Black Thread: ಕಪ್ಪು ದಾರ ಕಟ್ಟುವುದರಿಂದ ನಿಜವಾಗಿಯೂ ದೃಷ್ಟಿ ಬೀಳುವುದಿಲ್ಲವೇ? ಇಲ್ಲಿದೆ ಉತ್ತರ

ಕಪ್ಪು ದಾರವು ನಮ್ಮನ್ನು ದುಷ್ಟ ನೋಟಗಳಿಂದ ರಕ್ಷಿಸುತ್ತದೆ ಎಂಬ ನಂಬಿಕೆಯಿದೆ. ನೀವು ಒಂದು ವಿಶಿಷ್ಟ ಭಾರತೀಯ ಕುಟುಂಬದಲ್ಲಿ ಬೆಳೆದಿದ್ದರೆ, ಬಹುಶಃ ನಿಮಗೆ ಈ ‘ಬುರಿ ನಜರ್’ ಎಂಬ ಪರಿಕಲ್ಪನೆ ಮತ್ತು ದುಷ್ಟ ಕಣ್ಣಿನಿಂದ ದೂರವಿರಲು ನಾವು ಹೇಗೆ ಪ್ರಯತ್ನಿಸುತ್ತೇವೆ ಎಂಬುದರ ಬಗ್ಗೆ ತಿಳಿದಿರಬಹುದು. ಆದಾಗ್ಯೂ, ಕಪ್ಪು ದಾರವನ್ನು ಧರಿಸಲು ನೆನಪಿನಲ್ಲಿಡಬೇಕಾದ ಕೆಲವು ಪ್ರಮುಖ ನಿಯಮಗಳಿವು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಮಕ್ಕಳು (Children) ತುಂಬಾನೇ ಕಿರಿಕಿರಿ ಮಾಡುತ್ತಾ ಇದ್ದರೆ ಮತ್ತು ಊಟ ಮಾಡದೆ ತುಂಬಾನೇ ಹಠ ಮಾಡುತ್ತಿದ್ದರೆ ಬಹುತೇಕ ಪೋಷಕರು (Parents) ಊರಲ್ಲಿರುವ ಗುರುಗಳ ಹತ್ತಿರ ಅಥವಾ ದೇವಾಲಯಕ್ಕೆ ಹೋಗಿ ಒಂದು ಕಪ್ಪು ದಾರವನ್ನು (Black Thread) ಕಟ್ಟಿಸಿಕೊಂಡು ಬರುವುದನ್ನು ನಾವೆಲ್ಲಾ ಸಾಮಾನ್ಯವಾಗಿ ನೋಡಿರುತ್ತೇವೆ. ಈ ಕಪ್ಪು ದಾರವನ್ನು ಕೇವಲ ಚಿಕ್ಕ ಮಕ್ಕಳು ಅಲ್ಲದೆ ದೊಡ್ಡವರು ಸಹ ಹಾಕಿಕೊಳ್ಳುವುದನ್ನು ನಾವು ನೋಡುತ್ತೇವೆ. ಹೌದು.. ಕೆಲವರು ಈ ಕಪ್ಪು ದಾರವನ್ನು ತಮ್ಮ ಮಣಿಕಟ್ಟಿಗೆ ಕಟ್ಟಿಕೊಂಡರೆ, ಇನ್ನೂ ಕೆಲವರು ತಮ್ಮ ಕಾಲುಗಳಲ್ಲಿ (Legs) ಪಾದದ ಸ್ವಲ್ಪ ಮೇಲೆ ಕಟ್ಟಿ ಕೊಳ್ಳುತ್ತಾರೆ. ಸಾಮಾನ್ಯವಾಗಿ ಧರಿಸುವ ಈ ಕಪ್ಪು ದಾರವು ದುಷ್ಟ ಕಣ್ಣುಗಳಿಂದ ರಕ್ಷಣೆಯನ್ನು ಪಡೆಯಲು ಕಟ್ಟಿಸಲಾಗುತ್ತದೆ ಅಥವಾ ಕಟ್ಟಿಕೊಳ್ಳಲಾಗುತ್ತದೆ ಎಂದು ಹೇಳುತ್ತಾರೆ.

ಕಪ್ಪು ದಾರ ಕಟ್ಟುವುದರಿಂದಾಗುವ ಪ್ರಯೋಜನಗಳೇನು?
ತುಂಬಾನೇ ಒಂದು ಸಾಮಾನ್ಯವಾದ ನಂಬಿಕೆಯ ಪ್ರಕಾರ, ಕಪ್ಪು ದಾರವು ಮೂಲತಃ ನಕಾರಾತ್ಮಕ ಶಕ್ತಿಗಳಿಂದ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ದುಷ್ಟ ಕಣ್ಣುಗಳಿಂದ ತಮ್ಮನ್ನು ರಕ್ಷಿಸುತ್ತದೆ. ನೀವು ಚಿಕ್ಕವರಿದ್ದಾಗ ಮತ್ತು ನಿಮ್ಮ ತಾಯಿ ಮೊದಲು ನಿಮ್ಮ ಕಾಲಿಗೆ ಕಪ್ಪು ದಾರದಲ್ಲಿ ಕಾಲ್ಗೆಜ್ಜೆಯನ್ನು ಹಾಕಿ ಕಟ್ಟಿದ್ದು, ನಿಮಗೆ ನೆನಪಿರಬೇಕಲ್ಲವೇ? ಅದು ನಿಮ್ಮನ್ನು ಆಗ ರಕ್ಷಿಸಲು ಮೂಲ ಕಾರಣವಾಗಿತ್ತು ಎಂದು ಹೇಳಬಹುದು. ಎಲ್ಲಾ ದುಷ್ಟ ಶಕ್ತಿಗಳಿಂದ ನನ್ನ ಮಗು ದೂರವಿರಲಿ ಅಂತ ಈ ಕಪ್ಪು ದಾರಗಳನ್ನು ಹಾಕುತ್ತಿದ್ದರು ಅಂತ ಹೇಳಬಹುದು.

ಈ ಕಪ್ಪು ದಾರವು ನಮ್ಮನ್ನು ದುಷ್ಟ ನೋಟಗಳಿಂದ ರಕ್ಷಿಸುತ್ತದೆ ಎಂಬ ನಂಬಿಕೆಯಿದೆ. ನೀವು ಒಂದು ವಿಶಿಷ್ಟ ಭಾರತೀಯ ಕುಟುಂಬದಲ್ಲಿ ಬೆಳೆದಿದ್ದರೆ, ಬಹುಶಃ ನಿಮಗೆ ಈ ‘ಬುರಿ ನಜರ್’ ಎಂಬ ಪರಿಕಲ್ಪನೆ ಮತ್ತು ದುಷ್ಟ ಕಣ್ಣಿನಿಂದ ದೂರವಿರಲು ನಾವು ಹೇಗೆ ಪ್ರಯತ್ನಿಸುತ್ತೇವೆ ಎಂಬುದರ ಬಗ್ಗೆ ತಿಳಿದಿರಬಹುದು.

ಇದನ್ನೂ ಓದಿ: Woman: ಡುಮ್ಮಿಎಂದು ಹೀಯಾಳಿಸಿಕೊಂಡವಳು ಮಿಸ್ ಇಂಡಿಯಾ ವರ್ಲ್ಡ್ ಇಂಟರ್ನ್ಯಾಷನಲ್ ಗೆದ್ದ ಕಥೆ!

ಇದರ ಪರಿಣಾಮವಾಗಿ, ನಿಮ್ಮ ಕಾಲು ಅಥವಾ ಮಣಿಕಟ್ಟಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಆ ನಕಾರಾತ್ಮಕ ಶಕ್ತಿಯನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ, ಅದೇ ಸಮಯದಲ್ಲಿ ಒಬ್ಬ ವ್ಯಕ್ತಿಯು ನಿಮ್ಮ ಮೇಲೆ ಪ್ರಯತ್ನಿಸಬಹುದಾದ ಕಪ್ಪು ಮಾಂತ್ರಿಕತೆಯ ದುಷ್ಪರಿಣಾಮಗಳಿಂದಲೂ ಸಹ ನಿಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ಆದಾಗ್ಯೂ, ಕಪ್ಪು ದಾರವನ್ನು ಧರಿಸಲು ನೆನಪಿನಲ್ಲಿಡಬೇಕಾದ ಕೆಲವು ಪ್ರಮುಖ ನಿಯಮಗಳಿವೆ:

  • ಯಾವಾಗಲೂ ನೀವು ಕಟ್ಟಿಕೊಳ್ಳುವಂತಹ ಆ ಕಪ್ಪು ಬಣ್ಣದ ದಾರವು ನಿಮ್ಮ ದೇಹವನ್ನು ಸ್ಪರ್ಶಿಸಬೇಕು.

  • ಈ ಕಪ್ಪು ದಾರವನ್ನು ಧರಿಸಿದ ನಂತರ, ನೀವು ದೈಹಿಕ, ಆರೋಗ್ಯ ಅಥವಾ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದನ್ನು ತೆಗೆದು ಹಾಕಿರಿ.

  • ಹಿಂದೂ ಸಂಪ್ರದಾಯಗಳ ಪ್ರಕಾರ, ಮಹಿಳೆಯು ತನ್ನ ಎಡ ಮಣಿಕಟ್ಟಿಗೆ ಕಪ್ಪು ದಾರವನ್ನು ಧರಿಸಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

  • ನೀವು ನಿಮ್ಮ ಕಪ್ಪು ದಾರ ಸಡಿಲವಾಗಿರುವುದರಿಂದ ಕಾಲ ಕಾಲಕ್ಕೆ ಬದಲಾಯಿಸಿದರೂ, ಅದು ಒಳ್ಳೆಯದೇ ಆಗಿರುತ್ತದೆ.

  • ಕಪ್ಪು ದಾರವನ್ನು ಧರಿಸುವುದನ್ನು ನೀವು ನಂಬದಿದ್ದರೆ, ನೀವು ಪ್ರತಿ ಶನಿವಾರ ಸಂಜೆ ಶನಿಯ ವೈದಿಕ ಮಂತ್ರಗಳನ್ನು ಪಠಿಸಬೇಕು.


ಇದನ್ನೂ ಓದಿ:  Daughter: ನಿಮ್ಮ ಮಗಳಿಗೆ ಈ 3 ವಿಷಯಗಳ ಬಗ್ಗೆ ಹೇಳಿ, ಜೀವನದಲ್ಲಿ ಧೈರ್ಯದಿಂದಿರಲು ಇದು ಸ್ಫೂರ್ತಿ ನೀಡುತ್ತೆ

  • ನವಗ್ರಹಗಳಲ್ಲಿ, ಕಪ್ಪು ಬಣ್ಣವನ್ನು ಶನಿದೇವನ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಶನಿಯನ್ನು ಕರ್ಮದ ಅಂಶವೆಂದು ಹೇಳಲಾಗುತ್ತದೆ, ಆದ್ದರಿಂದ ಕಪ್ಪು ದಾರವನ್ನು ಧರಿಸಿದ ನಂತರ, ಒಬ್ಬರು ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು.

  • ನಿಮ್ಮ ಬಲ ಅಥವಾ ಎಡ ಮಣಿಕಟ್ಟಿಗೆ ಕಪ್ಪು ದಾರವನ್ನು ಧರಿಸುವುದು ಶುಭಕರವಾಗಿದೆ.

  • ನೀವು ಕಪ್ಪು ದಾರವನ್ನು ಧರಿಸಿದಾಗ ಶಾಂತಿಯನ್ನು ಕಾಪಾಡಿಕೊಳ್ಳಲು ನೀವು ಪ್ರತಿದಿನ ಗಾಯತ್ರಿ ಮಂತ್ರವನ್ನು ಪಠಿಸಬೇಕು.

  • ನೀವು ಶನಿವಾರ ಕಪ್ಪು ದಾರವನ್ನು ಕಟ್ಟಿಕೊಳ್ಳಲು ಸಾಧ್ಯವಾದರೆ, ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

  • ನೀವು ಧರಿಸುವ ಮೊದಲು ಕಪ್ಪು ದಾರವು ಕಟ್ಟು ಗಂಟುಗಳನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ.

Published by:Ashwini Prabhu
First published: