• Home
  • »
  • News
  • »
  • astrology
  • »
  • ಗುರುವಾರದಂದು Shirdi Sai Baba ಪೂಜೆ ಈ ರೀತಿ ಮಾಡಿದ್ರೆ ಸಾಕು ಇಷ್ಟಾರ್ಥ ಈಡೇರುತ್ತೆ

ಗುರುವಾರದಂದು Shirdi Sai Baba ಪೂಜೆ ಈ ರೀತಿ ಮಾಡಿದ್ರೆ ಸಾಕು ಇಷ್ಟಾರ್ಥ ಈಡೇರುತ್ತೆ

ಸಾಯಿಬಾಬಾ

ಸಾಯಿಬಾಬಾ

ಶಿರಡಿ ಸಾಯಿ ಬಾಬಾ ಒಬ್ಬ ಸಂತರಂತೆ ಸರಳವಾಗಿ ಬದುಕಿದವರು ಯಾವುದೇ ಧರ್ಮ, ಜಾತಿ ನೋಡದೇ ಪ್ರತಿಯೊಬ್ಬರಿಗೂ ಪ್ರೀತಿ ಹಂಚಿ ಪ್ರೇಮದಿಂದ ಕಂಡಿದ್ದರು.

  • Share this:

    ಫಕೀರ ಶಿರಡಿ ಸಾಯಿ ಬಾಬಾನ (Shirdi Sai Baba) ಪವಾಡಗಳು ಒಂದೆರಡಲ್ಲ. ಇಂದಿಗೂ ಬಾಬಾನನ್ನು ಅಷ್ಟೇ ನಂಬಿಕೆಯಿಂದ ಪೂಜಿಸುವುದರಿಂದ ಅನೇಕ ಒಳಿತು ಕಾಣುತ್ತೇವೆ ಎಂದು ಭಕ್ತರು ಹೇಳಿದ್ದನ್ನು ಕೇಳಿದ್ದೇವೆ. ಗುರುವಾರ (Thursday ) ಶಿರಡಿ ಸಾಯಿಬಾಬಾನಿಗೆ ಮೀಸಲಾಗಿದೆ. ಕೆಲವರು ಸಾಯಿಬಾಬಾರನ್ನು ದೇವರೆಂದು ಪರಿಗಣಿಸುತ್ತಾರೆ ಮತ್ತೆ ಕೆಲವರು ಅವರನ್ನು ಅವತಾರ ಎಂದು ಕರೆಯುತ್ತಾರೆ. ಇನ್ನು ಗುರವಾರದಂದು ನಿಯಮ ಬದ್ದವಾಗಿ ಶಿರಡಿ ಬಾಬಾನನ್ನು ಪೂಜಿಸಿದರೆ (Sai Baba Worship)  ಸಂಕಷ್ಟಗಳು ನಿವಾರಣೆ ಆಗುತ್ತದೆ.


    ದೇಶದ ಶ್ರೀಮಂತ ದೇಗುಲಗಳಲ್ಲಿ ಶಿರಡಿಯ ಸಾಯಿ ಬಾಬಾ ಮಂದಿರ ಕೂಡ ಒಂದು. ಕಲಿಯುಗದ ಬಂಧುವಾಗಿ ಬಾಬಾ ಅನೇಕ ಜನರ ಕಷ್ಟಗಳ ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಇಂದಿಗೂ ಶಿರಡಿ ಬಾಬಾನ ಮಂದಿರಕ್ಕೆ ಅನೇಕ ಭಕ್ತರು ಹರಿದು ಬರುತ್ತಾರೆ.


    ಸರಳತೆಯ ಸಂತ


    ಶಿರಡಿ ಸಾಯಿ ಬಾಬಾ ಒಬ್ಬ ಸಂತರಂತೆ ಸರಳವಾಗಿ ಬದುಕಿದವರು ಯಾವುದೇ ಧರ್ಮ, ಜಾತಿ ನೋಡದೇ ಪ್ರತಿಯೊಬ್ಬರಿಗೂ ಪ್ರೀತಿ ಹಂಚಿ ಪ್ರೇಮದಿಂದ ಕಂಡಿದ್ದರು. ಇಂದು ಕೂಡ ಶಿರಡಿ ಸಾಯಿ ಬಾಬಾನನ್ನು ಜಾತಿ, ಧರ್ಮ ನೋಡದೇ ಎಲ್ಲ ಭಕ್ತರು ಪೂಜಿಸುತ್ತಾರೆ. ಬಾಬಾ ಕೂಡ ತನ್ನ ಭಕ್ತರ ಮನವಿಯನ್ನು ಆಲಿಸುತ್ತಾರೆ ಎಂಬ ನಂಬಿಕೆ ಇದೆ.


    ಗುರುವಾರದಂದು ಈ ರೀತಿ ಸಾಯಿಬಾಬಾನ ಪೂಜೆ
    ಇನ್ನು ಗುರುವಾರ ಬಾಬಾನ ಪೂಜೆಗೆ ವಿಶೇಷ ದಿನವಾಗಿದೆ. ಈ ದಿನದಂದು ಬಾಬಾ ಅವರ ಪೂಜೆ ಮಾಡಿ ಮಂತ್ರ ಪಠಸುವುದರಿಂದ ಅವರು ವಿಶೇಷ ಅನುಗ್ರಹ ಪಡೆಯಬಹುದಾಗಿದೆ.
    ಪ್ರತಿ ಗುರುವಾರ 9 ವಾರಗಳ ತನಕ ಸಾಯಿಬಾಬಾ ವ್ರತ ಮಾಡಬೇಕು.


    ಪ್ರತಿ ಗುರುವಾರ ಬೆಳಿಗ್ಗೆ 9ಗಂಟೆಗೆ ಬಾಬಾ ಪೂಜೆ ಮಾಡಬೇಕು. ಮನೆಯ ಒಂದು ಭಾಗದಲ್ಲಿ ಅಥವಾ ದೇವರ ಮನೆಯಲ್ಲಿ ಒಂದು ಮಣೆಯಿಟ್ಟು ಆ ಮನೆಯ ಮೇಲೆ ಬಾಬಾರ ವಿಗ್ರಹವನ್ನು ಇಟ್ಟು ಪೂಜೆ ಮಾಡಬೇಕು. ಬಾಬಾ ವಿಗ್ರಹವನ್ನು ನೆಲದ ಮೇಲೆ ಇಡಬಾರದು


    ಇದನ್ನು ಓದಿ: ಮನೆಯಲ್ಲಿ ಪಂಚಮುಖಿ ಹನುಮಂತನ ಫೋಟೋ ಹಾಕುವ ಕಾರಣ ಇದು


    ಬಾಬಾ ವಿಗ್ರಹವನ್ನು ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇಟ್ಟಿರಬೇಕು. ಯಾವ ಜಾಗದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ ಆ ಜಾಗವನ್ನು ಮೊದಲು ಸೂಚಿ ಗೊಳಿಸಿ, ರಂಗೋಲಿ ಇಟ್ಟು, ಅದರ ಮೇಲೆ ಪೀಠವನ್ನು ಇಟ್ಟು ಅದರ ಮೇಲೆ ಒಂದು ಬಿಳಿ ವಸ್ತ್ರವನ್ನು ಹಾಸಿ ಅದರ ಮೇಲೆ ಬಾಬಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು


    ಬಳಿಕ ದೀಪ ಹಚ್ಚಿ, ಹೂವಿನ ಅಲಂಕಾರ ಮಾಡಿ, ಬಾಬಾಗೆ ಪೂಜೆ ಮಾಡಿ, ನೈವೇದ್ಯ ಅರ್ಪಿಸಬೇಕು. ಈ ವೇಳೇ ಹಲವು ವಿಧದ ಹೂವುಗಳಿಂದ ಬಾಬಾಗೆ ಅರ್ಚನೆ ಮಾಡಬೇಕು. ಬಳಿಕ  'ಓಂ ಸಾಯಿ ದೇವಾಯ ನಮಃ' ಮಂತ್ರವನ್ನು 108 ಬಾರಿ ಜಪಿಸಬೇಕು.


    ಇದನ್ನು ಓದಿ: Money Plant ಅನ್ನು ಈ ದಿಕ್ಕಿನಲ್ಲಿ ಇಡಿ; ನಿಮ್ಮ ಲಕ್​ ಚೆಂಜ್ ಆಗತ್ತೆ


    ಸಾಯಿಬಾಬಾ ವ್ರತಾಚಾರಣ ಕುರಿತು ಪುಸ್ತಕಗಳು ಲಭ್ಯವಿದ್ದು, ಅದರ ಅನುಸಾರ ಪೂಜೆ ಅನುಸರಿಸಬೇಕು. ಈ ಪುಸ್ತಕದಲ್ಲಿ ಬಾಬಾರ ಪವಾಡ ಕಥೆಗಳನ್ನು ಕೊಟ್ಟಿದ್ದು, ಅವುಗಳನ್ನು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದಬೇಕು.


    ಪೂಜೆ ಮಾಡುವಾಗ ಉಪವಾಸವಿದ್ದು ಪೂಜೆ ಮಾಡಬೇಕು. ದಿನದ ಅಂತ್ಯ ಉಪವಾಸ ಮುರಿಯುವಾಗ ಬಾಬಾರಿಗೆ ದೀಪಹಚ್ಚಿ ಕರ್ಪೂರ ಹಚ್ಚಿ ನೈವೇದ್ಯ ಅರ್ಪಿಸಿ ನಂತರ ಊಟ ಮಾಡಬೇಕು.


    9 ನೇ ದಿನದಂದು ಪೂಜೆ ಮಾಡಿದ ನಂತರ, ಪೂಜೆಯಲ್ಲಿ ಮಾಡಿದ ತಪ್ಪುಗಳನ್ನು ಕ್ಷಮಿಸುವಂತೆ ಪ್ರಾರ್ಥಿಸ ಬೇಕು. ಅದರ ನಂತರ ಉದ್ಯಪನವನ್ನು ಮಾಡಬೇಕು. ಈ ದಿನದಂದು ಕನಿಷ್ಠ ಐದು ಬಡವರಿಗೆ ಅನ್ನದಾನ ಮಾಡಿ. ಇಲ್ಲ  ಸಾಧ್ಯವಾದ  ದಾನ ಮಾಡಿ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    Published by:Seema R
    First published: