Solar Eclipse: ಡಿ. 4ರ ಶನಿವಾರವೇ ಸೂರ್ಯಗ್ರಹಣ ಈ ಕೆಲಸವನ್ನು ಅಪ್ಪಿತಪ್ಪಿಯೂ ಮಾಡಬೇಡಿ

ಈ ಸೂರ್ಯಗ್ರಹಣವು ದಕ್ಷಿಣ ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಲ್ಲಿ ಗೋಚರಿಸಲಿದೆ

ಸೂರ್ಯಗ್ರಹಣ

ಸೂರ್ಯಗ್ರಹಣ

  • Share this:
    ಈ ವರ್ಷದ ಎರಡನೇ ಹಾಗೂ  ಕೊನೆಯ ಸೂರ್ಯ ಗ್ರಹಣವು (Solar Eclipse) ಡಿಸೆಂಬರ್ 4 ರಂದು ಸಂಭವಿಸಲಿದೆ. ಅಮಾವಾಸ್ಯೆಯು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಮತ್ತು ಅದರ ನೆರಳಿನ ಕತ್ತಲೆಯ ಭಾಗವನ್ನು ಬಿತ್ತರಿಸಿದಾಗ ಅದು ಸಂಪೂರ್ಣ ಸೂರ್ಯಗ್ರಹಣವಾಗಿರುತ್ತದೆ. ಈ ವರ್ಷದ  ಕೊನೆಯ ಸೂರ್ಯಗ್ರಹಣವು ಬೆಳಗ್ಗೆ 10:59 ಕ್ಕೆ ಪ್ರಾರಂಭವಾಗಿ, ಮಧ್ಯಾಹ್ನ 03:07 ರವರೆಗೆ ಮುಂದುವರಿಯುತ್ತದೆ

    ಎಲ್ಲಿ ಗೋಚರಿಸಲಿದೆ ಸೂರ್ಯಗ್ರಹಣ

    ಈ ಸೂರ್ಯಗ್ರಹಣವು ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ, ಅವರು ಗ್ರಹಣದ ಭಾಗಶಃ ಹಂತಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

    ಸೂತಕ ಅವಧಿ ಪಾಲನೆ ಕಡ್ಡಾಯ?

    ಭಾರತದಲ್ಲಿ ಈ ಸೂರ್ಯಗ್ರಹಣ ಭಾಗಶಃ ಗೋಚರವಾಗುವುದರಿಂದ ಸೂತಕ ಪಾಲನೆ ಕಡ್ಡಾಯವಲ್ಲ. ಸೂರ್ಯಗ್ರಹಣದ ದುಷ್ಪರಿಣಾಮದಿಂದ ಭೂಮಿಯು ತೀವ್ರ ಮಾಲಿನ್ಯಕ್ಕೆ ಒಳಗಾಗುವ ಅವಧಿಯಾಗಿದೆ. ಅಂತಹ ಪರಿಣಾಮಗಳನ್ನು ತೊಡೆದುಹಾಕಲು, ಹಲವಾರು ಧಾರ್ಮಿಕ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅವಶ್ಯಕ.

    ಇನ್ನು ಈ ಸೂರ್ಯಗ್ರಹಣವು ಕೆಲವು ರಾಶಿಗಳ ಮೇಲೆ ಪರಿಣಾಮ ಬೀರುವ ಹಿನ್ನಲೆ ಕೆಲವು ಪರಿಹಾರ ಕ್ರಮ ಅನುಸರಿಸುವುದು ಅವಶ್ಯ.  ಸೂರ್ಯಗ್ರಹಣದ ಬಳಿಕ ಸೂರ್ಯನಿಗೆ ನೀರನ್ನು (ಅರ್ಘ್ಯ) ಅರ್ಪಿಸಲು ಹಾಗೂ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಲು ಸಲಹೆ ನೀಡಲಾಗುತ್ತದೆ. ದೇವಸ್ಥಾನಕ್ಕೆ ತಾಮ್ರ, ಬೆಲ್ಲ, ಗೋಧಿ ಅಥವಾ ತುಪ್ಪವನ್ನು ದಾನ ಮಾಡಬಹುದು

    ಸೂರ್ಯಗ್ರಹಣ ಅವಧಿಯಲ್ಲಿ ಏನು ಮಾಡಬಾರದು

    1.ಸೂರ್ಯಗ್ರಹಣದ ಸಮಯದಲ್ಲಿ ಊಟಮಾಡುವುದು, ತಿನ್ನುವುದನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ.

    2.ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು

    3. ಸೂರ್ಯ ಗ್ರಹಣದ ಸಮಯದಲ್ಲಿ ಮಲಗಬಾರದು

    4. ಗ್ರಹಣ ಸಮಯದಲ್ಲಿ ಪ್ರಾಣಿಗಳ ಮೇಲೆ ಕುಳಿತುಕೊಳ್ಳುವುದನ್ನು ತಪ್ಪಿಸಿ

    5. ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯಿಂದ ದೇಹವು ಅಪಾಯದಲ್ಲಿರುತ್ತದೆ. ಮುಖ್ಯವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

    ಇದನ್ನು ಓದಿ: ಡಿ. 4ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ; ಈ ರಾಶಿಗಳ ಮೇಲೆ ಅಧಿಕ ಪರಿಣಾಮ

    6. ಸೂರ್ಯ ಗ್ರಹಣ ಸಮಯದಲ್ಲಿ ಕೂದಲು ಅಥವಾ ಉಗುರುಗಳನ್ನು ಎಂದಿಗೂ ಕತ್ತರಿಸಬೇಡಿ. ಇದು ಅಶುಭವೆಂದು ಪರಿಗಣಿಸಲಾಗಿದೆ.

    7. ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು, ಏಕೆಂದರೆ ಗ್ರಹಣದ ಬೆಳಕು ಮಗುವಿನ ಆರೋಗ್ಯಕ್ಕೆ ಸರಿಯಲ್ಲ.

    8. ಗರ್ಭಿಣಿಯರ ಜೊತೆಗೆ ಮಕ್ಕಳು ಸೇರಿದಂತೆ ಇತರೆ ಜನರು ಮನೆಯಿಂದ ಹೊರಬಾರಬಾರದು

    9. ಈ ಅವಧಿಯಲ್ಲಿ ಗರ್ಭಿಣಿಯರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರು ಯಾವುದೇ ರೀತಿಯ ಕೆಲಸ ಮಾಡಬಾರದು

    10. ಚಾಕುಗಳು, ಫೋರ್ಕ್ ಅಥವಾ ಯಾವುದೇ ಇತರ ಮೊನಚಾದ ಮತ್ತು ಚೂಪಾದ ಸಾಧನಗಳನ್ನು ಬಳಸಬಾರದು

    11. ಸೂರ್ಯಗ್ರಹಣಕ್ಕೂ ಮುನ್ನ ಆಹಾರ ಮತ್ತು ನೀರಿಗೆ ತುಳಸಿ ಎಲೆಗಳನ್ನು ಹಾಕಬೇಕು

    12. ಗ್ರಹಣ ಸಮಯದಲ್ಲಿ ಮನೆಯ ಪೂಜಾ ಮಂದಿರದ ಬಾಗಿಲುಗಳನ್ನು ಮುಚ್ಚಬೇಕು

    ಇದನ್ನು ಓದಿ: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

    ಸೂರ್ಯಗ್ರಹಣ ಅವಧಿಯಲ್ಲಿ ಏನು ಮಾಡಬೇಕು
    1. ಗ್ರಹಣ ಪ್ರಾರಂಭವಾಗುವ ಮೊದಲು ನಿತ್ಯ ಕರ್ಮ ಮತ್ತು ಸ್ನಾನ ಮುಗಿಸಿ ಶುದ್ದಿಯಾಬೇಕು
    2. ಸಮಯದಲ್ಲಿ ದೇವರ ಧ್ಯಾನದಲ್ಲಿ ತೊಡಗಿಕೊಳ್ಳುವ ಮೂಲಕ ಮಂತ್ರಗಳನ್ನು ಪಠಿಸಬೇಕು
    3. ಸೂರ್ಯಗ್ರಹಣದ ಸಮಯದಲ್ಲಿ ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಗ್ರಹಣ ಮುಗಿದ ನಂತರ ಮನೆಯಲ್ಲಿ ಗಂಗಾಜಲವನ್ನು ಚಿಮುಕಿಸಬೇಕು.
    4. ಗ್ರಹಣ ಮುಗಿದ ನಂತರ ಮತ್ತೊಮ್ಮೆ ಸ್ನಾನ ಮಾಡಬೇಕು. ಇದರಿಂದ ಶುಭ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.
    5. ಗ್ರಹಣ ಕಾಲದಲ್ಲಿ ತುಳಸಿ ಎಲೆಗಳನ್ನು ಆಹಾರ ಪದಾರ್ಥಗಳಲ್ಲಿ ಹಾಕಬೇಕು.
    6. ಚಂದ್ರಗ್ರಹಣದ ನಂತರ ಅನ್ನ, ವಸ್ತ್ರದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: