Zodiac Sign: ಶ್ವಾನಗಳ ರಾಶಿಗಳ ಬಗ್ಗೆ ನಿಮಗಿದ್ಯಾ ಮಾಹಿತಿ; ಮುದ್ದು ನಾಯಿಮರಿಗಳ ಕುರಿತ ಕುತೂಹಲ ಸಂಗತಿ ಇಲ್ಲಿದೆ

ನಾಯಿಯ ಪ್ರವೃತ್ತಿಗೆ ಅನುಸಾರವಾಗಿ ಅವುಗಳ ರಾಶಿಯು ಅವುಗಳಿಗಿರುವ ವಿಶೇಷತೆಯನ್ನು ವ್ಯಕ್ತಪಡಿಸುತ್ತವೆ.

ಜರ್ಮನ್ ಶೇಪರ್ಡ್

ಜರ್ಮನ್ ಶೇಪರ್ಡ್

  • Share this:
ಆಯಾ ದಿನದ ರಾಶಿ ಭವಿಷ್ಯ ನಮ್ಮ ಸ್ವಭಾವ, ಪ್ರವೃತ್ತಿ ಹಾಗೂ ಆ ದಿನದ ಮಹತ್ವದ ಕುರಿತು ನಮಗೆ ಮಾಹಿತಿ ನೀಡುತ್ತದೆ. ಆದರೆ ನಿಮ್ಮ ಮನೆಯಲ್ಲಿರುವ ನಾಯಿಗಳ ಕುರಿತು ಕೂಡ ಇದೇ ರಾಶಿ ಭವಿಷ್ಯ (Zodiac Sign) ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಲು ಬಯಸುವಿರಾ..? ನಾಯಿಗಳು (Dog) ಕೂಡ ತಮ್ಮ ರಾಶಿಗೆ ಅನುಗುಣವಾಗಿರುವ ಸ್ವಭಾವವನ್ನು ಹೊಂದಿದ್ದು, ಅವುಗಳ ಮನಸ್ಥಿತಿಯನ್ನು ಈ ಮೂಲಕ ಅರಿತುಕೊಳ್ಳಬಹುದಾಗಿದೆ. ನಾಯಿಯ ಪ್ರವೃತ್ತಿಗೆ ಅನುಸಾರವಾಗಿ ಅವುಗಳ ರಾಶಿಯು ಅವುಗಳಿಗಿರುವ ವಿಶೇಷತೆಯನ್ನು ವ್ಯಕ್ತಪಡಿಸುತ್ತವೆ.

1. ಮೇಷ ರಾಶಿ: ಈ ರಾಶಿಯ ನಾಯಿಯ ಸ್ವಭಾವ ತುಂಬಾ ಸಾಹಸಮಯವಾಗಿರುತ್ತದೆ. ಅಳಿಲುಗಳನ್ನು, ಇತರ ಪ್ರಾಣಿಗಳನ್ನು ಬೆನ್ನಟ್ಟುವುದು ಎಂದರೆ ಈ ರಾಶಿಯ ನಾಯಿಗಳಿಗೆ ಅಚ್ಚುಮೆಚ್ಚಿನ ಕೆಲಸವಾಗಿದೆ. ದಣಿಯುವವರೆಗೆ ನಾಯಿ ಅವುಗಳನ್ನು ಬೆನ್ನಟ್ಟುತ್ತಲೇ ಇರುತ್ತದೆ. ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ.

2. ವೃಷಭ ರಾಶಿ: ಈ ರಾಶಿಯ ನಾಯಿಗಳು ತಮ್ಮ ಮಾನಸಿಕ ಸ್ಥಿತಿಗೆ ಅನುಸಾರವಾಗಿ ವರ್ತಿಸುತ್ತವೆ. ಅವರು ನಡೆದದ್ದೇ ದಾರಿ ಎಂಬ ತತ್ವಕ್ಕೆ ಈ ರಾಶಿಯ ನಾಯಿಗಳು ಬದ್ಧವಾಗಿರುತ್ತವೆ. ಮೂಡ್ ಇದ್ದಾಗ ಮಾತ್ರವೇ ಚಟುವಟಿಕೆಯಿಂದ ಕೂಡಿರುತ್ತವೆ.

3. ಮಿಥುನ ರಾಶಿ:  ನಿಮ್ಮ ನಾಯಿ ಮನಸ್ಥಿತಿಗೆ ಅನುಗುಣ ವಾಗಿ ಚಟುವಟಿಕೆಯಿಂದ ಇದೆ ಎಂದಾದಲ್ಲಿ ಮಿಥುನ ರಾಶಿಯದ್ದು ಎಂಬುದನ್ನು ಮನಗಾಣಿ. ದ್ವಂದ್ವ ವ್ಯಕ್ತಿತ್ವವು ನಿಮ್ಮ ನಾಯಿಯಲ್ಲಿ ಕಾಣಬಹುದು. ಒಮ್ಮೆ ಖುಷಿಯಾಗಿರುವುದು ಇನ್ನೊಮ್ಮೆ ಮೂಲೆಯಲ್ಲಿ ಅದರಷ್ಟಕ್ಕೆ ಕುಳಿತುಕೊಳ್ಳುವುದು ಹೀಗೆ ಮಾಡುತ್ತಿರಬಹುದು. ಆದರೆ ಈ ರಾಶಿಯ ನಾಯಿಗಳು ತುಂಬಾ ಸ್ನೇಹಪರವಾಗಿರುತ್ತವೆ ಮತ್ತು ಆಕರ್ಷಕವಾಗಿರುತ್ತವೆ.

4. ಕರ್ಕಾಟಕ ರಾಶಿ: ನಿಮ್ಮ ನಾಯಿ ತುಂಬಾ ಭಾವನಾತ್ಮಕ ಎಂದಾದಲ್ಲಿ ಸಂಶಯವೇ ಬೇಡ ಅವುಗಳದ್ದು ಕರ್ಕಾಟಕ ರಾಶಿಯೇ ಆಗಿರುತ್ತದೆ. ತುಂಬಾ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತವೆ ಹಾಗೂ ನಿಮ್ಮ ಮೇಲೆ ಹೆಚ್ಚಿನ ಅಕ್ಕರೆಯನ್ನು ಹೊಂದಿರುತ್ತವೆ. ತಮ್ಮ ಮರಿಗಳಿಗೆ ಹೆಚ್ಚಿನ ಅಕ್ಕರೆಯ ಪಾಲಕರೂ ಆಗಿರುತ್ತಾರೆ.

5. ಸಿಂಹ ರಾಶಿ: ಧೈರ್ಯವಂತ ಸ್ವಭಾವದ ನಾಯಿಗಳೆಂದರೆ ಅದು ಸಿಂಹ ರಾಶಿಯದ್ದಾಗಿದೆ. ನಿಮ್ಮ ಸ್ಥಳಕ್ಕೆ ಆಗಮಿಸುವ ಜನರ ಮನಗೆಲ್ಲುವಲ್ಲಿ ಈ ರಾಶಿಯ ನಾಯಿಗಳದ್ದು ವಿಶೇಷ ಪಾತ್ರವಿದೆ.

6. ಕನ್ಯಾ ರಾಶಿ: ಕನ್ಯಾ ರಾಶಿಯ ನಾಯಿಗಳು ಆತಂಕದ ಸಮಸ್ಯೆಗಳನ್ನು ಹೊಂದಿರುತ್ತವೆ ಹಾಗೂ ಲೆಕ್ಕಾಚಾರವಾಗಿಯೇ ತಮ್ಮ ಮುಂದಿನ ಚಲನೆಗಳನ್ನು ನಿರ್ವಹಿಸುತ್ತವೆ. ಯಾವುದೇ ಕೆಲಸವನ್ನು ಉದ್ದೇಶವನ್ನಿಟ್ಟುಕೊಂಡು ಸಫಲಗೊಳಿಸುವಲ್ಲಿ ಈ ರಾಶಿಯ ನಾಯಿಗಳ ಪಾತ್ರ ಮಹತ್ವದ್ದಾಗಿದೆ.

ಇದನ್ನು ಓದಿ: 8 ನಿಮಿಷದಲ್ಲೇ ಬುಕ್ಕಿಂಗ್​​ ಫುಲ್; ತಿಮ್ಮಪ್ಪನ ಸರ್ವದರ್ಶನ ಟಿಕೆಟ್​ಗೆ ಹೆಚ್ಚಿದ ಬೇಡಿಕೆ

7. ತುಲಾ ರಾಶಿ: ಕಾಲಹರಣ ಮಾಡುವ ಸ್ವಭಾವ ಈ ರಾಶಿಯ ನಾಯಿಗಳದ್ದು. ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುವುದಿಲ್ಲ ನಂತರ ನಿರ್ಧರಿಸುವುದೇ ಉತ್ತಮ ಎಂಬ ಯೋಚನೆ ಈ ರಾಶಿಯ ನಾಯಿಗಳದ್ದು. ತನ್ನ ಜೊತೆಗಾರ ನಾಯಿಗೆ ಕೂಡ ಇದೇ ಸ್ವಭಾವವನ್ನು ಇದು ಕಲಿಸಿಕೊಡುತ್ತದೆ.

8. ವೃಶ್ಚಿಕ ರಾಶಿ: ಈ ರಾಶಿಯಲ್ಲಿ ಬರುವ ನಾಯಿಗಳು ನಿಷ್ಟಾವಂತವಾಗಿರುತ್ತವೆ. ಹಚಿಕೊ ನಾಯಿಯನ್ನು ಈ ರಾಶಿಗೆ ಸೇರಿಸಬಹುದು. ಇನ್ನೊಂದು ನಾಯಿ ಇದ್ದಲ್ಲಿ ಅಸೂಯೆ ಮೂರು ಪಟ್ಟು ಹೆಚ್ಚಿರುತ್ತದೆ.

9. ಧನು ರಾಶಿ: ಈ ರಾಶಿಯ ನಾಯಿಗಳಿಗೆ ಚಟುವಟಿಕೆಯಿಂದ ಇರುವುದು ಎಂದರೆ ತುಂಬಾ ಪ್ರೀತಿ. ಕಿಟಕಿಯ ಹೊರಗೆ ನೋಡುವುದು, ಹಕ್ಕಿಗಳನ್ನು ಮರಗಳನ್ನು ವೀಕ್ಷಿಸುವುದು, ಹೀಗೆ ಮಾಡುತ್ತಿರುವಾಗಲೇ ಅವುಗಳು ಅದರಲ್ಲೇ ಮುಳುಗಿರುತ್ತವೆ. ಹೊರಗೆ ಅಡ್ಡಾಡುವುದು ಎಂದರೆ ಈ ರಾಶಿಯ ನಾಯಿಗಳಿಗೆ ತುಂಬಾ ಪ್ರೀತಿ. ಇದರಿಂದ ನಿಂತ ಜಾಗದಲ್ಲಿ ಅವುಗಳು ನಿಲ್ಲುವುದಿಲ್ಲ.

ಇದನ್ನು ಓದಿ: ಸಿಟ್ಟು ಎಂಬುದು ಮೂಗಿನ ತುದಿಯಲ್ಲೇ ಇರುತ್ತಂತೆ ಈ ರಾಶಿಯವರಿಗೆ

10. ಮಕರ ರಾಶಿ: ಉತ್ತಮವಾಗಿ ಸಂಘಟಿತಗೊಂಡ ಹಾಗೂ ಹೆಚ್ಚು ತರಬೇತಿ ಪಡೆದ ನಾಯಿ ಈ ರಾಶಿಯದ್ದಾಗಿದೆ. ಹೆಚ್ಚು ಸಕ್ರಿಯ ಮತ್ತು ತಾವು ಆಡುವ ಆಟಿಕೆಗಳ ನಿಖರತೆ ಇವರಿಗಿರುತ್ತದೆ. ಆದರೆ ಖಿನ್ನತೆಗೆ ಒಳಗಾಗುವ ಅಂಶವಿರುವುದರಿಂದ ಅದಕ್ಕೆ ಅನುಗುಣವಾಗಿ ತರಬೇತಿ ನೀಡಿ. ಇತರ ನಾಯಿಗಳೊಂದಿಗೆ ಇವುಗಳನ್ನು ಬೆರೆಯುವಂತೆ ಮಾಡಿ ಇದರಿಂದ ಅವುಗಳು ಖುಷಿಯಾಗಿರುತ್ತವೆ.

11. ಕುಂಭ ರಾಶಿ: ಈ ರಾಶಿಗೆ ಸೇರಿದ ನಾಯಿ ಬುದ್ಧಿವಂತನಾಗಿರುತ್ತದೆ. ಒಬ್ಬಂಟಿಯಾಗಿರಲು ಅಷ್ಟೊಂದು ಇಷ್ಟಪಡದ ಈ ರಾಶಿಯ ನಾಯಿ ನೀವು ಕೆಲಸದಲ್ಲಿದ್ದರೆ ನಿಮಗೆ ತೊಂದರೆಯನ್ನುಂಟು ಮಾಡುವುದಿಲ್ಲ. ಇವುಗಳಿಗೆ ತರಬೇತಿ ನೀಡುವುದು ತುಂಬಾ ಸುಲಭ ಹಾಗೂ ಹೆಚ್ಚಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

12. ಮೀನ ರಾಶಿ: ಈ ರಾಶಿಯ ನಾಯಿ ಶಾಂತಿಯುತ ಸ್ವಭಾವವನ್ನು ಹೊಂದಿರುತ್ತದೆ. ಒಮ್ಮೊಮ್ಮೆ ತಮ್ಮ ಪಾಡಿಗೆ ತಾವಿದ್ದರೂ ಮಕ್ಕಳೊಂದಿಗೆ ಚೆನ್ನಾಗಿ ಬೆರೆತುಕೊಳ್ಳುತ್ತವೆ. ಮೃದು ಸ್ವಭಾವಿಗಳಾದ ಈ ರಾಶಿಯ ನಾಯಿಗಳು ಮುಂಗಾಲುಗಳಿಂದ ತಮ್ಮನ್ನು ಸುತ್ತುವರಿದುಕೊಂಡು ಇರಲು ಬಯಸುತ್ತವೆ.
Published by:Seema R
First published: