Vastu Tips: ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲವಾ? ಹಾಗಿದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ!

ಹಣ ಇಡುವ ಪರ್ಸ್‌ನಲ್ಲಿ ಕೇವಲ ದುಡ್ಡು ಮಾತ್ರ ಇಟ್ಟಿರಲ್ಲ. ಹಣದ ಜೊತೆಗೆ ಅನೇಕ ವಸ್ತುಗಳನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ವಾಸ್ತು ಶಾಸ್ತ್ರಜ್ಞರ ಸಲಹೆ ಪ್ರಕಾರ ಹಣವನ್ನು ಹೊರತುಪಡಿಸಿ ಇತರ ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದು ಲಕ್ಷ್ಮಿ ದೇವಿಗೆ ಕೋಪ ತರಿಸುತ್ತದಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರ (Vastu) ಮತ್ತು ಭವಿಷ್ಯ (Astrology) ಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ (Importance). ವಾಸ್ತು ಶಾಸ್ತ್ರ ಹೇಳುವ ಪ್ರಕಾರ, ನಮ್ಮ ಸುತ್ತಲಿನ ವಿಷಯಗಳು ನಮ್ಮ ಜೀವನದ (Life) ಮೇಲೆ ಧನಾತ್ಮಕವಾಗಿ ಮತ್ತು ಋಣಾತ್ಮಕ ಪರಿಣಾಮ ಬೀರುತ್ತವೆ. ಸಮಸ್ಯೆಗಳು ಸಾಕಷ್ಟು ಇರುತ್ತವೆ. ಅದರಲ್ಲಿ ಮುಖ್ಯವಾದ ಒಂದು ಸಮಸ್ಯೆ ಅಂದ್ರೆ ನಾವೆಷ್ಟೇ ದುಡಿದರೂ ನಮ್ಮ ಕೈಯಲ್ಲಿ ಹಣ ಮಾತ್ರ ನಿಲ್ಲೋದಿಲ್ಲ ಎಂದು ಒದ್ದಾಡುವವರನ್ನು ನೋಡಿರುತ್ತೇವೆ. ಎಷ್ಟೇ ಬಾರಿ ದುಡ್ಡನ್ನು ಉಳಿಸಬೇಕು ಅಂದುಕೊಳ್ತೇವೆ. ಆದ್ರೆ ಒಂದಿಲ್ಲೊಂದು ಸಮಸ್ಯೆಗಳು ಒಕ್ಕರಿಸಿಕೊಂಡು, ದುಡಿದ ದುಡ್ಡೆಲ್ಲಾ ಖರ್ಚಾಗಿ ಹೋಗುತ್ತದೆ. ಆಗ ವ್ಯಕ್ತಿಯನ್ನು ಚಿಂತೆ ಕಾಡುತ್ತದೆ. ದುಡ್ಡು ಉಳಿಸುವ ದಾರಿ ಕಾಣಲ್ಲ.

    ಇಂದು ನಾವು ಪರ್ಸ್ ನಲ್ಲಿ ದುಡ್ಡಿನ ಜೊತೆ ಯಾವೆಲ್ಲಾ ವಸ್ತುಗಳನ್ನು ಇರಿಸಬಾರದು ನೋಡೋಣ.  

    ಗಂಡಸರು ಮತ್ತು ಹೆಂಗಸರು ಹಣ ಇಡುವ ಪರ್ಸ್ ನಲ್ಲಿ ಕೇವಲ ದುಡ್ಡು ಮಾತ್ರ ಇಟ್ಟಿರಲ್ಲ. ಇನ್ನೂ ಕೆಲವು ವಸ್ತುಗಳನ್ನು ಪರ್ಸ್ ನಲ್ಲಿ ಇಟ್ಟುಕೊಂಡಿರ್ತಾರೆ. ಹೀಗೆ ಮಾಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅದು ಅವರಿಗೆ ಅಗತ್ಯವಿರಲ್ಲ.

    ಹಣ ಇಡುವ ಪರ್ಸ್ ನಲ್ಲಿ ಹಣದ ಜೊತೆಗೆ ಅನೇಕ ವಸ್ತುಗಳನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ವಾಸ್ತು ಶಾಸ್ತ್ರಜ್ಞರ ಸಲಹೆ ಪ್ರಕಾರ, ಹಣವನ್ನು ಹೊರತುಪಡಿಸಿ ಇತರ ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದು ಲಕ್ಷ್ಮಿ ದೇವಿಗೆ ಕೋಪ ತರಿಸುತ್ತದಂತೆ.

    ಇದನ್ನೂ ಓದಿ: ಪಿತೃ ಪಕ್ಷದ ಏಕಾದಶಿ ಬಲು ವಿಶೇಷ; ಯಾವಾಗ, ಮಹತ್ವ ಏನು?

    ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ನೀವು ಪರ್ಸ್‌ನಲ್ಲಿ ಅಂತಹ ಕೆಲವು ಅನುಪಯುಕ್ತ ವಸ್ತುಗಳನ್ನು ಇರಿಸಿದರೆ ನಿಮಗೆ ಯಾವಾಗಲೂ ಹಣದ ಕೊರತೆ ಇರುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಹಣದ ಜೊತೆ ಇಡಬಾರದು ಎಂದು ಇಲ್ಲಿ ನಾವು ತಿಳಿಯೋಣ.

    ಯಾವ ವಸ್ತುಗಳನ್ನು ಹಣದ ಜೊತೆ ಇಡಬಾರದು?

    ಹರಿದ ಪರ್ಸ್

    ನಿಮ್ಮ ಬಳಿ ಯಾವುದೇ ಪರ್ಸ್ ಇರುತ್ತದೆ. ಆದರೆ ಪರ್ಸ್ ಹರಿದು ಹೋಗಿದ್ದರೆ ಅದು ಶುಭವಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ. ನೀವು ಹಣವಿಡುವ ಪರ್ಸ್ ಹರಿದು ಹೋಗದಂತೆ ವಿಶೇಷ ಕಾಳಜಿ ವಹಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಹರಿದ ಪರ್ಸ್ ನಿಮ್ಮ ಆರ್ಥಿಕ ಸ್ಥಿತಿಯನ್ನು ಕೆಟ್ಟದಾಗಿಸುತ್ತದೆ.

    ನೋಟುಗಳನ್ನು ಕೆಟ್ಟದಾಗಿ ಮಡಚಿ ಇಡಬೇಡಿ  

    ಜನರು ನೋಟುಗಳನ್ನು ಪರ್ಸ್‌ನಲ್ಲಿ ಕೆಟ್ಟ ರೀತಿಯಲ್ಲಿ ಮಡಚಿ ಇಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ಸರಿಯಲ್ಲ. ನೋಟ್ ಅನ್ನು ಯಾವಾಗಲೂ ಪರ್ಸ್‌ನಲ್ಲಿ ಸರಿಯಾಗಿ ಇಡಬೇಕು.

    ಪರ್ಸ್ ನಲ್ಲಿ ಖರೀದಿ ಮಾಡಿದ ಹಳೆಯ ಬಿಲ್ಲುಗಳನ್ನು ಇರಿಸಬೇಡಿ

    ಹಲವರು ಅನೇಕ ವಸ್ತುಗಳನ್ನು ಖರೀದಿ ಮಾಡಿದ ನಂತರ ಬಿಲ್‌ಗಳನ್ನು ತಮ್ಮ ಪರ್ಸ್‌ನಲ್ಲಿ ಇಡುತ್ತಾರೆ. ಆದರೆ ಹಳೆಯ ಬಿಲ್ಲುಗಳನ್ನು ದುಡ್ಡಿಡುವ ಪರ್ಸ್ ನಲ್ಲಿ ಇಡುವುದು ವಾಸ್ತು ಶಾಸ್ತ್ರದಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಹಳೆ ಬಿಲ್ಲುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಂಡವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲ್ಲ ಎಂದು ಹೇಳ್ತಾರೆ.

    ದೇವರ ಫೋಟೋ ಇರಿಸಬೇಡಿ

    ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಪರ್ಸ್‌ನಲ್ಲಿ ಯಾವುದೇ ದೇವರ ಚಿತ್ರಗಳನ್ನು ಇಡಬೇಡಿ. ದೇವರ ಫೋಟೋವನ್ನು ಪರ್ಸ್‌ನಲ್ಲಿ ಇಡುವುದು ನಿಮ್ಮ ಮನೆಯಲ್ಲಿ ಯಾವಾಗಲೂ ಹಣದ ಸ್ಥಿತಿಯನ್ನು ಕಷ್ಟವಾಗಿಸುತ್ತದೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ನಂಬಲಾಗಿದೆ.

    ಸತ್ತವರ ಭಾವಚಿತ್ರಗಳನ್ನು ಪರ್ಸ್ ನಲ್ಲಿ ಇರಿಸಬೇಡಿ

    ಮೃತ ಬಂಧುಗಳು ಅಥವಾ ವ್ಯಕ್ತಿಗಳ ಭಾವಚಿತ್ರಗಳನ್ನು ಪರ್ಸ್‌ನಲ್ಲಿ ಇರಿಸುವುದು ತಪ್ಪಿಸಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಯಾರಾದರೂ ಸತ್ತ ವ್ಯಕ್ತಿಯ ಚಿತ್ರವನ್ನು ಇಟ್ಟುಕೊಂಡರೆ ಅವರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಾರಂತೆ. ಹಾಗಾಗಿ ಸತ್ತವರ ಭಾವಚಿತ್ರ ಪರ್ಸ್‌ನಲ್ಲಿ ಇಡಬೇಡಿ.

    ಒಣಗಿದ ಹೂವುಗಳನ್ನು ಇರಿಸಬೇಡಿ

    ಒಣಗಿದ ಹೂವುಗಳು ಇತ್ಯಾದಿಗಳನ್ನು ಪರ್ಸ್‌ನಲ್ಲಿ ಇಡುವುದನ್ನು ಸಹ ತಪ್ಪಿಸಿ. ಈ ವಿಷಯಗಳು ನಕಾರಾತ್ಮಕತೆ ಉಂಟು ಮಾಡುತ್ತವೆ.

    ಇದನ್ನೂ ಓದಿ: ನವರಾತ್ರಿ ಸಂಭ್ರಮಕ್ಕೆ ದಿನಗಣನೆ; ದುರ್ಗೆ 9 ಅವತಾರಗಳ ಪರಿಚಯ ಇಲ್ಲಿದೆ

    ಕೀಲಿ ಪರ್ಸ್ ನಲ್ಲಿ ಇರಿಸಬೇಡಿ

    ಹೆಚ್ಚಿನವರು ಕೀಲಿಕೈಯನ್ನು ಪರ್ಸ್‌ನಲ್ಲಿ ಇರಿಸುತ್ತಾರೆ. ವಾಸ್ತು ಪ್ರಕಾರ, ಕೀಲಿಯನ್ನು ಪರ್ಸ್‌ನಲ್ಲಿ ಇರಿಸಿದರೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕೀಲಿಯನ್ನು ಪರ್ಸ್‌ನಲ್ಲಿ ಇಟ್ಟರೆ ಜೀವನದಲ್ಲಿ ನಕಾರಾತ್ಮಕತೆ ತರುತ್ತದೆ. ಇದು ಆರ್ಥಿಕ ತೊಂದರೆ ಉಂಟು ಮಾಡುತ್ತದೆ.
    Published by:renukadariyannavar
    First published: