Astrology And Swapna Shastra: ಜ್ಯೋತಿಷ್ಯವಾಗಲಿ, ಕನಸಿನ ತಜ್ಞರಾಗಲಿ (Dream Experts) ಪ್ರತಿ ಕನಸಿನ ಹಿಂದೆ ಅರ್ಥವನ್ನು ಹೇಳುತ್ತಾರೆ. ಬೆಂಕಿ, ಗಾಳಿ, ನೀರುಗಳಿಂದ ಹಿಡಿದು ಕನಸಿಗೆ ಬರುವ ಪ್ರಾಣಿಗಳ ಕನಸಿಗೂ ಅರ್ಥವನ್ನು (Dream Meaning) ಸೂಚಿಸುತ್ತಾರೆ. ಬಿಳಿ ಪ್ರಾಣಿಗಳು ಕನಸಿಗೆ ಬಂದರೆ, ಬೆಕ್ಕು ಬಂದರೆ, ನಾಯಿ ಬಂದರೆ ಏನು ಸೂಚನೆ, ಇದು ಯಾವುದರ ಸಂಕೇತ ಎಂಬುದನ್ನು ಹೇಳಲಾಗುತ್ತದೆ. ಕನಸಲ್ಲಿ ನಾಯಿಗಳು ಬಂದರೆ ಜ್ಯೋತಿಷ್ಯ ಶಾಸ್ತ್ರ (Astrology) ಬೇರೆಯದ್ದನ್ನೇ ಹೇಳುತ್ತದೆ. ಆದರೆ ಕನಸಿನ ತಜ್ಞರು ಇಂತಹ ಕನಸಿಗೆ ಬೇರೆ ಅರ್ಥ ನೀಡಿದ್ದಾರೆ. ಹಾಗಾದರೆ ಇಲ್ಲಿ ಕನಸಿನಲ್ಲಿ ನಾಯಿ ಬಂದರೆ ಏನಾಗುತ್ತದೆ ಎಂಬುದನ್ನು ಕನಸಿನ ತಜ್ಞರು ವಿವರಿಸಿದ್ದಾರೆ ನೋಡಿ.
ನಾಯಿಗಳು ಏನನ್ನು ಸಂಕೇತಿಸುತ್ತವೆ?
ನಾಯಿಗಳ ಕನಸು ಸಾಮಾನ್ಯವಾಗಿ ಸಂಬಂಧಗಳು, ಸ್ನೇಹ ಮತ್ತು ನಿಷ್ಠೆಯ ಸಂಕೇತವಾಗಿ ಮೂರು ಪ್ರಮುಖ ವಿಷಯಗಳಿಗೆ ಸಂಬಂಧಿಸಿದೆ.
"ನಾಯಿಗಳು ಸಾಮಾನ್ಯವಾಗಿ ಸಂಬಂಧವನ್ನು ಪ್ರತಿನಿಧಿಸುತ್ತವೆ ಅಥವಾ ಸಂಬಂಧದೊಳಗೆ ನಡೆಯುತ್ತಿರುವ ಡೈನಾಮಿಕ್ಸ್ ಅನ್ನು ಪ್ರತಿನಿಧಿಸುತ್ತವೆ" ಎಂದು ಲೊವೆನ್‌ಬರ್ಗ್ ಎಂಬ ಕನಸಿನ ತಜ್ಞರು ವಿವರಿಸಿದ್ದಾರೆ.
ಒಬ್ಬರಿಗೆ ನಾಯಿ ಎಂದರೆ ಭಯವಿರುತ್ತದೆ ಆದರೆ ಕನಸಲ್ಲಿ ಬರುವ ನಾಯಿಗಳು ಯಾವಾಗಲೂ ಒಬ್ಬರಿಗೆ ಪ್ರೀತಿ ತೋರುತ್ತವೆ ಎನ್ನುತ್ತಾರೆ ಇವರು. ಕನಸಿನಲ್ಲಿ ಬರುವ ನಾಯಿಗಳ ನಡವಳಿಕೆ ಕೂಡ ನಮ್ಮ ಜೀವನದಲ್ಲಿ ಸಂಬಂಧದಲ್ಲಿರುವ ಅದೇ ಭಾವನೆಗಳಿಗೆ ನೇರವಾಗಿ ಸಂಬಂಧಿಸಿರುತ್ತದೆ ಎಂದು ಅವರು ವಿವರಿಸುತ್ತಾರೆ.
ನಿಮ್ಮ ಕನಸಿನಲ್ಲಿ ನಾಯಿ ಕಾಣಿಸಿಕೊಂಡರೆ ಇದರ ಅರ್ಥವೇನು?
1. ಪ್ರಣಯ ಸಂಬಂಧವನ್ನು ವಿಶ್ಲೇಷಿಸುವ ಸಂಕೇತ
ಮೊದಲೇ ಹೇಳಿದಂತೆ ನಾಯಿಗಳು ಸಾಮಾನ್ಯವಾಗಿ ಸಂಬಂಧವನ್ನು ಅಥವಾ ಕೆಲವು ಸಂಬಂಧದ ಡೈನಾಮಿಕ್ಸ್ ಅನ್ನು ಪ್ರತಿನಿಧಿಸುತ್ತವೆ. ಹೀಗೆ ಕನಸಲ್ಲಿ ನಾಯಿಗಳು ಕಂಡು ಬಂದರೆ ನೀವು ನಿಮ್ಮ ಪ್ರೀತಿಪಾತ್ರರ ಅಥವಾ ಸಂಗಾತಿಯ ಜೊತೆಗಿನ ರೊಮ್ಯಾಂಟಿಕ್ ಲೈಫ್ ಬಗ್ಗೆ ಒಮ್ಮೆ ಯೋಚಿಸಬೇಕು.
ಎಲ್ಲವೂ ಸರಿ ಇದೆಯೇ ಎಂಬುದನ್ನು ಅವಲೋಕಿಸಬೇಕು ಎಂಬ ಸೂಚನೆ ಇದು ಎನ್ನುತ್ತಾರೆ ಕನಸಿನ ಅರ್ಥ ಹೇಳುವ ತಜ್ಞರು. ಹಾಗೆಯೇ ನಾಯಿಯ ಕನಸು ನೀವು ಇರುವ ಸಂಬಂಧದಲ್ಲಿ ಕಿರಿಕಿರಿ ಅಥವಾ ಹತಾಶೆಯನ್ನು ಕೂಡ ಸೂಚಿಸುತ್ತದೆ ಎಂದಿದ್ದಾರೆ.
2. ಸ್ನೇಹದ ಪ್ರತಿಬಿಂಬ
ಕನಸಿನಲ್ಲಿರುವ ನಾಯಿಗಳು ಪ್ರಣಯ ಸಂಬಂಧಗಳಂತೆ ಸ್ನೇಹ ಸಂಬಂಧದ ಬಗ್ಗೆಯೂ ಸೂಚನೆ ನೀಡುತ್ತದೆ. ಕನಸಲ್ಲಿ ನಾಯಿ ನಿಮ್ಮ ಮೇಲೆ ಬೊಗಳುವುದು, ನಿಮ್ಮನ್ನು ಬೆನ್ನಟ್ಟುವುದು ಅಥವಾ ನಿಮ್ಮ ಮೇಲೆ ಆಕ್ರಮಣ ಮಾಡುವುದು ಮಾಡಿದರೆ ನೀವು ನಿಜ ಜೀವನದಲ್ಲಿ ಸ್ನೇಹಿತರಿಂದ ಆಕ್ರಮಣಕ್ಕೊಳಗಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ.
ಅಥವಾ ನಿಮ್ಮ ಕನಸಿನಲ್ಲಿ ನಾಯಿ ಸ್ನೇಹಪರವಾಗಿದ್ದರೆ, ನಿಮ್ಮ ಜೊತೆ ಚೆನ್ನಾಗಿ ಇದ್ದರೆ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಮತ್ತು ಬೆಂಬಲ ನೀಡುವ ಸ್ನೇಹಿತನಿದ್ದಾನೆ ಎಂಬುದನ್ನು ಇದು ಸಂಕೇತಿಸುತ್ತದೆ.
ಇದನ್ನೂ ಓದಿ: Relationship: ಈ ಗುಣಗಳನ್ನು ಹೊಂದಿದ್ದರೆ ಇವರೇ ನಿಮ್ಮ ಆತ್ಮ ಸಂಗಾತಿ; ಇವರೊಂದಿಗೆ ನಿಮ್ಮ ಜೀವನ ಸುಖಕರವಾಗಿರುತ್ತೆ
3.ನಿಷ್ಠೆಯ ಸಂಕೇತ
ನಾಯಿಗಳು ಕನಸಲ್ಲಿ ಬಂದರೆ ನಿಮ್ಮ ನಿಷ್ಠೆಯನ್ನು ಪ್ರತಿನಿಧಿಸುತ್ತದೆ. ಅಂದರೆ ನೀವು ಯಾರಿಗೆ ನಿಷ್ಠೆ ಇಂದಿದ್ದೀರಿ ಅಥವಾ ಹೇಗೆ ಬೇರೆಯವರಿಗೆ ಪ್ರಾಮಾಣಿಕವಾಗಿಲ್ಲ ಎಂಬುದರ ಸಂಕೇತವಿದು.
ನಿಮ್ಮ ಕನಸಲ್ಲಿ ಬರುವ ನಾಯಿಗೆ ಗಾಯವಾಗಿದ್ದರೆ ಇದು ನಿಷ್ಠೆಯ ದ್ರೋಹವನ್ನು ಪ್ರತಿನಿಧಿಸುತ್ತದೆ. ನಿಮ್ಮನ್ನು ನಾಯಿ ರಕ್ಷಿಸುವ ಕನಸು ಆದಲ್ಲಿ ಇದು ನಿಮ್ಮ ಪ್ರಾಮಾಣಿಕತೆಯನ್ನು ಸೂಚಿಸುತ್ತದೆ.
4. ಶಿಸ್ತನ್ನು ಪ್ರತಿಬಿಂಬಿಸುತ್ತದೆ
ನಾಯಿಗಳು ಕನಸಿನಲ್ಲಿ ಕಂಡರೆ ಅದು ಶಿಸ್ತನ್ನು ಪ್ರತಿನಿಧಿಸುತ್ತವೆ. ಲೋವೆನ್‌ಬರ್ಗ್ ವಿವರಿಸಿದಂತೆ, ನಾಯಿಗಳು ಕನಸಲ್ಲಿ ಬರುವುದು ನೀವು ಹೆಚ್ಚಿನ ಶಿಸ್ತನ್ನು ಮೈಗೂಢಿಸಿಕೊಳ್ಳಬೇಕು ಅಥವಾ ನೀವು ಯಾವ ರೀತಿಯಲ್ಲಿ ಹೆಚ್ಚು ವಿಧೇಯರಾಗಿ ಮತ್ತು ಶಿಸ್ತುಬದ್ಧರಾಗಿರಲು ಪ್ರಯತ್ನಿಸುತ್ತಿದ್ದೀರಿ ಎಂಬುದರ ಸಂಕೇತ ಎಂದಿದ್ದಾರೆ.
ಒಟ್ಟಾರೆ ನಾಯಿಯ ಕನಸು ಕಾಣುವ ಸಂದರ್ಭದಲ್ಲಿ, ನಿಮ್ಮ ಸಂಬಂಧಗಳನ್ನು ಅಥವಾ ನಿಮ್ಮನ್ನು ಸ್ವಲ್ಪ ಹೆಚ್ಚು ಪರಿಶೀಲಿಸಿ ನೋಡಬೇಕು. ಇಂತಹ ಕನಸು ನಿಮ್ಮ ಜೀವನದಲ್ಲಿ ಸಂಬಂಧದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೇಗೆ ನೀಡುತ್ತದೆ ಎಂಬುದನ್ನು ನೀವು ಲೆಕ್ಕಾಚಾರ ಮಾಡಿ ನೋಡಲು ಸಹಾಯವಾಗುತ್ತದೆ ಎನ್ನುತ್ತಾರೆ ತಜ್ಞರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ