Dreams in Astrology: ಮನೆಯೊಳಗೆ ಕಾಗೆಗಳ ಹಿಂಡು ಹಾರಾಡುತ್ತಿರುವ ಕನಸು ಬಿದ್ದರೆ ಏನರ್ಥ?

ಕನಸಿನ ಅರ್ಥ

ಕನಸಿನ ಅರ್ಥ

ಕೆಟ್ಟ ಕನಸುಗಳು ಬಿದ್ದಾಗ ಮನೆದೇವರಿಗೆ ಹರಕೆ ಕಟ್ಟಿಕೊಳ್ಳುವುದೋ ಅಥವಾ ಯಾವುದಾದರೂ ವಿಶೇಷ ಪೂಜೆಮಾಡಿಸುವುದು ಒಳ್ಳೆಯದು ಎಂದೇ ಸಲಹೆ ನೀಡುತ್ತಾರೆ.

  • Share this:

ಒಮ್ಮೊಮ್ಮೆ ನಮಗೆ ಬೀಳುವ ಕನಸು ನಿರ್ದಿಷ್ಟ ಅರ್ಥವನ್ನು ಹೊಂದಿರಲೇಬೇಕು ಎಂದೇನಿಲ್ಲ. ಚಿತ್ರವಿಚಿತ್ರವಾದ ಕನಸುಗಳು (Dreams) ಒಮ್ಮೊಮ್ಮೆ ಬೀಳುತ್ತಲೇ ಇರುತ್ತವೆ. ಹಗಲು ರಾತ್ರಿಯೆನ್ನದೆ ಈ ಕನಸುಗಳು ಆಗಾಗ್ಗೆ ನಮ್ಮನ್ನು ಕಾಡುತ್ತಲೇ ಇರುತ್ತವೆ. ಪ್ರಪಾತಕ್ಕೆ ಯಾರೋ ನಮ್ಮನ್ನು ನೂಕಿದಂತಹ ಕನಸಾಗಿರಬಹುದು ಇಲ್ಲವೇ ಯಾವುದಾದರೂ ಪ್ರಾಣಿ (Animal) ನಮ್ಮನ್ನು ಅಟ್ಟಿಸಿಕೊಂಡು ಬರುವುದಾಗಿರಬಹುದು ಹೀಗೆ ಸಂಬಂಧವೇ (Relationship) ಇಲ್ಲದ ಕನಸುಗಳು ಬೀಳುತ್ತಲೇ ಇರುತ್ತದೆ. ಹಗಲು ಬೀಳುವ ಕನಸು ಒಳ್ಳೆಯದು ಅಂತೆಯೇ ರಾತ್ರಿ ಬೀಳುವ ಕನಸು ಕೆಟ್ಟದ್ದಾಗಿದ್ದರೆ ಅದು ಅಪಶಕುನ ಎಂಬುದಾಗಿ ನಮ್ಮ ಹಿರಿಯರು ಹೇಳುತ್ತಾರೆ. ಇಂತಹ ಕೆಟ್ಟ ಕನಸುಗಳು (Dreams) ಬಿದ್ದಾಗ ಮನೆದೇವರಿಗೆ ಹರಕೆ ಕಟ್ಟಿಕೊಳ್ಳುವುದೋ ಅಥವಾ ಯಾವುದಾದರೂ ವಿಶೇಷ ಪೂಜೆಮಾಡಿಸುವುದು ಒಳ್ಳೆಯದು ಎಂದೇ ಸಲಹೆ ನೀಡುತ್ತಾರೆ.


ಕನಸಿನಲ್ಲಿ ಕಾಗೆಗಳು ಕಂಡರೆ ಒಳ್ಳೆಯದೇ, ಕೆಟ್ಟದ್ದೇ?


ಇಂತಹ ಕನಸುಗಳು ಬೀಳುವುದು ಸಾಮಾನ್ಯವಾಗಿದ್ದರೂ ಕಾಗೆಗಳು ಮನೆಯೊಳಗೆ ತಿರುಗಾಡುವುದೋ ಅಥವಾ ಮನೆಯತ್ತ ಕಾಗೆಗಳ ಗುಂಪು ಹಾರಾಡುವುದೋ ಇಂತಹ ಕನಸು ಎಂದಾದರೂ ಬಿದ್ದಿದೆಯಾ? ಹಾಗಿದ್ದರೆ ಈ ಕನಸುಗಳಿಗೆ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ.


ಒಂಟಿ ಕಾಗೆ ಮನೆಯೊಳಗೆ ಹಾರುತ್ತಿರುವ ಕನಸು ನಿಮಗೆ ಬಿದ್ದರೆ ಇಲ್ಲವೇ ಕಾಗೆಗಳ ಗುಂಪು ನಿಮ್ಮ ಮನೆಯತ್ತ ಹಾರುತ್ತಿರುವ ಕನಸು ಬಿದ್ದರೆ ಅದಕ್ಕೂ ಒಂದು ಅರ್ಥವಿದೆ. ಹೆಚ್ಚಾಗಿ ಇಂತಹ ಕನಸುಗಳನ್ನು ಅಪಶಕುನ ಎಂದಾಗಿ ನಂಬಲಾಗುತ್ತದೆ.


ಕಾಗೆಗಳು ಅಪಶಕುನ ದುರಾದೃಷ್ಟದ ಸಂಕೇತ


ಕಾಗೆಗಳು ಸಾಮಾನ್ಯವಾಗಿ ಮರಣ, ದುರಾದೃಷ್ಟ, ಕಾಯಿಲೆಗಳ ಸೂಚನೆಯಾಗಿವೆ. ಕಾಗೆಗಳು ಕನಸಿನಲ್ಲಿ ಬಂದರೆ ಭಯ, ಋಣಾತ್ಮಕ ಭಾವನೆಗಳು, ಕಾಯಿಲೆ, ಆರೋಗ್ಯ ಸಮಸ್ಯೆಗಳು, ಒತ್ತಡ, ಖಿನ್ನತೆ ಮೊದಲಾದವನ್ನು ಸೂಚಿಸುತ್ತವೆ. ಕಾಗೆಗಳು ಕನಸಿನಲ್ಲಿ ಬಂದರೆ ನಿಮ್ಮ ಜೀವನದಲ್ಲಿ ನಿರ್ದಿಷ್ಟ ಬದಲಾವಣೆಗಳು ಉಂಟಾಗುತ್ತವೆ ಎಂಬುದನ್ನು ಸೂಚಿಸುತ್ತದೆ.


ಇದನ್ನೂ ಓದಿ: ಚಪಾತಿ ಲಟ್ಟಣಿಗೆ, ಮಣೆಯನ್ನು ಖರೀದಿ ಮಾಡುವಾಗ ಈ ವಾಸ್ತು ಟಿಪ್ಸ್​ಗಳನ್ನು ಫಾಲೋ ಮಾಡಿ!


ಕಾಗೆ ಅಥವಾ ಕಾಗೆಗಳು ಕನಸಿನಲ್ಲಿ ಕಂಡರೆ


ಕಾಗೆ ಅಥವಾ ಕಾಗೆಗಳ ಗುಂಪು ಕನಸಿನಲ್ಲಿ ಬಂದರೆ ನೀವು ಯಾರೊಂದಿಗೂ ಅನುಬಂಧದಲ್ಲಿರುವುದನ್ನು ಸೂಚಿಸುತ್ತದೆ. ದೈಹಿಕ ಆಕರ್ಷಣೆ ಮತ್ತು ಭಾವನೆಗಳ ಕೊರತೆ ಹಾಗೂ ಭಾವನಾತ್ಮಕ ಸಂಬಂಧವನ್ನು ಆಧರಿಸಿದೆ ಎಂಬುದನ್ನು ಇದು ಸೂಚಿಸುತ್ತದೆ.


ಕಾಗೆಗಳು ಕನಸಿನಲ್ಲಿ ಬಂದರೆ ಏನರ್ಥ


ಕಾಗೆಗಳ ಗುಂಪು ನಿಮ್ಮ ಕನಸಿನಲ್ಲಿ ಬಂದರೆ ನೀವು ಯಾರಿಂದಲೋ ಪ್ರೇರಣೆಗೊಂಡಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಇದು ನಿಮ್ಮ ಕಡಿಮೆ ಆತ್ಮವಿಶ್ವಾಸದ ಸೂಚನೆಯಾಗಿದೆ. ನೀವು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ ಎಂಬುದರ ಸೂಚನೆಯಾಗಿದೆ.


ಒಂಟಿ ಕಾಗೆಯ ಕನಸು ಬಿದ್ದರೆ


ನಿಮ್ಮ ಕನಸಿನಲ್ಲಿ ಒಂದೇ ಕಾಗೆ ಹಾರಾಡುತ್ತಿರುವುದು ಕಂಡು ಬಂದರೆ, ನಿಮ್ಮ ಜೀವನದಲ್ಲಿ ತ್ವರಿತವಾಗಿ ಬರಲಿರುವ ನಿಮ್ಮ ಸಂಗಾತಿಯ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಸೂಚಿಸುತ್ತದೆ.


ನಿಮ್ಮ ಜೀವನದಲ್ಲಿ ಬರುವ ಸಂಗಾತಿಯ ಕುರಿತು ನೀವು ಸಂಪೂರ್ಣ ವಿವರಗಳನ್ನು ಹೊಂದಿರಬೇಕು ಹಾಗೂ ಸುಖಾಸುಮ್ಮನೆ ನಂಬಬಾರದು ಎಂಬುದನ್ನು ಈ ಕನಸು ಸೂಚಿಸುತ್ತದೆ.


ಆಕಾಶದಲ್ಲಿ ಕಾಗೆಗಳ ಹಿಂಡು ಹಾರಾಡುವ ಕನಸು ಬಿದ್ದರೆ


ಇದು ಕೆಟ್ಟ ಕನಸಾಗಿದೆ. ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ಪ್ರೀತಿಪಾತ್ರರ ಮರಣವನ್ನು ಸೂಚಿಸುತ್ತದೆ. ನಿಮ್ಮನ್ನು ಅವರ ಅಂತ್ಯಕ್ರಿಯೆಗೆ ಆಹ್ವಾನಿಸಲಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.


ಮನೆಯೊಳಗೆ ಕಾಗೆ ಹಾರುವ ಕನಸು ಬಿದ್ದರೆ


ಈ ರೀತಿಯ ಕನಸು ನಿಮ್ಮ ಆತ್ಮ ಹಾಗೂ ಅಹಂಕಾರವನ್ನು ಸೂಚಿಸುತ್ತದೆ. ನಿಮ್ಮ ಮನೆಯೊಳಗೆ ಕಾಗೆ ಪ್ರವೇಶಿಸುವ ಅಥವಾ ಮನೆಯೊಳಗೆ ಕಾಗೆ ಹಾರುತ್ತಿರುವ ಕನಸು ಬಿದ್ದಲ್ಲಿ ದುರಾದೃಷ್ಟದ ಸಂಕೇತದೊಂದಿಗೆ ಇದು ಬಾಹ್ಯ, ಆಂತರಿಕ ಬದಲಾವಣೆಯನ್ನು ಸೂಚಿಸುತ್ತದೆ.




ಮನೆಯು ಭದ್ರತೆ ಹಾಗೂ ಭಾವನಾತ್ಮಕ ಅನುಬಂಧದ ಸೂಚನೆಯಾಗಿದೆ ಹಾಗಾಗಿ ಕಾಗೆಯು ಮನೆಯೊಳಗೆ ಹಾರಾಡುತ್ತಿರುವ ಕನಸು ಬಿದ್ದರೆ ಮನೆಯಲ್ಲೇನೋ ಬದಲಾವಣೆ ನಡೆಯಲಿದೆ ಎಂಬುದನ್ನು ಇದು ಸೂಚಿಸುತ್ತದೆ.


ಕಾಗೆಗಳು ಕನಸಿನಲ್ಲಿ ಕಂಡರೆ ಯಾರೋ ಕಾಯಿಲೆಯಿಂದ ಬಳಲುತ್ತಿರುವ ಸುದ್ದಿ ಅಥವಾ ನಿಮ್ಮ ಕುಟುಂಬದಲ್ಲಿ ಮರಣ ವಾರ್ತೆಯನ್ನು ಕೇಳಲಿದ್ದೀರಿ ಎಂಬುದನ್ನು ಸೂಚಿಸುತ್ತದೆ.

First published: