Vastu Tips: ನಿಮ್ಮ ಮನೆ ಸದಾ ಸಂತೋಷದಿಂದ ಕೂಡಿರಬೇಕೇ? ಹಾಗಿದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ

ಭಾರತೀಯ ವೈದಿಕ ವ್ಯವಸ್ಥೆಯಾಗಿದ್ದು, ಇದು ನಿರ್ಮಿತ ಪರಿಸರದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ರಮವನ್ನು ಖಾತ್ರಿಪಡಿಸುತ್ತದೆ. ಆದ್ದರಿಂದ, ನೀವು ಕೆಟ್ಟ ಶಕ್ತಿಯನ್ನು ಮನೆಯಿಂದ ಹೊರ ಹಾಕಲು ಮತ್ತು ನಿಮ್ಮ ಮನೆಗೆ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು ಬಯಸುವ ಮನೆ ಮಾಲೀಕರಾಗಿದ್ದರೆ, ನೀವು ತೊಡೆದು ಹಾಕಬೇಕಾದ ವಿಷಯಗಳ ತ್ವರಿತ ಪಟ್ಟಿ ಇಲ್ಲಿದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಎಲ್ಲರಿಗೂ ತಾವು ಇರುವ ಮನೆ ಸದಾ ನಂದ ಗೋಕುಲದಂತೆ ಸಂತೋಷದಿಂದ (Happiness) ತುಂಬಿರಬೇಕು ಅಂತ ಅನ್ನಿಸುವುದು ಸಹಜ. ಆದರೆ ಏನು ಮಾಡೋದು, ಈ ತೊಂದರೆ ತಾಪತ್ರಯಗಳು ನಮ್ಮ ಬದುಕಿಗೆ ಅಂಟಿಕೊಂಡಿರುವಂತೆ ಕೆಲವೊಮ್ಮೆ ಒಂದರ ನಂತರ ಇನ್ನೊಂದು ಎಂಬಂತೆ ಸಮಸ್ಯೆಗಳು (Problems) ಎದುರಾಗುತ್ತಲೇ ಹೋಗುತ್ತವೆ. ಆ ತೊಂದರೆಗಳಿಗೆ ಬೇಸತ್ತ ಮನೆಯವರಿಗೆ ಕಿರಿಕಿರಿ ಎಂದೆನಿಸುವುದು ಸಹ ಸಹಜವೇ ಆಗಿದೆ. ಆದರೆ ಈ ಎಲ್ಲಾ ತೊಂದರೆಗಳ ಮಧ್ಯೆ ನಾವು ಖುಷಿಯಿಂದ ಇರಲು ಬದುಕಲು ಸಾಧ್ಯವೇ ಇಲ್ಲವೇ ಅಂತ ನೀವು ಯೋಚಿಸಬಹುದು. ಬಹುತೇಕರು ಈ ಮನೆಯಲ್ಲಿರುವ (Home) ಅಶಾಂತಿಗೆ ಮುಖ್ಯವಾದ ಕಾರಣ ತಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ (Negative Energy) ಅಂತ ನಂಬುತ್ತಾರೆ.

ಈ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರಗೆ ಓಡಿಸುವುದಾದರೂ ಹೇಗೆ ಅಂತ ಅನೇಕರು ಅನೇಕರ ಬಳಿ ಸಲಹೆಗಳನ್ನು ಕೇಳಿರುತ್ತಾರೆ ಮತ್ತು ಎಲ್ಲವನ್ನೂ ಪ್ರಯತ್ನಿಸಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ವಾಸ್ತುಶಾಸ್ತ್ರ ದ ಪ್ರಾಮುಖ್ಯತೆ 
ಕೆಲವು ಈ ರೀತಿಯ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರದೂಡಿಸುವ ಶಕ್ತಿ ವಾಸ್ತುಶಾಸ್ತ್ರ ದಲ್ಲಿದೆ ಅಂತ ಅನೇಕರು ನಂಬುತ್ತಾರೆ. ಅದಕ್ಕೆ ಅನೇಕರು ತಮ್ಮ ಮನೆಯನ್ನು ಕಟ್ಟಿಸಿಕೊಳ್ಳುವಾಗ ಎಲ್ಲವೂ ವಾಸ್ತುಶಾಸ್ತ್ರದ ಪ್ರಕಾರವಾಗಿ ಕಟ್ಟಿಸಿಕೊಳ್ಳುವುದನ್ನು ನಾವು ನೋಡಬಹುದು. ಯಾವ ಯಾವ ಕೋಣೆ ಯಾವ ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು, ಮನೆಯಲ್ಲಿ ಯಾವ ರೀತಿಯ ಸಾಮಾನುಗಳು ಇರಬಾರದು ಅಂತ ಅನೇಕ ರೀತಿಯ ಸಲಹೆಗಳನ್ನು ನಾವು ವಾಸ್ತುಶಾಸ್ತ್ರದಲ್ಲಿ ಪಡೆಯಬಹುದು.

ಸಕಾರಾತ್ಮಕತೆಯು ಸಂತೋಷದ ಕೀಲಿಕೈಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಮತ್ತು ನಾವು ಅದನ್ನು ಎಲ್ಲಿ ಕಂಡು ಕೊಳ್ಳುತ್ತೇವೆ ಅಂತ ಕೇಳಿದರೆ ಬಹುತೇಕರು ನೀಡುವ ಉತ್ತರ “ನಮ್ಮ ಮನೆ” ಅಂತಾನೆ ಆಗಿರುತ್ತದೆ. ದಿನದಲ್ಲಿ ನಾವು ಎಷ್ಟೇ ಕೆಲಸ ಮಾಡಿ ಆಯಾಸಗೊಂಡಿದ್ದರೂ ಸಹ ಸಂಜೆ ನಮ್ಮ ಮನೆಗೆ ನಾವು ಮರಳಿ ಬಂದು ಕೈಕಾಲು ಮುಖ ತೊಳೆದುಕೊಂಡು ಒಂದು ಕಪ್ ಬಿಸಿ ಬಿಸಿ ಚಹಾ ಅಥವಾ ಕಾಫಿ ಕುಡಿದರೆ ಆ ಇಡೀ ದಿನದ ಆಯಾಸ ಒಂದೇ ಕ್ಷಣದಲ್ಲಿ ಮಾಯವಾಗುತ್ತದೆ. ಇದಕ್ಕೆ ಕಾರಣ ಎಂದರೆ ನಮ್ಮ ಮನೆಯಲ್ಲಿರುವ ಸಂತೋಷದ ವಾತಾವರಣ ಎಂದು ಹೇಳಬಹುದು.

ಕೆಲವೊಮ್ಮೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಅನೇಕ ರೂಪಗಳಲ್ಲಿ ನಿಮ್ಮ ಆರೋಗ್ಯ, ಸಂಬಂಧಗಳು ಮತ್ತು ಆದಾಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ವಾಸಸ್ಥಳದಲ್ಲಿ ಕೆಟ್ಟ ಶಕ್ತಿಯ ಉಪಸ್ಥಿತಿಯನ್ನು ಸಂಕೇತಿಸುವ ನಿರ್ದಿಷ್ಟ ಅಭಿವ್ಯಕ್ತಿಗಳ ಬಗ್ಗೆ ಪ್ರಜ್ಞೆ ಮತ್ತು ಜಾಗರೂಕರಾಗಿರುವುದು ಮುಖ್ಯ. ದೊಡ್ಡ ಪ್ರಶ್ನೆಯೆಂದರೆ: ನೀವು ನಕಾರಾತ್ಮಕ ಶಕ್ತಿಗಳನ್ನು ಹೇಗೆ ಗುರುತಿಸುತ್ತೀರಿ ಎನ್ನುವುದು ಆಗಿದೆ.

ಇದನ್ನೂ ಓದಿ: Sleeping Time: ನೀವು ಮಲಗುವ ವೇಳೆಗೂ ನಿಮ್ಮ ರಾಶಿ ಚಕ್ರಗಳಿಗೂ ಲಿಂಕ್ ಇದ್ಯಂತೆ ನೋಡಿ!

ಇದಕ್ಕೆ ಉತ್ತರ ವಾಸ್ತುಶಾಸ್ತ್ರದ ಮೂಲಕ ದೊರೆಯುತ್ತದೆ. ಇದು ಭಾರತೀಯ ವೈದಿಕ ವ್ಯವಸ್ಥೆಯಾಗಿದ್ದು, ಇದು ನಿರ್ಮಿತ ಪರಿಸರದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ರಮವನ್ನು ಖಾತ್ರಿಪಡಿಸುತ್ತದೆ. ಆದ್ದರಿಂದ, ನೀವು ಕೆಟ್ಟ ಶಕ್ತಿಯನ್ನು ಮನೆಯಿಂದ ಹೊರ ಹಾಕಲು ಮತ್ತು ನಿಮ್ಮ ಮನೆಗೆ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು ಬಯಸುವ ಮನೆ ಮಾಲೀಕರಾಗಿದ್ದರೆ, ನೀವು ತೊಡೆದು ಹಾಕಬೇಕಾದ ವಿಷಯಗಳ ತ್ವರಿತ ಪಟ್ಟಿ ಇಲ್ಲಿದೆ ನೋಡಿ.

 • ಕೊಳಕಾದ ಮತ್ತು ಒಡೆದ ಕನ್ನಡಿಗಳನ್ನು ಮನೆಯಿಂದ ತೆಗೆದುಹಾಕಿ
  ವಾಸ್ತುಶಾಸ್ತ್ರದ ಪ್ರಕಾರ ಈ ಕೊಳಕಾಗಿರುವ ಮತ್ತು ಒಡೆದು ಹೋಗಿರುವ, ಮುರಿದ ಹೋಗಿರುವ ಕನ್ನಡಿಗಳನ್ನು ಇಟ್ಟುಕೊಂಡಿರುವುದರಿಂದ ಇತರ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧಗಳಿಗೆ ಗಮನಾರ್ಹ ಹಾನಿಯನ್ನುಂಟು ಮಾಡಬಹುದು. ಆದ್ದರಿಂದ, ಈ ರೀತಿಯ ಕನ್ನಡಿಗಳನ್ನು ಮೊದಲು ಮನೆಯಿಂದ ತೆಗೆದು ಹಾಕುವುದು ಮತ್ತು ಕನ್ನಡಿಯನ್ನು ಸ್ವಚ್ಛವಾಗಿಡುವುದು ಅತ್ಯಗತ್ಯವಾಗಿದೆ. ಹೊರಗಿನಿಂದ ಗೋಚರಿಸುವ ಮುಂಭಾಗದ ಗೋಡೆಯ ಮೇಲೆ ಪೀನ ದರ್ಪಣವನ್ನು ನೇತು ಹಾಕುವುದು ನಕಾರಾತ್ಮಕ ಶಕ್ತಿಯನ್ನು ಹೊರಹಾಕುವ ಮತ್ತೊಂದು ತಂತ್ರವಾಗಿದೆ. • ಸತ್ತ ಪ್ರಾಣಿಗಳ ಚರ್ಮ, ಕೊಂಬುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ
  ವಾಸ್ತುಶಾಸ್ತ್ರದ ಪ್ರಕಾರ, ಯಾವುದೇ ಅಸ್ವಾಭಾವಿಕ ವಸ್ತುವನ್ನು ಮನೆಯಲ್ಲಿ ಇಡಬಾರದು. ಐವೊರಿಗಳು, ಚರ್ಮಗಳು, ಚಿಪ್ಪುಗಳು, ಬಸವನ ಹುಳುಗಳು, ಕೊಂಬುಗಳು ಅಥವಾ ಟ್ಯಾಕ್ಸಿಡರ್ಮೈಸ್ಡ್ ಮತ್ತು ಎಂಬಾಮ್ಡ್ ಪ್ರಭೇದಗಳು ಸತ್ತ ಪ್ರಾಣಿಗಳ ಭಾಗಗಳೇ ಇದಕ್ಕೆ ಉದಾಹರಣೆಗಳಾಗಿವೆ, ಅವು ಖಂಡಿತವಾಗಿಯೂ ಮನೆಗಳಿಗೆ ದುರಾದೃಷ್ಟವನ್ನು ತರುತ್ತವೆ. • ಸತ್ತ ಮತ್ತು ಸ್ಪೈಕಿ ಸಸ್ಯಗಳು ಮನೆಯಲ್ಲಿರಬಾರದು
  ಕ್ಯಾಕ್ಟಿ ಮತ್ತು ಇತರ ಮುಳ್ಳಿನ ಸಸ್ಯಗಳು ಮನೆಯಲ್ಲಿ ವಾದಗಳು ಮತ್ತು ಅವ್ಯವಸ್ಥೆಯನ್ನು ಬೆಳೆಸುತ್ತವೆ ಮತ್ತು ಪ್ರಣಯ ಸಂಬಂಧಗಳನ್ನು ಹಾನಿಗೊಳಿಸುತ್ತವೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಅವು ಆರ್ಥಿಕ ತೊಂದರೆಗಳನ್ನು ಉಂಟು ಮಾಡುವ ಸಾಮರ್ಥ್ಯವನ್ನು ಸಹ ಹೊಂದಿರುತ್ತವೆ. ಲಿವಿಂಗ್ ರೂಮ್, ಮಲಗುವ ಕೋಣೆ ಅಥವಾ ನಿಮ್ಮ ಮನೆಯ ಮುಖ್ಯ ದ್ವಾರದ ಪ್ರವೇಶವು ಅಂತಹ ಸಸ್ಯಗಳನ್ನು ಹೊಂದಿರಬಾರದು. ಸತ್ತ ಹೂವುಗಳನ್ನು ಮನೆಯೊಳಗೆ ಸಂಗ್ರಹಿಸಬಾರದು. ಈ ನಿರ್ಜೀವ ಹೂವುಗಳು ಮತ್ತು ಸಸ್ಯಗಳು ಪರಿಸರದಲ್ಲಿನ ಶಕ್ತಿಯ ಹರಿವಿಗೆ ಅಡ್ಡಿಪಡಿಸುತ್ತವೆ ಮತ್ತು ಮನೆಯಲ್ಲಿನ ಶಕ್ತಿಯ ಸಮತೋಲನವನ್ನು ಹಾನಿಗೊಳಿಸುತ್ತವೆ.


ಇದನ್ನೂ ಓದಿ: Money Mantra: ಈ ರಾಶಿಯವರು ಇಂದು ಮೈಗಳ್ಳತನ ಬಿಟ್ರೆ ಒಂದೇ ದಿನ ಲಕ್ಷ ದುಡಿಯಬಹುದು! ಇನ್ಯಾಕ್​ ತಡ ಶುರು ಮಾಡಿ

ಇದಲ್ಲದೆ, ಕಾರ್ನೇಷನ್ ಗಳಂತಹ ಕೆಲವು ಹೂವುಗಳನ್ನು ಎಂದಿಗೂ ಮನೆಯ ಒಳಗೆ ಇಡಬಾರದು. ಅವುಗಳು ಕೆಟ್ಟ ಅದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ಆದರೆ ನೀವು ನಿಮ್ಮ ತೋಟದಲ್ಲಿ ಕಾರ್ನೇಷನ್ ಗಳನ್ನು ನೆಡಬಹುದು.

 • ಕೆಟ್ಟು ನಿಂತಿರುವ ಗಡಿಯಾರಗಳನ್ನು ಮನೆಯಲ್ಲಿ ಇರಿಸಿಕೊಳ್ಳಬೇಡಿ
  ಮುರಿದ ಅಥವಾ ಕೆಟ್ಟು ನಿಂತ ಗಡಿಯಾರಗಳನ್ನು ವಾಸ್ತುಶಾಸ್ತ್ರದ ಪ್ರಕಾರ ಕೂಡಲೇ ರಿಪೇರಿ ಮಾಡಬೇಕು ಅಥವಾ ಮನೆಯಿಂದ ಅವುಗಳನ್ನು ತೆಗೆದು ಹಾಕಬೇಕು. ನಿಂತ ಗಡಿಯಾರವು ಜೀವನದಲ್ಲಿ ಆಲಸ್ಯ ಮತ್ತು ಅಸ್ಥಿರತೆಯನ್ನು ಸೂಚಿಸುತ್ತದೆ. ಇದು ನಿಮ್ಮ ಸಂಬಂಧಗಳು, ವ್ಯವಹಾರ ಅಥವಾ ಹಣಕಾಸು ಪ್ರಗತಿಯಿಂದ ನಿಮ್ಮನ್ನು ನಿರ್ಬಂಧಿಸಬಹುದು. • ದೋಷಪೂರಿತ ಪಾತ್ರೆಗಳು ಇರಲೇಬಾರದು
  ಹಾನಿಗೊಳಗಾದ, ಬಿರುಕು ಬಿಟ್ಟ ಅಥವಾ ಕಲೆಯಾದ ಪಿಂಗಾಣಿಗಳು, ಟೇಬಲ್ ಮೇಲೆ ಹಾಕುವ ಬಟ್ಟೆಗಳು, ಕನ್ನಡಕಗಳು ಮತ್ತು ಅಂತಹ ಇತರ ವಸ್ತುಗಳನ್ನು ಆಗಾಗ್ಗೆ ಸಂಗ್ರಹಣೆಯಲ್ಲಿ ಇಡಲಾಗುತ್ತದೆ ಮತ್ತು ನಂತರ ಮನೆಗಳಲ್ಲಿ ಇವುಗಳನ್ನು ನಿರ್ಲಕ್ಷಿಸಲಾಗುತ್ತದೆ. ನಿಮ್ಮಲ್ಲಿರುವ ಎಲ್ಲಾ ಪಾತ್ರೆಗಳು ಅತ್ಯುತ್ತಮ ಸ್ಥಿತಿಯಲ್ಲಿವೆ ಎಂಬುದನ್ನು ನೋಡಿಕೊಳ್ಳಿರಿ. ಆಕಸ್ಮಿಕವಾಗಿ ಏನಾದರೂ ಮುರಿದರೆ, ದುಃಖ ಮತ್ತು ನಕಾರಾತ್ಮಕತೆಯನ್ನು ತಪ್ಪಿಸಲು ಅದನ್ನು ತೊಡೆದು ಹಾಕುವುದು ಉತ್ತಮ. • ವಿಲಕ್ಷಣ ಕಲಾಕೃತಿ ಮತ್ತು ಪ್ರಾಚೀನ ವಸ್ತುಗಳನ್ನು ಮನೆಯಿಂದ ತೆರವುಗೊಳಿಸಿ
  ಕುಟುಂಬದ ಪೈಪೋಟಿ ಅಥವಾ ದುರಂತವನ್ನು ಚಿತ್ರಿಸುವ ಕಲಾಕೃತಿಗಳಿದ್ದರೆ ನಕಾರಾತ್ಮಕ ಶಕ್ತಿಗಳು ಹೆಚ್ಚು ಪ್ರಮುಖವಾಗುತ್ತವೆ. ಅಂತಹ ವರ್ಣಚಿತ್ರಗಳನ್ನು ತಕ್ಷಣವೇ ಮನೆಯಿಂದ ತೆಗೆದು ಹಾಕುವುದು ಒಳ್ಳೆಯದು.


ನಕಾರಾತ್ಮಕತೆಯನ್ನು ಮನೆಯಿಂದ ತೆಗೆದು ಹಾಕಲು ಕೆಲವು ಸಲಹೆಗಳು

 • ಮನೆಯನ್ನು ಸ್ವಚ್ಚವಾಗಿರಿಸಿಕೊಳ್ಳುವುದು
  ಭಾರತೀಯ ಸಂಪ್ರದಾಯದ ಪ್ರಕಾರ, ಲಕ್ಷ್ಮಿ ದೇವಿಯು ಅಚ್ಚುಕಟ್ಟಾದ ಮತ್ತು ಸ್ವಚ್ಛವಾದ ಮನೆಯಲ್ಲಿ ಉಳಿಯಲು ಬಯಸುತ್ತಾಳೆ ಎಂದು ನಂಬಲಾಗಿದೆ. ಉತ್ತಮ ಪರಿಸರದಲ್ಲಿ ವಾಸಿಸುವುದು ರೋಗಗಳು ಮತ್ತು ಖಿನ್ನತೆಯನ್ನು ತಪ್ಪಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. • ವಿಂಡ್ ಚೈಮ್ ಗಳನ್ನು ಮನೆಯಲ್ಲಿ ಹಾಕಿರಿ
  ಮನೆಯಲ್ಲಿರುವ ವಿಂಡ್ ಚೈಮ್ ಗಳು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತವೆ. ಟಿಂಕಿಂಗ್ ಚೈಮ್ ಗಳು ನಕಾರಾತ್ಮಕ ಶಕ್ತಿಯ ಮಾದರಿಯನ್ನು ಅಡ್ಡಿಪಡಿಸಲು ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಒಳ್ಳೆಯ ಸಂಗೀತ ಮನೆಯಲ್ಲಿ ಸದಾ ಕೇಳಲು ಸಿಗುತ್ತದೆ.

 • ಸುಗಂಧ ಭರಿತ ಹೊಗೆಯನ್ನು ಹಾಕಿರಿ ಮತ್ತು ಅಗರಬತ್ತಿಗಳನ್ನು ಹಚ್ಚಿ
  ಸುಗಂಧಭರಿತ ಹೊಗೆ ಬಹಳ ಹಿಂದಿನಿಂದಲೂ ಆಧ್ಯಾತ್ಮಿಕ ಮತ್ತು ಧ್ಯಾನದ ಅಭ್ಯಾಸವಾಗಿದೆ. ಮನೆಯಿಂದ ನಕಾರಾತ್ಮಕತೆಯನ್ನು ತೆಗೆದು ಹಾಕಲು ಲಭ್ಯವಿರುವ ಸರಳ ವಿಧಾನಗಳಲ್ಲಿ ಇದು ಒಂದಾಗಿದೆ. ಇದು ಮನೆಯಲ್ಲಿರುವ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರಶಾಂತವಾದ ವಾತಾವರಣವನ್ನು ಬೆಳೆಸುವ ಸಾಮರ್ಥ್ಯದಿಂದಾಗಿ, ನಾಗ ಚಂಪಾವನ್ನು ಮನೆಯಲ್ಲಿ ಧ್ಯಾನಕ್ಕಾಗಿ ಅತ್ಯುತ್ತಮವಾಗಿ ಬಳಸಲಾಗುತ್ತದೆ.


ಇದನ್ನೂ ಓದಿ: Vastu Tips: ಅಡುಗೆ ಮನೆಯಲ್ಲಿ ಯಾವ ವಸ್ತುಗಳು ಎಲ್ಲಿರಬೇಕು ಗೊತ್ತಾ?

 • ಉಪ್ಪನ್ನು ಬಳಸಿ
  ಸಮುದ್ರದ ಉಪ್ಪು ನಿಮ್ಮ ಮನೆಯ ಎಲ್ಲಾ ಕೆಟ್ಟ ಶಕ್ತಿಯನ್ನು ತಟಸ್ಥಗೊಳಿಸುತ್ತದೆ, ಪ್ರತಿ ಕೋಣೆಯಲ್ಲಿ ಸಮುದ್ರದ ಉಪ್ಪಿನ ಭಕ್ಷ್ಯವನ್ನು ಇರಿಸಿ. ಇದಲ್ಲದೆ, ನೀವು ಸಮುದ್ರದ ಉಪ್ಪಿನ ಬಂಡೆಗಳನ್ನು ಮೂಲೆಗಳಲ್ಲಿ ಇಡಬಹುದು. • ಹರೆದ ಬಟ್ಟೆಗಳನ್ನು ಹಾಕಿಕೊಳ್ಳಬೇಡಿ
  ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆಗಳು ನಮ್ಮ ಶಾರೀರಿಕ, ಭಾವನಾತ್ಮಕ ಮತ್ತು ಆತ್ಮಿಕ ಯೋಗಕ್ಷೇಮಕ್ಕೆ ಅಡ್ಡಿಯುಂಟು ಮಾಡುವ ಮೂಲಕ ಸಾಕಷ್ಟು ಶಕ್ತಿಯನ್ನು ಉಳಿಸಿಕೊಳ್ಳುತ್ತವೆ. ನೀವು ಹರೆದಂತಹ ಬಟ್ಟೆಗಳನ್ನು ಧರಿಸಿದರೆ ಮತ್ತು ನಿಮ್ಮ ಸುತ್ತಲೂ ಅವ್ಯವಸ್ಥೆ ಇದ್ದರೆ ನೀವು ದಣಿದಿರಬಹುದು ಮತ್ತು ಕೋಪಗೊಳ್ಳಬಹುದು. • ಈ ಬಣ್ಣಗಳನ್ನು ಬಳಸಿ
  ಬಣ್ಣಗಳು ಯಾವಾಗಲೂ ಮನೆಯಲ್ಲಿ ನಾವು ಅನುಭವಿಸುವ ಶಕ್ತಿಯ ಮೇಲೆ ಬಲವಾದ ಪರಿಣಾಮ ಬೀರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ, ವಾಯುವ್ಯ, ಉತ್ತರ ಮತ್ತು ಈಶಾನ್ಯದಲ್ಲಿ ನೀಲಿ, ಆಗ್ನೇಯದಲ್ಲಿ ಕಿತ್ತಳೆ, ದಕ್ಷಿಣದಲ್ಲಿ ಕೆಂಪು ಮತ್ತು ನೈಋತ್ಯದಲ್ಲಿ ಹಳದಿ ಬಣ್ಣಗಳು ಸೂಕ್ತ ಬಣ್ಣಗಳಾಗಿವೆ. • ಧಾರ್ಮಿಕ ಸಂಕೇತಗಳನ್ನು ಇಡುವುದು
  ನಿಮ್ಮ ಮನೆಯಲ್ಲಿ ಧಾರ್ಮಿಕ ಶಿಲ್ಪಗಳು, ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸುವುದು ನಕಾರಾತ್ಮಕತೆಯನ್ನು ದೂರವಿಡಲು ಸಹಾಯ ಮಾಡುತ್ತದೆ. ಸಕಾರಾತ್ಮಕತೆಯನ್ನು ಸ್ವಾಗತಿಸಲು ಪ್ರಾರ್ಥನೆಗಳು ಮತ್ತು ಮಂತ್ರಗಳನ್ನು ಬಳಸಲು ಸಹ ಸೂಚಿಸಲಾಗಿದೆ.


ಇದನ್ನೂ ಓದಿ: Zodiac Signs: ಈ 3 ರಾಶಿಯವರು, ಜನರನ್ನು ತುಂಬಾ ಹಚ್ಕೊಂಡು ನೋವು ಅನುಭವಿಸ್ತಾರಂತೆ

ಈ ಶಕ್ತಿ-ಶುದ್ಧೀಕರಣ ವಿಧಾನಗಳು ಕೆಲವೊಮ್ಮೆ ಕಷ್ಟಕರವೆಂದು ನಿಮಗೆ ಅನ್ನಿಸಬಹುದು, ಆದರೆ ಶಾಂತಿಯುತ ಮತ್ತು ಸಂತೃಪ್ತ ಜೀವನವನ್ನು ನಡೆಸಲು ಅರ್ಹ ವಾಸ್ತು ಸಮಾಲೋಚಕರ ಸಹಾಯ ಮತ್ತು ಮಾರ್ಗದರ್ಶನದಿಂದ ನೀವು ಅವುಗಳನ್ನು ಕರಗತ ಮಾಡಿಕೊಳ್ಳಬಹುದು.
Published by:Ashwini Prabhu
First published: