Dream Place: ನಿಮ್ಮ ರಾಶಿಗನುಗುಣವಾಗಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Dream Place: ಸದಾ ಸಕ್ರಿಯವಾಗಿರುವ ಮತ್ತು ಅಸಾಮಾನ್ಯರಾದ ಮೇಷ ರಾಶಿಯವರು ಅಲಾಸ್ಕಾದ ಸುಂದರವಾದ ಭೂದೃಶ್ಯಗಳನ್ನು ನೋಡಲು ಇಷ್ಟಪಡಬಹುದು.

  • Trending Desk
  • 3-MIN READ
  • Last Updated :
  • Share this:

ಈಗಂತೂ ಜನರು ತಮ್ಮ ರಾಶಿಚಕ್ರಗನುಗುಣವಾಗಿ ಯಾವ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು, ಯಾವ ದಿನಗಳು ಅವರ ರಾಶಿಗಳಿಗೆ (Zodiac Sign) ಸರಿ ಹೊಂದುತ್ತದೆ ಅಂತ ನೋಡಿಕೊಂಡು ಕೆಲಸಗಳನ್ನು ಮಾಡಿಕೊಳ್ಳುವುದನ್ನು ನಾವು ನೋಡಿದ್ದೇವೆ. ಈಗ ರಾಶಿಚಕ್ರ ಅನುಗುಣವಾಗಿ ನಿಮಗೆ ಕನಸಿನ ತಾಣ ಯಾವುದಾಗಲಿದೆ ಅಂತ ಸಹ ತಿಳಿದುಕೊಳ್ಳಬಹುದು. ಈಗ ಅದೇ ರೀತಿಯಾಗಿ ಇಲ್ಲಿ ಸೆಲೆಬ್ರಿಟಿ ಜ್ಯೋತಿಷಿಯಾದ (Astrology) ಇನ್ಬಾಲ್ ಹೊನಿಗ್ಮನ್ ತಮ್ಮ ಆಸ್ಟ್ರೋಕಾರ್ಟೊಗ್ರಫಿ ರೇಖೆಗಳ ಆಧಾರದ ಮೇಲೆ ಪ್ರತಿ ರಾಶಿಚಕ್ರ ಚಿಹ್ನೆಗೆ ಸೂಕ್ತವಾದ ರಜಾ ತಾಣವನ್ನು ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ ನೋಡಿ. ಜನರ ಜನ್ಮ ದಿನಾಂಕ ಮತ್ತು ಮಾಹಿತಿಯ ಆಧಾರದ ಮೇಲೆ ಯಾವ ಸ್ಥಳಗಳು ಅವರಿಗೆ ಹೆಚ್ಚು ಸೂಕ್ತವಾಗಿವೆ ಎಂಬುದನ್ನು ಇಲ್ಲಿ ನಾವು ಅರ್ಥ ಮಾಡಿಕೊಳ್ಳಬಹುದು.


ಮೇಷ ರಾಶಿ (ಮಾರ್ಚ್ 21-ಏಪ್ರಿಲ್ 19)


ಸದಾ ಸಕ್ರಿಯವಾಗಿರುವ ಮತ್ತು ಅಸಾಮಾನ್ಯರಾದ ಮೇಷ ರಾಶಿಯವರು ಅಲಾಸ್ಕಾದ ಸುಂದರವಾದ ಭೂದೃಶ್ಯಗಳನ್ನು ನೋಡಲು ಇಷ್ಟಪಡಬಹುದು. ವಿಶ್ವದ ಕೆಲವು ಸುಂದರವಾದ ನೋಟಗಳು ಮತ್ತು ಅತಿದೊಡ್ಡ ರಾಷ್ಟ್ರೀಯ ಉದ್ಯಾನವನಕ್ಕೆ ನೆಲೆಯಾಗಿರುವ ಅಲಾಸ್ಕಾ, ಮೇಷ ರಾಶಿಯವರಿಗೆ ಅನ್ವೇಷಿಸಲು ತುಂಬಾ ಸೂಕ್ತವಾದ ಸ್ಥಳಗಳನ್ನು ಹೊಂದಿದೆ.


ವೃಷಭ ರಾಶಿ (ಏಪ್ರಿಲ್ 20-ಮೇ 20)


ಉತ್ತಮ ಆಹಾರ ಮತ್ತು ವ್ಯಾಪಕವಾದ ನೋಟಗಳು ವೃಷಭ ರಾಶಿಯವರಿಗೆ ನಿಜವಾದ ಸಂತೋಷವನ್ನು ನೀಡುತ್ತದೆ. ಆದ್ದರಿಂದ ಅವರಿಗೆ ಲಾಸ್ ಏಂಜಲೀಸ್ ಗಿಂತ ಒಳ್ಳೆಯ ಸ್ಥಳ ಯಾವುದೂ ಇರುವುದಿಲ್ಲ. 30,000 ಕ್ಕೂ ಹೆಚ್ಚು ರೆಸ್ಟೋರೆಂಟ್ ಗಳು ಮತ್ತು ಅದ್ಭುತವಾದ ವಿಶಾಲ-ತೆರೆದ ಕಡಲತೀರಗಳನ್ನು ಹೊಂದಿರುವ ಈ ಜಾಗ ವೃಷಭ ರಾಶಿಯವರಿಗೆ ಹೇಳಿ ಮಾಡಿಸಿದ ಜಾಗ ಅನ್ನಬಹುದು.


ಇದನ್ನೂ ಓದಿ: Vastu Tips For Main Entrance: ಮನೆಯ ಮುಖ್ಯ ದ್ವಾರಕ್ಕೆ ವಾಸ್ತು ಸಲಹೆ : ಈ ವಿಷಯಗಳನ್ನು ನೆನಪಿಡಿ


ಮಿಥುನ ರಾಶಿ (ಮೇ 21-ಜೂನ್ 20):


ಯಾವಾಗಲೂ ಎಚ್ಚರವಾಗಿ ಮತ್ತು ಪಾರ್ಟಿಗೆ ಸಿದ್ಧರಾಗಿರುವ ಮಿಥುನ ರಾಶಿಯವರು ಎಂದಿಗೂ ನಿದ್ರಿಸದ ನಗರವಾದ ನ್ಯೂಯಾರ್ಕ್ ಅನ್ನು ತುಂಬಾನೇ ಪ್ರೀತಿಸುತ್ತಾರೆ. ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಗೆ ಭೇಟಿ ನೀಡುವುದರಿಂದ ಹಿಡಿದು ಅತಿರಂಜಿತ ಬ್ರಾಡ್ ವೇ ಪ್ರದರ್ಶನವನ್ನು ನೋಡುವವರೆಗೆ, ಮಿಥುನ ರಾಶಿಯವರು ಹಗಲು ಅಥವಾ ರಾತ್ರಿ ಸುತ್ತಾಡುವುದರಿಂದ ಎಂದೂ ಬೇಸರಗೊಳ್ಳುವುದಿಲ್ಲ.


ಕರ್ಕಾಟಕ ರಾಶಿ (ಜೂನ್ 21-ಜುಲೈ 22)


ಕರ್ಕಾಟಕ ರಾಶಿಯವರಿಗೆ ಐಸ್ಲ್ಯಾಂಡ್ ಆಯ್ಕೆಯ ತಾಣವಾಗಿದೆ. ಉತ್ತರದ ದೀಪಗಳ ಮಾಂತ್ರಿಕ ನೋಟಗಳು ಮತ್ತು ಭೂಶಾಖದ ಲಗೂನ್ ಗಳ ನಡುವೆ, ಕರ್ಕಾಟಕ ರಾಶಿಯವರು ಪ್ರಕೃತಿಯೊಂದಿಗೆ ಒಂದಾಗಿ ವಿಶ್ರಾಂತಿ ಪಡೆಯಲು ಎಂದಿಗೂ ಆಯಾಸಗೊಳ್ಳುವುದಿಲ್ಲ.


ಸಿಂಹ ರಾಶಿ (ಜುಲೈ 23-ಆಗಸ್ಟ್ 22)


ಐಷಾರಾಮಿ ಜೀವನ ಬಯಸುವ ಸಿಂಹ ರಾಶಿಯವರಿಗೆ ಅತ್ಯುತ್ತಮ ವೈನ್ ಸಂಸ್ಕೃತಿಗೆ ಹೆಸರುವಾಸಿಯಾದ ಅಕ್ವಿಟೈನ್ ನ ಐತಿಹಾಸಿಕ ರಾಜಧಾನಿ ಬೋರ್ಡೆಕ್ಸ್ ಹೇಳಿ ಮಾಡಿಸಿದ ತಾಣ ಮತ್ತು ಅದಕ್ಕೆ ಅವರು ಭೇಟಿ ನೀಡಲೇಬೇಕು. ರಮಣೀಯವಾದ ಕಡಲತೀರಗಳು ಮತ್ತು ವಿಶೇಷ ದ್ರಾಕ್ಷಿತೋಟ ಪ್ರವಾಸಗಳ ನಡುವೆ, ಸಿಂಹ ರಾಶಿಯವರು ತಮ್ಮ ನಿಜವಾದ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಕನ್ಯಾರಾಶಿ (ಆಗಸ್ಟ್ 23-ಸೆಪ್ಟೆಂಬರ್ 22)


ಅಚ್ಚುಕಟ್ಟಾದ ಮತ್ತು ಸಾಂಪ್ರದಾಯಿಕ ಕನ್ಯಾರಾಶಿಗೆ ಸೂಕ್ತವಾದ ತಾಣವೆಂದರೆ ರೋಮ್, ಅಲ್ಲಿ ಅವರು ನಿಸ್ಸಂದೇಹವಾಗಿ ನಗರದ ಪ್ರಾಚೀನ ವಾಸ್ತುಶಿಲ್ಪವನ್ನು ತುಂಬಾನೇ ಆನಂದಿಸುತ್ತಾರೆ ಮತ್ತು ಇದು ಶಾಪಿಂಗ್ ಮಾಡಲು ಅತ್ತ್ಯುತ್ತಮವಾದ ಸ್ಥಳ ಅಂತ ಹೇಳಬಹುದು.


ತುಲಾ ರಾಶಿ (ಸೆಪ್ಟೆಂಬರ್ 23- ಅಕ್ಟೋಬರ್ 22)


ಕ್ಲಾಸಿ ಮತ್ತು ಸೊಗಸಾದ ತುಲಾ ರಾಶಿಯವರು ಯುನೈಟೆಡ್ ಅರಬ್ ಎಮಿರೇಟ್ಸ್ ನ ಮರುಭೂಮಿಯಲ್ಲಿನ ಎತ್ತರದ ಕಟ್ಟಡಗಳನ್ನು ತುಂಬಾನೇ ಇಷ್ಟ ಪಡುತ್ತಾರೆ.  ಐಷಾರಾಮಿ ಹೋಟೆಲ್ ಗಳು ಮತ್ತು ನಂಬಲಾಗದ ಸಂಸ್ಕೃತಿಯ ಸಮೂಹದ ನಡುವೆ, ತುಲಾ ರಾಶಿಯವರು ಈ ದೇಶವು ಏನನ್ನು ನೀಡುತ್ತದೆ ಎಂಬುದನ್ನು ಕಂಡು ಹಿಡಿಯಲು ಇಷ್ಟಪಡುತ್ತಾರೆ.


ವೃಶ್ಚಿಕ ರಾಶಿ (ಅಕ್ಟೋಬರ್ 23-ನವೆಂಬರ್ 21)


ನಿಗೂಢ ಮತ್ತು ಮೂಲ ವೃಶ್ಚಿಕ ರಾಶಿಯವರು ಶ್ರೀಲಂಕಾ ದೇಶವನ್ನು ಸುತ್ತಲು ಇಷ್ಟಪಡುತ್ತಾರೆ. ಶ್ರೀಲಂಕಾದಲ್ಲಿರುವ ಗಂಗಾರಾಮಯ ದೇವಾಲಯದ ಶ್ರೀಮಂತ ಪರಂಪರೆಯನ್ನು ಅನ್ವೇಷಿಸುವಾಗ ಅಥವಾ ವನ್ಯಜೀವಿಗಳಿಗೆ ಹತ್ತಿರವಾಗುತ್ತಿರುವಾಗ, ವೃಶ್ಚಿಕ ರಾಶಿಯವರು ಸ್ವಲ್ಪ ನೆಮ್ಮದಿಯನ್ನು ಕಾಣಬಹುದು.


ಧನು ರಾಶಿ (ನವೆಂಬರ್ 22-ಡಿಸೆಂಬರ್ 21)


ಸಾಹಸಮಯ ಮತ್ತು ತುಂಬಾನೇ ಪ್ರಯಾಣಿಸುವ ಧನು ರಾಶಿಯವರು ಟೋಕಿಯೊದ ವಿಶಿಷ್ಟ ಬೀದಿಗಳು ಮತ್ತು ಸಾಟಿಯಿಲ್ಲದ ಪಾಕಪದ್ಧತಿಯನ್ನು ಇಷ್ಟಪಡುತ್ತಾರೆ.  ಟೋಕಿಯೊ ಗೋಪುರವನ್ನು ಏರುವುದು ಮತ್ತು ಮೌಂಟ್ ಫ್ಯೂಜಿಯ ದೃಶ್ಯವೀಕ್ಷಣೆಯ ನಡುವೆ, ಧನು ರಾಶಿಯವರು ಯಾವಾಗಲೂ ಅನ್ವೇಷಿಸಲು ಅನೇಕ ವಿಷಯಗಳನ್ನು ಹೊಂದಿರುತ್ತಾರೆ.


ಮಕರ ರಾಶಿ (ಡಿಸೆಂಬರ್ 22-ಜನವರಿ 19)


ಪ್ರಬುದ್ಧ ಮತ್ತು ಕಠಿಣ ಪರಿಶ್ರಮಿ, ಮಕರ ರಾಶಿಯವರು ವೈವಿಧ್ಯತೆ ಮತ್ತು ಸ್ನೇಹಪರತೆಯನ್ನು ಇಷ್ಟಪಡುತ್ತಾರೆ, ಮತ್ತು ಇದಕ್ಕೆ ಉತ್ತಮ ಸ್ಥಳವೆಂದರೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತ ಹೇಳಬಹುದು. ಮೆಲ್ಬೋರ್ನ್ ಅನ್ನು ವಿಶ್ವದ ಅತ್ಯಂತ ಸ್ನೇಹಪರ ನಗರ ಎಂದು ಹೆಸರಿಸಲಾಗಿದೆ ಮತ್ತು ಇದು ರಾಯಲ್ ಬೊಟಾನಿಕಲ್ ಗಾರ್ಡನ್ ಗಳಿಗೆ ನೆಲೆಯಾಗಿದೆ.


ಕುಂಭ ರಾಶಿ (ಜನವರಿ 20-ಫೆಬ್ರವರಿ 18)


ಜನವರಿ ಕುಂಭ ರಾಶಿಯವರ ತಿಂಗಳು - ಅನನ್ಯ ಮತ್ತು ಮುಕ್ತ ಚಿಂತನೆಯುಳ್ಳ ಇವರು ನ್ಯೂಜಿಲೆಂಡ್ ನಲ್ಲಿರುವ ಪ್ರಕೃತಿಯಲ್ಲಿ ನಿಜವಾಗಿಯೂ ಕಳೆದು ಹೋಗಲು ಬಯಸುತ್ತಾರೆ.  ಸುವಾಸನೆಭರಿತ ತೆರೆದ ಸ್ಥಳಗಳು ಮತ್ತು ಸುಂದರವಾದ ದೃಶ್ಯಾವಳಿಗಳ ಸಮೃದ್ಧಿಯೊಂದಿಗೆ,  ಕುಂಭ ರಾಶಿಯವರು ತುಂಬಾನೇ ಎಂಜಾಯ್ ಮಾಡುವ ಸ್ಥಳ ಇದು.


ಮೀನ ರಾಶಿ (ಫೆಬ್ರವರಿ 19-ಮಾರ್ಚ್ 20)


ರೋಮ್ಯಾಂಟಿಕ್ ಮತ್ತು ನಾಚಿಕೆ ಸ್ವಭಾವದ ಮೀನ ರಾಶಿಯವರ ಆದರ್ಶ ಪ್ರಯಾಣ ತಾಣವೆಂದರೆ ಹವಾಯಿ, ಇದು ನೀರಿನಿಂದ ಮತ್ತು ಬೆಚ್ಚಗಿನ ಕಡಲತೀರಗಳಿಂದ ಆವೃತವಾಗಿದೆ. ರಾಷ್ಟ್ರೀಯ ಉದ್ಯಾನವನಗಳು ಮತ್ತು ಸ್ವಚ್ಛವಾದ ನೀರಿನಲ್ಲಿ ಸರ್ಫಿಂಗ್ ಮಾಡುವ ಮೀನ ರಾಶಿಯವರು ನೀರಿನ ಸಂಪರ್ಕಕ್ಕೆ ಬರಲು ಇಷ್ಟಪಡುತ್ತಾರೆ.

Published by:shrikrishna bhat
First published: