Sleeping Time: ನೀವು ಮಲಗುವ ವೇಳೆಗೂ ನಿಮ್ಮ ರಾಶಿ ಚಕ್ರಗಳಿಗೂ ಲಿಂಕ್ ಇದ್ಯಂತೆ ನೋಡಿ!

ನಿಮ್ಮ ಜ್ಯೋತಿಷ್ಯ ರಾಶಿಯ ಆಧಾರದ ಮೇಲೆ, ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಅವಲಂಬಿಸಿ ನೀವು ನಿರ್ದಿಷ್ಟ ಮಲಗುವ ಸಮಯದ ದಿನಚರಿಯನ್ನು ಹೊಂದಿರಬಹುದು. ಪ್ರತಿ ರಾಶಿಯು ಮಲಗುವ ಸಮಯದಲ್ಲಿ ಒತ್ತಡವನ್ನು ಹೇಗೆ ನಿವಾರಿಸುತ್ತದೆ ಎಂಬುದನ್ನು ಈ ಲೇಖನದಲ್ಲಿ ಹೇಳಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಿಮ್ಮ ದಿನ ಇವತ್ತು ತುಂಬಾ ಕೆಟ್ಟದಾಗಿತ್ತಾ? ನಿಮ್ಮ ಸ್ನೇಹಿತರು (Friends) ಅಥವಾ ಕುಟುಂಬಸ್ಥರ (Family) ಜೊತೆ ಜಗಳ ಮಾಡಿದ್ದೀರಾ? ಅಥವಾ ಇವತ್ತು ನಿಮ್ಮ ದಿನ ತುಂಬಾ ಸಿಂಪಲ್‌ ಆಗಿತ್ತಾ ಅಥವಾ ಡಲ್‌ ಹೊಡಿತಿತ್ತಾ? ನಿಮ್ಮ ಉತ್ತರ ಯೆಸ್‌ ಎಂದಾದರೆ ನೀವು ಒಂಟಿ ಜೀವಿ ಅಲ್ಲ ಎಂದು ಗೊತ್ತಾಗುತ್ತದೆ. ಜೀವನದಲ್ಲಿ ಯಾರಿಗೂ ಎಲ್ಲ ದಿನಗಳು ಪರ್ಫೆಕ್ಟ್‌ (Perfect) ಆಗಿರೊದಿಲ್ಲ. ಏಕೆಂದರೆ, ಜೀವನದಲ್ಲಿ ಏರಿಳಿತಗಳು ಸಾಮಾನ್ಯ ಎಂದು ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಆದರೆ ನಿಮ್ಮ ದಿನವನ್ನು ನೀವು ಹೇಗೆ ಉತ್ತಮವಾಗಿ ಎಂಡ್‌ ಮಾಡುತ್ತಿರಿ ಎಂಬುದನ್ನು ಮಾತ್ರ ನೀವೇ ಕಂಪ್ಲೀಟ್‌ ಆಗಿ ಕಂಟ್ರೋಲ್‌ (Control) ಮಾಡಬಹುದು.

ಅನೇಕ ವಿಷಯಗಳು ನಿಮ್ಮನ್ನು ಒತ್ತಡಕ್ಕೆ ನೂಕಬಹುದು. ಇಡೀ ದಿನ ಏನೆ ನಡೆದಿರಲಿ ಆದರೆ ನೀವು ಮಲಗುವ ಮುಂಚೆ ಅವೆಲ್ಲವನ್ನು ಮರೆತು ಉತ್ತಮ ನಿದ್ದೆ ಮಾಡುವುದರಿಂದ ಮರುದಿನ ನೀವು ಉತ್ತಮವಾಗಿ ದಿನವನ್ನು ಆರಂಭಗೊಳಿಸಬಹುದು. ಇನ್ನು ಒಂದು ಕುತೂಹಲಕಾರಿ ವಿಷಯವೇನೆಂದರೆ, ನಿಮ್ಮ ಜ್ಯೋತಿಷ್ಯ ರಾಶಿಯ ಆಧಾರದ ಮೇಲೆ, ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಅವಲಂಬಿಸಿ ನೀವು ನಿರ್ದಿಷ್ಟ ಮಲಗುವ ಸಮಯದ ದಿನಚರಿಯನ್ನು ಹೊಂದಿರಬಹುದು. ಪ್ರತಿ ರಾಶಿಯು ಮಲಗುವ ಸಮಯದಲ್ಲಿ ಒತ್ತಡವನ್ನು ಹೇಗೆ ನಿವಾರಿಸುತ್ತದೆ ಎಂಬುದನ್ನು ಈ ಲೇಖನದಲ್ಲಿ ಹೇಳಲಾಗಿದೆ.

ಜ್ಯೋತಿಷ್ಯ ರಾಶಿಯು ನೀವು ಮಲಗುವ ವೇಳೆಯನ್ನು ನಿರ್ಧರಿಸುತ್ತದೆಯೇ? ಅದು ಹೇಗೆ ತಿಳಿಯೋಣ ಬನ್ನಿ:
ಮೇಷರಾಶಿ
ಜ್ಯೋತಿಷಿಗಳು ಮೇಷ ರಾಶಿಯವರಿಗೆ ನೀವು ಮಲಗುವ ಮುನ್ನ ಪ್ರತಿ ರಾತ್ರಿ ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ದೊರಕುತ್ತದೆ. ದಿನಚರಿ ಏಕೆ ಬರೆಯಬೇಕೆಂದರೆ ಮೇಷ ರಾಶಿಯವರ ಜೀವನ ಶಕ್ತಿಯುತ ಮತ್ತು ಅತ್ಯಂತ ಮಹತ್ವಾಕಾಂಕ್ಷಿಯಾಗಿರುವುದರಿಂದ ಬರವಣಿಗೆ ಅವರ ಮನಸ್ಸನ್ನು ಶಾಂತಗೊಳಿಸಿ ಉತ್ತಮ ನಿದ್ದೆಗೆ ದಾರಿ ಮಾಡಿಕೊಡುತ್ತದೆ.

ವೃಷಭ ರಾಶಿ
ಈ ರಾಶಿಯವರು ತಾವು ಇರುವ ಸುತ್ತಮತ್ತ ಪ್ರದೇಶಗಳು ಮತ್ತು ವಿಶೇಷವಾಗಿ ಮಲಗುವ ಕೋಣೆಯನ್ನು ಸ್ವಚ್ಛ, ಪರಿಮಳಯುಕ್ತದಿಂದ ಇರಿಸುವುದರಿಂದ ನಿಮ್ಮಗೆ ಉತ್ತಮ ನಿದ್ದೆ ಬರಲು ಸಹಾಯವಾಗುತ್ತದೆ. ಅರೋಮಾಥೆರಪಿ ಎಂದೂ ಕರೆಯಲ್ಪಡುವ ಸುಗಂಧ ದ್ರವ್ಯಗಳನ್ನು ನೀವು ಬಳಸುವುದರಿಂದ ಅವು ನಿಮ್ಮ ಇಂದ್ರಿಯಗಳನ್ನು ಶಾಂತಗೊಳಿಸಲು ಮತ್ತು ನಿದ್ದೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಮಿಥುನ ರಾಶಿ
ಈ ರಾಶಿಯವರು ಸಂಘಜೀವಿಯಾಗಿರುವುದರಿಂದ ನಿಮ್ಮ ದಿನಕ್ಕೆ ಉತ್ತಮ ಕೊಡುಗೆ ನೀಡಿದ ಎಲ್ಲರಿಗೂ ಒಂದೊಂದು ಕೃತಜ್ಞ ಪತ್ರವನ್ನು ಬರೆಯುವುದರಿಂದ ನಿಮಗೆ ಖುಷಿಯಾಗಿ ಉತ್ತಮ ನಿದ್ದೆ ನಿಮ್ಮದಾಗುತ್ತದೆ.

ಇದನ್ನೂ ಓದಿ: Vastu: ಈ ದಿಕ್ಕಿಗೆ ಮುಖ ಹಾಕಿ ಊಟ ಮಾಡಬಾರದಂತೆ; ಕಾರಣ ಇಷ್ಟೇ!

ಕರ್ಕಾಟಕ ರಾಶಿ
ಈ ರಾಶಿಯವರು ಹೆಚ್ಚು ಭಾವನಾತ್ಮಕ ಜೀವಿಗಳು. ಇವರು ನಿದ್ದೆಗೆ ಹೋಗುವ ಮುನ್ನ ಒಂದು ಕಪ್‌ ಚಹಾ ಸೇವಿಸಿ ನಿಸರ್ಗ ಸೌಂದರ್ಯವನ್ನು ಆಸ್ವಾದಿಸುವುದರಿಂದ ನಿಮ್ಮ ಒತ್ತಡ ಕಡಿಮೆ ಆಗಿ ಸುಲಭವಾಗಿ ನಿದ್ದೆಗೆ ಜಾರಬಹುದು.

ಸಿಂಹ ರಾಶಿ
ಈ ರಾಶಿಯವರಿಗೆ, ಸೌಂದರ್ಯ ಮತ್ತು ಐಷಾರಾಮಿಗಳು ವಸ್ತುಗಳೆಂದರೆ ಬಹಳ ಇಷ್ಟವಿರುವುದರಿಂದ ತಮ್ಮ ಕೋಣೆಯನ್ನು ದೊಡ್ಡ ದೊಡ್ಡ ಪರಿಮಳಯುಕ್ತ ಮೇಣದಬತ್ತಿಗಳಿಂದ ಅಲಂಕಾರ ಮಾಡಿ ಅವುಗಳನ್ನು ತದೇಕ ಚಿತ್ತದಿಂದ ನೋಡುತ್ತಾ ವಿಶ್ರಾಂತಿ ಮಾಡುವುದರಿಂದ ನಿಮಗೆ ಬೇಗ ನಿದ್ದೆ ಬರುತ್ತದೆ.

ಕನ್ಯಾ ರಾಶಿ
ಈ ರಾಶಿಯವರು ಹೆಚ್ಚು ವೃತ್ತಿಪರರು ಮತ್ತು ಅವರು ಮಾಡುವ ಕೆಲಸದಲ್ಲಿ ಬಹುತೇಕ ಪರಿಪೂರ್ಣರು ಎಂದು ಹೇಳಬಹುದು. ಆದ್ದರಿಂದ ಮಲಗುವ ಮುನ್ನ ನೀವು ಧ್ಯಾನ ಮಾಡುವುದರಿಂದ ನಿಮ್ಮ ಏಕಾಗ್ರತೆ ಸುಧಾರಿಸುವುದಲ್ಲದೇ, ದಿನನಿತ್ಯದ ಜಂಜಾಟ ಮರೆತು ನಿದ್ದೆಗೆ ಹೋಗುತ್ತಿರಿ.

ತುಲಾ ರಾಶಿ
ಈ ರಾಶಿಯವರು ಅತ್ಯಂತ ಸಂಘಟಿತ ಮತ್ತು ಸಮತೋಲಿತ ವ್ಯಕ್ತಿತ್ವಗಳಲ್ಲಿ ಒಂದಾಗಿದ್ದರೂ, ಸ್ಫಟಿಕ ಶಿಲೆ, ಅಗೇಟ್, ಅಮೆಥಿಸ್ಟ್ ಅಥವಾ ಓಪಲ್‌ಗಳಂತಹ ಹರಳುಗಳ ಬಳಕೆಯು ಇವರಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ಮತ್ತು ಉತ್ತಮ ನಿದ್ದೆಗೆ ದಾರಿ ಮಾಡಿಕೊಡುತ್ತದೆ ಎಂದು ಜ್ಯೋತಿಷರು ಶಿಫಾರಸು ಮಾಡಿದ್ದಾರೆ.

ವೃಶ್ಚಿಕ ರಾಶಿ
ಈ ರಾಶಿಯವರು ರಾತ್ರಿ ಸಮಯದಲ್ಲಿ ಸ್ನಾನ ಮಾಡುವುದು ಬೆಸ್ಟ್‌. ಏಕೆಂದರೆ ಇವರ ರಾಶಿ ಚಿಹ್ನೆ ನೀರು ಆಗಿರುವುದರಿಂದ ಜ್ಯೋತಿಷ್ಯ ಶಾಸ್ತ್ರವು ಇದನ್ನು ಹೇಳುತ್ತದೆ. ಬೆಚ್ಚಗಿನ ತುಂತುರು ಸ್ನಾನವು ನಿಮ್ಮನ್ನು ಒತ್ತಡದಿಂದ ದೂರ ಮಾಡಿ ಸುಲಭವಾಗಿ ನಿದ್ದೆಗೆ ಜಾರುವಂತೆ ಮಾಡುತ್ತದೆ.

ಇದನ್ನೂ ಓದಿ: Vastu Tips: ಮನೆಯಲ್ಲಿ Open Space ಎಲ್ಲಿರಬೇಕು? ವಾಸ್ತು ಶಾಸ್ತ್ರದ 10 ಸಲಹೆಗಳು ಇಲ್ಲಿವೆ

ಧನು ರಾಶಿ
ಈ ರಾಶಿಯವರು ಸಾಹಸಿ ಮತ್ತು ಸ್ವಾಭಾವಿಕ ಜೀವ ಆಗಿರುವುದರಿಂದ ಇವರಿಗೆ ರಾತ್ರಿ ಸಮಯ ಉತ್ತಮ ನಿದ್ದೆ ಮಾಡುವುದು ಸ್ವಲ್ಪ ಕಷ್ಟ. ಆದ್ದರಿಂದ ಇವರು ತಮ್ಮ ಕೋಣೆಯನ್ನು ಕತ್ತಲೆಗೊಳಿಸಿಕೊಂಡು ಮಲಗುವುದರಿಂದ ಉತ್ತಮ ನಿದ್ದೆ ನಿಮ್ಮದಾಗುತ್ತದೆ.

ಮಕರ ರಾಶಿ
ಈ ರಾಶಿಯವರು ಯಾವಾಗಲೂ ಕಾರ್ಯನಿರತ ವೃತ್ತಿಪರರು ಅಥವಾ ಪ್ರತಿಭಾವಂತರು ಆಗಿರುವುದರಿಂದ ವಿವಿಧ ಮಾಹಿತಿ ಹುಡುಕಲು 24 ಗಂಟೆಗಳು ಪೋನ್‌ನಲ್ಲಿಯೇ ಮುಳುಗಿರುತ್ತಾರೆ. ಆದ್ದರಿಂದ ಪೋನ್‌ ಬಂದ್‌ ಮಾಡಿ ಮಲಗಿದರೆ ನೀವು ಉತ್ತಮ ನಿದ್ದೆ ಮಾಡಬಹುದು ಎಂದು ಜ್ಯೋತಿಷ್ಯರು ಹೇಳುತ್ತಾರೆ.

ಕುಂಭ ರಾಶಿ
ಈ ರಾಶಿಯವರು ಹೆಚ್ಚು ಸೃಜನಶೀಲ ಮತ್ತು ಕಾಲ್ಪನಿಕ ಜೀವಿಗಳು. ಆದ್ದರಿಂದ ಉತ್ತಮ ಪುಸ್ತಕಗಳ ಓದುವಿಕೆ ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸಬಲ್ಲದು.

ಮೀನ ರಾಶಿ
ಈ ರಾಶಿಯವರು ಹೆಚ್ಚು ಬೇರೆಯವರ ಕಾಳಜಿ ಮಾಡುವ ಜೀವಿಗಳು. ಆದ್ದರಿಂದ ನೀವು ಇತರರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ ಹಾಗೆಯೇ ನಿಮ್ಮ ಬಗ್ಗೆ ನೀವು ಮೊದಲು ಕಾಳಜಿ ವಹಿಸಲು ಸಹ ನೀವು ಕಲಿಯಬೇಕು. ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳಿ ಇದರಿಂದ ನಿಮಗೆ ವಿಶ್ರಾಂತಿ ದೊರಕಿ, ಉತ್ತಮವಾಗಿ ನಿದ್ದೆ ಮಾಡಲು ಸಹಾಯವಾಗುತ್ತದೆ.
Published by:Ashwini Prabhu
First published: