ಒಂದು ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ವಾಸ್ತು ಮಹತ್ವದ್ದು ಎಂದು ಹೇಳಲಾಗುತ್ತದೆ. ನಿಮ್ಮ ಮನೆಯಲ್ಲಿ ವಾಸ್ತು ಪ್ರಕಾರ (Vastu Shastra) ಸ್ವಲ್ಪ ಬದಲಾವಣೆ ಮಾಡಿಕೊಂಡರೂ ಅದು ಹೆಚ್ಚಿನ ಅದೃಷ್ಟವನ್ನು (Luck) ತಂದುಕೊಡುತ್ತದೆ. ಹಾಗಾಗಿ ನೀವೇನಾದರೂ ಮನೆಯಲ್ಲಿ (Home) ಒಂದಷ್ಟು ಬದಲಾವಣೆ ಮಾಡಬೇಕು ಎಂದುಕೊಂಡಿದ್ದರೆ ಇಲ್ಲಿ ಕೆಲವು ಪ್ರಮುಖ ವಾಸ್ತು ಸಲಹೆಗಳನ್ನು ನೀಡಲಾಗಿದೆ. ಈ ಮೂಲಕ ನಿಮ್ಮ ಮನೆಯಲ್ಲಿರೋ ನಕಾರಾತ್ಮಕ ಶಕ್ತಿಯನ್ನು (Negative Energy) ಹೋಗಲಾಡಿಸ್ಬಹುದು.
ಮುಂಬೈ ಮೂಲದ ವಾಸ್ತುಕರ್ ಮಾನಸಿ ಠಾಕೂರ್ ಅವರು ಈ ಪ್ರಾಚೀನ ಮಾನದಂಡಗಳ ಪ್ರಕಾರ ನಿರ್ಮಿಸದ ಮನೆಯಲ್ಲಿ ನೀವು ವಾಸಿಸುತ್ತಿದ್ದರೆ ಯಾವುದೇ ಚಿಂತೆ ಮಾಡುವುದು ಬೇಡ ಎಂದು ಹೇಳುತ್ತಾರೆ. ಅಲ್ಲದೇ ಅದಕ್ಕಾಗಿ ಸರಳವಾಗಿರುವಂಥ ವಾಸ್ತು ಸಲಹೆಗಳನ್ನು ಅವರು ನೀಡಿದ್ದಾರೆ.
1. ಮುಖ್ಯ ಬಾಗಿಲು: ಮನೆಯ ಮುಖ್ಯ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಈ ದಿಕ್ಕುಗಳು ಮಾನವರ ಜೀವದಲ್ಲಿ ಯಾವುದೇ ಸಮಸ್ಯೆಯನ್ನು ನೀಡುವುದಿಲ್ಲ. ಅಲ್ಲದೇ ಇದರಿಂದ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ನೆಲೆಸುತ್ತದೆ.
ಇದನ್ನೂ ಓದಿ: ನೀವು ಇನ್ನೂ ‘ವರ್ಕ್ ಫ್ರಮ್ ಹೋಂ’ ಮಾಡ್ತಿದ್ದೀರಾ? ನಿಮಗೆ ಇದರಲ್ಲಿ ಯಶಸ್ಸು ಸಿಗೋದಕ್ಕೆ ಈ ವಾಸ್ತು ಸಲಹೆಗಳನ್ನು ಫಾಲೋ ಮಾಡಿ
2. ಉತ್ತಮ ಬೆಳಕು: ಉತ್ತಮ ಬೆಳಕು ಕೇವಲ ವಾಸ್ತುಶಿಲ್ಪದ ಅಗತ್ಯವಲ್ಲ, ಇದನ್ನು ವಾಸ್ತುಶಾಸ್ತ್ರಕ್ಕೂ ಅಗತ್ಯವೆಂದು ಪರಿಗಣಿಸಿ. ಮನೆಯು ಹಗಲಿನಲ್ಲಿ ನೈಸರ್ಗಿಕ ಬೆಳಕನ್ನು ಹೊಂದಿರಬೇಕು ಮತ್ತು ಸಂಜೆ ಮೃದುವಾದ ಕೃತಕ ಬೆಳಕನ್ನು ಹೊಂದಿರಬೇಕು. ಆದರೆ ಮಲಗುವ ಕೋಣೆಗಳಲ್ಲಿ ಪ್ರಕಾಶಮಾನವಾದ ಬೆಳಕು ಬರುವುದನ್ನು ತಪ್ಪಿಸಿ.
3. ಸಸ್ಯಗಳನ್ನು ಬೆಳೆಸಿ: ವಾಸ್ತುಶಾಸ್ತ್ರದಲ್ಲಿ ಸಸ್ಯಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸಸ್ಯಗಳು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಕೆಲವು ಹೂವಿನ ಕುಂಡಗಳನ್ನು ಮನೆ ಬಾಗಿಲಲ್ಲಿ ಇರಿಸಿ.
ಸಾಧ್ಯವಾದರೆ ಮನೆಯ ಒಳಗೂ ಸಸ್ಯಗಳಿಂದ ಅಲಂಕರಿಸಿ. "ಮನಿ ಪ್ಲಾಂಟ್, ರಬ್ಬರ್ ಸಸ್ಯಗಳು ಮತ್ತು ಫಿಡ್ಲರ್ ಎಲೆಗಳ ಅಂಜೂರದಂತಹ ದುಂಡಗಿನ ಎಲೆಗಳನ್ನು ಹೊಂದಿರುವ ಸಸ್ಯಗಳು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತವೆ" ಎಂದು ನಂಬಲಾಗಿದೆ.
4. ಕನ್ನಡಿ ಇಡುವ ದಿಕ್ಕು: ತಪ್ಪು ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿದರೆ ಅವ್ಯವಸ್ಥೆಯನ್ನು ಉಂಟುಮಾಡಬಹುದು. ಇದು ಆರೋಗ್ಯ, ಸಂಪತ್ತು ಮತ್ತು ಸಂಬಂಧದ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಲಗುವ ಕೋಣೆಯ ದಕ್ಷಿಣ ಅಥವಾ ಪಶ್ಚಿಮ ಗೋಡೆಯ ಮೇಲೆ ಕನ್ನಡಿಗಳನ್ನು ಇರಿಸಲು ಶಿಫಾರಸು ಮಾಡುವುದಿಲ್ಲ, ಏಕೆಂದರೆ ಇದು ಅನೇಕ ನಿದ್ರಾಹೀನತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
"ನೀವು ನಿಮ್ಮ ಕನ್ನಡಿಗಳನ್ನು ಒಳಾಂಗಣದಲ್ಲಿ ಎಲ್ಲಿ ಇರಿಸಿದರೂ, ಬಳಕೆಯಲ್ಲಿಲ್ಲದಿರುವಾಗ ಅವುಗಳನ್ನು ಮುಚ್ಚಲು ಸಲಹೆ ನೀಡಲಾಗುತ್ತದೆ" ಎಂದು ವಾಸ್ತುಕರ್ ಸಲಹೆ ನೀಡುತ್ತಾರೆ.
5. ಅಡುಗೆಮನೆ : ವಾಸ್ತು ಪ್ರಕಾರ, ಅಡುಗೆಮನೆಯು ಬಹಳ ಮಹತ್ವದ್ದು. ಇನ್ನು ಆಗ್ನೇಯ ದಿಕ್ಕನ್ನು ಯಾವಾಗಲೂ ಅಡಿಗೆಗಾಗಿ ಕಾಯ್ದಿರಿಸಲಾಗಿದೆ. ಇದು ಎಲ್ಲಾ ಶಕ್ತಿ ಮತ್ತು ಪೋಷಣೆಯ ಮೂಲವೆಂದು ಪರಿಗಣಿಸಲಾಗುತ್ತದೆ.
ಸ್ಟವ್ ಅನ್ನು ಆಗ್ನೇಯ ದಿಕ್ಕಿಗೆ ಇಡಬೇಕು. ಸಿಂಕ್ ಅನ್ನು ವಾಯುವ್ಯ ದಿಕ್ಕಿಗೆ ಇಡಬೇಕು. ಇದರಿಂದ ಅಡುಗೆಮನೆಯಲ್ಲಿ ಯಾವುದೇ ಸಮಸ್ಯೆಗಳಾಗುವುದಿಲ್ಲ.
7. ಮಲಗುವ ಕೋಣೆ: ವಾಸ್ತು ಪ್ರಕಾರ, ಮಲಗುವ ಕೋಣೆಗೆ ಉತ್ತಮವಾದ ನಿಯೋಜನೆಯು ಮನೆಯ ನೈಋತ್ಯ ಮೂಲೆಯಲ್ಲಿದೆ. ಬೆಡ್ ಅನ್ನು ಮಲಗುವ ಕೋಣೆಯ ದಕ್ಷಿಣ ಅಥವಾ ಪೂರ್ವ ಗೋಡೆಯಲ್ಲಿ ಇಡಬೇಕು. ತಲೆಯನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು.
8. ಪೂಜಾ ರೂಂ : ಪೂಜಾ ರೂಂ ಅನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಮಾತ್ರ ಇರಿಸಿ. ಜೊತೆಗೆ ಈ ದಿಕ್ಕುಗಳಲ್ಲಿ ಶೌಚಾಲಯಗಳನ್ನು ಹೊಂದಿರುವುದನ್ನು ತಪ್ಪಿಸಿ. ಏಕೆಂದರೆ ಅದು ನಿಮಗೆ ಅನಾರೋಗ್ಯ ಮತ್ತು ಆರ್ಥಿಕ ಅಸ್ಥಿರತೆಗೆ ಕಾರಣವಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ