ಪವಿತ್ರ Ramadan ತಿಂಗಳಲ್ಲಿ ಈ ಕೆಲಸ ಮಾಡಬಾರದಂತೆ

ರಂಜಾನ್ ತಿಂಗಳಲ್ಲಿ ಉಪವಾಸದ ಹೊರತಾಗಿ, ಮುಸ್ಲಿಮರು ಮಾಡಲೇಬೇಕಾದ ಮತ್ತು ಮಾಡಬಾರದ ಕಾರ್ಯಗಳಿವೆ.

 ರಂಜಾನ್ ತಿಂಗಳಲ್ಲಿ ಉಪವಾಸದ ಹೊರತಾಗಿ, ಮುಸ್ಲಿಮರು ಮಾಡಲೇಬೇಕಾದ ಮತ್ತು ಮಾಡಬಾರದ ಕಾರ್ಯಗಳಿವೆ.

ರಂಜಾನ್ ತಿಂಗಳಲ್ಲಿ ಉಪವಾಸದ ಹೊರತಾಗಿ, ಮುಸ್ಲಿಮರು ಮಾಡಲೇಬೇಕಾದ ಮತ್ತು ಮಾಡಬಾರದ ಕಾರ್ಯಗಳಿವೆ.

  • Share this:
ಇಸ್ಲಾಮಿಕ್ ಚಂದ್ರಮಾನ ಕ್ಯಾಲೆಂಡರ್‌ನಲ್ಲಿ ಇರುವ 12 ತಿಂಗಳುಗಳಲ್ಲಿ, ಪ್ರತಿಯೊಂದು ತಿಂಗಳು ಕೂಡ , ಮುಸ್ಲಿಮರ (Muslim) ಜೀವನದಲ್ಲಿ ಒಂದಲ್ಲ ಒಂದು ಧಾರ್ಮಿಕ ಮೌಲ್ಯವನ್ನು ಹೊಂದಿದೆ. ಅಂತಹ ತಿಂಗಳುಗಳಲ್ಲಿ ಒಂದನ್ನು ರಂಜಾನ್ ಎಂದು ಕರೆಯುತ್ತಾರೆ. ರಂಜಾನನ್ನು (Ramadan) ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದ್ದು, ಆ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಇದು ಇಸ್ಲಾಮಿಕ್ ಕ್ಯಾಲೆಂಡರ್‌ನ 9ನೇ ತಿಂಗಳಾಗಿದ್ದು, 29 ರಿಂದ 30 ದಿನಗಳನ್ನು ಒಳಗೊಂಡಿರುತ್ತದೆ. 2022 ರ ರಂಜಾನ್, ಏಪ್ರಿಲ್ 2 ರಂದು ಪ್ರಾರಂಭವಾಗುತ್ತದೆ ಮತ್ತು ಮೇ 2 ರ ವರೆಗೆ ಇರುತ್ತದೆ.

ರಂಜಾನ್ ತಿಂಗಳಿನಲ್ಲಿ, 1400 ವರ್ಷಗಳ ಹಿಂದೆ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಕೊನೆಯ ಪ್ರವಾದಿ ಮೊಹಮ್ಮದ್ ಅವರಿಗೆ ಸರ್ವಶಕ್ತನಾದ ಅಲ್ಲಾಹು, ಗೇಬ್ರಿಯಲ್ ಎಂಬ ದೇವದೂತನ ಮೂಲಕ ಬಹಿರಂಗಪಡಿಸಿದರು. ರಂಜಾನ್ ತಿಂಗಳಲ್ಲಿ ಉಪವಾಸದ ಹೊರತಾಗಿ, ಮುಸ್ಲಿಮರು ಮಾಡಲೇಬೇಕಾದ ಮತ್ತು ಮಾಡಬಾರದ ಕಾರ್ಯಗಳಿವೆ. ಅವುಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ರಂಜಾನ್‍ನಲ್ಲಿ ಅಗತ್ಯವಾಗಿ ಮಾಡಲೇಬೇಕಾದ ಕೆಲಸಗಳು
- ರಂಜಾನ್ ಉಪವಾಸದ ಸಂದರ್ಭದಲ್ಲಿ, ನಿತ್ಯದ ಐದು ಪ್ರಾರ್ಥನೆಗಳನ್ನು ಮಾಡುವುದು ಕಡ್ಡಾಯ. ಒಂದು ವೇಳೆ ಅವರು ಪ್ರಾರ್ಥನೆ ಮಾಡದಿದ್ದರೆ, ಅವರ ಉಪವಾಸವನ್ನು ಅಲ್ಲಾಹ್ ಸ್ವೀಕರಿಸುವುದಿಲ್ಲ.
-ಬಡವರಿಗೆ ಮತ್ತು ಅಗತ್ಯ ಇರುವವರಿಗೆ, ಮುಖ್ಯವಾಗಿ ಜಕಾತ್ ಅಥವಾ ಸದ್ಖಾ ರೂಪದಲ್ಲಿ ದಾನ ಮಾಡುವುದು. ದಾನ ಮಾಡಿದವರಿಗೆ ಭವಿಷ್ಯದಲ್ಲಿ ಅಲ್ಲಾಹ್ ಬಹುಮಾನವನ್ನು ನಿಡುತ್ತಾರೆ ಎಂಬ ನಂಬಿಕೆ ಇದೆ.
- ರಂಜಾನ್ ತಿಂಗಳಿನಲ್ಲಿ ಪವಿತ್ರ ಕುರಾನ್ ಅನ್ನು ಪಠಿಸಬೇಕು ಮತ್ತು ಕಂಠಪಾಠ ಮಾಡಬೇಕು ಹಾಗೂ ಅದರಲ್ಲಿ ಬರೆದ ಬೋಧನೆಗಳ ಬಗ್ಗೆ ಆಲೋಚಿಸಬೇಕು, ಅವುಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕು.
- ನಿಮ್ಮ ಮತ್ತು ಸೃಷ್ಟಿಕರ್ತನ ನಡುವೆ ಬಂಧವನ್ನು ಸೃಷ್ಟಿಸಲು, ರಂಜಾನ್ ತಿಂಗಳಲ್ಲಿ ಸದಾ ಧಿಕ್ರ್‌ ( ಸ್ತುತಿಯ ಮೂಲಕ ಅಲ್ಲಾನ ಸ್ಮರಣೆ) ತೊಡಗಿಸಿಕೊಳ್ಳಿ. ಧಿಕ್ರ್, ಅಲ್ಲಾನನ್ನು ನಂಬುವವನ ಹೃದಯವನ್ನು ಬಲಪಡಿಸುತ್ತದೆ.
- ಸಾಕಷ್ಟು ಬೇಡಿಕೊಳ್ಳಿ, ಏಕೆಂದರೆ ಉಪವಾಸದ ಸ್ಥಿತಿಯಲ್ಲಿ ತನ್ನಲ್ಲಿ ಬೇಡಿಕೆ ಇಡುವವರ ಕೈಯನ್ನು ಎಂದಿಗೂ ಅಲ್ಲಾಹ್ ಖಾಲಿ ಬಿಡುವುದಿಲ್ಲ ಎಂಬ ನಂಬಿಕೆ ಇದೆ.

ಇದನ್ನು ಓದಿ: ರಂಜಾನ್ ಸಂದರ್ಭದಲ್ಲಿ ಅರ್ಧಚಂದ್ರದ ಮಹತ್ವ ಹಾಗೂ ಪವಿತ್ರ ತಿಂಗಳಿನ ಆರಂಭ ಹೇಗೆ ಗುರುತಿಸುತ್ತಾರೆ..?

ರಂಜಾನ್ ತಿಂಗಳಲ್ಲಿ ಇದನ್ನು ಮಾಡಲೇಬೇಡಿ
- ರಂಜಾನ್ ಉಪವಾಸದಲ್ಲಿ ಇರುವ ಮುಸ್ಲಿಂ ವ್ಯಕ್ತಿಗೆ ಸೂರ್ಯಾಸ್ತದ ನಂತರ ಮಗ್ರಿಬ್ ಆಜಾನ್ ರದ್ದುಗೊಳ್ಳುವವರೆಗೆ, ನೀರನ್ನು ಕೂಡ ಕುಡಿಯುವ ಅವಕಾಶ ಇರುವುದಿಲ್ಲ.
- ರಂಜಾನ್ ಉಪವಾಸದಲ್ಲಿ ಇರುವ ಮುಸ್ಲಿಮರು ಧೂಮಪಾನ ಮಾಡುವಂತಿಲ್ಲ ಮತ್ತು ಸ್ವಯಂ ಪ್ರೇರಣೆಯಿಂದ ಬಲವಂತವಾಗಿ ವಾಂತಿ ಮಾಡುವಂತಿಲ್ಲ. ಏಕೆಂದರೆ, ಅದು ಉಪವಾಸವನ್ನು ಅಮಾನ್ಯಗೊಳಿಸಬಹುದು.
- ಸಾಮಾನ್ಯ ದಿನಚರಿಯಲ್ಲೇ ಸಂಗೀತಕ್ಕೆ ಇಸ್ಲಾಂನಲ್ಲಿ ಅನುಮತಿ ನೀಡಿಲ್ಲ ಮತ್ತು ಪವಿತ್ರ ರಂಜಾನ್ ತಿಂಗಳಲ್ಲಿ, ಸಂಗೀತವನ್ನು ಕೇಳುವುದು ಪ್ರಶಂಸಾರ್ಹವಲ್ಲ.
- ಉಪವಾಸ ಮಾಡುವಾಗ ನಿಮ್ಮ ಹೃದಯದಲ್ಲಿ ಯಾವುದೇ ದುರುದ್ದೇಶ ಇರಬಾರದು ಮತ್ತು ಅಲ್ಲಾಹುವಿನಿಂದ ಪ್ರತಿಫಲವನ್ನು ಪಡೆಯಲು, ಉತ್ತಮ ಬಾಂಧವ್ಯವನ್ನು ಹೊಂದಿರಿ.

ಇದನ್ನು ಓದಿ: ಹಿಂದೂ ಹೊಸ ವರ್ಷ ಆಚರಣೆ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಬೇಕಿರುವ ಅಂಶ ಇದು

- ರಂಜಾನ್ ಉಪವಾಸದ ಸಮಯದಲ್ಲಿ, ದಿಟ್ಟಿಸಿ ನೋಡುವುದನ್ನು ಕಡಿಮೆ ಮಾಡಲು ಮತ್ತು ಕಾನೂನು ಬಾಹಿರ ವಿಷಯಗಳು ಹಾಗೂ ಚಟುವಟಿಕೆಗಳನ್ನು ನಿರೀಕ್ಷಿಸುವುದನ್ನು ತಡೆಯಲು ಆದೇಶ ನೀಡಲಾಗಿದೆ.
- ರಂಜಾನ್ ತಿಂಗಳಲ್ಲಿ ಯಾರೊಡನೆಯೂ ಪರಸ್ಪರ ಜಗಳವಾಡಬಾರದು. ಸುಳ್ಳು ಹೇಳುವುದು ಮತ್ತು ಮೋಸ ಮಾಡುವುದು ಕೂಡ ಉಪವಾಸ ಸಮಯದಲ್ಲಿ ಅಲ್ಲಾಹುವಿನಿಂದ ಪಡೆಯುವ ಬಹುಮಾನದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.
- ರಂಜಾನ್, ಮುಸ್ಲಿಮರು ದೈಹಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ಸ್ವಯಂ ನಿಯಂತ್ರಣವನ್ನು ಕಲಿಯುವ ತಿಂಗಳು. ಇದು ಸೃಷ್ಟಿಕರ್ತ ಅಲ್ಲಾಹುವಿನ ಜೊತೆಗೆ ತಮ್ಮ ಬಂಧವನ್ನು ಪರಿಶೀಲಿಸಲು ಹಾಗೂ ಅದನ್ನು ಪ್ರಾರ್ಥನೆಯ ಮೂಲಕ ಸುಧಾರಿಸಲು ಅವಕಾಶ ಇರುವ ಆತ್ಮಾವಲೋಕನದ ತಿಂಗಳು.
Published by:Seema R
First published: