Cremation: ಹಿಂದೂ ಸಂಪ್ರದಾಯಲ್ಲಿ ಹೆಣ್ಣು ಮಕ್ಕಳಿಗೆ ಸ್ಮಶಾನಕ್ಕೆ ಪ್ರವೇಶವಿಲ್ಲ, ಅದರ ಹಿಂದಿನ ಕಾರಣ ಇದು

Hinduism: ಹಿಂದೂ ಧರ್ಮದಲ್ಲಿನ ಕೆಲವು ನಂಬಿಕೆಗಳ ಪ್ರಕಾರ ಯಾರಾದರೂ ಸತ್ತಾಗ ಕೇವಲ ಗಂಡುಮಕ್ಕಳು ಮಾತ್ರ ಸ್ಮಶಾನಕ್ಕೆ ಹೋಗಬೇಕಂತೆ. ಹಾಗಿದ್ರೆ ಕೇವಲ ಗಂಡು ಮಕ್ಕಳೇ ಯಾಕೆ ಯಾರಾದರೂ ಸತ್ತಾಗ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು.. ಹೆಣ್ಣುಮಕ್ಕಳು ಯಾಕೆ ಹೋಗಬಾರದು ಎಂಬುದಕ್ಕೆ ಇಲ್ಲಿದೆ ಮಾಹಿತಿ..

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
    ಸನಾತನ ಧರ್ಮ ವಾಗಿರುವ ಹಿಂದೂಧರ್ಮದಲ್ಲಿ(Hindu Religion) ಹಲವಾರು ಆಚರಣೆಗಳು ಜಾರಿಯಲ್ಲಿವೆ.. ಅದರಲ್ಲೂ ಮಹಿಳೆಯರ(Women) ವಿಚಾರಕ್ಕೆ ಬಂದರೆ ಕೆಲವೊಂದಿಷ್ಟು ಮೂಢನಂಬಿಕೆಗಳು(Superstitions) ಇಂದಿಗೂ ಇವೆ.. ಆದ್ರೆ ಆಚರಣೆಗಳನ್ನು ಕಡ್ಡಾಯವಾಗಿ ಮಹಿಳೆಯರು ಪಾಲನೆ ಮಾಡಬೇಕು ಎಂದಿಲ್ಲ.. ಅವರವರ ನಂಬಿಕೆ ಹಾಗೂ ಅನುಕೂಲಕ್ಕೆ ತಕ್ಕಂತೆ ಹಿಂದೂ ಧರ್ಮದಲ್ಲಿರುವ(Religion) ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.. ಇದು ಕೆಲವರ ಪಾಲಿಗೆ ಮೂಢನಂಬಿಕೆ ಅನಿಸಿದರೂ ಇನ್ನೂ ಕೆಲವರ ಪಾಲಿಗೆ ವೈಜ್ಞಾನಿಕ ಕಾರಣಗಳಿಂದ(Scientific Reason) ಸರಿಯಾದ ಕ್ರಮ ಎನಿಸಿದೆ.. ಈ ರೀತಿಯ ಹಲವು ಆಚರಣೆಗಳಲ್ಲಿ ಮಹಿಳೆಯರು ಯಾರಾದರೂ ಸತ್ತಾಗ ಸ್ಮಶಾನಕ್ಕೆ ಬರಬಾರದು ಎಂಬುದು ಕೂಡ ಒಂದು.. ಹೌದು ಹಿಂದೂ ಧರ್ಮದಲ್ಲಿನ ಕೆಲವು ನಂಬಿಕೆಗಳ ಪ್ರಕಾರ ಯಾರಾದರೂ ಸತ್ತಾಗ ಕೇವಲ ಗಂಡುಮಕ್ಕಳು ಮಾತ್ರ ಸ್ಮಶಾನಕ್ಕೆ ಹೋಗಬೇಕಂತೆ. ಹಾಗಿದ್ರೆ ಕೇವಲ ಗಂಡು ಮಕ್ಕಳೇ ಯಾಕೆ ಯಾರಾದರೂ ಸತ್ತಾಗ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು.. ಹೆಣ್ಣುಮಕ್ಕಳು ಯಾಕೆ ಹೋಗಬಾರದು ಎಂಬುದಕ್ಕೆ ಇಲ್ಲಿದೆ ಮಾಹಿತಿ..

    ಹಿಂದೂ ಧರ್ಮದಲ್ಲಿ ಹೆಣ್ಣುಮಕ್ಕಳು ಯಾಕೆ ಸ್ಮಶಾನಕ್ಕೆ ಹೋಗಬಾರದು..?

    ಹಿಂದೂ ಧರ್ಮದಲ್ಲಿ ಹೇಳಿರುವ ಪ್ರಕಾರ ಹೆಣ್ಣು ಮಕ್ಕಳು ಸ್ಮಶಾನಕ್ಕೆ ಹೋಗಬಾರದು ಎನ್ನುವುದಕ್ಕೆ ಹಲವಾರು ರೀತಿಯ ಕಾರಣಗಳು ಇವೆ.. ಅದರಲ್ಲಿಯೂ ಹಿಂದೂಧರ್ಮದಲ್ಲಿ ಹೆಣ್ಣು ಮಕ್ಕಳು ಕಡ್ಡಾಯವಾಗಿ ಸ್ಮಶಾನಕ್ಕೆ ಹೋಗಲೇಬಾರದು ಎಂದು ಹೇಳಿಲ್ಲ.. ಒಂದು ವೇಳೆ ಹೆಣ್ಣುಮಕ್ಕಳು ಬಯಸಿದರೆ ಸ್ವಯಂಪ್ರೇರಿತರಾಗಿ ಸ್ಮಶಾನಕ್ಕೆ ಹೋಗಬಹುದು.. ಆದರೆ ಯಾಕೆ ಸ್ಮಶಾನಕ್ಕೆ ಹೋಗಬಾರದು ಎನ್ನುವುದಕ್ಕೆ ಕೆಲವು ಕಾರಣಗಳು ಮೂಢನಂಬಿಕೆಯಿಂದ ಆಗುವುದಿದ್ದರೆ, ಇನ್ನೂ ಕೆಲವು ಕಾರಣಗಳು ವೈಜ್ಞಾನಿಕತೆಗೆ ಹತ್ತಿರವಾಗಿವೆ. ಈ ಕಾರಣಗಳಿಂದ ಮಹಿಳೆಯರು ಸ್ಮಶಾನಕ್ಕೆ ಹೋಗಬಾರದಂತೆ.

    1) ಮಹಿಳೆಯರು ಸೂಕ್ಷ್ಮ ಹೃದಯದವರು: ಸ್ಮಶಾನಕ್ಕೆ ಹೋದಾಗ ಮೃತ ವ್ಯಕ್ತಿಯ ದೇಹವನ್ನು ಕೆಲವು ಕಡೆ ಮಣ್ಣು ಮಾಡುವುದಕ್ಕಿಂತ ಸುಡುವುದು ಹೆಚ್ಚು.. ದೇಹ ಸಂಪೂರ್ಣ ಸುಟ್ಟು ಭಸ್ಮವಾಗಿ ಅದನ್ನು ಸಹಿಸಿಕೊಳ್ಳುವ ಶಕ್ತಿ ಹಾಗೂ ನೋಡುವ ಶಕ್ತಿ ಮಹಿಳೆಯರಿಗೆ ಇರುವುದಿಲ್ಲ.. ಇದರಿಂದ ಅವರ ಮೇಲೆ ಆಘಾತ ಬೀರಬಹುದು ಎಂಬ ಕಾರಣಕ್ಕೆ ಮಹಿಳೆಯರು ಸ್ಮಶಾನಕ್ಕೆ ಬರದಂತೆ ಹೇಳಲಾಗಿದೆ.

    ಇದನ್ನೂ ಓದಿ: ದುಷ್ಟಶಕ್ತಿಯಿಂದ ಪರಿಹಾರ ಕಾಣಬೇಕು ಎಂದ್ರೆ ಈ ಮಂತ್ರ ಜಪಿಸಿ ಸಾಕು

    2) ಭಯಾನಕವಾಗಿರುವ ಶವಸಂಸ್ಕಾರದ ದೃಶ್ಯ: ಇನ್ನು ಶವಕ್ಕೆ ಸಂಸ್ಕಾರವಾದಾಗ ಶವ ಸಂಸ್ಕಾರದ ವೇಳೆ ತಲೆ ಬುರುಡೆ, ಮೂಳೆಗಳು ಒಡೆಯುವ ಶಬ್ಧ ಕೇಳಿಸುತ್ತದೆ. ಮತ್ತು ತಮ್ಮವರು ಬೆಂಕಿಯಲ್ಲಿ ಬೇಯುವ ದೃಶ್ಯ ನೋಡುವುದು ಅಸಾಧ್ಯವಾದ ಕಾರಣ, ಹೀಗೆ ಮಾಡಲಾಗುತ್ತದೆ.

    3) ಅತ್ತರೆ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂಬ ನಂಬಿಕೆ: ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ಯಾರಾದರೂ ಸತ್ತಾಗ ಜೋರಾಗಿ ಅತ್ತರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲವಂತೆ.. ಹೀಗಾಗಿ ಸ್ಮಶಾನಕ್ಕೆ ಶವವನ್ನು ತೆಗೆದುಕೊಂಡು ಸಂಸ್ಕಾರ ಮಾಡುವ ವೇಳೆ ಮೃತ ವ್ಯಕ್ತಿಯೊಂದಿಗಿನ ಒಡನಾಟವನ್ನು ನೆನೆದು ಮಹಿಳೆಯರು ಬೇಗ ಕಣ್ಣೀರು ಹಾಕುವ ಸಾಧ್ಯತೆ ಇದೆ.. ಇದರಿಂದಾಗಿ ಮೃತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ.. ಹೀಗಾಗಿಯೇ ಹೆಣ್ಣುಮಕ್ಕಳು ಸ್ಮಶಾನಕ್ಕೆ ಬರಬಾರದು ಎಂದು ಕೆಲವು ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ.

    4) ಮನೆ ನೋಡಿಕೊಳ್ಳಲು: ಯಾರಾದರೂ ಮೃತಪಟ್ಟರೆ ಪುರುಷರು ಸ್ಮಶಾನಕ್ಕೆ ಹೋದಾಗ ಮನೆ ಖಾಲಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಮನೆಯನ್ನು ನೋಡಿಕೊಳ್ಳಬೇಕಾಗುತ್ತದೆ.. ಅಶುದ್ಧಿಯಾಗಿರುವ ಮನೆಯನ್ನು ಶುದ್ಧಗೊಳಿಸುವುದು, ಆಹಾರ ತಯಾರಿಸುವುದು ಹೀಗೆ ಹಲವು ಕರ್ತವ್ಯಗಳಿಂದ ಮಹಿಳೆಯರು ಯಾರಾದರೂ ಸತ್ತಾಗ ಹಿಂದೂಧರ್ಮದಲ್ಲಿ ಸ್ಮಶಾನಕ್ಕೆ ಬರುವಂತಿಲ್ಲ ಎಂದು ಹೇಳಲಾಗಿದೆ..

    5) ದುಷ್ಟ ಶಕ್ತಿಗಳನ್ನು ಆಕರ್ಷಿಸುವ ಉದ್ದ ಕೂದಲು: ಇದು ಮೂಢನಂಬಿಕೆ ಅನಿಸಿದರೂ ಕೆಲವರ ನಂಬಿಕೆಯಾಗಿದೆ. ಸ್ಮಶಾನದಲ್ಲಿ ದುಷ್ಟಶಕ್ತಿಗಳ ಆರ್ಭಟ ಹೆಚ್ಚಾಗಿರುತ್ತದೆ.. ಅದರಲ್ಲೂ ಮಹಿಳೆಯರು ಉದ್ದ ಕೂದಲು ಹೊಂದಿರುವುದರಿಂದ ಅವರು ಯಾರಾದರೂ ಸತ್ತಾಗ ಸ್ಮಶಾನಕ್ಕೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಬಂದಾಗ ಉದ್ದ ಕೂದಲಿದ್ದರೆ ದುಷ್ಟಶಕ್ತಿಗಳು ಅವರತ್ತ ಆಕರ್ಷಿತರಾಗುತ್ತಾರೆ ಎಂಬ ನಂಬಿಕೆ ಇದೆ.. ಇದರಿಂದ ಮಹಿಳೆ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.

    6) ದೆವ್ವ-ಭೂತಗಳ ಭಯ: ಇನ್ನು ಕೆಲವರ ಪ್ರಕಾರ ಅವಿವಾಹಿತ ಮಹಿಳೆಯರು ಸ್ಮಶಾನವನ್ನು ಪ್ರವೇಶ ಮಾಡಬಹುದು.. ಆದರೆ ಕನ್ಯೆಯರು ಸ್ಮಶಾನವನ್ನು ಅಂತ್ಯಸಂಸ್ಕಾರದ ವೇಳೆ ಪ್ರವೇಶ ಮಾಡುವಂತಿಲ್ಲ.. ಯಾಕೆಂದರೆ ಕನ್ಯೆಯರನ್ನು ನೋಡಿದಾಗ ದೆವ್ವ ಭೂತಗಳು ಅವರ ಕಡೆಗೆ ಆಸಕ್ತರಾಗಿ ತೊಂದರೆ ಕೊಡುತ್ತವಂತೆ.. ಹೀಗಾಗಿ ಕನ್ಯೆಯರು ಸ್ಮಶಾನ ಪ್ರವೇಶಿಸುವುದು ನಿಷೇಧ..

    ಇದನ್ನೂ ಓದಿ: ಬೆಸ್ಟ್​ ಅಪ್ಪನಾಗುವ ಲಕ್ಷಣ 5 ರಾಶಿಯವರಲ್ಲಿ ಇದೆಯಂತೆ!

    ಇನ್ನು ಈ ಮೇಲಿನ ಕಾರಣಗಳು ಕೆಲವರ ನಂಬಿಕೆ ಆಗಿವೆ.. ಆದ್ರೆ ನಮ್ಮ ದೇಶದಲ್ಲಿ ಹಿಂದೂ ಧರ್ಮದಲ್ಲಿ ಎಷ್ಟೋ ಕಡೆ ಹೆಣ್ಣುಮಕ್ಕಳೇ ಮೃತ ತಂದೆ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.. ಪುರುಷರ ಜಾಗದಲ್ಲಿ ನಿಂತು ಪ್ರತಿಯೊಂದು ಕರ್ತವ್ಯಗಳನ್ನು ನೆರವೇರಿಸಿ ಮೃತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಕೋರುವ ಕೆಲಸವನ್ನು ಮಾಡಿದ್ದಾರೆ.
    Published by:ranjumbkgowda1 ranjumbkgowda1
    First published: