• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Dream Meaning: ಅಗಲಿದ ಪ್ರೀತಿಪಾತ್ರರು ನಿಮ್ಮ ಕನಸಿನಲ್ಲಿ ಬರುತ್ತಿದ್ದಾರೆಯೇ? ಹಾಗಾದರೆ ಅದು ಏನನ್ನು ಸೂಚಿಸುತ್ತದೆ?

Dream Meaning: ಅಗಲಿದ ಪ್ರೀತಿಪಾತ್ರರು ನಿಮ್ಮ ಕನಸಿನಲ್ಲಿ ಬರುತ್ತಿದ್ದಾರೆಯೇ? ಹಾಗಾದರೆ ಅದು ಏನನ್ನು ಸೂಚಿಸುತ್ತದೆ?

ಕನಸುಗಳ ಅರ್ಥ

ಕನಸುಗಳ ಅರ್ಥ

  • Trending Desk
  • 4-MIN READ
  • Last Updated :
  • Share this:

    ಕನಸುಗಳು (Dreams) ಬೀಳುವುದು ಸಾಮಾನ್ಯ. ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬೀಳುತ್ತವೆ, ಅದರಲ್ಲಿ ಒಂದಕ್ಕೊಂದು ಯಾವುದೇ ಲಿಂಕ್ ಇಲ್ಲದಂತೆಯೂ ಇರಬಹುದು. ಇನ್ನೂ ಹಲವರಿಗೆ ಮೋಜು ಮಸ್ತಿಯ (Enjoy) ಕನಸುಗಳೂ ಬೀಳಬಹುದು. ಪ್ರಾಣಿ-ಪಕ್ಷಿಗಳ ಅಚ್ಚರಿಗೊಳಿಸುವಂತಹ ಕನಸುಗಳನ್ನು ಕಾಣುವವರಿದ್ದಾರೆ. ಎಲ್ಲಕ್ಕಿಂತಲೂ ಇನ್ನೂ ಹಲವರಿಗೆ ಬೆಚ್ಚಿ ಬೀಳಿಸುವಂತಹ ಭೂತ, ಆತ್ಮ, ದೆವ್ವಗಳ (Ghost) ಭಯಾನಕ ಕನಸುಗಳು ಬೀಳಬಹುದು. ಕೆಲ ಜನರಿಗೆ ಆಗಷ್ಟೆ ಕಳೆದುಕೊಂಡ ತಮ್ಮ ಪ್ರೀತಿ ಪಾತ್ರದವರು, ಸ್ನೇಹಿತ, ಬಂಧುಗಳು (Relations) ಕನಸುಗಳಲ್ಲಿ ಕಾಣಿಸಿಕೊಳ್ಳಬಹುದು.


    ಲತಾ ಆಗ ತಾನೆ ತನ್ನ ಸಹೋದರಿಯನ್ನ ಕಳೆದುಕೊಂಡಿದ್ದಳು, ಲತಾಗೆ ತನ್ನ ಸಹೋದರಿಯ ಜೊತೆ ಬಲು ಬಲಿಷ್ಠವಾದ ನಿಕಟ ಬಾಂಧವ್ಯವಿತ್ತು. ಲತಾ ಯಾವಾಗಲೂ ಅವಳ ಕುರಿತಾಗಿಯೇ ಆಲೋಚಿಸುತ್ತಿದ್ದಳು. ತನ್ನ ಸಹೋದರಿಯೊಂದಿಗಿದ್ದ ಕನಸು ಲತಾಳಿಗೆ ಬಿದ್ದಿತ್ತು. ಅದು ಕನಸಲ್ಲ ನಿಜವೇನೋ ಅನ್ನುವಷ್ಟರ ಮಟ್ಟಿಗೆ ಕನಸು ಸ್ಪಷ್ಟವಾಗಿತ್ತು. ಅದು ಎಷ್ಟು ಗಟ್ಟಿಯಾಗಿತ್ತೆಂದರೆ ಲತಾಳಿಗೆ ತನ್ನ ಸಹೋದರಿ ತನ್ನೊಂದಿಗೇನೆ ಇದ್ದಾಳೆ ಎಂದು ತೀವ್ರತರವಾಗಿ ಅನಿಸುತ್ತಿತ್ತು.


    ಲತಾಳಿಗೆ ಕ್ರಮೇಣ ಇದರ ಪ್ರಭಾವದ ಅನುಭವವಾಗತೊಡಗಿತು. ಬದಲಾಗುತ್ತಿರುವ ಸಮಯದ ಜೊತೆ ತಾನು ಮುನ್ನುಗ್ಗುವಂತೆ ಪ್ರಚೋದನೆ ಈ ಪ್ರಕ್ರಿಯೆ ನೀಡುತ್ತಿತ್ತು. ಅಷ್ಟಕ್ಕೂ ಲತಾಳ ಕನಸು ಹೇಗಿತ್ತು, ಅಲ್ಲಿ ಅವಳಿಗಾದ ಅನುಭವ ಏನು ಎಂಬುದರ ಬಗ್ಗೆ ಅವಳ ಮಾತುಗಳಲ್ಲೇ ತಿಳಿಯೋಣ.


    ಇದನ್ನೂ ಓದಿ: Dreams Meaning: ನಿಮ್ಮ ಕನಸಿನಲ್ಲಿ ಕರಡಿಗಳು ಬಂದ್ರೆ ಹೀಗೆಲ್ಲ ಆಗುತ್ತಂತೆ!


    ಲತಾಳ ಕನಸು


    ನಾನು ಒಂದು ಅಪರಿಚಿತ ಕೋಣೆಯಲ್ಲಿದ್ದೆ. ಕೋಣೆ ಅಪರಿಚಿತವಾಗಿದ್ದರೂ ನನಗಲ್ಲಿ ನೆಮ್ಮದಿ ಇತ್ತು. ನಾನು ಇನ್ನು ಅಲ್ಲೆ ಬದುಕುವೆ ಎಂದೆನಿಸುತ್ತಿತ್ತು. ನಾನು ಮೂಲೆಯೊಂದರಲ್ಲಿಟ್ಟಿದ್ದ ಸ್ಟೂಲ್ ಮೇಲೆ ನಿಂತು ಸೆಲ್ಫ್ ಸ್ವಚ್ಛಗೊಳಿಸುತ್ತಿದ್ದೆ. ಅಲ್ಲೆ ಇಟ್ಟಿದ್ದ ಚೇರ್ ಒಂದರ ಮೇಲೆ ನಾನು ಕೆಲ ಸಮಯದ ಹಿಂದಷ್ಟೇ ಕಳೆದುಕೊಂಡಿರುವ ನನ್ನ ಸಹೋದರಿ ಕುಳಿತಿದ್ದಳು. ನಾವಿಬ್ಬರೂ ಹರಟೆ ಹೊಡೆಯುತ್ತಿದ್ದವು. ಅದು ಆರಾಮದಾಯಕವಾಗಿತ್ತು.


    ನನಗೆ ಎಚ್ಚರವಾದಾಗ ಅದೊಂದು ಕನಸು ಅಂತ ಅನಿಸಲೇ ಇಲ್ಲ. ಬದಲಾಗಿ ಇದು ನಿಜವಾಗಿತ್ತು ಎಂಬ ಭಾವನೆ ತೀವ್ರವಾಗಿತ್ತು. ನಾನು ಅವಳ ಉಪಸ್ಥಿತಿಯನ್ನು ಅನುಭವಿಸುತ್ತಿದ್ದೆ. ಅವಳ ಜೊತೆ ಸಮಯ ಕಳೆದಿದ್ದಕ್ಕೆ ನಾನು ತುಂಬಾ ಸಂತಸಗೊಂಡಿದ್ದೆ.




    ಲತಾ ಹಾಗೂ ಸಹೋದರಿಯ ಸಂಭಾಷಣೆ


    ನಾನು ಅವಳನ್ನು ಕುರಿತು, " ನಿನಗೆ ನಿನ್ನ ಜೀವನದ ಮೇಲೆ ನಿಯಂತ್ರಣ ಇದೆ ಎಂದು ಎಂದಾದರೂ ಅನಿಸಿದೆಯಾ?" ಅವಳು ಸ್ವಲ್ಪ ಹೊತ್ತು ಯೋಚಿಸಿ, "ಇಲ್ಲ, ನನಗೆ ನಿಜವಾಗಲೂ ಗೊತ್ತಿಲ್ಲ" ಎಂದು ಉತ್ತರಿಸಿದಳು. ಆಗ ನಾನು, "ನಿನಗೆ ಗೊತ್ತಿಲ್ಲ ಎಂದಾದಲ್ಲಿ ನೀನು ಅದನ್ನು ಪಡೆಯಬಾರದು. ನಿನಗೆ ನಿಯಂತ್ರಣ ಇದ್ದಿದ್ದರೆ ನಿನಗದು ಗೊತ್ತಾಗುತ್ತಿತ್ತು" ಎಂದು ಪ್ರತಿಕ್ರಿಯಿಸಿದೆ.


    ಕನಸು ಕಂಡ ಸಂದರ್ಭದ ಹಿನ್ನೆಲೆ


    ಕನಸು ಬೀಳುವ ಮುಂಚೆಯೂ ಆ ಸಂದರ್ಭದಲ್ಲಿ ಲತಾ ತಾನು ವಾಸಿಸುತ್ತಿರುವ ಕೋಣೆಯನ್ನು ಸ್ವಚ್ಛವಾಗಿಸುವ ಹಾಗೂ ಅಲಂಕರಿಸುವ ಯೋಜನೆ ಹಾಕಿಕೊಂಡಿದ್ದಳು. ಅದಕ್ಕಾಗಿ ಅವಳು ಬೇಕಾದ ಸಾಮಗ್ರಿಗಳನ್ನು ಮಾರುಕಟ್ಟೆಯಿಂದ ತಂದಿದ್ದಳು.


    ಲತಾ ಹೇಳುವಂತೆ, ಅವಳು ಇತ್ತೀಚೆಗೆ ಒಬ್ಬ ಹೊಸ ಸ್ನೇಹಿತೆಯನ್ನು ಸಂಪಾದಿಸಿದ್ದಳು. ಅವರಿಬ್ಬರೂ ಬಹು ಬಾರಿ ಸಂಭಾಷಣೆ  ನಡೆಸಿದ್ದರು. ಹೀಗೆ ಸಂಭಾಷಣೆ ನಡೆಯುತ್ತಿರುವ ಸಂದರ್ಭದಲ್ಲಿ ಲತಾಳಿಗೆ ಒಮ್ಮೆ ಅವಳ ಕೋಣೆಯನ್ನು ಸ್ವಚ್ಛಗೊಳೀಸುವ ಯೋಚನೆ ಬಂದಿತ್ತು. ಲತಾ ತನ ಸ್ನೇಹಿತೆಯನ್ನು ಹಲವು ಬಾರಿ ಭೇಟಿಯಾಗಿ ಕೊನೆಯಲ್ಲಿ ತಾನೂ ಸಹ ಇತರರೊಂದಿಗೆ ಸಹಬದುಕು ನಡೆಸುವ ಆಲೋಚನೆಯಲ್ಲಿದ್ದರು. ಏಕೆಂದರೆ ಅವರು ತಮ್ಮ ಸಹೋದರಿಯಂತೆ ಅಷ್ಟೊಂದು ಸಾಮಾಜಿಕ ಸಂಘಜೀವಿಯಾಗಿ ವಾಸಿಸಲು ಇಷ್ಟಪಡುತ್ತಿರಲಿಲ್ಲ.


    ಇನ್ನು ಲತಾಳ ಮನಸ್ಥಿತಿಯನ್ನು ಮಾನಿಟರ್ ಮಾಡುತ್ತಿದ್ದ ಮನೋತಜ್ಞರು ಲತಾಳನ್ನು ಕುರಿತು ಈಗಲೂ ನಿಮಗೆ ನಿಮ್ಮ ಜೀವನದ ಮೇಲೆ ನಿಯಂತ್ರಣ ಇದೆ ಅನಿಸುತ್ತದೆಯೇ ಎಂದು ಕೇಳಿದಾಗ ಲತಾ ಅದಕ್ಕೆ, "ನನಗೆಂದು ಹಾಗೆ ಅನಿಸಿಲ್ಲ, ಈ ಬಾರಿ ನಾನು ನನ್ನ ಸ್ವಂತ ಉದ್ಯೋಗದಿಂದ ಹೊರಬಂದು ವಾಸ್ತವದಲ್ಲಿ ಬೇರೊಂದು ಉದ್ಯೋಗ ಹುಡುಕಬಯಸುತ್ತಿದ್ದೇನೆ. ಈ ಬಗ್ಗೆ ನಾನು ನನ್ನ ಇತ್ತೀಚಿನ ಸ್ನೇಹಿತೆಗೆ ಹೇಳಿರುವೆ. ಅವಳು ನನಗೆ ಕೆಲಸಕ್ಕಾಗಿ ಸಹಾಯ ಮಾಡುತ್ತಿದ್ದಾಳೆ ಎಂದು ಉತ್ತರಿಸಿದ್ದಳು.


    ಮನೋತಜ್ಞರ ವಿಶ್ಲೇಷಣೆ


    ಲತಾಳ ಈ ಕನಸನ್ನು ಹಾಗೂ ಅವಳ ಹಲವು ಸೂಕ್ಷ್ಮ ನಡೆಗಳನ್ನು ವಿವರವಾಗಿ ತಿಳಿದುಕೊಂಡ ಮನೋವೈದ್ಯರು, ಪರಿಸ್ಥಿತಿಯನ್ನು ಈ ರೀತಿ ವಿಶ್ಲೇಷಿಸುತ್ತಾರೆ. ನಮ್ಮ ಆಪ್ತರು ಅಥವಾ ನಮ್ಮ ಕುಟುಂಬದವರು ಯಾರಾದರೂ ನಮ್ಮನ್ನು ಅಗಲಿದಾಗ ಅವರ ಬಗ್ಗೆ ಕನಸು ಕಾಣುವುದು ಹಾಗೂ ಒಮ್ಮೊಮ್ಮೆ ಅವರು ನಮ್ಮ ಬಳಿಯೇ ಇದ್ದಾರೆ ಎಂದು ಭಾವಿಸುವುದು ಅತಿಶಯೋಕ್ತಿಯಾದ ವಿಷಯವೇನಲ್ಲ.


    ಲತಾ ತನ್ನ ಸಹೋದರಿಯೊಂದಿಗೆ ಗಟ್ಟಿ ಬಾಂಧವ್ಯ ಹಾಗೂ ಉತ್ತಮ ಒಡನಾಟ ಹೊಂದಿದ್ದಳು. ಆದರೆ ಹಲವರಂತೆ ಲತಾಳಿಗೆ ಮನೆಯಿಂದ ಹೊರಬಂದು ಕೆಲಸ ಮಾಡುವುದಕ್ಕೆ ಆಸಕ್ತಿ ಇರಲಿಲ್ಲ. ಆದರೆ, ಲತಾಳಿಗೆ ತನ್ನ ಸಹೋದರಿಯ ಉಪಸ್ಥಿತಿ ಅವಳಲ್ಲಿ ಒಂದು ಸುರಕ್ಷತೆಯ ಮನೋಭಾವ ಉಂಟಾಗುವಂತೆ ಮಾಡಿದ್ದಲ್ಲದೆ ಬದುಕಲ್ಲಿ ಮುನ್ನುಗ್ಗಿ ನಡೆಯುವಂತೆ ಸಕಾರಾತ್ಮಕವಾಗಿ ಪ್ರಚೋದನೆ ನೀಡುತ್ತಿತ್ತು. ಈ ಸಂದರ್ಭದಲ್ಲಿ ಲತಾಳಿಗೆ ತನ್ನ ಸಹೋದರಿಯಂತೆಯೆ ಗುಣಲಕ್ಷಣಗಳನ್ನು ಅಭಿವೃದ್ಧಿಪಡಿಸುವ ತುಡಿತವಿತ್ತು. ಜೀವನದಲ್ಲಿ ಬರುವ ಅಂತಹ ಸಂದರ್ಭದಲ್ಲಿ ಜನರು ತಮ್ಮ ಭಾವನಾತ್ಮಕ ತ್ವರಿತತೆ ಮತ್ತು ತೀವ್ರತೆಯನ್ನು ಮುಂದಕ್ಕೆ ಒತ್ತುವ ಅಭ್ಯಾಸ ಬೆಳೆಸಿಕೊಳ್ಳಬೇಕು.

    Published by:Rajesha M B
    First published: