Samudra Manthan: ಸಮುದ್ರ ಮಂಥನದ ವೇಳೆ ಲಕ್ಷ್ಮಿಗೂ ಮುನ್ನ ಹುಟ್ಟಿದವಳು ಅಕ್ಕ ಅಲಕ್ಷ್ಮಿ; ಆಕೆಯ ಕಥೆ ಗೊತ್ತಾ!

ಸುರ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ವೇಳೆ ಅನೇಕ ದೇವಾನು ದೇವತೆಗಳು ಉಗಮವಾದರು. ಈ ವೇಳೆ ಲಕ್ಷ್ಮಿಗಿಂತ ಮುಂಚೆ ಜನಿಸಿದವಳು ಅಲಕ್ಷ್ಮಿ

ಸಮುದ್ರ ಮಂಥನ

ಸಮುದ್ರ ಮಂಥನ

  • Share this:
    ಇಂದು ನಾಡಿನೆಲ್ಲೆಡೆ ದೀಪಾವಳಿ (Deepavali) ಸಂಭ್ರಮ ಆಚರಿಸಲಾಗುತ್ತಿದೆ. ದೀಪಾವಳಿಯ ಕಾರ್ತಿಕ ಮಾಸದ (Katik Maas) ಕೃಷ್ಣ ಪಕ್ಷದ ಚತುರ್ದಶಿಯಂದು ಅಮಾವಸ್ಯೆ ವೇಳೆ ಸಮುದ್ರ ಮಂಥನದ (Samudra Manthana) ವೇಳೆ ಲಕ್ಷ್ಮಿ ಜನಿಸಿದಳು. ಇದೇ ಕಾರಣಕ್ಕೆ ಇಂದು ಮಾತೆ ಲಕ್ಷ್ಮಿಯನ್ನು ಪೂಜಿಸಲಾಗುವುದು. ಸಂಪತ್ತಿನ ಅಧಿದೇವತೆಯಾಗಿರುವ ಲಕ್ಷ್ಮಿ ಪೂಜಿಸುವುದರಿಂದ ಇಂದು ಐಶ್ವರ್ಯಾ ವೃದ್ಧಿಯಾಗಿ ಮನೆಯಲ್ಲಿ ಸುಖ ಸಂಪತ್ತು ಹೆಚ್ಚುತ್ತದೆ. ಲಕ್ಷ್ಮಿ ಎಲ್ಲಿರುತ್ತಾಳೋ ಅಲ್ಲಿ ಹಣದ ಮತ್ತು ಆಹಾರದ ಕೊರತೆ ಇರುವುದಿಲ್ಲ. ಇದೇ ಕಾರಣಕ್ಕೆ ಇಂದು ನಾಡಿನೆಲ್ಲೆಡೆ ಭಕ್ತಿಯಿಂದ ಲಕ್ಷ್ಮಿ ಪೂಜೆ ಮಾಡಲಾಗುವುದು. ಇನ್ನು ಈ ಸಮುದ್ರ ಮಂಥನದ ವೇಳೆ ಲಕ್ಷ್ಮಿಗಿಂತ ಮುಂಚೆ ಜನಿಸಿದ್ದು ಆಕೆಯ ಅಕ್ಕ ಅಲಕ್ಷ್ಮಿ (Alakshmi). ಈಕೆ ಇದ್ದೆಲ್ಲೆಡೆ ಬಡತನ ಇರುತ್ತದೆ ಎಂಬ ನಂಬಿಕೆ ಇದೆ. ಇನ್ನು ಈ ಅಲಕ್ಷ್ಮಿ ಕಥೆ ಏನು ಎಂಬುದಾಗಿ ಪುರಾಣದಲ್ಲಿ ಈ ರೀತಿ ಇದೆ.

    ಮಂಥನದ ವೇಳೆ ಜನಿಸಿದವಳು ಅಲಕ್ಷ್ಮಿ
    ಪುರಾಣದಲ್ಲಿ ಸಮುದ್ರ ಮಂಥನ ಬಹಳ ಮುಖ್ಯ ಎಂದು ಕರೆಯಲಾಗುತ್ತದೆ. ಸುರ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ವೇಳೆ ಅನೇಕ ದೇವಾನು ದೇವತೆಗಳು ಉಗಮವಾದರು. ಈ ವೇಳೆ ಲಕ್ಷ್ಮಿಗಿಂತ ಮುಂಚೆ ಜನಿಸಿದವಳು ಅಲಕ್ಷ್ಮಿ . 14 ರತ್ನಗಳಲ್ಲಿ ಹೊರ ಬಂದ ಅಲಕ್ಷ್ಮಿಯನ್ನು ಲೆಕ್ಕಿಸಲಾಗಿಲ್ಲ. ಈ ಹಿನ್ನಲೆಯಲ್ಲಿ ಅಲಕ್ಷ್ಮಿಯನ್ನು ಅಸುರರು ಸ್ವೀಕರಿಸಿದರು.

    ಅಸುರರ ಕಡೆ ಹೋದ ಅಲಕ್ಷ್ಮಿ
    ಅಲಕ್ಷ್ಮಿ ದೇವಿಯು ಬಡತನದ ದೇವತೆ ಎಂದು ಪರಿಗಣಿಸಿಲಾಇದೆ. ಸಾಗರ ಮಂಥನದ ಸಮಯದಲ್ಲಿ 14 ಮೂಲ ರತ್ನಗಳು ಹೊರಬಂದಾಗ ಇದರ ಮಧ್ಯೆ ಕೆಲವು ರತ್ನಗಳು ಹೊರಹೊಮ್ಮಿದವು ಎಂದು ನಂಬಲಾಗಿದೆ. ಈ ಉಪರತ್ನಗಳಲ್ಲಿ ಅಲಕ್ಷ್ಮಿಯೂ ಒಬ್ಬಳು. ವಾರುಣಿ ದೇವಿಯನ್ನು ಅಲಕ್ಷ್ಮಿ ಎಂದು ಕೆಲವರು ನಂಬುತ್ತಾರೆ. ವಿಷ್ಣುವಿನ ಅನುಮತಿಯ ಮೇರೆಗೆ ರಾಕ್ಷಸರಿಗೆ ವಾರುಣಿ ಅಂದರೆ ಮದ್ಯವನ್ನು ನೀಡಲಾಯಿತು. ಅಲಕ್ಷ್ಮಿಯು ಸಹ ಸಾಗರದಿಂದ ಜನಿಸಿದಳು, ಆದ್ದರಿಂದ ಅವಳನ್ನು ಲಕ್ಷ್ಮಿಯ ಅಕ್ಕ ಎಂದು ಕರೆಯಲಾಗುತ್ತದೆ.

    ಇದನ್ನು ಓದಿ: ಪೂಜೆ ವೇಳೆ ಈ ಮಂತ್ರಗಳನ್ನು ಜಪಿಸಿ, ಲಕ್ಷ್ಮಿಯನ್ನು ಪ್ರಸನ್ನಗೊಳಿಸಿ

    ಉದ್ದಾಲಕ ಮುನಿಯ ಹೆಂಡತಿ ಈ ಅಲಕ್ಷ್ಮಿ
    ಅಲಕ್ಷ್ಮಿಯು ಉದ್ದಾಲಕ ಮುನಿಯನ್ನು ಮದುವೆಯಾಗಿದ್ದಳು. ಋಷಿಯು ಅಲಕ್ಷ್ಮಿಯೊಂದಿಗೆ ತನ್ನ ಆಶ್ರಮವನ್ನು ತಲುಪಿದಾಗ, ಅಲಕ್ಷ್ಮಿ ಆ ಆಶ್ರಮವನ್ನು ಪ್ರವೇಶಿಸಲು ನಿರಾಕರಿಸಿದ್ದಳು. ಋಷಿಯು ಪ್ರವೇಶಿಸದಿರಲು ಕಾರಣವನ್ನು ಕೇಳಿದಾಗ, ಲಕ್ಷ್ಮಿಯು ಹೇಳಿದಳು, ಕೊಳಕು ಇರುವ ಸ್ಥಳಗಳಿಗೆ, ಜನರು ಜಗಳವಾಡುವ, ಕೊಳಕು ಬಟ್ಟೆಗಳನ್ನು ಧರಿಸುವ ಮತ್ತು ಅಧರ್ಮದಲ್ಲಿ ವಾಸಿಸುವ ಸ್ಥಳಗಳಿಗೆ ಮಾತ್ರ ನಾನು ಹೋಗುತ್ತೇನೆ. ಅಂತಹ ಸ್ಥಳಗಳಲ್ಲಿ ಅಲಕ್ಷ್ಮಿ ವಾಸಿಸುವುದಾಗಿ ಹೇಳುತ್ತಾಳೆ.

    ಇದನ್ನು ಓದಿ: ಮನೆ ಮುಂದೆ ರಂಗೋಲಿ ಬಿಡಿಸುವುದರ ಹಿಂದಿದೆ ವೈಜ್ಞಾನಿಕ-ಆಧ್ಯಾತ್ಮಿಕ ಕಾರಣ

    ಅಲಕ್ಷ್ಮಿ ಹೋದರಷ್ಟೇ ಲಕ್ಷ್ಮಿ ಪ್ರವೇಶ
    ಯಾವಾಗಲೂ ಶುಚಿತ್ವ ಇರುವ ಮನೆಗಳಲ್ಲಿ, ಜನರು ಬೆಳಿಗ್ಗೆ ಬೇಗನೆ ಏಳುವ, ಪ್ರತಿದಿನ ದೇವರನ್ನು ಪೂಜಿಸುವ, ಶುಭ್ರವಾದ ಬಟ್ಟೆಗಳನ್ನು ಧರಿಸುವ ಮನೆಗಳಲ್ಲಿ, ನಾನು ಅಂದರೆ ಅಲಕ್ಷ್ಮಿ ಅಂತಹ ಸ್ಥಳಗಳಿಗೆ ಹೋಗುವುದಿಲ್ಲ ಎನ್ನುತ್ತಾಳೆ. ಇನ್ನು ಈಕೆ ಇದ್ದ ಕಡೆ ಕಷ್ಟಗಳು ಹೆಚ್ಚು ಎನ್ನಲಾಗುತ್ತದೆ. ಆಕೆ ಲಕ್ಷ್ಮಿ ಅಕ್ಕ ಆಗಿರುವುದರಿಂದ ಆಕೆ ಹೋದ ನಂತರವೇ ಲಕ್ಷ್ಮಿ ಬಂದು ನೆಲೆಸುತ್ತಾಳೆ ಎನ್ನಲಾಗಿದೆ. ಅಲಕ್ಷ್ಮಿಯ ತದ್ವಿರುದ್ಧ ಸ್ವಭಾವ ಹೊಂದಿರುವ ಲಕ್ಷ್ಮಿ ಶುಚಿತ್ವಕ್ಕೆ ಆದ್ಯತೆ ನೀಡುತ್ತಾಳೆ. ಅಲಕ್ಷ್ಮಿಯೂ ದುಃಖ ಮತ್ತು ಕಷ್ಟದ ಸಂಕೇತವಾದರೆ, ಲಕ್ಷ್ಮಿಯೂ ಸುಖ ಮತ್ತು ಸಮೃದ್ಧಿಯ ಸಂಕೇತವಾಗಿದ್ದಾಳೆ.
    Published by:Seema R
    First published: