Mythology: ದ್ರೌಪದಿ ಯಾರು? ಆಕೆ ಪಂಚಪಾಂಡವರ ಪತ್ನಿಯಾಗಿದ್ದು ಹೇಗೆ?

Mahabharata Drupadi: ಶಿವನ ವರದಿಂದಾಗಿ ದ್ರೌಪದಿಯು ಒಬ್ಬ ಪತಿಯೊಂದಿಗೆ ಸಂಸಾರ ನಡೆಸಿ ವರ್ಷದ ಬಳಿಕ ಇನ್ನೊಬ್ಬ ಪತಿಯ ಬಳಿ ಹೊರಡುವ ಮುಂಚೆ ದ್ರೌಪದಿ ಪುನಃ ಕನ್ಯೆಯಾಗಿ ಬದಲಾಗುತ್ತಿದ್ದಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಿಂದೂ ಧರ್ಮದ(Hindu Religion) ಶ್ರೇಷ್ಠ ಮಹಾಕಾವ್ಯ ಮಹಾಭಾರತ(Mahabharat). ಕೌರವ ಮತ್ತು ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದ ಫಲಿತಾಂಶವನ್ನು ಇದು ವಿಸ್ತಾರವಾಗಿ ವಿವರಿಸುತ್ತದೆ. ಮಹಾಭಾರತದಲ್ಲಿ ನಾವು ಕೇಳುವ ಕೆಲವು ಪಾತ್ರಗಳು(Characters) ಇಂದಿಗೂ ನಿಗೂಢ. ಅಂತಹ ಪಾತ್ರಗಳಲ್ಲಿ ಒಂದು ದ್ರೌಪದಿಯ(Drupadi) ಪಾತ್ರ. ಮಹಾಭಾರತದ ವೀರ ರಾಜಕುಮಾರಿ ದ್ರೌಪದಿ ಪಾಂಚಾಲ ರಾಜ ದ್ರುಪದನ ಮಗಳು.ಪುರಾಣ ಹಾಗೂ ಇತಿಹಾಸದಲ್ಲಿ(History) ಅತಿ ಶ್ರೇಷ್ಠವಾದ ಮಹಿಳೆಯರೆಂದು(Women) ಹೇಳುವಂತಹ ಐವರಲ್ಲಿ ದ್ರೌಪದಿಯು ಸಹ ಒಬ್ಬಳು. ದ್ರೌಪದಿಯ ಜೀವನದ ಬಗ್ಗೆ ಹಲವಾರು ಗ್ರಂಥಗಳಲ್ಲಿ ಬಗೆ ಬಗೆಯಾದ ರೀತಿಗಳಲ್ಲಿ ವಿವರಿಸಲಾಗಿದೆ.ಅದರಲ್ಲೂ ಮಹಾಭಾರತದಲ್ಲಿ ದ್ರೌಪದಿ ಇಲ್ಲದೇ ಇದ್ದರೆ ಕುರುಕ್ಷೇತ್ರ ಯುದ್ಧವೇ ನಡೆಯುತ್ತಿರಲಿಲ್ಲ.. ಕುರುಕ್ಷೇತ್ರ ಯುದ್ಧಕ್ಕೆ ಧರ್ಮ ಸಂಸ್ಥಾಪನೆಗೆ ಮೂಲಕಾರಣವೇ ದ್ರೌಪದಿ ಎಂದು ಹೇಳಲಾಗುತ್ತದೆ.. ಹೀಗಾಗಿ ದ್ರೌಪದಿಯ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಮಾಹಿತಿಗಳು ಇವೆ.. ಈ ದ್ರೌಪದಿ ಯಾರು.. ಆಕೆ ಪೂರ್ವ ಜನ್ಮದಲ್ಲಿ ಏನಾಗಿದ್ದರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

  ಮೌದ್ಗಲ್ಯ ಮಹರ್ಷಿಯ ಪತ್ನಿಯಾಗಿದ್ದ ದ್ರೌಪದಿ

  ಪೂರ್ವಕಾಲದಲ್ಲಿ ಮೌದ್ಗಲ್ಯ ಎನ್ನುವ ಮಹಾಮುನಿ ಒಬ್ಬರಿದ್ದರೂ ಆತ ಕುಷ್ಠರೋಗಿ.ಅವರ ಶರೀರವೆಲ್ಲಾ ಕುಷ್ಠರೋಗದಿಂದ ತುಂಬಿತ್ತು.ನೋಡಲು ಅತೀ ಕುರೂಪಿಯಾಗಿದ್ದರು ಅವರ ದೇಹವೆಲ್ಲಾ ಹುಣ್ಣುಗಳಿಂದ ತುಂಬಿ ರಕ್ತ ಕೀವು ಸುರಿಯುತ್ತಿತ್ತು.ಅಂತಹ ಮೌದ್ಗಲ್ಯನ ಮಡದಿಯೇ ಇಂದ್ರಸೇನಾ.ಅವಳು ಅತ್ಯಂತ ರೂಪವತಿ ಅದು ಮಾತ್ರವಲ್ಲದೆ ಮಹಾನ್ ಪತಿವ್ರತೆಯು ಕೂಡ.ಗಂಡ ಹೇಗಾದರೂ ಇರಲಿ ಅವನಿಗೆ ಸೇವೆ ಮಾಡುವುದೊಂದೆ ಕೆಲಸ ಎಂಬಂತೆ ಅವನಿಗೆ ಹಗಲು ರಾತ್ರಿ ಸೇವೆಗಳನ್ನು ಮಾಡುತ್ತಾ ಅದರಲ್ಲಿಯೇ ಮುಳುಗಿ ಹೋಗಿದ್ದಳು ಇಂದ್ರಸೇನಾ. ಮೌದ್ಗಲ್ಯ ತಿಂದ ನಂತರವೇ ಇಂದ್ರಸೇನಾ ತಿನ್ನುತ್ತಿದ್ದಳು ಅದು ಕೂಡ ಮೌದ್ಗಲ್ಯ ತಿಂದಂತಹ ತಟ್ಟೆಯಲ್ಲೇ ತಾನು ತಿನ್ನುತ್ತಿದ್ದಳು.

  ಇದನ್ನೂ ಓದಿ: ಮಹಾಭಾರತದ ದುರಂತ ನಾಯಕ ಕರ್ಣನ ಅಂತ್ಯಕ್ಕೆ ಕಾರಣವಾಗಿದ್ದೇ ಆತನಿಗೆ ತಟ್ಟಿದ್ದ ಶಾಪಗಳು..!

  ಒಂದು ದಿನ ಮೌದ್ಗಲ್ಯ ತಿಂದಂತಹ ತಟ್ಟೆಯಲ್ಲಿ ಇಂದ್ರಸೇನಾ ಊಟ ತಿನ್ನುತ್ತಿರುವಾಗ ಆ ಊಟದಲ್ಲಿ ಮೌದ್ಗಲ್ಯನ ಕೈ ಬೆರಳೊಂದು ಸಿಗುತ್ತದೆ.ಅದನ್ನು ನೋಡಿದರೆ ಯಾರಾದರೂ ಅಸಹ್ಯ ಪಡುತ್ತಾರೆ ಆದರೆ ಇಂದ್ರಸೇನಾ ಮಾತ್ರ ಅಯ್ಯೋ ನನ್ನ ಗಂಡನ ಇನ್ನೊಂದು ಬೆರಳು ಸಹ ಉದುರಿ ಹೋಯಿತೆ ಎಂದು ದುಃಖಿಸುತ್ತಾ ಆ ಬೆರಳನ್ನು ಪಕ್ಕಕ್ಕಿಟ್ಟು ಊಟ ಸೇವಿಸಿದಳು.ಅದನ್ನೆಲ್ಲ ಪಕ್ಕದಲ್ಲೇ ಕುಳಿತು ನೋಡುತ್ತಿದ್ದ ಮೌದ್ಗಲ್ಯ ಇಂದ್ರ ಸೇನಳಿಗಿರುವ ಪತಿಭಕ್ತಿಗೆ ಮನಸೋತು “ನಿನಗೇನು ವರ ಬೇಕೊ ಬೇಡಿಕೊ ,ನನಗಿರುವ ತಪೋಶಕ್ತಿಯಿಂದ ಅದನ್ನು ಈಡೇರಿಸುತ್ತೇನೆ” ಎಂದರು ಗಂಡನಿಗೆ ಸೇವೆ ಮಾಡುತ್ತಲೇ ಜೀವನ ಸಾಗಿಸುತ್ತಿದ್ದ ಇಂದ್ರಸೇನಾ “ನಾನು ನಿಮ್ಮೊಂದಿಗೆ ಯಾವ ಸುಖವೂ ಅನುಭವಿಸಲು ಸಾಧ್ಯವಾಗಲಿಲ್ಲ ಹಾಗಾಗಿ ನನಗೆ ನಿಮ್ಮೊಂದಿಗೆ ಸಂತೋಷವಾಗಿ ಕೆಲ ಸಮಯ ಕಳೆಯಬೇಕೆಂಬ ಬಯಕೆ ಇದೆ” ಎಂದಳು ಇಂದ್ರಸೇನಾ.

  ಇಂಧ್ರಸೇನಾಳಾಗಿ ಮೌದ್ಗಲ್ಯ ಮಹರ್ಷಿಯ ಸೇವೆ

  ಇಂಧ್ರಸೇನಾಳ ಬಯಕೆಯನ್ನು ತಿರಸ್ಕರಿಸಲಾಗದೆ ಮೌದ್ಗಲ್ಯ ತನ್ನ ತಪೋಬಲದಿಂದ 5 ರೂಪಗಳಲ್ಲಿ 5 ಅಂಧವಾದ ಪ್ರದೇಶಗಳಲ್ಲಿ ಇಂದ್ರಸೇನಳೊಡನೆ ಶೃಂ ಗಾರ ನಡೆಸುತ್ತಾರೆ.ಕೆಲ ದಿನಗಳ ಬಳಿಕ ಮೌದ್ಗಲ್ಯ ಮರಣಿಸಿ ಬ್ರಹ್ಮ ಲೋಕ ಸೇರುತ್ತಾರೆ.ಇಂದ್ರಸೇನಾ ಸಹ ತನ್ನ ಗಂಡನ ಚಿತೆಯಲ್ಲಿಯೇ ದೇಹತ್ಯಾಗ ಮಾಡಿ ಮುಂದಿನ ಜನ್ಮದಲ್ಲಿ ಕಾಶಿ ರಾಜನ ಮಗಳಾಗಿ ಜನಿಸುತ್ತಾಳೆ.ಆಕೆ ಅತಿಲೋಕ ಸೌಂದರ್ಯವತಿ.ಅವಳಿಗಿರುವ ದೊಡ್ಡ ದೊಡ್ಡ ಕಣ್ಣುಗಳೇ ಮುಖ್ಯ ಆಕರ್ಷಣೆ ಆಕೆ ಗಂಗಾ ನದಿ ದಡದಲ್ಲಿ ಕುಳಿತು ಶಿವನಿಗಾಗಿ ತಪಸ್ಸು ಮಾಡುತ್ತಾಳೆ.

  ಶಿವನ ಕುರಿತು ಕಾಶಿರಾಜನ ಮಗಳ ತಪಸ್ಸು

  ಶಿವ ಪ್ರತ್ಯಕ್ಷಗೊಂಡು “ಏನು ವರ ಬೇಕೆಂದು?” ಕೇಳಿದರೆ ಆ ಕಾಶಿ ರಾಜನಕುಮಾರಿಯ ಶಿವನನ್ನು ನೋಡಿ ಅಯೋಮಯದಲ್ಲಿ ಏನು ಕೇಳುವುದೆಂದು ತೋಚದೆ ಅವಸರದಲ್ಲಿ ಬಾಯಿ ತೊದಲುತ್ತಾ ಪತಿ ಪತಿ ಎಂದು 5 ಬಾರಿ ಹೇಳುತ್ತಾಳೆ.ಒಡನೆಯೇ ಶಿವ ಅವಳಿಗೆ ಐವರು ಪುರುಷರೊಂದಿಗೆ ವಿವಾಹವಾಗುತ್ತದೆ ಎಂದು ವರ ಪ್ರಸಾದಿಸುತ್ತಾರೆ.ಶಿವ ತಥಾಸ್ತು ಎಂದೊಡನೆ ಆಘಾತಕ್ಕೊಳಗಾದ ಕಾಶಿ ರಾಜನ ಮಗಳು “ಅಯ್ಯೋ ಪ್ರಭು ಸನಾತನ ಧರ್ಮದಲ್ಲಿ ಜನಿಸಿದ ಸ್ತ್ರೀಗೆ ಒಬ್ಬನೇ ಪತಿ ಇರಬೇಕು ನಾನು ಅವಸರದಲ್ಲಿ 5 ಬಾರಿ ಪತಿ ಎಂದು ಉಚ್ಚರಿಸಿದೆ ನನಗೆ ಆ ವರ ಬೇಡ ಬೇರೇನಾದರೂ ಕೇಳುತ್ತೇನೆ ಅದು ಸಾಧ್ಯವಿಲ್ಲದಿದ್ದರೆ ನನಗೆ ಕೊಟ್ಟ ವರವಾದರೂ ಹಿಂಪಡೆಯಿರಿ” ಎಂದು ಬೇಡುತ್ತಾಳೆ.

  ವಿಧಿಯಿಲ್ಲದೆ ಕಾಶಿ ರಾಜನ ಮಗಳು ಧನ್ಯೋಸ್ಮಿ ಎನ್ನುತ್ತಾ ನನಗೆ ಎಂತಹ ಗುಣಗಳೇ ಮಹಾ ಗುಣಗಳಿರುವ ಪತಿಗಳು ಸಿಗುತ್ತಾರೆಂದು ಶಿವನನ್ನು ಕೇಳಿದರೆ ,”ಇಂದ್ರನನ್ನು ನನ್ನ ಬಳಿ ಕರೆತಂದರೆ ಹೇಳುತ್ತೇನೆ” ಎನ್ನುತ್ತಾರೆ ಶಿವ.ಗಂಗಾ ನದಿಯ ಬಳಿ ಇದ್ದಂತಹ ಇಂದ್ರ ದೇವರನ್ನು ಶಿವನ ಬಳಿ ಕರೆದೋಗೂತ್ತಾಳೆ ಅದೇ ಸಮಯದಲ್ಲಿ ಶಿವ ಯುವಕನಂತೆ ರೂಪಾ ಬದಲಾಯಿಸಿ ಒಂದು ಯುವತಿಯೊಡನೆ ಕವಡೆ ಆಟ ಆಡುತ್ತಿರುತ್ತಾರೆ.ಇಂದ್ರ ದೇವರಿಗೆ ಕೋಪ ಬಂದು ಆ ಯುವಕನ ಮೇಲೆ ಆಗ್ರಹ ತೋರಿಸಿದರೆ ಆ ಯುವಕನ ವೇಶದಲ್ಲಿದ್ದ ಶಿವ “ನೀನಷ್ಟು ಬಲಶಾಲಿಯಾದರೆ ಅಲ್ಲಿ ಕಾಣಿಸುವಂತಹ ಗುಹೆಯನ್ನು ಒಂದೇ ಏಟಿಗೆ ಎರಡು ಭಾಗಗಳಾಗಿಸು” ಎಂದು ಒಂದು ಗುಹೆಯ ಕಡೆ ಬೆರಳು ಮಾಡಿ ತೋರಿಸುತ್ತಾರೆ.

  ಇದನ್ನೂ ಓದಿ: ಭಗವಾನ್ ವಿಷ್ಣು ಮತ್ಸ್ಯಾವತಾರ ತಾಳಿದ್ದು ಯಾಕೆ ಗೊತ್ತಾ..?

  ಶಿವನ ಆಶೀರ್ವಾದದಂತೆ ಭೂಲೋಕದಲ್ಲಿ ಜನಿಸುವ ದೇವತೆಗಳ ಅಂಶಗಳು

  ಇಂದ್ರ ಒಂದೇ ಏಟಿಗೆ ಗುಹೆ ಒಡೆದು ಹಾಕಿದರೆ ಒಳಗೆ ಇಂದ್ರನನ್ನು ಹೋಲುವಂತಹ ಇನ್ನು 4 ಜನ ಪುರುಷರು ಇರುತ್ತಾರೆ.ಅದನ್ನು ನೋಡಿ ಇಂದ್ರ ಆಶ್ಚರ್ಯಗೊಂಡು ಹಿಂತಿರುಗಿ ಆ ಯುವಕನೆಡೆಗೆ ನೋಡಿದರೆ ಆ ಯುವಕ ಶಿವನಂತೆ ರೂಪಾ ಬದಲಾಯಿಸಿ”ನೀವು 5 ಜನರು ಭೂಲೋಕದಲ್ಲಿ ಜನಿಸಬೇಕು” ಎನ್ನುತ್ತಾರೆ.ಶಿವನ ಆಜ್ಞೆಯ ಮೇರೆಗೆ ಇಂದ್ರ ದೇವರು ,ವರುಣ ದೇವರು ,ವಾಯುದೇವರು ,ಅಶ್ವಿನಿ ದೇವತೆಗಳ ಅಂಶವೂ ಪಾಂಡುರಾಜನ ಮಡದಿಯಾದ ಕುಂತಿ ದೇವಿಗೆ ಜನಿಸುತ್ತಾರೆ. ಹಾಗೆಯೇ ದ್ರುಪದನ ಕುಮಾರಿಯಂತೆ ಕಾಶಿ ರಾಜನ ಮಗಳು ಯಜ್ಞಕುಂಡದಿಂದ ಜನಿಸುತ್ತಾಳೆ ಅವಳೇ ದ್ರೌಪದಿ. ಹೀಗೆ ಜನಿಸಿದ ದ್ರೌಪತಿ ಪಂಚಪಾಂಡವರನ್ನು ವಿವಾಹವಾಗಿ ಪಾಂಚಾಲಿಯಾಗಿ ಬದಲಾಗುತ್ತಾಳೆ..

  ದ್ರೌಪದಿಯಾಗಿ ಪಂಚಪಾಂಡವರ ವಿವಾಹ

  ಇನ್ನು ದ್ರೌಪದಿಯ ವಿವಾಹ ಸಂದರ್ಭದಲ್ಲಿ ಪಾಂಡವರು ಐವರು ಸಹ ದೇವತೆಗಳ ಅಂಶವೆಂದು ವ್ಯಾಸರು ಹೇಳಿದ ಬಳಿಕ ದ್ರುಪದ ಈ ಮದುವೆಗೆ ಸಮ್ಮತಿಸುತ್ತಾರೆ.ಪಾಂಡವರಲ್ಲಿ ಒಬ್ಬೊಬ್ಬರು ಒಂದು ವರ್ಷದ ಕಾಲ ದ್ರೌಪದಿ ಯೊಡನೆ ಸಂಸಾರ ನಡೆಸುತ್ತಾರೆ. ಒಂದು ವರ್ಷ ಕಳೆದರೆ ದ್ರೌಪದಿಗಾಗಿ 4 ವರ್ಷಗಳ ಕಾಲ ಅವರು ಎದುರು ನೋಡುತ್ತಿದ್ದರು.ಶಿವನ ವರದಿಂದಾಗಿ ದ್ರೌಪದಿಯು ಒಬ್ಬ ಪತಿಯೊಂದಿಗೆ ಸಂಸಾರ ನಡೆಸಿ ವರ್ಷದ ಬಳಿಕ ಇನ್ನೊಬ್ಬ ಪತಿಯ ಬಳಿ ಹೊರಡುವ ಮುಂಚೆ ದ್ರೌಪದಿ ಪುನಃ ಕನ್ಯೆಯಾಗಿ ಬದಲಾಗುತ್ತಿದ್ದಳು.
  Published by:ranjumbkgowda1 ranjumbkgowda1
  First published: