Tulsi Puja Mantra: ಇಷ್ಟಾರ್ಥ ಸಿದ್ಧಿಗೆ ತಪ್ಪದೇ ತುಳಸಿ ಪೂಜೆ ವೇಳೆ ಈ ಮಂತ್ರ ಜಪಿಸಿ

ಈ ಮಂತ್ರವನ್ನು ನಿಯಮಿತವಾಗಿ ಪಠಿಸಿದರೆ, ಮನಸಿನ ಇಚ್ಛೆ ಈಡೇರುತ್ತದೆ. ತುಳಸಿ ಪೂಜೆ ಮಾಡುವ ಮುನ್ನ ಯಾವಾಗಲೂ ಮನೆಯ ದೇವರಿಗೆ ನಮಿಸಿ, ಬಳಿಕ ತುಳಸಿ ಮಾತೆ ಪೂಜಿಸಬೇಕು.

ತುಳಸಿ ಗಿಡ

ತುಳಸಿ ಗಿಡ

  • Share this:
    ಹಿಂದೂ ಧರ್ಮದಲ್ಲಿ (Hindu Religion) ತುಳಸಿ ಗಿಡವನ್ನು (tulasi palnt) ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣುವು ತುಳಸಿಯ ಬೇರುಗಳ ಬಳಿ ಶಾಲಿಗ್ರಾಮದ ರೂಪದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗಿದೆ. ತುಳಸಿ ಗಿಡವಿರುವ ಮನೆಯಿಂದ ನಕಾರಾತ್ಮಕತೆ ದೂರವಾಗಿ (Negative Energy), ಮನೆಯಲ್ಲಿ ಸಂತೋಷ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ, ತುಳಸಿ ಪೂಜೆಯಿಂದ (Tulasi Puja) ಮನೆಯ ದರಿದ್ರ್ಯ ದೂರವಾಗಿ, ಹಣದ ಹರಿವು ಹೆಚ್ಚುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಅದನ್ನು ನಿಯಮಿತವಾಗಿ ಪೂಜಿಸಬೇಕು ಎಂದು ನಂಬಲಾಗಿದೆ. ಸಂಜೆ, ತುಳಸಿಯ ಮುಂದೆ ದೀಪ ಹಚ್ಚಬೇಕು. ಇದು ಮಾತ್ರವಲ್ಲ, ಮನೆಯಲ್ಲಿ ತುಳಸಿ ಗಿಡ ಇರುವುದರಿಂದ ಎಂದಿಗೂ ಬಡತನ ಮತ್ತು ದುರದೃಷ್ಟ  ತರುವುದಿಲ್ಲ ಎಂದು ಹೇಳಲಾಗುತ್ತದೆ.

    ಆರೋಗ್ಯ ಗುಣವನ್ನು ಹೊಂದಿದೆ ತುಳಸಿ

    ತುಳಸಿ ಗಿಡವು ಆಧ್ಯಾತ್ಮಿಕ ಜೊತೆಗೆ ಆರೋಗ್ಯಕರ ಗುಣವನ್ನು ಹೊಂದಿದೆ. ಇದು ದೇಹದ ರೋಗಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡಿ, ದೇಹವನ್ನು ಆರೋಗ್ಯವಾಗಿರಿಸುತ್ತದೆ. ತುಳಸಿ ಎಲೆಗಳನ್ನು ತಿನ್ನುವುದರಿಂದ ಶರೀರದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಶೀತ ಮತ್ತು ಕೆಮ್ಮಿನಂತಹ ರೋಗಗಳಿಂದ ದೇಹವು ದೂರ ಉಳಿಯುತ್ತದೆ ಎಂದು ನಂಬಲಾಗಿದೆ.

    ತುಳಸಿಯ ಪೂಜೆಯಿಂದ ಮೋಕ್ಷ

    ತುಳಸಿ ಗಿಡದ ಪೂಜೆಗೆ ಸಂಬಂಧಿಸಿದ ಹಲವಾರು ಕಾರಣಗಳಿವೆ. ತುಳಸಿ  ವಿಷ್ಣುವಿನ ವಾಸಸ್ಥಾನ ಅಥವಾ ವೈಕುಂಠದ ಹೆಬ್ಬಾಗಿಲು ಎಂದು ನಂಬಲಾಗಿದೆ. ಆದುದರಿಂದ, ಅವರು ತಮ್ಮ ಅಂತಿಮ ಗುರಿಯಾದ ಮೋಕ್ಷಕ್ಕೆ ಪ್ರಾಪ್ತಿಗೆ ತುಳಸಿ ಪೂಜಿಸಬೇಕು ಎಂಬ ಧಾರ್ಮಿಕ ನಂಬಿಕೆ ಇದೆ.

    ಧಾರ್ಮಿಕ ಗ್ರಂಥಗಳ ಪ್ರಕಾರ, ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ಮೋಕ್ಷ ಸಿಗುತ್ತದೆ. ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟರೆ ಅಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಂಕರ ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಸ್ಪರ್ಶಿಸುವ ಮೂಲಕ ಈ ವಿಶೇಷ ಮಂತ್ರವನ್ನು ಪಠಿಸಿದರೆ, ಇಷ್ಟಾರ್ಥ ಸಿದ್ಧಿಯಾಗುತ್ತದೆ. ಇದಕ್ಕಾಗಿ ವಿಶೇಷವಾಗಿ ತುಳಸಿ ಮಂತ್ರ ಜಪಿಸಬೇಕು. ಈ ಹೇಗೆ ಜಪಿಸಬೇಕು ಎಂಬ ಮಾಹಿತಿ ಇಲ್ಲಿದೆ.

    ಇದನ್ನು ಓದಿ: ದುಷ್ಟಶಕ್ತಿ ನಿವಾರಣೆಗಾಗಿ ಮನೆಯಲ್ಲಿ ಈ ಮೀನಿನ ಅಕ್ವೇರಿಯಂ ಇಡಿ

    ತುಳಸಿ ಮಂತ್ರ
    ಮಹಾಪ್ರಸಾದ್ ಜನನಿ ಸರ್ವ ಸೌಭಾಗ್ಯವರ್ಧಿನಿ, ಆದಿ ವ್ಯಾಧಿ ಹರ ನಿತ್ಯಂ ತುಳಸಿ ತ್ವಂ ನಮೋಸ್ತುತೇ - ಈ ಮಂತ್ರವನ್ನು ನಿಯಮಿತವಾಗಿ ಪಠಿಸಿದರೆ, ಮನಸಿನ ಇಚ್ಛೆ ಈಡೇರುತ್ತದೆ. ತುಳಸಿ ಪೂಜೆ ಮಾಡುವ ಮುನ್ನ ಯಾವಾಗಲೂ ಮನೆಯ ದೇವರಿಗೆ ನಮಿಸಿ, ಬಳಿಕ ತುಳಸಿ ಮಾತೆ ಪೂಜಿಸಬೇಕು.

    ಇದನ್ನು ಓದಿ: ನಗುವ ಬುದ್ಧನನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿಟ್ಟರೆ ಅದೃಷ್ಟ ಗೊತ್ತಾ?

    ತುಳಸಿ ಮಂತ್ರವನ್ನು ಜಪಿಸುವ ಮೊದಲು ತುಳಸಿಗೆ ನಮಸ್ಕರಿಸಿ ಶುದ್ಧವಾದ ನೀರನ್ನು ಗಿಡಕ್ಕೆ ಅರ್ಪಿಸಬೇಕು. ಬಳಿಕ ತುಳಸಿಗೆ ಅರಿಶಿನ ಕುಂಕುಮ ಇಟ್ಟು, ಹೂವು ಮುಡಿಸಬೇಕು. ಬಳಿಕ, ತುಳಸಿಯ ಮುಂದೆ ತುಪ್ಪ, ಧೂಪ ಮತ್ತು ಧೂಪದ ಕಡ್ಡಿಗಳ ದೀಪವನ್ನು ಹಚ್ಚಬೇಕು. ಬಳಿಕ ತುಳಸಿಗೆ ಪ್ರದಕ್ಷಿಣೆ ಹಾಕಿ, ಈ ಮಂತ್ರ ಜಪಿಸಬೇಕು. ಈ ರೀತಿ ಪೂಜಾ ವಿಧಿ ವಿಧಾನ ಮಾಡಿದರೆ, ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ.
    Published by:Seema R
    First published: