾಸಿಗೆಯನ್ನು ಕೊಠಡಿಯ ಮಧ್ಯದಲ್ಲಿ ಇರಿಸಬೇಕು. ಮೂಲೆಯಲ್ಲಿ ಹಾಸಿಗೆ ಇರುವುದು ಧನಾತ್ಮಕ ಶಕ್ತಿಯ ಸಂವಹನಕ್ಕೆ ಅಡ್ಡಿಯಾಗುತ್ತದೆ.
ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಹಾಸಿಗೆಯ ತಲೆಯು ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿರಬೇಕು. ಇದು ಕುಟುಂಬದ ಆರೋಗ್ಯ ಮತ್ತು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Amalaki Ekadashi: ಅಮಲಕಿ ಏಕಾದಶಿ ಹಿಂದಿದೆ ಈ ಕಥೆ, ಆಚರಣೆಯ ವಿಧಿ-ವಿಧಾನ ಹೀಗಿದೆ
ವಾಸ್ತು ತಜ್ಞರ ಪ್ರಕಾರ ಮಲಗುವ ಸ್ಥಾನವು ದಕ್ಷಿಣ ಅಥವಾ ಪಶ್ಚಿಮವಾಗಿರಬೇಕು. ಹಾಸಿಗೆಯಲ್ಲಿ ತಲೆಯು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಗೋಡೆಯ ಕಡೆಗೆ ಇರಬೇಕು.
* ಮಲಗುವ ಮಂಚವನ್ನು ಮರದಿಂದ ಮಾಡಿರಬೇಕು. ಹಾಸಿಗೆಯ ಆಕಾರವು ಎಲ್ಲಾ ಸಮಯದಲ್ಲೂ ಚದರ ಅಥವಾ ಆಯತಾಕಾರದದ್ದಾಗಿರಬೇಕು.
ದುಂಡಗಿನ ಅಥವಾ ಅಂಡಾಕಾರದ ಹಾಸಿಗೆಯ ಮೇಲೆ ಮಲಗಬಾರದು. ಡಬಲ್ ಹಾಸಿಗೆಯ ಮೇಲೆ ಎರಡು ಹಾಸಿಗೆಗಳ ಬದಲಿಗೆ ಒಂದೇ ಹಾಸಿಗೆಯನ್ನು ಹೊಂದುವುದು ಮಂಗಳಕರವಾಗಿದೆ. ಮಲಗುವಾಗ ಹೊದಿಯುವ ಚಾದರ ಕೂಡ ಯಾವಾಗಲೂ ತಿಳಿ ಬಣ್ಣದಲ್ಲಿರಬೇಕು.
* ವಾಸ್ತು ಪ್ರಕಾರ, ಸಾಮರಸ್ಯದ ಸಂಬಂಧಕ್ಕಾಗಿ ಹೆಂಡತಿ ತನ್ನ ಗಂಡನ ಎಡಭಾಗದಲ್ಲಿ ಮಲಗಬೇಕು.
* ಮಲಗುವ ಕೋಣೆಯ ಎತ್ತರ 10 ಅಡಿ ಇರಬೇಕು. ಕಡಿಮೆ ಎತ್ತರದ ಮಲಗುವ ಕೋಣೆಗಳು ಅಶುಭ ಎನ್ನಲಾಗಿದೆ. ಮಲಗುವ ಕೋಣೆಯ ಛಾವಣಿಯ ಮೇಲೆ ಕನ್ನಡಿಗಳನ್ನು ಹೊಂದಿಸಿರುವ ವಿನ್ಯಾಸ ಮಾಡಿಸಬಾರದು.
* ಮಲಗುವ ಕೋಣೆಯಲ್ಲಿ ನೈಸರ್ಗಿಕ ಬೆಳಕು ಇದ್ದರೆ ಒಳ್ಳೆಯದು. ಅದಕ್ಕಾಗಿಯೇ ಸಾಕಷ್ಟು ಸೂರ್ಯನ ಬೆಳಕು ಇರುವ ಸ್ಥಳದಲ್ಲಿ ನಿಮ್ಮ ಮಲಗುವ ಕೋಣೆಯನ್ನು ಹೊಂದಲು ಪ್ರಯತ್ನಿಸಿ, ಅದು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ