Signs From Universe: ಬ್ರಹ್ಮಾಂಡದ ಧನಾತ್ಮಕ ಸಂಕೇತಗಳನ್ನು ಏಕೆ ನಿರ್ಲಕ್ಷಿಸಬಾರದು? ಇಲ್ಲಿದೆ ಉತ್ತರ

ಪ್ರಪಂಚವು ಅತ್ಯಂತ ನಿಗೂಢ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಅದೆಷ್ಟೋ ಅಂಶಗಳನ್ನು ನಮ್ಮ ನಿತ್ಯಜೀವನದಲ್ಲಿ ಹಲವಾರು ಸಂಕೇತಗಳ ಮೂಲಕ ಪರಿಚಯಿಸುತ್ತದೆ. ಅಂತೆಯೇ ಜೀವನದ ಕುರಿತಾದ ಸೂಚನೆ ಹಾಗೂ ಸಂದೇಶಗಳನ್ನು ನೀಡುತ್ತದೆ. ಇಂತಹ ಸಂಕೇತಗಳು ನಿಮಗುಂಟಾದಾಗ ಈ ಚಿಹ್ನೆಗಳನ್ನು ಕಡೆಗಣಿಸಬಾರದು ಏಕೆಂದರೆ ನಿಮ್ಮ ಜೀವನದ ಮಾರ್ಗದರ್ಶಕಳಾಗಿ ಕೆಲಸ ಮಾಡುತ್ತವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಪ್ರಪಂಚವು ಅತ್ಯಂತ ನಿಗೂಢ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಅದೆಷ್ಟೋ ಅಂಶಗಳನ್ನು ನಮ್ಮ ನಿತ್ಯಜೀವನದಲ್ಲಿ ಹಲವಾರು ಸಂಕೇತಗಳ (Signs) ಮೂಲಕ ಪರಿಚಯಿಸುತ್ತದೆ. ಅಂತೆಯೇ ಜೀವನದ ಕುರಿತಾದ ಸೂಚನೆ ಹಾಗೂ ಸಂದೇಶಗಳನ್ನು (Message) ನೀಡುತ್ತದೆ. ಇಂತಹ ಸಂಕೇತಗಳು ನಿಮಗುಂಟಾದಾಗ ಈ ಚಿಹ್ನೆಗಳನ್ನು ಕಡೆಗಣಿಸಬಾರದು ಏಕೆಂದರೆ ನಿಮ್ಮ ಜೀವನದ ಮಾರ್ಗದರ್ಶಕಳಾಗಿ (Life Guide) ಕೆಲಸ ಮಾಡುತ್ತವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಹಾಗಿದ್ದರೆ ಆ ಸಂಕೇತಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಬ್ರಹ್ಮಾಂಡವು (Universe) ಸೂಚಿಸುವ ಈ ಸಂಕೇತಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇಂತಹ ಸಂಕೇತಗಳನ್ನು ಮುಕ್ತ ಹೃದಯದಿಂದ ಸ್ವಾಗತಿಸಿ ಹಾಗೂ ಮೂಢನಂಬಿಕೆ ಎಂಬುದಾಗಿ ಪರಿಗಣಿಸದಿರಿ. ಇದುವರೆಗೆ ಎದುರುಗೊಳ್ಳದೇ ಇರುವ ಜೀವನದ ಬಹುಮುಖ್ಯ ಘಟ್ಟಗಳಿಗೆ ನಿಮ್ಮನ್ನು ಈ ಸಂಕೇತಗಳು ಕೊಂಡೊಯ್ಯಬಹುದು.


ನಿಮ್ಮ ಕೆಲಸವು ನಿಮಗೆ ಸಂತೋಷವನ್ನುಂಟು ಮಾಡುತ್ತಿದೆಯೇ?
ನೀವು ಇಷ್ಟಪಡುವದನ್ನು ಮಾಡುವಾಗ ನೀವು ಅಪಾರ ಸಂತೋಷವನ್ನು ಅನುಭವಿಸಬೇಕು. ನಿಮ್ಮ ಕೆಲಸವು ನಿಮಗೆ ಸಂತೋಷವನ್ನು ತರಬೇಕು ಮತ್ತು ನಿಮ್ಮ ಸಮಯವನ್ನು ಸಾರ್ಥಕಗೊಳಿಸಬೇಕು. ಆದರೆ ಈ ಕೆಲಸ ಒತ್ತಡವನ್ನುಂಟು ಮಾಡುತ್ತಿದ್ದರೆ ಇಲ್ಲವೇ ನಿಮ್ಮ ಮಾನಸಿಕ ಶಾಂತಿಗೆ ಭಂಗವನ್ನುಂಟು ಮಾಡುತ್ತಿದ್ದರೆ ಇದು ನಿಮಗೆ ಸೂಕ್ತವಾದುದಲ್ಲ ಎಂಬ ಸಂಕೇತವನ್ನು ಬ್ರಹ್ಮಾಂಡ ನೀಡುತ್ತದೆ.


ದೇಹದಲ್ಲಿ ಯಾತನೆ ಇದೆಯೇ?
ದೈಹಿಕ ನೋವನ್ನು ಅನುಭವಿಸುತ್ತಿರುವಾದ ದೇಹವು ಸಮರ್ಪಕವಾಗಿಲ್ಲ ಎಂಬ ಸಂಕೇತವನ್ನು ಬ್ರಹ್ಮಾಂಡ ನೀಡುತ್ತದೆ. ಕೆಲವು ಸಮಸ್ಯೆಗಳೊಂದಿಗೆ ದೇಹವು ಹೋರಾಡುತ್ತಿರಬಹುದು ಅದೇ ರೀತಿ ಹೆಚ್ಚಿನ ಒತ್ತಡ, ಆತಂಕ ಹಾಗೂ ಅತಿಯಾದ ಆಲೋಚನೆಗಳಿಂದ ನೀವು ಕಾಯಿಲೆಗಳನ್ನು ಎದುರಿಸುತ್ತಿರಬಹುದು. ಇದೆಲ್ಲವೂ ಬ್ರಹ್ಮಾಂಡ ಒದಗಿಸುತ್ತಿರುವ ಸಂಕೇತಗಳಾಗಿವೆ.


ಇದನ್ನೂ ಓದಿ:  Mobile Checking Lovers: ಈ 3 ರಾಶಿಯವರು ತುಂಬಾ ಅನುಮಾನಾಸ್ಪದರು! ಗುಟ್ಟಾಗಿ ಸಂಗಾತಿಯ ಫೋನ್ ಚೆಕ್ ಮಾಡುತ್ತಾರೆ

ಮನಸ್ಸು ಯಾವುದಾದರೂ ವಿಷಯದ ಬಗ್ಗೆ ಕೇಂದ್ರೀಕರಿಸುವುದು
ಹಾಡು, ಸನ್ನಿವೇಶ ಇಲ್ಲವೇ ಕನಸಿನ ಸುತ್ತು ನಿಮ್ಮ ಮನಸ್ಸು ಗಿರಕಿ ಹೊಡೆಯುತ್ತಿದೆ ಎಂದಾದಲ್ಲಿ ಬ್ರಹ್ಮಾಂಡವು ನಿಮಗೆ ಏನೋ ಸೂಚನೆಯನ್ನು ನೀಡುತ್ತಿದೆ ಎಂದರ್ಥವಾಗಿದೆ. ಧನಾತ್ಮಕ ಅಂಶಗಳು ನಿಮ್ಮ ಜೀವನದಲ್ಲಿ ನಡೆಯಲಿವೆ ಎಂಬ ಸೂಚನೆಯನ್ನು ಇದು ನೀಡುತ್ತದೆ.


ನಿಮ್ಮ ಆಂತರಿಕ ಸ್ವಭಾವ ಏನಾದರೂ ಸೂಚಿಸುತ್ತಿದೆಯೇ?
ನಿಮ್ಮ ಆಂತರಿಕ ಪ್ರವೃತ್ತಿ ಯಾವಾಗಲೂ ನಿಮಗೆ ಏನನ್ನಾದರೂ ಹೇಳುತ್ತದೆ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಇದು ನಿಮ್ಮನ್ನು ನಿರ್ದೇಶಿಸುತ್ತದೆ. ನೀವು ಸರಿಯಾದ ನಿರ್ಧಾರ ತಾಳಲು ಅಸಮರ್ಥರಾಗಿದ್ದಾಗ ಈ ಆಂತರಿಕ ಸ್ವಭಾವ ನಿಮಗೆ ಸಹಾಯ ಮಾಡುತ್ತದೆ. ಇದು ಬ್ರಹ್ಮಾಂಡದ ಸೂಚನೆಯೇ ಆಗಿದೆ.


ಇದನ್ನೂ ಓದಿ:  Numerology: ಯಾರಿಗೆ ಏನು ದಾನ ಮಾಡಿದರೆ ಏನು ಫಲ? ಇಲ್ಲಿದೆ ನೋಡಿ

ನಿಮ್ಮ ಸುತ್ತಲಿನ ಸ್ವಾಭಾವಿಕವಲ್ಲದ ಸನ್ನಿವೇಶಗಳು:
ನಿಮ್ಮ ಬಯಕೆಗಳನ್ನು ಕುರಿತು ನೀವು ಸರ್ವಶಕ್ತನನ್ನು ಪ್ರಾರ್ಥಿಸಿದಾಗ ನೀವು ಎಲ್ಲಿಂದಲಾದರೂ ಸಂಕೇತವನ್ನು ಸ್ವೀಕರಿಸುತ್ತೀರಿ. ಕಾಕತಾಳೀಯವಾಗಿ ಯಾರನ್ನಾದರೂ ಭೇಟಿಮಾಡುವುದು ಬಯಸಿದ ವಸ್ತುವನ್ನು ಪಡೆಯುವುದು ಈ ರೀತಿಯ ಸ್ವಾಭಾವಿಕವಲ್ಲದ ಸಂದರ್ಭಗಳಲ್ಲಿ ಬ್ರಹ್ಮಾಂಡವು ನಿಮಗೆ ಏನೋ ಧನಾತ್ಮಕವಾದ ಅಂಶವನ್ನು ಒದಗಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ


ನೀವು ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಿದ್ದೀರಿ:
ಬ್ರಹ್ಮಾಂಡವು ಸಾಕಷ್ಟು ಸಂಕೇತಗಳನ್ನು ಕಳುಹಿಸುತ್ತದೆ. ನೀವು ಹೋಗುತ್ತಿರುವ ದಾರಿ ತಪ್ಪಾಗಿದ್ದರೂ ನಿಮಗೆ ಸಂಕೇತಗಳು ದೊರೆಯುತ್ತವೆ. ಈ ಸಮಯದಲ್ಲಿ ಆದಷ್ಟು ಸರ್ವಶಕ್ತನನ್ನು ಪ್ರಾರ್ಥಿಸಿ ಹಾಗೂ ಸರಿಯಾದ ದಾರಿ ತನ್ನಿಂದ ತಾನೇ ತೆರೆಯುತ್ತದೆ.


Published by:Ashwini Prabhu
First published: